________________
೩೧೦ | ಪಂಪಭಾರತಂ ಸಮಸ್ತ ವಸ್ತುಗಳಂ ಕೊಂಡು ಗರುತನಂ ನೆನೆದು ಬರಿಸಿ ರಥಮಂ ಚೋದಿಸಲ್ಬಟ್ಟು ಯಾದವರ ಸೆಗಳುಮಂ ಮುಂದಿಟ್ಟು ನಾರಾಯಣಂ ಭೀಮಾರ್ಜುನರ್ವೆರಸು ಸುಖಪ್ರಯಾಣಂಗಳಿಂದಿಂದ ಪ್ರಸ್ಥಕ್ಕೆ ಎಂದು ಧರ್ಮಪುತ್ರನಂ ಕಂಡುಶಿಖರಿಣಿ|| ಜರಾಸಂಧಂ ಮುನ್ನಂ ಮಡಿದೂಡಿಳೆ ನಿಷ್ಕಂಟಕಮದ
ರ್ಕಿರಲ್ವಡಿನ್ ನಾಲ್ಕು ದೆಸೆಗೆ ಬೆಸಸಿಂ ನಿಮ್ಮನುಜರಂ | ಭರಂಗೆಯ್ದಾಗಳ್ ನೀಂ ಪಸರ್ವಸರೊಳಾ ನಾಲ್ವರುಮನಾ
ದರಂಗೊಂಡಾ ನಾಲ್ಕು ದೆಸೆಗೆ ಬೆಸಸಿಂ ಬೆಳ್ಳುಳುವಿನಂ ||
ವ|| ಅಂತು ಭೀಮಸೇನನನಿಂದ್ರನ ಮೇಲೆ ವೇಲ್ದಂತೆ ಪೂರ್ವ ದಿಗ್ಗಾಗಕ್ಕೆ ವೇಟ್ಟು ನಕುಳನಂ ಯಮನನದಿರ್ಷಲ್ವಂತೆ ದಕ್ಷಿಣದಿಶಾಭಾಗಕ್ಕೆ ಬೆಸಸಿ ಸಹದೇವನು ವರುಣನನದಿರ್ಪಲ್ ನಿಯಮಿಸುವಂತೆ ಪಶ್ಚಿಮ ದಿಣ್ಣಾಗಕ್ಕೆ ವೇಟ್ಟು ವಿಕ್ರಮಾರ್ಜುನನಂ ಕುಬೇರನಿಂ ಕಪ್ಪಂಗೊಳಲ್ ಸಮರ್ಪಿಸುವಂತೆ ಉತ್ತರೋತ್ತರಮಾಗಲುತ್ತರದಿಶಾಭಾಗಕ್ಕೆ ವೇಚ್ಚಾಗಳ್ಚಂ|| ಅರಿ ನರಪಾಲ ಮೌಲಿಮಣಿಯೊಳ್ ನೆಲೆಗೊಂಡುದು ಶಂಖ ಚಕ್ರ ಚಾ
ಮರ ಹಳಚಿಕ್ಕ ಚಿಕ್ಕಿತ ಪದಾಕೃತಿ ಬೀಸುವ ಚಾಮರಾಳಿ ಸುಂ | ದರಿಯರ ಕೆಳಿಂ ಬರ್ದುಕಿ ಬಿಚ್ಚುವು ಬೆಳ್ಕೊಡೆ ನೋಡೆ ನೋಡೆ ನಿಂ ದುರಿದುವು ಸಾಲಭಂಜಿಕೆಗಳುವು ವೈರಿನರೇಂದ್ರಗೇಹದೊಳ್ 11 - ೨೯
