________________
೩೫೨/ ಪಂಪಭಾರತಂ
ವ|| ಎಂದು ಗದಾದಂಡಮಂ ಭುಜಾದಂಡದೊಳಳವಡಿಸಿಕೊಂಡು ಪಗೆವರಿರ್ದ ದೆಸೆಯಂ ನೋಡಿ ತಳರಲ್ ಬಗದ ಭೀಮಸೇನನಂ ಧರ್ಮಪುತ್ರಂ ಕೋಪತಾಪದಿಂ ಮಸಗಿದ ಮದಗಜಮನೆ ಮಾಣಿಸುವಂತೆಂತಾನುಂ ಮೃದುವಚನಂಗಳಿಂ ಮುಳಿಸನಾಳಿಸುತಿರ್ದನಿರ್ಪನೆಗಂಚಂll - ಕನಕ ಪಿಶಂಗ ತುಂಗ ಜಟಕಾವಳಯಂ ಕುಡುಮಿಂಚಿನೋಳಿಯಂ
ನೆನೆಯಿಸೆ ನೀಲ ನೀರದ ತನುಚ್ಚವಿ ಭಸ್ಮ ರಜೋವಿಲಿಪ್ತಮಂ | ಜನ ಗಿರಿಯಂ ಶರಜ್ಜಳಧರಂ ಕವಿದಂತಿರೆ ಚೆಲ್ವನಾಳು ಭೋಂ
ಕನೆ ನಭದಿಂದಮಂದಿಟಿದನಲ್ಲಿಗೆ ವೃದ್ಧ ಪರಾಶರಾತ್ಮಜಂ || ೫೯ ವ|| ಅಂತು ನಭೋವಿಭಾಗದಿಂ ಧರಾವಿಭಾಗಕ್ಕಿಟತಂದ ಕೃಷ್ಣಪಾಯನನಂ ಕಂಡಜಾತ ಶತ್ತು ತನ್ನೆಳೆದ ಸ್ಪಟಿಕ ಶಿಳಾತಳದ ಪಟ್ಟಕದಿಂದಿಳಿದು ನಿಜಾನುಜಸಹಿತಮಿದಿರ್ವಂದು ಧರಾತಳ ನಿಮ್ಮ ಲಲಾಟಪಟ್ಟಂ ಸಾಷ್ಟಾಂಗವೆಜಿಗಿ ಪೊಡವಟ್ಟು ತದೀಯಾಶೀರ್ವಾದಮನಾಂತು ತಚಿಳಾತಳದೊಳ್ ಕುಳ್ಳಿರಿಸಿ ವನಕುಸುಮಂಗಳಿಂದರ್ಘಮತಿ ಸರೋವರಜಲಂಗಳಂ ಪದಪತ್ರ ಪುಟಂಗಳಿಂ ತಂದು ಪದಪದಂಗಳಂ ಕರ್ಚಿ ತತ್ತಾದ ಪವಿತ್ರೋದಕಂಗಳನನಿಬರು ಮುತ್ತಮಾಂಗ ದೂಳ್ ತಳಿದುಕೊಂಡಿರ್ದಾಗಳ ಸತ್ಯವತೀನಂದನಂ ತನ್ನ ಮಕ್ಕಳ ಸಾಯಸಂಗಳ ಮನ್ಯುಮಿಕ್ಕು ಕಣ್ಣನೀರಂ ನೆಗಪ ಮಹಾಪ್ರಸಾದವೆಂದು ಧರ್ಮನಂದನನಿಂತೆಂದಂ
