________________
ಸಪ್ತಮಾಶ್ವಾಸಂ | ೩೫೧ ಉll ನನ್ನಿಗೆ ದಾಯಿಗಂಗೆಳೆಯನೊಪ್ಪಿಸಿದೆಂ ಗಡಿಯೆಂಬ ಮಾತುಗಳ
ನಿನ್ನವು ಕೂರದರ್ ನೆಲನನೊಟ್ಟಜೆಯಿಂ ಕೊಳೆ ಕೊಟ್ಟು ಮುಟ್ಟುಗೆ | ಟ್ಟನ್ನುಮರಣ್ಯದೊಳ್ ನಮದಪಂ ಯಮನಂದನನೆಂಬ ಬನ್ನಮುಂ
ಮುನ್ನಮೆ ಸೋಂಕಿ ಕಲವ ಮಾತುಗಳೆಲ್ಲರ ಪೇಟ್ಟ ಮಾತುಗಳ್ || ೫೫ ಕ೦ll ಸಲೆ ಸಂದಿರ್ಪತ್ತೂಂದುಂ
ತಲೆವರೆಗಂ ನಮಗೆ ಪರಿಭವಂ ಕೃಷ್ಠೆಯ ಮುಂ | ದಲೆಯಂ ಪಿಡಿದೆಳವಲ್ಲಿಯೆ ತಲೆವಿಡಿದ ನಮ್ಮ ಬೀರಮಂ ಕೌರವರುಂ |
೫೬ ಚಂ|| ಮಲೆ ಮಿದುರ್ಕಿ, ಸೊರ್ಕಿ ಸಭೆಯೊಳ್ ಕುಲಪಾಂಸುಲನೀ ಶಿರೀಷ ಕೋ
ಮಲೆಯ ವಿಲೋಲ ನೀಲ ಕಬರೀಭರಮಂ ತೆಗೆವಾಗಳಲ್ಲಿ ಕೆ | ಯ್ಯಲೆ ಸದೆದಂತೆ ಹತ್ತಿ ಬೆರಲಚ್ಚುಗಳಚ್ಚಳದಂತೆ ಕೊಂಕುಗಳ
ತಲೆ ನವಿರೊಂದಿ ಮೂದಲಿಸುವಂತವೊಲಿರ್ದುವು ನಮ್ಮ ವೀರಮಂ ||೫೭ ಮl.
ಅಸಿತೇಂದೀವರಲೋಲಲೋಚನೆಯನಂದಂತಾ ಸಭಾಮಧ್ಯದೊಳ್ ಪಸುವಂ ಮೋದುವವೋಲೆ ಮೊದೆಯುಮದಂ ಕಂಡಂತ ಪಲ್ಲರ್ಟಿ ಕೈ " ರಿಸಿದೆಂ ನಿನ್ನಯ ನನ್ನಿಗಿನ್ನವರಮಾ ದುಶ್ಯಾಸನೋರಸ್ಥಳೋ ಪ್ಲಸ್ಯತಾಸ್ಕಗ್ಗಲಪಾನಮಂ ಬಯಸಿ ಬಾಯ್ ತೇರೈಸೆ ಸೈತಿರ್ಪೆನೇ || ೫೮
ವೈಭವವೇ) ೫೫. ಸತ್ಯಕ್ಕಾಗಿ ದಾಯಾದಿಗಳಿಗೆ ರಾಜ್ಯವನ್ನೂ ಒಪ್ಪಿಸಿದೆವು ಎಂಬುದು ನೀವು ಹೇಳುವ ಮಾತುಗಳು, ಹಿತವಲ್ಲದವರು ರಾಜ್ಯವನ್ನು ಪರಾಕ್ರಮದಿಂದ ಕಿತ್ತುಕೊಳ್ಳಲು ಸಾಧನಸಾಮಗ್ರಿಗಳನ್ನೆಲ್ಲ ನೀಗಿಕೊಂಡು (ನಿಸ್ಸಹಾಯಕನಾಗಿ) ಧರ್ಮರಾಯನು ಕಾಡಿನಲ್ಲಿ ನವೆಯುತ್ತಿದ್ದಾನೆ ಎಂಬ ಅವಮಾನಕರವಾದ ಎಲ್ಲರೂ ಹೇಳುವ ಮಾತುಗಳು ನಮ್ಮನ್ನು ಮೊದಲೇ ಸೋಂಕಿ ಕಣ್ಣನ್ನು ಕೆರಳಿಸುವಂತಹವು ಗಳಾಗಿವೆ. ೫೬. ಪ್ರಸಿದ್ದವಾದ ನಮ್ಮ ಇಪ್ಪತ್ತೊಂದು ತಲೆಮಾರಿನವರೆಗೂ ನಮಗೆ ಅವಮಾನವಾದ ಹಾಗೆಯೇ ಆಯಿತು. ಬ್ರೌಪದಿಯ ಮುಂದಲೆಯನ್ನು ಹಿಡಿದೆಳೆದಾಗಲೇ ಕೌರವರು ನಮ್ಮ ಪರಾಕ್ರಮವನ್ನೂ ಸೆರೆಹಿಡಿದರು. ೫೭. ಅಹಂಕಾರ ದಿಂದ ಮಲೆತು ಉಬ್ಬಿ ಸೊಕ್ಕಿ ಆ ಕುಲಕಳಂಕನಾದ ದುಶ್ಯಾಸನನು ಸಭೆಯಲ್ಲಿ ಬಾಗೆಯ ಹೂವಿನಂತೆ ಕೋಮಲವೂ ಮೃದುವೂ ಚಂಚಲವೂ ಕರಗೂ ಇರುವ ಕೇಶರಾಶಿಯನ್ನು ಎಳೆದಾಗ ಕಯ್ಯಲ್ಲಿಯೇ ಹೊಡೆದ ಹಾಗೆ ಬೆರಳಿನ ಗುರುತುಗಳು ಅಂಟಿಕೊಂಡು ಮುದ್ರಿಸುವ ಹಾಗೆ ಇರುವ ಕೊಂಕಾದ ಮುಂಗುರುಳು ತಲೆಯ ಕೂದಲುಗಳೊಡನೆ ಸೇರಿ ನಮ್ಮವೀರ್ಯವನ್ನು ಮೂದಲಿಸುವಂತಿವೆ. ೫೮. ಕನೈದಿಲೆಯಂತೆ ಚಂಚಲವಾದ ಕಣ್ಣುಳ್ಳ ಬ್ರೌಪದಿಯನ್ನು ಆ ದಿನ ಆ ಸಭಾಮಧ್ಯದಲ್ಲಿ ಪಶುವನ್ನು ಹೊಡೆಯುವ ಹಾಗೆ ಹೊಡೆದುದನ್ನು ಕಂಡು ನಿನ್ನ ಸತ್ಯಕ್ಕಾಗಿ ಹಲ್ಲುಕಚ್ಚಿಕೊಂಡು ಇಲ್ಲಿಯವರೆಗೆ ಸಹಿಸಿದನು. ಆ ದುಶ್ಯಾಸನನ ಎದೆಯ ಬಿಸಿರಕ್ತವನ್ನು ಪಾನಮಾಡಲು ನನ್ನ ಬಾಯಿ ಬಯಸಿ ಆತುರ ಪಡುತ್ತಿರುವಾಗ ನಾನು ಇನ್ನು ಸುಮ್ಮನೆ ಇರುತ್ತೇನೆಯೇ?