________________
ಉಪೋದ್ಘಾತ | ೨೭ ನೀನು ದೂರಹೋಗು ಎನ್ನಲು 'ನಾನು ನನ್ನ ಮಾತಿನಂತೆ ನಡೆದುಕೊಳ್ಳಬೇಕು, ಯಾರನ್ನು ಭಕ್ಷಿಸಲಿ, ಎಂದು ಕೇಳುವುದು. ಆಗ ಯಕ್ಷನು 'ಎಲೈ ಪಿಶಾಚಿಯೇ ನಿನ್ನನ್ನು ಯಾವನು ಹುಟ್ಟಿಸಿದನೋ ಅವನನ್ನೇ ತಿನ್ನು' ಎಂದು ಹೇಳಲು ಆ ದೇವತೆಯು ಹಾಗೆಯೇ ಹಿಂದಿರುಗಿ 'ಕನಕನ ಬೇಳ್ವ ಕನಕನಿಗೇ ತಟ್ಟಿತು' ಎಂದು ಜನರಾಡಿಕೊಳ್ಳುವಂತೆ ಅವನನ್ನೇ ತಿಂದು ಬಿಟ್ಟಿತು. ಈ ಕಥೆಯು ಪಂಪಭಾರತದಲ್ಲಿದೆ, ಮೂಲಭಾರತದಲ್ಲಿಲ್ಲ. ಅರ್ಜುನನಿಗೆ 'ಕಿರೀಟಿ'ಯೆಂಬ ಹೆಸರು ಬರಲು ಪಂಪನು ಕೊಟ್ಟಿರುವ ಕಾರಣವೂ ವ್ಯಾಸಭಾರತದಲ್ಲಿಲ್ಲ. ಕೃಷ್ಣಪರಮಾತ್ಮನು ಸಂಧಾನಕ್ಕೆ ಬಂದ ಕಾಲದಲ್ಲಿ ದುರ್ಯೋಧನನು ವಿದುರನನ್ನು ಹೀಯಾಳಿಸಲು ವಿದುರನು ರೇಗಿ
ಕಡು ಮುಳಿದು ನಿನ್ನ ತೊಡೆಗಳ ನುಡಿವೆಡೆಯೊಳ್ ಭೀಮಸೇನನಾ ಪದದೊಳ್ ಪಿಡಿಯಿಂದಿರ್ದೆನಿದಂ ಪಿಡಿಯೆಂ ಪೋಗೆಂದು ಸಭೆಯೊಳುಡಿದಂ ಬಿಲ್ಲು ||
ಎಂದು ಹೇಳುವುದೂ ಪಂಪನದೇ. ಕರ್ಣನು ಕುಂತಿಯ ಮಗನೆಂದು ದುರ್ಯೋಧನನು ತಿಳಿದುಕೊಂಡುದು ಸತ್ಯಂತಪರೆಂಬ ದಿವ್ಯಜ್ಞಾನಿಗಳಿಂದ ಎಂದು ಹೇಳುವ ಕೃಷ್ಣನ ಮಾತುಗಳಿಗೆ ಮೂಲಭಾರತದಲ್ಲಿ ಆಧಾರವಿಲ್ಲ. ಈ ಬದಲಾವಣೆಗಳಿಗೆಲ್ಲ ಸರಿಯಾದ ಕಾರಣವನ್ನು ಊಹಿಸುವುದು ಸಾಧ್ಯವಿಲ್ಲ. ಇವುಗಳನ್ನು ನೋಡಿದರೆ ಪಂಪನೇ ಮೂಲಭಾರತದಿಂದ ಈ ಬದಲಾವಣೆಗಳನ್ನು ಮಾಡಿಕೊಂಡನೊ ಅಥವಾ ಹೀಗೆ ಕಥಾಶರೀರದಲ್ಲಿ ವ್ಯತ್ಯಾಸವನ್ನು ಹೊಂದಿದ್ದ ಬಹುಶಃ ಜೈನಸಂಬಂಧಿಯಾದ ಬೇರೊಂದು ಭಾರತವೇ ಪಂಪನ ಕಾಲದಲ್ಲಿದ್ದಿತೋ ಎಂಬ ಸಂಶಯವು ಹುಟ್ಟುವುದು ಸರಿಯಾದ ಆಧಾರಗಳು ಸಿಕ್ಕುವವರೆಗೆ ಹೀಗೆ ನಿರ್ಧರಿಸಲು ಸಾಧ್ಯವಿಲ್ಲ.
'ಪಂಪಭಾರತ'ದಲ್ಲಿ ಪೂರ್ವಕವಿಗಳಿಂದ ಸ್ವೀಕರಣವಿಚಾರ: ಪಂಪನು ಮೇಲೆ ಹೇಳಿದಂತೆ ಮೂಲಭಾರತದ ಕಥೆಯಲ್ಲಿ ಹಲವು ವ್ಯತ್ಯಾಸಗಳನ್ನು ಮಾಡಿರುವುದಲ್ಲದೆ ಕನ್ನಡದ ಸಂಪತ್ತೂ ಸ್ವಾರಸ್ಯವೂ ಸ್ಪುಟವಾಗುವಂತೆ ಸಂಸ್ಕೃತದ ಶ್ರೇಷ್ಠಕವಿಗಳಾದ ಕಾಳಿದಾಸ, ಭಾರವಿ, ಶ್ರೀಹರ್ಷ, ಭಟ್ಟ ನಾರಾಯಣ ಮೊದಲಾದವರ ಕೃತಿಗಳಿಂದ ಕೆಲವು ಭಾಗಗಳ ಸಾರವನ್ನು ತನ್ನ ಕಾವ್ಯದಲ್ಲಿ ಪ್ರಯೋಗಿಸಿದ್ದಾನೆ. ನಾಲ್ಕನೆಯ ಆಶ್ವಾಸದಲ್ಲಿ ಬರುವ ಮಲಯಪರ್ವತದ ವರ್ಣನೆಯು ನಾಗಾನಂದದ ಮಲಯಪರ್ವತದ ವರ್ಣನೆಯ ಅನುವಾದವಿರಬೇಕು. ಪಂಚಮಾಶ್ವಾಸದಲ್ಲಿ ವಿರಹಜ್ವಾಲೆಯಿಂದ ತಪ್ತಳಾದ ಸುಭದ್ರೆಯನ್ನು ಅರ್ಜುನನು ಮರೆಯಾಗಿ ನಿಂತು ನೋಡುತ್ತ ಅವರ ಸರಸಲ್ಲಾಪಗಳನ್ನು ಕೇಳುವ ಸನ್ನಿವೇಶವನ್ನು ಕಾಳಿದಾಸನ 'ಶಾಕುಂತಲ'ದಿಂದ ತೆಗೆದುಕೊಂಡಿರಬೇಕು. ಸಪ್ತಮಾಶ್ವಾಸದ ಇಂದ್ರಕೀಲಪ್ರಕರಣವು ಭಾರವಿಯ 'ಕಿರಾತಾರ್ಜುನೀಯದ ಸಾರಾಂಶವೆಂದು ಹೇಳಬಹುದು. ಕರ್ಣಾಶ್ವತ್ಥಾಮರ ವಾಗ್ಯುದ್ದವು 'ವೇಣೀಸಂಹಾರ' ನಾಟಕದ ಛಾಯೆಯಿಂದ ಕೂಡಿದೆ. ಹೀಗೆ ಪುಪನು ಸಮಯೋಚಿತವಾಗಿ ಸಂಸ್ಕೃತದ ಉದ್ದಾಮಕವಿಗಳ