________________
ಪಂಚಮಾಶ್ವಾಸಂ | ೨೯೭ ವlt ಎಂದು ಕಮಲಾಸನನಾಸೆದೋಲೆ ನುಡಿದುಳುದನೆ ನುಡಿದೊಡಂತೆಗೆಯ್ದನೆಂದುಚಂ|| ಸುರಿವರಲೊಂದು ಬೆಳ್ಳರಿಯದಾತನೂಭವನುತ್ತಮಾಂಗದೊಳ್
ದೊರೆಕೊಳೆ ನಿಲ್ಲದಲ್ಲಿ ಕುಸುಮಂ ಕೆಲವಲ್ಲುಗೆ ತನ್ನ ರತ್ನವಿ || ಸುರಿತ ಕಿರೀಟಮಂ ಕವಿದು ತಾನೆ ನರಂಗೆ ಕಿರೀಟ ನಾಮಮಂ
ಸರಸದಿನಾಗಳುಚ್ಚರಿಸಿ ಸಾಹಸಮಂ ಪೊಗಲ್ಲಿಂ ಸುರಾಧಿಪಂ || ೧೦೩
ವ|| ಅಂತು ಪೊಗಟ್ಟು ಖಾಂಡವವನದಹನದೊಳಾದ ಪೊಗೆಯೊಳಮಲ್ಲಿಯ ಮಹಾನಾಗಂಗಳ ವಿಷಂಬೆರಸು ಸುಯ್ ಸುಯ್ಯ ಪೊಗೆಯೊಳಂ ಕಜಂಗಿ ಕಟ್ಟಿದ ಮೆಯ್ಯುಮಂ ಪ್ರಚಂಡ ಗಾಂಡೀವ ವ್ಯಾಘಾತದೊಳಿಂದ್ರನೀಲಂಗಳನಡಸಿದಂತಪ್ಪ ಮುಂಗೆಯುಮಂ ಕಂಡು ಕೃಷ್ಣನೆಂಬ ಹೆಸರನಿಟ್ಟನಾಗ ಬ್ರಹ್ಮಂ ಬ್ರಹ್ಮಾಯುವಕೊಂದು ಪರಸಿದನೀಶ್ವರಂ ನೀನುದಾರಮಹೇಶ್ವರ ನಪ್ಪುದಂ ನಿನಗಮೆನಗಮೇತಳಂ ವಿಕಲ್ಲಮುಂ ವಿಚ್ಚಿನ್ನಮುಮಿಲ್ಲೆಂದನಂತು ಮೂದೇವರುಂ ಪರಸಿ ನಿಜನಿವಾಸಂಗಕ್ಕೆ ಪೊದರಾಗಳ್ಚಂ11 ಅನಿತಿನಿತೆನ್ನದಾಂತ ಸುರ ಪನ್ನಗ ಕಿನ್ನರ ಸೈನ್ಯಮಲ್ಲಮಂ
ಬಿನ ಮೊನೆಯೊಳ್ ಪಡಲ್ವಡೆ ಲತಾಭವನಂ ಕೃತಕಾಚಳಂಗಳಂ | ಬಿನಿತುಮವಟ್ಟಿ ತಬ್ ನುಡಿಯಂ ನುಡಿದಂತೆ ನೆಗಟ್ಟಲಗ್ನಿದೇ ವನನಮರೇಂದ್ರನಂದನಮನೂಡಿದನಂದಮರೇಂದ್ರನಂದನಂ || ೧೦೪
ಅವನು ನಿನ್ನ ಮಗ; ಕೃಷ್ಣನ ವಿಷಯದಲ್ಲಿ ಹೃದಯವೇದನೆ (
