________________
೨೯೬ / ಪಂಪಭಾರತಂ
ವ|| ಅಂತಶ್ವಸೇನನರ್ಧಾವಲಿಕಮೆಂಬಮೋಘಾಸ್ತ್ರವಾಗಿ ಕರ್ಣನ ದೊಣೆಯೊಳಿರ್ದನಿತ್ತ ಖಾಂಡವವನದೊಳಗೆ ಮಂದಪಾಲನೆಂಬ ಮುನಿಗನೊಂದು ಲಾವಗೆಗಂ ಪುಟ್ಟದ ನಾಲ್ಕುಂ ಲಾವಗೆಗಳಗ್ನಿಸೂಕ್ತಂಗಳನೋದುತ್ತುಮದಿರದಿದಿರಂ ಬರೆ ಮೆಚ್ಚಿ ಬರವನಗ್ನಿದೇವಂ ಬೇಡಿಕೊಳ್ಳಿ ಮಂದೊಡಮನ್ವಯಕ್ಕೆ ನೀನ್ ತಣ್ಣಿದೆಯಾಗೆಂದು ಬೇಡುವುದುಂ ತದಸ್ತುವೆಂದನಿತ್ತಲಿಂದಂ ತನ್ನ ಬಲಮೆಲ್ಲಮಳ್ಳಿ ಮಳ್ಳಿದಂತಾದುದೆಂಬುದಂ ಕೇಳು
ಮಗನನಗೆಂದು ಪೇ ಪಿಡಿದು ಕಟ್ಟದ ಮಾನೆ ಪಾರ್ಥನಂ ಧರಿ ತಿಗೆ ಗುರುವೆಂದು ವಜ್ರದೊಳುರುಳದೆ ಮಾನ ಚಕ್ರಿಯಂ ಕರಂ 1 ಬಗೆಯದೆ ಗೊಡ್ಡಮಾಡಿದರ್ಗ ತಕ್ಕುದನೀಗಳ ಮಾನೆಂದು ತೊ ಟ್ಟಿಗೆ ಪೋಮಟ್ಟನೇತಿ ನಿಜವಾಹನಮಂ ದಿವದಿಂ ಸುರಾಧಿಪಂ || ೧೦೧ ವ|| ಅಂತು ದೇವನಿಕಾಯಂ ಬೆರಸು ಯುದ್ಧಸನ್ನದ್ಧನಾಗಿ ಪರಸೈನ್ಯ ಭೈರವನೊಳಿತಿವೆ ನೆಂಬ ಪಟುವಗೆಯೊಳ್ ಭೈರವಂಬಾಯ್ಕಂತೆ ಬಂದು ನಿಂದ ಪುರಂದರನಲ್ಲಿಗೆ ಸರಸಿಜಸಂಭವಂ ಬಂದು ಮಾರ್ಕೊಂಡು
ಚoll
ಚoll ಬನಮನೆ ಕಾಯಲೆಂದಿರವೆಯತ್ತೊಡೆ ಮುನ್ನಮೆ ಪೋದುದಂದು ಪಾ ರ್ಥನೊಳೆನಗೇವನೆಂಬ ಬಗೆಯುಡೆ ನಿನ್ನಯ ಪುತ್ರನಚ್ಯುತಂ | ಗಿನಿಸರ್ದೆ ನೋವೆಯನ್ನೊಡದು ಕೂಡದು ಮೂವರೊಳೊರ್ವನಮ್ಮ ಮಾ ತಿನಿತೆ ಗುಣಾರ್ಣವಂಗೆ ಕುಡು ಗೆಲ್ಲಮನಿಂತಿದೆ ಕಜ್ಜದುಜ್ಜುಗಂ ||
೧೦೨
ಮನಸ್ಸಿನಿಂದ ಕೋಪಿಸಿಕೊಂಡು ಕರ್ಣನ ಬತ್ತಳಿಕೆಯನ್ನು ಪ್ರವೇಶಿಸಿದನು. ವ|| ಹಾಗೆ ಅಶ್ವಸೇನನು ಅರ್ಧಾವಲೀಕವೆಂಬ ಅಮೋಘವಾದ ಬಾಣವಾಗಿ ಕರ್ಣನ ಬತ್ತಳಿಕೆಯಲ್ಲಿದ್ದನು. ಈ ಕಡೆ ಖಾಂಡವವನದಲ್ಲಿ ಮದನಪಾಲನೆಂಬ ಋಷಿಗೂ ಒಂದು ಲಾವುಕಪಕ್ಷಿಗೂ ಹುಟ್ಟಿದ ನಾಲ್ಕು ಲಾವುಕಹಕ್ಕಿಗಳು ಅಗ್ನಿಸೂತ್ರಮಂತ್ರಗಳನ್ನು ಜಪಿಸುತ್ತ ಬೆಂಕಿಗೆ ಹೆದರದೆ ಎದುರಾಗಿ ಬರಲು ಅವುಗಳ ಬರುವಿಕೆಗೆ ಸಂತೋಷಪಟ್ಟು ಅಗ್ನಿದೇವನು (ನಿಮಗೆ ಬೇಕಾದ) ವರವನ್ನು ಕೇಳಿಕೊಳ್ಳಿ ಎನ್ನಲು 'ನಮ್ಮ ವಂಶಕ್ಕೆ ನೀನು ಹಿತವಂತನಾಗು' ಎಂದು ಬೇಡಿಕೊಂಡವು. ಅಗ್ನಿಯು ಹಾಗೆಯೇ ಆಗಲಿ ಎಂದು ವರವನ್ನು ಕೊಟ್ಟನು. ಈಕಡೆ ಇಂದ್ರನು ತನ್ನ ಬಲವೆಲ್ಲ ನಾಶವಾಗಿ ಸಾರಿಸಿದಂತಾಯಿತೆಂಬುದನ್ನು ಕೇಳಿದನು. ೧೦೧. 'ನನ್ನ ಮಗನೆಂದು ಅರ್ಜುನನನ್ನು ಹಿಡಿದು ಕಟ್ಟದೆ ಬಿಡುತ್ತೇನೆಯೇ? ಲೋಕಗುರುವೆಂದು ಕೃಷ್ಣನನ್ನು ವಜ್ರಾಯುಧದಿಂದ ಉರುಳಿಸದೆ ಬಿಡುತ್ತೇನೆಯೇ? ನನ್ನನ್ನು ಸ್ವಲ್ಪವೂ ಲಕ್ಷಿಸದೆ ಚೇಷ್ಟೆ ಮಾಡಿದವರಿಗೆ ಯೋಗ್ಯವಾದುದನ್ನು ಈಗಲೇ ಮಾಡುತ್ತೇನೆ' ಎಂದು ಇದ್ದಕ್ಕಿದ್ದ ಹಾಗೆ ದೇವೇಂದ್ರನು ತನ್ನ ವಾಹನವಾದ ಐರಾವತವನ್ನು ಹತ್ತಿ ಸ್ವರ್ಗದಿಂದ ಹೊರಟನು. ವ| ದೇವತೆಗಳ ಸಮೂಹವನ್ನು ಕೂಡಿಕೊಂಡು ಯುದ್ಧಕ್ಕೆ ಸಿದ್ಧನಾಗಿ ಪರಸೈನ್ಯಭೈರವನಾದ ಅರ್ಜುನನೊಡನೆ ಯುದ್ಧ ಮಾಡುತ್ತೇನೆಂಬ ಕೆಟ್ಟಮನಸ್ಸಿನಿಂದ ಭೈರವನು ಹಾಯ್ದುನುಗ್ಗುವ ಹಾಗೆ ಬಂದು ನಿಂತ ಇಂದ್ರನ ಹತ್ತಿರಕ್ಕೆ ಬ್ರಹ್ಮನು ಬಂದು ಅವನನ್ನು ತಡೆದು ೧೦೨. “ನೀನು ವನವನ್ನು ರಕ್ಷಿಸುವುದಕ್ಕಾಗಿ ಯುದ್ಧಮಾಡುವುದಾದರೆ ಅದು ಮೊದಲೇ ನಾಶವಾಗಿದೆ. ಪಾರ್ಥನಲ್ಲಿ ನಿನಗೆ ದ್ವೇಷವಿದೆಯೆನ್ನುವುದಾದರೆ