________________
ಚತುರ್ಥಾಶ್ವಾಸಂ | ೨೫೫ ವಗಿರಿ ಮತ್ತಮೊಂದೆಡೆಯೊಳೊಂದು ಕಾಳಾಗರು ಧೂಪ ಧೂಮ ಮಲಿನ ಶ್ಯಾಮಲಾಲಂ ಕೃತವಿಚಿತ್ರಭಿತ್ತಿವಿರಾಜಿತರಮ್ಯಹರ್ಮ್ಮತಳದೊಳ್ ಪಲಕಾಲಮಗಲ್ಲ ನಲ್ಲರಿರ್ವರುಮೊಂದೆಡೆ ಯೊಳ್ ಕೂಡಿಮ ಸಮಸಂದಅಲಂಪನೀಯ ಶಯನಂ ಘರ್ಮಾಂಬುವಿಂ ನಾನೆ ಮು
ನ್ಯಮ ನಾಡೂಲ್ಕುಡಿವೋಗಿ ಸೂಸುವ ಪದಂ ಗಂಗಾಂಬುವಂ ಪೋಲೆ ವಿ | ಭ್ರಮಮಂ ಕಂಠರವಕ್ಕೆ ತಾಡನ ರವರ ತಂದೀಯೆ ತಚ್ಚಯ್ಯೊಳ್ ಸಮಹಸ್ತಂಬಿಡಿವಂತುಟಾಯ್ತು ಸುರತ ಪ್ರಾರಂಭ ಕೋಳಾಹಳಂ || ೧೦೯ ವll ಅಂತನೇಕ ಪ್ರಕಾರ ಪುರ ಜನಜನಿತ ವಿಕಾರಂಗಳಂ ತೊಲಲ್ಲು ನೋಂನ್ನೆಗಂಚಂ ಸೊಡರ್ಗುಡಿಯೊಯ್ಯನಾಗೆ ಪೊಸ ಮಲ್ಲಿಗೆ ಮೆಲ್ಲಗೆ ಕಂಪು ನಾಟಿ ತ
ಡಿದಲರೂದೆ ಗಾವರದ ಮೆಲ್ಕುಲಿ ತುಂಬಿಯ ಗಾವರಂಗಳಂ | ಗೆಡೆಗೊಳೆ ಚಂದ್ರಿಕಾಪ್ರಭೆ ಮೊದಲಿಡೆ ನಾಡ ಏತರ್ಕದಿಂ ಬೆರ ಲಿಡಿದು ಗುಣಾರ್ಣವಂ ನೆಬಿಯ ನಿಟ್ಟಿಸಿದಂ ಬೆಳಗಪ್ಪ ಜಾವಮಂ |೧೧೦
ವ|| ಆಗಳ್ ತನ್ನೊಡನೆ ತೇಲಲ್ಕ ನಾಗರಕ ವಿಟ ವಿದೂಷಕ ಪೀಠ ಮರ್ದಕರ್ಕಳನಿರಲ್ವೆಟ್ಟು ರಾಜಮಂದಿರಮಂ ಪೊಕ್ಕು ತನ್ನ ಪವಡಿಸುವ ಮಾಡಕ್ಕೆಂದು
ಕಣ್ಣೀರು ಪುಷ್ಪಬಾಣಗಳಂತೆ ಹೆಚ್ಚಿ ಚಿಮ್ಮಿ ಸೂಸಿ ಹರಿದುವು. ವ|| ಮತ್ತೊಂದು ಕಡೆಯಲ್ಲಿ ಕಪ್ಪಾದ ಅಗುರು ಧೂಪದ ಹೊಗೆಯಿಂದ ಮಾಸಿದ ಶ್ಯಾಮಲ ವರ್ಣದಿಂದ ಅಲಂಕರಿಸಲ್ಪಟ್ಟು ಚಿತ್ರಮಯವಾದ ಗೋಡೆಗಳಿಂದ ವಿರಾಜಮಾನವಾಗಿರುವ ರಮಣೀಯವಾದ ಉಪ್ಪರಿಗೆಯ ಪ್ರದೇಶದಲ್ಲಿ ಹಲವು ಕಾಲ ಅಗಲಿದ್ದ ಇಬ್ಬರು ಪ್ರೇಮಿಗಳು ಒಂದು ಕಡೆ ಕೂಡಿದ್ದರು. ೧೦೯. ಆ ಪ್ರಿಯ ಪ್ರೇಯಸಿಯರಲ್ಲಿ ಸಮಾನವಾಗಿ ಉಂಟಾದ ಪ್ರೀತಿಯು ಸೌಖ್ಯವನ್ನುಂಟುಮಾಡಲು ಬೆವರಿನಿಂದ ಹಾಸಿಗೆಯು ತೊಯ್ದು ಹೋಯಿತು. ಮೊದಲೇ ಲಜ್ಜೆಯಿಂದ ಪ್ರಸರಿಸಿ ಹರಿಯುವ ಸುರತದ್ರವವು ಗಂಗಾಜಲವನ್ನು ಹೋಲುತ್ತಿತ್ತು. ಕತ್ತಿನ ಗರಗರಿಕೆಯ ಶಬ್ದಕ್ಕೆ ಸುರತಧ್ವನಿ ಸೊಗಸನ್ನುಂಟುಮಾಡುತ್ತಿತ್ತು. ಆ ಹಾಸಿಗೆಯಲ್ಲಿ ರತಿಕ್ರೀಡೆಯ ಪ್ರಾರಂಭದ ಆರ್ಭಟವು ಸಮಾನ ಹಸ್ತವನ್ನು ಹಿಡಿಯುವ ಹಾಗಾಯಿತು. ಪ್ರಿಯ ಪ್ರೇಯಸಿಯರ ಸುರತಕ್ರೀಡೆಯು ಸಮಾನ ಪ್ರಮಾಣವುಳ್ಳದ್ದಾಯಿತು. ವ| ಹೀಗೆ ಪುರಜನರ ಅನೇಕ ಪ್ರಕಾರವಾದ ವಿಕಾರಗಳನ್ನು ಅರ್ಜುನನು ನೋಡುತ್ತ ಬರುತ್ತಿರಲು ೧೧೦. ದೀಪದ ಕುಡಿಯು ಮಲಿನವಾಯಿತು, ಮಲ್ಲಿಗೆಯು ಮೃದುವಾಗಿ ವಾಸನೆಯನ್ನು ಬೀರಿತು, - ತಂಪಾದ ಗಾಳಿ ಬೀಸಿತು. ಪ್ರಾತಃಕಾಲದ ಮೃದುವಾದ ಧ್ವನಿಯು ದುಂಬಿಯ * ಧ್ವನಿಯೊಡನೆ ಕೂಡಿಕೊಂಡಿತು. ಬೆಳುದಿಂಗಳಿನ ಕಾಂತಿ ಕಡಮೆಯಾಯಿತು. ವಿಶೇಷವಾದ ತರ್ಕದಿಂದ ಅರ್ಜುನನು ಬೆಳಗಾಗುವ ಹೊತ್ತನ್ನು ಪೂರ್ಣವಾಗಿ ತಿಳಿದನು. ವ|| ಆತ ತನ್ನೊಡನೆ ತೊಳಲುತ್ತಿದ್ದ ನಾಗರಿಕ, ವಿಟ, ವಿದೂಷಕ, ಪೀಠಮರ್ದಕರನ್ನು ಇರಹೇಳಿ ಅರಮನೆಯನ್ನು ಪ್ರವೇಶಿಸಿ ತಾನು ಮಲಗುವ