________________
೩೭೨) ಪಂಪಭಾರತಂ ಮII ತೆಗೆದಚರ್ಜುನನಂಬು ತೀವ ತುದಿಯಿಂ ಬಾಲಂಬರಂ ಪಂದಿ ಸೌ
ಳಗವೋಪಂತಿರೆ ನೋಡ ಸಂಬಳಿಗೆವೋಯ್ತಂಬನ್ನೆಗಂ ಕೊಂಡುದೂ | ಯ್ಯಗೆ ಪಾರ್ದಚ್ಚ ವೃಷಾಂಕನಂಬು ತನುವಂ ಪಚ್ಚಂತೆ ಕೊಂಡತ್ತು ತೊ ಟ್ಟಿಗೆ ವೈಮಾನಿಕಕೋಟಿಗಂದು ಪಿರಿದೊಂದುತ್ಸಾಹಮಪ್ಪನ್ನೆಗಂ || ೧೬
ವl ಅಂತು ಮೂಕದಾನವನನಾ ನವದೋಳೆ ಕೊಂದು ವರಾಹಾರುಣಜಲಧಾರಾರುಣ ಮಾಗಿರ್ದಾತ್ಮೀಯಬಾಣಮಂ ಪರಾಕ್ರಮಧವಳನೊಯ್ಯನೆ ಕೊಂಡು ಬಾಣಧಿಯೊಳಿಟ್ಟು ಪೋಗಿ ಪೊಗೊಳದೊಳ್ ಕರಚರಣಪ್ರಕ್ಷಾಳನಂಗೆಯ್ದು ಮಗುಟ್ಟುಮೇಕಪಾದ ತಪದೊಳ್ ನಿಲೆ ಗೀರ್ವಾಣನಾಥಾತ್ಮಜನಲ್ಲಿಗೆ ಗುಹನನಹಿಭೂಷಣನೆಂಬಂ ಬೇಡಿಯಟ್ಟದೊಡಾತಂ ಬಂದುಚಂ|| ಗೊರವರ ಬೂದಿಯುಂ ಜಡೆಯುಮಕ್ಕೆ ತಪಕ್ಕೆ ತನುತ್ರಮಾ ಭಯಂ
ಕರ ಧನು ಖಮಪರಮಿಂತರಡುಂ ದೊನ ತೀವಿದಂಬುಮೊಂ | ದಿರವು ತಪಕ್ಕಿದೆಂತುಟೊ ತಪಂಗಳುಮಿಲ್ಲಮವುಳೊಡೀಗಳೆ ಮರಸರ ನಚ್ಚಿತೆಚ್ಚ ಶರಮಂ ಸೆರಗಿಲ್ಲದೆ ಕೊಂಡು ಬರ್ಪಿರೇ || ಕಂ ಅಣಿಯದೆ ತಂದೊಡಮೇನೆ
ಮಣಿಯಂಗದನಮ್ಮ ಕೆಯೊಳಟ್ಟಿಂ ನೀಮಿಂ | ತಳೆಯುತ್ತುಂ ಪೆರೂಡಮಯ ನುಜತಿ ಸೆವಿಡಿದಿರ್ಪಿರಿನ್ನರುರ್ವಿಯೊಳೊಳರೇ ||
೧೮ ಸೆಳೆದುಕೊಂಡು ಗಾಂಡೀವದಲ್ಲಿ ಹೂಡಿದನು. ೧೬. ಹೆದೆಯೆಳೆದು ಪ್ರಯೋಗಮಾಡಿದ ಅರ್ಜುನನ ಬಾಣವು ತುದಿಯಿಂದ ಬಾಲದವರೆಗೂ ವ್ಯಾಪಿಸಿ ಸೌಂದು ಶಬ್ದಮಾಡುತ್ತ ಸೀಳಿಕೊಂಡು ಹೋಗಿ ಸಂಪುಟದಲ್ಲಿ ಸೇರುವಂತೆ ಮೆಯ್ಯಲ್ಲಿಯೇ ಅಡಗಿಕೊಂಡಿತು. ಇದನ್ನು ನೋಡುತ್ತಿದ್ದ ಶಿವನು ನಿಧಾನವಾಗಿ ಗುರಿಯಿಟ್ಟು ಹೊಡೆದ ಬಾಣವು ಶರೀರವನ್ನು ಭಾಗಮಾಡಿದ ಹಾಗೆ ಒಳನುಗ್ಗಿತು. ವಿಮಾನದಲ್ಲಿ ಕುಳಿತು ನೋಡುತ್ತಿದ್ದ ದೇವತೆಗಳ ಸಮೂಹಕ್ಕೆ ವಿಶೇಷ ಸಂತೋಷವಾಯಿತು. ವ! ಹಾಗೆ ಮೂಕದಾನವನನ್ನು ಆ ನೆಪದಿಂದ ಕೊಂದ ಹಂದಿಯ ರಕ್ತಧಾರೆಯಿಂದ ಕೆಂಪಾಗಿದ್ದ ತನ್ನ ಬಾಣವನ್ನು ಪರಾಕ್ರಮಧವಳನು ನಿಧಾನವಾಗಿ ತೆಗೆದುಕೊಂಡು ಬಂದು ಬತ್ತಳಿಕೆಯಲ್ಲಿ ಸೇರಿಸಿ ಪಕ್ಕದಲ್ಲಿದ್ದ ಹೂಗೊಳದಲ್ಲಿ ಕೈ ಕಾಲುಗಳನ್ನು ತೊಳೆದು ಪುನಃ ಏಕಪಾದತಪಸ್ಸಿನಲ್ಲಿ ನಿಲ್ಲಲು ಅರ್ಜುನನ ಹತ್ತಿರಕ್ಕೆ ಸರ್ಪಾಭರಣನಾದ ಶಿವನು ತನ್ನ ಬಾಣವನ್ನು ಬೇಡಲು ಗುಹನನ್ನು ಕಳುಹಿಸಿದನು. ಅವನು ಬಂದು ೧೭. ತಪಸ್ವಿಗಳೇ, ಬೂದಿಯೂ ಜಡೆಯೂ ತಪಸ್ಸಿಗಿರಲಿ; ಕವಚ, ಈ ಭಯಂಕರವಾದ ಬಿಲ್ಲು ಕತ್ತಿ ಗುರಾಣಿ, ಬಾಣದಿಂದ ತುಂಬಿದ ಈ ಎರಡು ಬತ್ತಳಿಕೆಗಳು - ಇವು ತಪಸ್ಸಿಗೆ ಹೊಂದಿಕೊಳ್ಳಲಾರವು. ಇದು ಹೇಗೊ (ವಿಚಿತ್ರವಾಗಿದೆ) ತಪಸ್ಸು ಕೂಡ ಇಲ್ಲ, ಅದಿದ್ದ ಪಕ್ಷದಲ್ಲಿ (ನೀವು ತಪಸ್ವಿಗಳಾಗಿದ್ದರೆ) ನಮ್ಮರಾಜರು ನಂಬಿಕೆಯಿಂದ (ಗುರಿಯಿಟ್ಟು) ಹೊಡೆದ ಬಾಣವನ್ನು ಭಯವಿಲ್ಲದೆ ಕೊಂಡು ಬರುತ್ತಿದ್ದಿರಾ? ೧೮. ತಿಳಿಯದೆ ತಂದರೆ ತಾನೆ ಏನು ದೋಷ? ನಮ್ಮ ಯಜಮಾನರಿಗೆ ಅದನ್ನು ನನ್ನ ಕಯ್ಯಲ್ಲಿ ಕಳುಹಿಸಿಕೊಡಿ. ನೀವು ಹೀಗೆ ತಿಳಿದವರಾಗಿದ್ದರೂ ಇತರರ ಪದಾರ್ಥವನ್ನು ವಿಶೇಷವಾಗಿ ಬಂಧಿಸಿಟ್ಟಿದ್ದೀರಲ್ಲ!