ರಾಜ್ಯದಲ್ಲಿ ನಿಲ್ಲಿಸಿ ಜರಾಸಂಧನ ರಥವನ್ನು ಬರಮಾಡಿ ಸಮಸ್ತವಸ್ತುಗಳನ್ನೂ ತೆಗೆದುಕೊಂಡು ಗರುಡನನ್ನು ಧ್ಯಾನಮಾಡಿ ಬರಿಸಿ ರಥವನ್ನು ನಡೆಸುವಂತೆ ಹೇಳಿ ಬಂಧಿತರಾಗಿದ್ದ ಯಾದವರನ್ನು ಮುಂದುಮಾಡಿಕೊಂಡು ನಾರಾಯಣನಾದ ಕೃಷ್ಣನು ಭೀಮಾರ್ಜುನರೊಡಗೂಡಿ ಸುಖಪ್ರಯಾಣಗಳಿಂದ ಇಂದ್ರಪ್ರಸ್ಥಪಟ್ಟಣಕ್ಕೆ ಬಂದು ಧರ್ಮರಾಯನನ್ನು ನೋಡಿ ಹೇಳಿದನು. ೨೮. ಜರಾಸಂಧನು ಸತ್ತುದರಿಂದ ಭೂಮಿಯು ಇನ್ನು ಮೇಲೆ ಕಂಟಕರಹಿತವಾಯಿತು. ಆದುದರಿಂದ ಇನ್ನು ತಡಮಾಡಬೇಡ (ಜೈತ್ರಯಾತ್ರೆಗಾಗಿ) ನಾಲ್ಕು ದಿಕ್ಕುಗಳಿಗೂ ನಿನ್ನ ತಮ್ಮಂದಿರನ್ನು ನೇಮಿಸು. ಕಾರ್ಯಭಾರಮಾಡುವಾಗ ಒಬ್ಬೊಬ್ಬರನ್ನು ಹೆಸರು ಹಿಡಿದು ನಾಲ್ಕು ದಿಕ್ಕುಗಳಿಗೂ ಭಯವುಂಟಾಗುವ ಹಾಗೆ ಆಜ್ಞೆಮಾಡಿ ಕಳುಹಿಸು ಎಂದನು. ವ|| ಭೀಮಸೇನನು ಇಂದ್ರನ ಮೇಲೆ ದಂಡೆತ್ತಿ ಹೋಗುವ ಹಾಗೆ ಪೂರ್ವದಿಗ್ಯಾಗಕ್ಕೂ ನಕುಲನನ್ನು ಯಮನನ್ನು ನಡುಗಿಸ ಹೇಳಿ ದಕ್ಷಿಣದಿಕ್ಕಿಗೂ ಸಹದೇವನನ್ನು ವರುಣನನ್ನು ಗೆಲ್ಲಲು ಪಶ್ಚಿಮದಿಗ್ಯಾಗಕ್ಕೂ ಗೊತ್ತುಮಾಡಿ ವಿಕ್ರಮಾರ್ಜುನನನ್ನು ಕುಬೇರನಿಂದ ಕಪ್ಪಕಾಣಿಕೆಯನ್ನು ಪಡೆಯಲು ಅಭಿವೃದ್ಧಿಯಾಗುವ ಹಾಗೆ ಉತ್ತರದಿಗ್ಯಾಗಕ್ಕೂ ನಿಯಮಿಸಿದನು. ೨೯. ಶತ್ರುರಾಜರ ರತ್ನಕಿರೀಟಗಳಲ್ಲಿ ಶಂಖ, ಚಕ್ರ, ಚಾಮರ, ಮತ್ತು ನೇಗಿಲುಗಳಿಂದ (ರೇಖೆ) ಕೂಡಿದ ಪಾದಗಳ ಆಕಾರವು ಚಕ್ರವರ್ತಿ ಚಿಹ್ನೆಗಳು ಸ್ಥಿರವಾಗಿ ನಿಂತವು. (ಅಂದರೆ) ಅವರು ಚಕ್ರವರ್ತಿಯಾದ ಧರ್ಮರಾಜನ ಪಾದಗಳನ್ನು ತಮ್ಮ ತಲೆಯಲ್ಲಿ ಧರಿಸಿಕೊಂಡು ಅವನ ಆಜ್ಞಾಧಾರಕರಾದರು. ಅವರಿಗೆ ಬೀಸುತ್ತಿದ್ದ ಚಾಮರಗಳ ಸಮೂಹಗಳು ಸುಂದರಸ್ತ್ರೀಯರ ಕಂದ ಜಾರಿಬಿದ್ದುವು. ಶ್ವೇತಚ್ಛತ್ರಿಗಳು