________________
ಅಷಮಾಶ್ವಾಸಂ | ೩೭೩ ವಗ ಎಂದು ಕಿರಾತದೂತಂ ತನ್ನನತಿಕ್ರಮಿಸಿ ನುಡಿದುದರ್ಕೆ ಮುಳಿದು ಪರಾಕ್ರಮಧವಳ ನಿಂತೆಂದಂ
ಕ೦ll ದಸಿಕೊಂದಕ್ಕಂ ಬೇಡಂ
ಗಿಸಿ ದೊರೆ ಮೃಗಮನೀ ಜಗಂಗಳನಾ | ಡಿಸುವ ಮದೀಯೋಗ್ಯಾಸ್ತಂ ಪೆಸರ್ಗೊಳಲೇಂ ತನಗೆ ದೊರೆಯ ಖಳನಳವಯಂ ||
೧೯
ಉll ವಿಜನ ಸೂರೆಗೊಂಡು ನುಡಿವೀ ನುಡಿಯಲ್ಲದೆ ಮತಮಾಸನಂ
ದೂಜುವ ಬಲುದೊಜುವೆರ್ದೆದೋಲುವ ಕಯ್ಕಸರಂಗಳನುಂ | ತೇಜವು ಬೇಡ ಬೇಡದಿರು ಬೇಡ ಚಲಂಬೆರಸಂಬನಂಬನಿ ಕಾಣುತ ಮೋದಲಾಟಿಪೊಡೆ ನೀಂ ಬರವೇಲ್ವುದು ನಿನ್ನನಾಳನಂ
೨೦
ವ|| ಎಂದು ಬಂದ ಕಿರಾತದೂತನಂ ವಿಕ್ರಾಂತತುಂಗಂ ಬಗ್ಗಿಸಿದೊಡಾ ಮಾತಲ್ಲಮನಾ ಮಾಲಿಯೊಳೆ ಪೋಗಿ ಕಪಟ ಕಿರಾತಂಗಣಿಸಿದೊಡಾತನುಂ ಮಾಯಾಯುದ್ಧಮಂ ಪೊಣರ್ಚಲ್ ಬಗೆದು ಹಸ್ತಶ್ವರಥಪದಾತಿಬಲಂಗಳನೆನಿತಾನುಮನಿದಿರೊಳ್ ತಂದೊಡ್ಡಿದಾಗಳ ಪರಸೈನ್ಯಭೈರವ ಮಹಾಪ್ರಳಯಭೈರವಾಕಾರಮಂ ಕೆಯ್ಯೋಂಡು ಸೆರಗಿಲ್ಲದೆ ಬಂದು ತಾಗಿ
ಇಂತಹವರೂ ಭೂಮಿಯಲ್ಲಿದ್ದಾರೆಯೇ? ವll ಎಂದು ಆ ಬೇಡನ ದೂತನಾದ ಗುಹನು ತನ್ನನ್ನು ಮೀರಿ ಮಾತನಾಡಿದುದಕ್ಕೆ ಕೋಪಿಸಿ ಪರಾಕ್ರಮಧವಳನಾದ ಅರ್ಜುನನು ಹೀಗೆಂದನು-೧೯. ಬೇಡನಿಗೆ ಒಂದು ಪ್ರಾಣಿಯನ್ನು ಹೊಡೆಯಲು ಒಂದು ಮೊಳೆ ಸಾಕು. ಈ ಲೋಕಗಳನ್ನೇ ನಡುಗಿಸುವಂತೆ ಮಾಡುವ ನನ್ನ ಭಯಂಕರವಾದ ಬಾಣದ ಹೆಸರು ಹೇಳಲು ತಾನೆ ಅವನಿಗೆ (ಆ ನಿನ್ನ ಒಡೆಯನಿಗೆ) ಸಾಧ್ಯವೇ, ಆ ದುಷ್ಟನು ನನ್ನ ಶಕ್ತಿಯನ್ನು ಇನ್ನೂ ತಿಳಿದಿಲ್ಲ. ೨೦. ಕೇವಲ ಕಲಹವಾಡುವುದಕ್ಕಾಗಿಯೂ ಪೊಳ್ಳು ಪರಾಕ್ರಮವನ್ನು ಮೆರೆಯುವುದಕ್ಕಾಗಿಯೂ ಇಂತಹ ಒರಟಾದ ಉಪೇಕ್ಷೆಯಿಂದ ಕೂಡಿದ ಕಹಿ ಮಾತುಗಳನ್ನು ನಮ್ಮಲ್ಲಿ ಆಡಬೇಡ. ಈ ಕಹಿಯಾದ ಮಾತುಗಳು ನಮ್ಮ ಮೇಲೆ ಯಾವ ಪ್ರಭಾವವನ್ನೂ ಬೀರಲಾರವು (ನಮ್ಮನ್ನು ಹೆದರಿಸಲಾರವು). ಎಲೋ ಬೇಡ ನಿನಗೆ ಹಟಬೇಡ, ಬಾಣವನ್ನು ಕೇಳದಿರು. ಬಾಣದ ಮೇಲೆ ಬಾಣವನ್ನು ಕಾರಿಸುತ್ತ ಯುದ್ದಮಾಡುವ ಅಪೇಕ್ಷೆಯೇ ಇದ್ದರೆ ನೀನು ನಿನ್ನ ಯಜಮಾನನನ್ನು ಬರಹೇಳು. ವ| ಎಂದು ಬಂದ ದೂತನಾದ ಗುಹನನ್ನು ವಿಕ್ರಾಂತತುಂಗನಾದ ಅರ್ಜುನನು ಹೆದರಿಸಿ ಕಳುಹಿಸಿದನು. ಅವನು ಆ ಮಾತೆಲ್ಲವನ್ನೂ ಆ ರೀತಿಯಲ್ಲಿಯೇ ಹೋಗಿ ಆ ಕಪಟಕಿರಾತನಾದ ಶಿವನಿಗೆ ತಿಳಿಸಿದನು. ಆತನೂ ಮಾಯಾಯುದ್ಧವನ್ನು ಹೂಡಲು ಮನಸ್ಸು ಮಾಡಿ ಅಸಂಖ್ಯಾತವಾದ ಆನೆ, ಕುದುರೆ, ತೇರು ಮತ್ತು ಕಾಲಾಳು ಸೈನ್ಯವನ್ನು ಇದಿರಿನಲ್ಲಿ ತಂದೊಡ್ಡಿದನು. ಪರಸೈನ್ಯಭೈರವನಾದ ಅರ್ಜುನನು ಪ್ರಳಯಕಾಲದ ಭೈರವನ