________________
ಉಪೋದ್ಘಾತ | ೩೧ ಎಂಬ ಆಕ್ರೋಶವನ್ನು ತಾಳುವನು. ಭೀಮಸೇನನು ಕಾಲಮೇಘದಂತೆ ಗರ್ಜಿಸಿ ಆರ್ಭಟಮಾಡುವುದನ್ನು ಓದುತ್ತಿದ್ದರೆ ಹೃದಯದಲ್ಲಿ ನಡುಕ ಹುಟ್ಟಿ ಸಬನಾಗುವನು. ಬಿದ್ದ ಚಕ್ರವರ್ತಿಯ ಮುಡಿಯನ್ನು ಭೀಮನು ಒದೆಯುತ್ತಿರುವುದನ್ನು ಓದುತ್ತಿದ್ದರೆ 'ಛೀ ಭೀಮಾ ನಿನಗೆಷ್ಟು ದುರಹಂಕಾರ! ನೀನು ಮೂರ್ಛಿತನಾಗಿದ್ದಾಗ ದುರ್ಯೊಧನನು ನಿನ್ನಲ್ಲಿ ಕರುಣೆಯನ್ನು ತೋರದಿದ್ದಿದ್ದರೆ ನೀನೇನಾಗುತ್ತಿದ್ದೆ, ಅವನು ನಿನ್ನಲ್ಲಿ ತೋರಿಸಿದ ಕರುಣೆಗೆ ಇದೇ ಪ್ರತಿಫಲ' ? ಎಂದು ಹೇಳಲುದ್ಯುಕ್ತನಾಗುವನು. ಗದಾಯುದ್ದದ ಪ್ರಾರಂಭದಲ್ಲಿ ಹಲಾಯುಧನು ದುರ್ಯೊಧನನನ್ನು ಕುರಿತು 'ನೀ ಮರುಳನಮನೇಕೆ ಮಾಡಿದಯ್' ಎಂಬುದಕ್ಕೆ ಅವನು 'ಪಾಂಡುತನಯ ನಿರ್ದೋಷಿಗಳ್, ಮಧ್ವಂಧು ಶೋಕಾಗ್ನಿಯಿಂದುರಿದಪ್ಟೆಂ' ಎನ್ನುತ್ತಿದ್ದರೆ ದುರ್ಯೊಧನ, ನೀನು ನಿಜವಾಗಿಯೂ ಮಹಾನುಭಾವನೇ ಅಹುದು' ಎನ್ನುವನು. ಕೊನೆಗೆ ಪಂಪನು ವಿಕ್ರಮಾರ್ಜುನನ ಪಟ್ಟಾಭಿಷೇಕ ಮಹೋತ್ಸವವನ್ನು ವರ್ಣಿಸುವಾಗ ಅವನೂ ಅದರಲ್ಲಿ ಭಾಗಿಯಾಗಿ ". ಪಾಂಡವರು ಹಸ್ತಿನಾಪುರವನ್ನು ಪ್ರವೇಶಿಸುವಾಗ ಅವರನ್ನು ಸ್ವಾಗತಿಸುವ ಪಲ್ಲವಿತವಾದ ಆಮ್ರವನವನ್ನು ಕಣ್ಣಾರೆ ನೋಡುವನು. ಗುಡಿತೋರಣಗಳಿಂದ ವಿರಾಜಿಸುವ ಬೀದಿಗಳಲ್ಲಿ ಓಡಾಡುವನು. ಸಂಸಾರಸಾರೋದಯನ ಒಡೋಲಗದಲ್ಲಿ ವೈತಾಳಿಕರೂ ಮಂಗಳಪಾಠಕರೂ ಒಂದೇ ಕೊರಳಿನಿಂದ ಮಂಗಳವನ್ನೋದುತ್ತ 'ಅರಿಗಂಗೀಗೆ ಮಂಗಳಮಂಗಳಮಹಾಶ್ರೀಯಂ ಜಯ ಶ್ರೀಯುಮಂ' ಎಂದು ಘೋಷಿಸುತ್ತಿದ್ದರೆ ತಾನೂ ಅವರೊಡನೆ 'ಅರಿಕೇಸರಿಗೆ ಜೈ' ಎನ್ನುತ್ತಾನೆ. ಇದೆಲ್ಲ ಏತರಿಂದ? ಪಂಪನ ಅನ್ಯಾದೃಶವಾದ ಕಾವ್ಯರಚನಾ ಪ್ರೌಢಿಮೆಯಿಂದಲ್ಲವೇ? ಅವನು ಯಾವುದನ್ನು ವರ್ಣಿಸಿದರೂ ತಾನು ಮೊದಲು ಅದನ್ನು ಚಿತ್ರಿಸಿಕೊಂಡು ಅದರ ಪ್ರತಿಬಿಂಬ ವಾಚಕರಿಗೆ ತೋರುವಂತೆ, ಸಹಜವಾದ ಸ್ವಾಭಾವಿಕವಾದ ಮಾತಿನಿಂದ ಹೇಳುತ್ತ ಹೋಗುವುದರಿಂದ ಆಯಾ ವರ್ಣನೆಗಳನ್ನು ಓದುತ್ತಿದ್ದಾಗ ಆಯಾ ಚಿತ್ರಗಳೇ ವಾಚಕರೆದುರಿಗೆ ಜೀವದುಂಬಿ ನಲಿಯುವಂತೆ ಭಾಸವಾಗುತ್ತದೆ...
ಪಂಪನ ಕಾವ್ಯತತ್ ಕವಿತಾಗುಣಾರ್ಣವನು ಉತ್ತಮಕಾವ್ಯದ ತಿರುಳನ್ನೂ ತನ್ನ ಕಾವ್ಯದ ಮೂಲತತ್ವವನ್ನೂ ತಾನೇ ಮುಂದಿನ ಪದ್ಯಗಳಲ್ಲಿ ಶ್ರುತಪಡಿಸಿದ್ದಾನೆ.
ಮೃದು ಪದಗತಿಯಿಂ ರಸಭಾ ವದ ಪೆರ್ಚಿಂ ಪವನಿತೆಯೋಲೆ ಕೃತಿಸೌಂದ ರ್ಯದ ಚಾತುರ್ಯದ ಕಣಿಯನೆ ವಿದಗಬುಧಜನಮನ್, ಅಲೆಯಲೆವೀಡಾ || ಕಿವಿಯಂ ಬಗೆವುಗುವೊಡೆ ಕೊಂ ಕುವೆತ್ತ ಪೊಸನುಡಿಯ ಪುಗುಗುಂ... ಮೃದುಮಧುರವಚನರಚನೆಯೊಳ್, ಉದಾತ್ತಂ, ಅರ್ಥಪ್ರತೀತಿಯಂ ಕೇಳೋ ಜನ ಕೈದಿರೊಳ್ ಕುಡದಂದದು... ಕವಿಯ ಮನದೊಳಿರ್ದಂತವಲಂ ||