________________
೩೬೦) ಪಂಪಭಾರತಂ
ವll ಮತ್ತಮಾ ಗಿರೀಂದ್ರಕಂದರದೊಳ್ ತಪಂಗೆಯ್ಯ ತಪೋಧನರ ತಪಂಗಳೆಲ್ಲಮಾತನ ತಪೋಮಯಶಿಖಿಗಳಿಂ ಬೆಂದು ಬೆಂದ ನುಲಿಯಂತೇತರ್ಕಂ ಮುಟ್ಟಿಲ್ಲದ ಮುಟ್ಟಗಿಡ ದೇವೇಂದ್ರ ತನಗಾದ ಹೃತೂಪದೊಳಮಾಸನಕಂಪದೂಳಂ ನರೇಂದ್ರತಾಪಸಂ ತನ್ನಿಂದತ್ತಮಂ ಕೊಳಲೆಂದು ತಪಂಗಯಪನೆಂಬ ಸಂಕೆಯೊಳ್ ತಪೂವಿಘಾತ ಮಾಡಿಮಂದು ತನ್ನ ನೆಚ್ಚಿನಚರಣೆಯರು ಮನಾಜುಂ ಋತುಗಳುಮಂ ಗಂಧರ್ವರುಮಂ ಕಾಮದೇವನಂ ದಂಡನಾಯಕಂ ಮಾಡಿ ಪೇಚಾಗಳ್ಚಂ11 ವನರುಹಗರ್ಭನೆಂಬವನ ಮುನ್ನಿನ ಗೆಯ್ದ ತಪಂ ತಿಲೋತ್ತಮಾಂ
ಗನೆಯಿನದಂತುಟಾದುದನೆ ಮತ್ತಿನ ಬೂತು ತಪಂಗಳಮ್ಮ ಪು | ರ್ವಿನ ಕಡೆಯೊಂದು ಜರ್ವಿನೋಳೆ ತೀರ್ವುವವಲ್ಲದ ದೇವ ಬೆಂಬಲಂ
ಮನಸಿಜನಿಗಳಾಜು ಋತುವುಂ ನೆರವೆಂದೊಡೆ ಸೋಲದಿರ್ಪರಾರ್ 11 ೮೧
ವ|| ಎಂದು ದೇವಾಷ್ಟರೊಂದಮನಿತಾನುಮಂದದಿಂ ಪುರಂದರನ ಪಕ್ಕದೆ ಪೂಣ್ಣು ಬಂದು ಗಗನತಳಮಲ್ಲಂ ತಮ್ಮ ತೊಟ್ಟ ದಿವ್ಯಾಭರಣಕಿರಣಂಗಳೊಳ್ ತೊಳಗಿ ಬೆಳಗೆ ಬಂದು ಮಹೀತಳವತರಿಸಿ ನದನದೀಪುಳಿನಪರಿಸರಪ್ರದೇಶಂಗಳೊಳಂ ಕದಳೀವನಂಗಳೊಳಂ ಕನಕಲತಾಮಂಟಪಂಗಳೊಳಮಿಡಿದೆಡೆಗೊಳೆ ಪೂತ ಮಲ್ಲಿಗೆಯ ಬಳ್ಳಿಗಾವಣಂಗಳೊಳಂ ನನೆಯ ನಿರ್ಭಯದಿಂದ ಸ್ನೇಹದಿಂದಿದ್ದುವು ಎಂಬುದು ಅಭಿಪ್ರಾಯ) ವ ಮತ್ತು ಆ ಪರ್ವತಶ್ರೇಷ್ಠದ ಕಣಿವೆಗಳಲ್ಲಿ ತಪಸ್ಸು ಮಾಡುತ್ತಿದ್ದ ತಪೋಧನರ ತಪಸ್ಸುಗಳೆಲ್ಲವೂ ಆತನ ತಪಸ್ಸಿನಿಂದುಂಟಾದ ಬೆಂಕಿಯಿಂದ ಸುಟ್ಟುಹೋಗಿ ಸುಟ್ಟ ಹಗ್ಗದಂತೆ ಉಪಯೋಗವಿಲ್ಲದೆ ನಿಷ್ಟ್ರಯೋಜನವಾದುವು. ದೇವೇಂದ್ರನು ತನಗುಂಟಾದ ಎದೆನಡುಕದಿಂದಲೂ ಪೀಠದ ನಡುಗುವಿಕೆ (ಆಸನ ಕಂಪನ)ಯಿಂದಲೂ ಮನುಷ್ಯತಪಸ್ವಿಯು ತನ್ನಿಂದ ಪದವಿಯನ್ನು ಅಪಹರಿಸಲು ತಪಸ್ಸು ಮಾಡುತ್ತಿದ್ದಾನೆಂಬ ಸಂದೇಹದಿಂದ ಅವನ ತಪಸ್ಸಿಗೆ ವಿಘ್ನಮಾಡಿ ಎಂದು ತನಗೆ ಪರಮಪ್ರೀತಿಪಾತ್ರರಾದ ಅಪ್ಪರಸ್ತ್ರೀಯರನ್ನೂ ಆರು ಋತುಗಳನ್ನೂ ಗಂಧರ್ವರನ್ನೂ ಕಾಮದೇವನನ್ನು ದಂಡನಾಯಕನನ್ನಾಗಿ ಮಾಡಿ ಹೇಳಿಕಳುಹಿಸಿದನು - ೮೧. ಎಲೈ ಇಂದ್ರದೇವನೇ ಹಿಂದೆ ಬ್ರಹ್ಮನು ಮಾಡಿದ ತಪಸ್ಸು ತಿಲೋತ್ತಮೆಯೆಂಬ (ಒಬ್ಬ) ದೇವವೇಶೈಯಿಂದ ಹಾಗೆ ಆಯಿತು (ನಷ್ಟವಾಯಿತು ಎನ್ನುವಾಗ ಉಳಿದ ಪ್ರಾಣಿಗಳ ತಪಸ್ಸು ನಮ್ಮ ಹುಬ್ಬಿನ ಕೊನೆಯ ಒಂದು ಅಲುಗಾಟದಿಂದಲೇ ಮುಗಿದುಹೋಗುತ್ತವೆ. ಅಲ್ಲದೆ ಈಗ ಮನ್ಮಥನ ಬೆಂಬಲವೂ ಆರುಋತುಗಳ ಸಹಾಯವೂ ಇರುವಾಗ ಸೋಲದಿರುವವರಾರಿದ್ದಾರೆ ? ವ|| ಎಂದು ದೇವಲೋಕದ ಅಪ್ಪರಸ್ತ್ರೀಯರ ಸಮೂಹವು ಇಂದ್ರನ ಹತ್ತಿರ ಎಷ್ಟೋ ರೀತಿಯಲ್ಲಿ ಪ್ರತಿಜ್ಞೆಮಾಡಿ ಬಂದು ಆಕಾಶಪ್ರದೇಶವೆಲ್ಲವೂ ತಾವು ಧರಿಸಿದ್ದ ದಿವ್ಯವಾದ ಒಡವೆಗಳ ಕಾಂತಿಯಿಂದ ಪ್ರಕಾಶಿಸುತ್ತಿರಲು ಭೂಮಿಗೆ ಇಳಿದು ಬಂದು ಗಂಡು ಮತ್ತು ಹೆಣ್ಣುನದಿಗಳ ಮರಲುದಿಣ್ಣೆಗಳಲ್ಲಿಯೂ ಬಾಳೆಯ ತೋಟಗಳಲ್ಲಿಯೂ ಹೊಂಬಣ್ಣದ ಲತಾಮಂಟಪಗಳಲ್ಲಿಯೂ ಒತ್ತಾಗಿ ಸೇರಿ ಹೂ ಬಿಟ್ಟಿರುವ ಲತಾಗೃಹಗಳಲ್ಲಿಯೂ ಹೂವಿನಗೊಂಚಲುಗಳಲ್ಲಿಯೂ ಆಕಾಶದಲ್ಲಿ ಸಂಚರಿಸಿದುದರಿಂದುಂಟಾದ