________________
೨೬ | ಪಂಪಭಾರತಂ ಭಾಗದಿಂದ ಮುಗಿಸಿಬಿಟ್ಟಿದ್ದಾನೆ. ಕೊನೆಗೆ ಮಹಾಭಾರತವು ಲೋಕಪೂಜ್ಯವಾಗುವುದಕ್ಕೆ ಕಾರಣರಾದ ವ್ಯಕ್ತಿಗಳನ್ನು ತಿಳಿಸುವ
ಚಲದೊಳ್ ದುರ್ಯೊಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ ಬಲದೊಳ್ ಮದ್ರೇಶನುನ್ನತಿಯೊಳಮರಸಿಂಧೂದ್ಭವಂ ಚಾಪವಿದ್ಯಾ ಬಲದೊಳ್ ಕುಂಭೋದ್ಭವಂ, ಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿ
ರ್ಮಲಂ ಚಿತ್ತಂ ಧರ್ಮಪುತ್ರಂ ಮಿಗಿಲ್, ಇವರ್ಗಳಿನೀ ಭಾರತಂ ಲೋಕಪೂಜ್ಯಂ || ಎಂಬ ಪದ್ಯದಲ್ಲಿಯೂ ಕೂಡ ಕೃಷ್ಣನ ಹೆಸರಿಗೆ ಒಂದು ಸ್ಥಾನವಿಲ್ಲ. ವ್ಯಾಸಭಾರತದ ದೃಷ್ಟಿಯಿಂದ ನೋಡುವುದಾದರೆ ಈ ಸಂಗತಿ ಸ್ವಲ್ಪ ಊನವಾಗಿಯೇ ಕಾಣುತ್ತದೆ. (ಇದು ಲೌಕಿಕಕಾವ್ಯವಾದುದರಿಂದ ಲೌಕಿಕವನ್ನು ಮೀರಿದ ಕೃಷ್ಣನ ಹೆಸರನ್ನು ಇದರಲ್ಲಿ ಸೇರಿಸಿಲ್ಲವೆಂದೂ ಭಾರತದ ಕೆಲವೆಡೆಯಲ್ಲಿ ಬರುವ ಕೃಷ್ಣನ ಶಕ್ತಿ ವೈಭವಗಳ ವರ್ಣನೆ ಪಂಪನಿಗೆ ಕೃಷ್ಣನಲ್ಲಿ ಪೂರ್ಣಭಕ್ತಿಯಿತ್ತೆಂದು ಸೂಚಿಸುವುದೆಂದೂ ಕೆಲವರು ಅಭಿಪ್ರಾಯಪಡುವುದು ಅಷ್ಟು ಸಮರ್ಪಕವಾಗಿ ಕಾಣುವುದಿಲ್ಲ)
ಇನ್ನು ಕೆಲವೆಡೆಗಳಲ್ಲಿ ಪಂಪನ ಬದಲಾವಣೆಗಳು ಕಥಾಸಂವಿಧಾನಕ್ಕೆ ವಿಶೇಷ ಹೊಳಪನ್ನು ತರುವುವು. ವ್ಯಾಸಭಾರತದ ವಸ್ತ್ರಾಪಹರಣದ ಕಥೆಯು ಲೌಕಿಕದೃಷ್ಟಿಯಿಂದ ಅನುಚಿತವಾದುದೆಂದು ಭಾವಿಸಿ ಪಂಪನು ಅದನ್ನು ಬಿಟ್ಟು ಕೇಶಾಪಕರ್ಷಣದ ವಿಚಾರವನ್ನು ಮಾತ್ರ ಹೇಳಿ ಕೊನೆಯಲ್ಲಿ ದುಶ್ಯಾಸನನ ವಧಾನಂತರ
ಇದರೊಳ್ ಶ್ವೇತಾತಪತ್ರಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ ಪುದಿದಾಡಿತ್ತು, ಆಡಂಗಿತ್ತಿದಳೆ ಕರುರಾಜಾನ್ವಯಂ, ಮತ್ಸತಾಪ ಕಿದಳೆ ನೋಡಗುರ್ವುರ್ವಿದುದು, ಇದುವೆ ಮಹಾಭಾರತಕ್ಕಾದಿಯಾಯ್ತು ಆ
ಬದಳಾಕ್ಷಿ ಪೇಟ, ಸಾಮಾನ್ಯಮ, ಬಗೆಯೆ, ಭವತ್ಯೇಶಪಾಶಪ್ರಪಂಚಂ || ಎಂದು ಹೇಳಿ ವೇಣೀಸಂಹಾರವನ್ನು ಮುಗಿಸುವುದು ಸ್ವಾರಸ್ಯವಾಗಿದೆ.
ಹಾಗೆಯೇ ಬ್ರೌಪದಿಯು ದುಶ್ಯಾಸನದಿಂದ ಸಭೆಗೆ ಸೆಳೆಯಲ್ಪಟ್ಟಾಗ ಕರ್ಣನು ನೋಡಿ ನಕ್ಕನೆಂದೂ ಸಲ್ಲದ ಮಾತುಗಳನ್ನಾಡಿದನೆಂದೂ ವ್ಯಾಸಭಾರತದಲ್ಲಿರುವುದನ್ನು ಬಿಟ್ಟಿರುವುದೂ ಕರ್ಣನನ್ನು ರಾಜ್ಯಲಕ್ಷ್ಮಿಬಿಡಲಾರಳೆಂಬುವುದೂ 'ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ಲೆ ಭಾರತಂ' ಎಂದು ಹೇಳುವುದೂ ಕರ್ಣನ ಪಾತ್ರಕ್ಕೆ ಗೌರವವನ್ನು, ಮಹಿಮೆಯನ್ನು ಕೊಡುವುದಲ್ಲದೆ ಒಟ್ಟಿನಲ್ಲಿ ಬಹಳ ಗಂಭೀರವಾಗಿದೆ.
ಪಂಪಭಾರತದಲ್ಲಿ ಇನ್ನೂ ಕೆಲವು ಹೊಸಸಂಗತಿಗಳಿವೆ. ಯುಧಿಷ್ಠಿರನ ಆಜ್ಞಾನುಸಾರ ಯಕ್ಷನ ವಿಷಸರೋವರಕ್ಕೆ ನೀರು ತರಲು ಹೋದ ಭೀಮಾರ್ಜುನ ನಕುಲ ಸಹದೇವರು ಯಕ್ಷನ ಪ್ರಶ್ನೆಗೆ ಉತ್ತರಕೊಡದೆ ನೀರನ್ನು ಕುಡಿದು ಮೈಮರೆತು ಬೀಳುವರು. ದುರ್ಯೊಧನನ ಪುರೋಹಿತನಾದ ಕನಕಸ್ವಾಮಿಯು ಪಾಂಡವರನ್ನು ಕೊಲ್ಲಲು ಕಳುಹಿಸಿದ ಕೀರ್ತಿಗೆಯು ಬಂದು ಕೊಳದ ತಡಿಯಲ್ಲಿ ಬಿದ್ದಿದ್ದ ನಾಲ್ವರನ್ನೂ ತಿಂದು ಮುಗಿಸುವನೆಂದೆಣಿಸಿ ಕೈಹಾಕುವುದು ಅವರನ್ನು ಆ ಅವಸ್ಥೆಗೆ ತಂದ ದೈವವು ಪ್ರತ್ಯಕ್ಷವಾಗಿ ಆ ಉಗ್ರದೇವತೆಯನ್ನು