________________
೨೫೪ / ಪಂಪಭಾರತಂ
ನೆನೆದು
ಚಂ
ಮುನಿಸಿನೊಳಾದಮೇವಯಿಸಿ ಸೈರಿಸದಾದಲೊಳ್ ಕನಲ್ಕು ಕಂ ಗನೆ ಕನಲುತ್ತುಮುಮ್ಮಳಿಸಿ ಸೈರಿಸಲಾಗಿದೆ ಮೇಲೆವಾಯ್ತು ಬ ಯ್ದನುವಿಸಿ ಕಾಡಿ ನೋಡಿ ತಿಳಿದ ನಿನ್ನುಳಿಗೊಂಡಲಂಪುಗಳ ಕನಸಿನೊಳಂ ಪಳಂಚಲೆವುದೆನ್ನೆರ್ದೆಯೊಳ್ ತರಳಾಯತೇಕ್ಷಣೇ ||
ವ|| ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯೊಡನಿರ್ದ೦ದಿನ ಮುಳಿಸೊಸಗೆಗಳಂ
೧೦೬
ಬಗೆ ಗೆಲಲೆಂದು ಕಾಡಿ ಪುಸಿನಿದ್ದೆಯೊಳಾನಿಗೆ ಲಲ್ಲೆಗೆಯ್ದು ಲ
ಲೆಗೆ ಮದಿರ್ದೊಡವನೊಳೊಂದಿ ಮೊಗಂ ಮೊಗದತ್ತ ಸಾರ್ಚಿ ಬೆ | ಚಗೆ ನಿಡುಸುಯ್ದ ನಲ್ಲಳ ಮುಖಾಂಬುಜ ಸೌರಭದೊಳ್ ಪೊದಳದೇಂ ಮಗಮಗಿಸಿತ್ತೊ ಕತ್ತುರಿಯ ಕಪ್ಪುರದೊಂದು ಕದಂಬದಂಬುಲಂ || ೧೦೭ ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳಗೆ ನಗುತ್ತು ಬರ್ಪನೊಂದೆಡೆಯೊಳ್ -
ಚಂ।। ಒಲವಿನೊಳಾದ ಕಾಯ್ದು ಮಿಗೆ ಕಾದಲನಂ ಬಿಸುಟಂತೆ ಪೋಪ ಕಾ
ದಲಳಲತುಂ ತೆ೦ದಿರಿದು ನೋಡಿದ ನೋಟದೊಳೆಯೇ ತಳ್ಳ ಪ | ರ್ಮೊಲೆ ಪೊಮುಯ್ದು ಬೆನ್ನಿನಿತುಮೊರ್ಮೆಯೆ ನಾಂಬಿನಮು ಪೊಕ ಲರ್ಗಳಿನಷ್ಟು ಪಾಯ್ದುವರಲಂಬುಗಳಂತೆ ವಿಲೋಚನಾಂಬುಗಳ್ ||೧೦೮
೧೦೬. ಎಲ್ ಚಂಚಲಾಕ್ಷಿಯೇ ಕೋಪದಲ್ಲಿ ವಿಶೇಷವಾಗಿ ಅಸಮಾಧಾನಗೊಂಡು ಸಹಿಸಲಾರದೆ ವಿಶೇಷ ಕೋಪಿಸುತ್ತ ದುಃಖಿಸಿ ಹೇಗೂ ತಾಳಲಾರದೆ ಮೇಲೆ ಬಿದ್ದು ಬಯ್ತು ಬಲಾತ್ಕರಿಸಿ ಕಾಡಿ ನೋಡಿ ಸಮಾಧಾನವನ್ನು ಹೊಂದಿ ಮುತ್ತನ್ನು ಸೆಳೆದುಕೊಂಡ ಸುಖದ ನೆನಪುಗಳು ಕನಸ್ಸಿನಲ್ಲಿಯೂ ನನ್ನೆದೆಯನ್ನು ತಗುಲಿ ಪೀಡಿಸುತ್ತಿರುವುವು ವ। ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯ ಜೊತೆಯಲ್ಲಿದ್ದ ಆ ದಿನದ ಕೋಪ ಪ್ರಸಾದಗಳನ್ನು ನೆನೆಸಿಕೊಂಡು ೧೦೭. (ಪ್ರಿಯೆಯೊಡನೆ) ಜಗಳವಾಡಿ ಅವಳ ಮನಸ್ಸನ್ನು ಗೆಲ್ಲಬೇಕೆಂದು ನಾನು ಹುಸಿನಿದ್ದೆಯಲ್ಲಿರಲು ತಾನು ಮುದ್ದುಮಾತುಗಳನ್ನಾಡಿ ಆ ಮುದ್ದುಮಾತಿಗೂ ನಾನು ಮೈಮರೆತವನಂತಿರಲು ಪ್ರೇಮದಿಂದ ಕೂಡಿ ನನ್ನ ಮುಖದೊಡನೆ ತನ್ನ ಮುಖವನ್ನು ಸೇರಿಸಿ ಬಿಸಿಯಾಗಿ ನಿಟ್ಟುಸಿರು ಬಿಟ್ಟ ಪ್ರಿಯಳ ಮುಖಕಮಲದ ಸುಗಂಧದಲ್ಲಿ ಸೇರಿಕೊಂಡ ಪಚ್ಚಕರ್ಪೂರ ಮಿಶ್ರಿತವಾದ ತಾಂಬೂಲದ ಉಂಡೆಯೂ ಎಷ್ಟು ಗಮಗಮಿಸಿತ್ತೋ? ವ|| ಎಂದು ತನ್ನಲ್ಲಿಯೇ ಹಲುಬುತ್ತಿದ್ದವನನ್ನು ಅರ್ಜುನನು ಕಂಡು ಇವನೂ ನಮ್ಮಂತಹವನೂ ನಮ್ಮ ನಂಟನೂ ಆಗಿದ್ದಾನೆ ಎಂದು ಮುಗುಳ್ಳಗೆ ನಗುತ್ತ ಬರುತ್ತಿದ್ದವನು ಒಂದು ಕಡೆಯಲ್ಲಿ ೧೦೮. ಪ್ರಣಯಕಲಹದಲ್ಲಿ ಉಂಟಾದ ಕೋಪವು ಹೆಚ್ಚಾಗಲು ಪ್ರಿಯನನ್ನು ತೊರೆದು ಹೋಗುತ್ತಿರುವ ಪ್ರಿಯಳು ಬಗೆಬಗೆಯಾಗಿ ಅಳುತ್ತಾ ಹಿಂತಿರುಗಿ ನೋಡಿದ ನೋಟದಲ್ಲಿ ಅವಳ ಗಾಢವಾದ ಪೆರ್ಮೊಲೆಗಳೂ ಹೆಗಲ ಹಿಂಭಾಗವೂ ಬೆನ್ನೂ ಏಕಕಾಲದಲ್ಲಿ ತೊಯ್ದುಹೋಗುವ ಹಾಗೆ ಅವಳ ಹೂವಿನಂತಿರುವ ಕಣ್ಣುಗಳಿಂದ
!