ವll ಎಂದು ತನ್ನ ಗದಾದಂಡವನ್ನು ಭುಜಾದಡದಲ್ಲಿ ಅಳವಡಿಸಿಕೊಂಡು ಶತ್ರುಗಳಿದ್ದ ಕಡೆಯನ್ನು ನೋಡಿ ಹೊರಡಲು ಯೋಚಿಸಿದ ಭೀಮಸೇನನನ್ನು ಧರ್ಮರಾಜನು ಕೋಪಾಗ್ನಿಯಿಂದ ಕೆರಳಿದ ಮದಗಜವನ್ನು ಸಂತೈಸುವಂತೆ ಹೇಗೋ ಮೃದುವಾದ ಮಾತುಗಳಿಂದ ಸಮಾಧಾನಮಾಡಿದನು. ಅಷ್ಟರಲ್ಲಿ-೫೯. ಹೊಂಬಣ್ಣದ ಎತ್ತರವಾದ ಜಟೆಯ ಸಮೂಹವು ಕುಡಿಮಿಂಚಿನ ಸಮೂಹವನ್ನು ಜ್ಞಾಪಿಸುತ್ತಿರಲು ವಿಭೂತಿಯಿಂದ ಲೇಪಿಸಿದ ಕೃಷ್ಣಮೇಘದಂತಿದ್ದ ಶರೀರಕಾಂತಿಯು ಅಂಜನಾದ್ರಿಯನ್ನು ಶರತ್ಕಾಲದ ಮೋಡಗಳು ಕವಿದಂತಿರಲು ಸೌಂದರ್ಯದಿಂದ ಕೂಡಿ ವೃದ್ಧನಾದ ವ್ಯಾಸಮಹರ್ಷಿಯು ಇದ್ದಕ್ಕಿದ್ದ ಹಾಗೆ ಆ ದಿನ ಆಕಾಶದಿಂದ ಅಲ್ಲಿಗೆ ಇಳಿದು ಬಂದನು. ವ|| ಹಾಗೆ ಆಕಾಶಭಾಗದಿಂದ ಭೂಭಾಗಕ್ಕೆ ಇಳಿದು ಬಂದ ವ್ಯಾಸಮಹರ್ಷಿ ಯನ್ನು ನೋಡಿ ಧರ್ಮರಾಯನು ತಾನು ಏರಿದ್ದ ಸ್ಪಟಿಕಶಿಲಾತಳಪೀಠದಿಂದ ಕೆಳಗಿಳಿದು ತನ್ನ ತಮ್ಮಂದಿರೊಡನೆ ಇದಿರಾಗಿ ಬಂದು ಭೂಮಿಯಲ್ಲಿಟ್ಟ ಮುಖಮಂಡಲವುಳ್ಳವನಾಗಿ ಸಾಷ್ಟಾಂಗ ನಮಸ್ಕಾರಮಾಡಿ ಅವನ ಹರಕೆಗಳನ್ನು ಪಡೆದು ಆ ಶಿಲಾಪಟ್ಟದಲ್ಲಿಯೇ ಅವನನ್ನು ಕುಳ್ಳಿರಿಸಿ ಕಾಡುಹೂವುಗಳಿಂದ ಅರ್ಭ್ಯವನ್ನು ಕೊಟ್ಟು ಕಮಲದೆಲೆಗಳಲ್ಲಿ ಸರೋವರದ ನೀರನ್ನು ತಂದು ಪಾದಕಮಲಗಳನ್ನು ತೊಳೆದು ಆ ಪವಿತ್ರವಾದ ಪಾದೋದಕವನ್ನು ಎಲ್ಲರೂ ತಲೆಯಲ್ಲಿ ಧರಿಸಿಕೊಂಡರು. ವ್ಯಾಸಮಹರ್ಷಿಯು ತನ್ನ ಮೊಮ್ಮಕ್ಕಳ ವಿಶೇಷವಾದ ಆಯಾಸ(ಶ್ರಮ)ಕ್ಕಾಗಿ ದುಃಖಮೀರಿ ಕಣ್ಣ ನೀರನ್ನು ತುಂಬಿಕೊಂಡರು. ಅವರು ಬಂದುದು ಪರಮಾನುಗ್ರಹವೆಂದು ಧರ್ಮರಾಜನು ಅವರನ್ನು ಕುರಿತು ಹೀಗೆಂದನು