________________
ಸಪ್ತಮಾಶ್ವಾಸಂ | ೩೬೧ ಜೊಂಪಂಗಳೊಳಂ ಗಗನಗಮನಜನಿತಶ್ರಮಮನಾ ಗಜಗಮನೆಯರಾಜೆಸಿ ಪಾಲ್ಗಡಲೊಳ ಮಮರ್ದಿನೊಳಂ ಪುಟ್ಟಿದ ಕಳ್ಳ ಸೊರ್ಕಿನೊಳಮುಂತೆ ನಡುಗುವ ಬಡನಡುಗಳ ನಡುಕಮುಮನುಂತ ಪೊಡರ್ವ ಪುರ್ವುಗಳ ಪೊಡರ್ಪುಮನಂತೆ ಸೊಗಯಿಸುವ ಬೆಳರ್ವಾಯ ತನಿಗೆತ್ತುಮನುಂತೆ ಪೊಳೆವ ನಿಡಿಯಲರ್ಗಣ್ಣ ಮಳಮಳಿದ ನೋಟಮುಮನುಂತ ತೊದಳಿಸುವ ನುಡಿವ ನುಡಿಗಳೇ ತೊದಳುಮನೆಕ್ಕೆಯಿಂ ತಳೆಯೆ ನೆಲೆಯೆ ಕೆಯ್ದೆಯು ಮುನ್ನಮಾಯಿಂ ಋತುಗಳುಮಂ ನಿಮ್ಮ ನಿಮ್ಮ ಸ್ವರೂಪಂಗಳುಮನಾತನಿರ್ದಲ್ಲಿಗೆ ಪೋಗಿ ತೋಟೆಯೆಂದಾಗಳಕಂ ಆಜಂ ಋತುಗಳ ಹೂಗಳು
ಮಾತುಂ ಋತುಗಳ ಪೊದಳ ಚೆಲ್ಲುಗಳುಮಣಂ | ಬೇಟೆಲ್ಲದೊಂದು ಸೂ ಮೆ ಯೋದುವೊಡನೊಡನೆ ನೆಲದೊಳಂ ಗಗನದೊಳಂ ||
ಮೆಲ್ನೋಟದೊಡವಡನೆಯ
ಮೆಲ್ಲೋಅಲ್ ಬಗದನಂಗಜಂಗಮಲತೆಗಳ 1 ಮೆಯೋಲುವಂತ ಮೆಲ್ಲನೆ ಮೆಲ್ಲೋದರಮರಗಣಿಕೆಯರ್ ವಂದಾಗಳ್
ಸಮದ ಗಜಗಮನೆಯರ್ ಮುಗಿ
ಲ ಮೇಲೆ ನಡೆಪಾಡುವಾಕೆಗಳ ತಮಗೆ ಧರಾ | ಗಮನಂ ಪೊಸತಪ್ಪುದಳಂ
ದಮರ್ದಿರೆ ನಡೆ ನಡೆದು ನಡೆಯಲಾಟದ ಸುಟೆದರ್ |
೮೨
೮೩
೮೪
ಬಳಲಿಕೆಯನ್ನು ಆನೆಯಂತೆ ನಡಗೆಯುಳ್ಳ ಅಪ್ಪರಸ್ತ್ರೀಯರು ಪರಿಹರಿಸಿಕೊಂಡರು. ಕ್ಷೀರಸಮುದ್ರದಲ್ಲಿ ಹುಟ್ಟಿದ ಅಮೃತದಿಂದ ಉತ್ಪನ್ನವಾದ ಸೊಕ್ಕಿನಿಂದ (ಮದ್ಯಪಾನದಿಂದ) ಕೂಡಿದವರಾಗಿ ಸುಮ್ಮನೆ ನಡುಗುತ್ತಿರುವ ಕೃಶವಾದ ನಡುಗಳಿಗೆ ಮತ್ತಷ್ಟು ನಡುಕವನ್ನುಂಟುಮಾಡಿಕೊಂಡು, ಕುಣಿಯುತ್ತಿರುವ ದೀರ್ಘವಾದ ಹುಬ್ಬುಗಳಿಗೆ ಮತ್ತಷ್ಟು ಕುಣಿತವನ್ನು, ಮೊದಲೇ ಸೊಗಯಿಸುವ ಬಿಳಿಯ ಬಾಯಿಗಳಿಗೆ ಹೊಸದಾದ ಅದಿರಾಟವನ್ನು,ಹೊಳೆಯುತ್ತಿರುವ ದೀರ್ಘವಾದ ಹೂವಿನಂತಿರುವ ಕಣ್ಣುಗಳಿಗೆ ಕೆಂಪಾಗಿ ಕದಡಿದ ನೋಟವನ್ನು ಈಗಾಗಲೆ ಸುಮ್ಮನೆ ತೊದಳಿನಿಂದ ನುಡಿಯುತ್ತಿರುವ ತೊದಳುಮಾತಿಗೆ ಮತ್ತಷ್ಟು ತೊದಳುವಿಕೆಯನ್ನು ಏಕಕಾಲದಲ್ಲಿ ಕೂಡಿಕೊಳ್ಳುವಂತೆ ಪೂರ್ಣವಾಗಿ ಅಲಂಕರಿಸಿಕೊಂಡು ನಡೆಯುತ್ತಿರಲು ಆರು ಋತುಗಳೂ ತಮ್ಮ ತಮ್ಮ ಸ್ವರೂಪಗಳಿಂದ ಆತನಿದ್ದ ಸ್ಥಳಕ್ಕೆ ಹೋಗಿ ತೋರ್ಪಡಿಸಿಕೊಂಡವು. ೮೨. ಆರು ಋತುಗಳ ಹೂವುಗಳೂ ಆರು ಋತುಗಳಲ್ಲಿ ವ್ಯಾಪಿಸಿರುವ ಸೌಂದರ್ಯವೂ ಸ್ವಲ್ಪವೂ ಬೇರೆ ಬೇರೆಯಾಗಿರದೆ ಒಟ್ಟಿಗೇ ಒಂದೇ ಸಲ ಭೂಮಿಯಲ್ಲಿಯೂ ಆಕಾಶದಲ್ಲಿಯೂ ಕಾಣಿಸಿಕೊಂಡವು. ೮೩. ಆರು ಋತುಗಳೊಡನೆಯೇ ತಾವೂ ಕಾಣಿಸಿಕೊಳ್ಳಬೇಕೆಂದು ಭಾವಿಸಿ ಮನ್ಮಥನ ಜಂಗಮಲತೆಗಳು ಕಾಣಿಸಿಕೊಳ್ಳುವ ಹಾಗೆ ಅಪ್ಪರಸ್ತ್ರೀಯರೂ ಬಂದು ನಿಧಾನವಾಗಿ ಕಾಣಿಸಿಕೊಂಡರು. ೮೪, ಮೋಡಗಳ ಮೇಲೆ ನಡೆದಾಡುವ ಸ್ವಭಾವವುಳ್ಳ ಆ