ಕೋಪ) ಯಿರುವುದಾದರೆ ಅದು ಕೂಡದು. ಅವನು ತ್ರಿಮೂರ್ತಿಗಳಲ್ಲೊಬ್ಬ, ನಮ್ಮಮಾತಿಷ್ಟೆ : ಗುಣಾರ್ಣವನಾದ ಅರ್ಜುನನಿಗೆ ಜಯವನ್ನು ಕೊಡು. ಈಗ ಮಾಡಬೇಕಾದ ಕಾರ್ಯವಿಷ್ಟೆ.” ೧೦೩. ಎಂದು ಬ್ರಹ್ಮನು ಇಂದ್ರನಿಗೆ ಆಶೆದೋರಿಸಿ ಮಾತನಾಡಿ ವಾಸ್ತವಾಂಶವನ್ನು ತಿಳಿಸಲು (ಇಂದ್ರನು) ಹಾಗೆಯೇ ಮಾಡುತ್ತೇನೆಂದು ತನ್ನ ಮಗನಾದ ಅರ್ಜುನನ ತಲೆಯ ಮೇಲೆ ಧಾರಾಕಾರವಾಗಿ ಸುರಿಯುತ್ತಿರುವ ಹೂಗಳು ಆ ಸ್ಥಳದಲ್ಲಿಯೇ ನಿಲ್ಲದೆ ಪಕ್ಕದಲ್ಲಿ ಬೀಳುತ್ತಿರಲು ಇಂದ್ರನು ತಾನೇ ರತ್ನಕಾಂತಿಯಿಂದ ಕೂಡಿದ ತನ್ನ ಕಿರೀಟವನ್ನು ಅರ್ಜುನನ ತಲೆಯ ಮೇಲಿಟ್ಟು ಅರ್ಜುನನಿಗೆ ಕಿರೀಟಿ' ಎಂಬ ಹೆಸರನ್ನು ಸರಸವಾಗಿ ಇಟ್ಟು ಅವನ ಸಾಹಸವನ್ನು ಹೊಗಳಿದನು. ವ|| ಖಾಂಡವವನದಹನದಿಂದುಂಟಾದ ಹೊಗೆಯಿಂದಲೂ ಅಲ್ಲಿಯ ಮಹಾಸರ್ಪಗಳ ವಿಷಮಿಶ್ರವಾಗಿ ಉಸಿರಾಡುವ ಗಾಳಿಯಿಂದಲೂ ಕಪ್ಪುಕಪ್ಪಾದ ಶರೀರವನ್ನೂ ಮಹಾಶಕ್ತಿಯುಕ್ತವಾದ ಗಾಂಡೀವದ ಪೆಟ್ಟಿನಿಂದ ಇಂದ್ರನೀಲರತ್ನಗಳು ಸೇರಿಕೊಂಡ ಹಾಗಿರುವ ಮುಂಗಯ್ಯನ್ನೂ ಕಂಡು ಇಂದ್ರನು ಅರ್ಜುನನಿಗೆ ಕೃಷ್ಣನೆಂಬ ಹೆಸರಿಟ್ಟನು. ಬ್ರಹ್ಮನು ನಿನಗೆ ದೀರ್ಘಾಯುವಾಗಲಿ ಎಂದು ಹರಸಿದನು. ಈಶ್ವರನು ನೀನು ಉದಾರಮಹೇಶ್ವರನಾಗಿರುವುದರಿಂದ ನಿನಗೂ ನನಗೂ ಯಾವುದರಲ್ಲಿಯೂ ವ್ಯತ್ಯಾಸವೂ ಭೇದವೂ ಇಲ್ಲ ಎಂದನು. ಹಾಗೆ ತ್ರಿಮೂರ್ತಿಗಳೂ ಅರ್ಜುನನನ್ನು ಹರಸಿ ತಮ್ಮ ವಾಸಸ್ಥಳಗಳಿಗೆ ಹೋದರು. ೧೦೪. ಅಷ್ಟಿಷ್ಟೆನ್ನದೆ ಪ್ರತಿಭಟಿಸಿದ ದೇವತೆಗಳ ನಾಗರರ ಕಿನ್ನರರ ಸೈನ್ಯವೆಲ್ಲವೂ ತನ್ನ ಬಾಣದ ಹೊಡೆತಕ್ಕೆ ಸಿಕ್ಕಿ ಚೆಲ್ಲಾಪಿಲ್ಲಿಯಾಗಿ ಕೆಳಗುರುಳಲು ಬಳ್ಳಿವನೆ ಕೃತಕಪರ್ವತ ಎಂಬಿವೆಲ್ಲ