________________
ಚತುರ್ಥಾಶ್ವಾಸಂ | ೨೪೯ ಚoll ನಯದೊಳೆ ನೋಡಿ ನೋಟದೋಳೆ ಮೇಳಿಸಿ ಮೇಳದೊಳಪು ಕೆಯ್ತು ಗೊ
ಟ್ಟಿಯೊಳೊಳಪೊಯ್ದು ಪತ್ತಿಸುವ ಸೂಳೆಯರಂದಮನೆಯ್ದೆ ಪೋಲ್ವ ಸೂ | ಳೆಯರ ತುಜುಂಬು ಸೂಳೆಯರ ಮುಡಿ ಸೂಳೆಯರಿರ್ಪ ಪಾಂಗು ಸೂ ಳೆಯರ ನೆಗಲ್ ನಾಡೆ ತನಗ ದಲಕ್ಕನೆ ಸೂಳೆಯಾಗಳೇ | ೯೪
ವll ಎನೆ ಕೇಳು ಮುಗುಳಗೆ ನಗುತ್ತುಂ ಬರ್ಪನೊಂದೆಡೆಯೊಳೊಂದು ಕಂದದ ಮೊದಲುಮಂ ವೃತ್ತದ ತುದಿಯುಮನೊಂದುಮಾಡಿ ಪದಮಿಕ್ಕಿಯೋದಿ ಪಂಡಿತಿಕ್ಕಿಗೆ ಮುಯ್ಯಾಂತು ಮಾವ ಕಾಳಗದೊಳಂ ತಾನೆ ಓಡಿಯಾರೋಡಿದರೆಂಬಂತೆ ಬೀರಕ್ಕೆ ಮುಯ್ಯಾಂತುವೊಂದು ವೀಸನಪೊಡಮಾರ್ಗಮಿತ್ತಳೆಯದೆ ಚಾಗಕ್ಕೆ ಮುಯ್ಯಾಂತುಂ ತಮ್ಮ ನಗುವರನಳೆಯದಣ್ಣರೇಣಿದ ಕಚಿಯಂತೆ ದೆಸೆದೆಸೆಗೆ ಬೆಸೆವ ಪಚ್ಚಪಸಿಯೆಗ್ಗರುಮಂ ಕಂಡು
ಚಂ|
ಇಳೆಯದ ಬೀರಮಿಲ್ಲದ ಕುಲಂ ತಮಗಲ್ಲದ ಚಾಗಮೋದದೋ ದಯದ ಎದ್ದ ಸಲ್ಲದ ಚದುರ್ ನೆಜತೆ ಕಲ್ಲದ ಕಲ್ಪಿ ಕೇಳ ಮಾ || ತಣಿಯದ ಮಾತು ತಮ್ಮ ಬಜುವಾತುಗಳೊಳ್ ಪುದಿದೆಗರೆಯ ಕ ಸ್ಥಳಿವಿನಮಾರ್ ಪಟಿಯದೇನೆಳೆಯಂ ಕಿಡಿಸಿ ಬಲ್ಲರೊ ||
೯೫
೯೪. ನಯವಾಗಿ ನೋಡಿ, ನೋಡುವುದರಿಂದಲೇ ಪ್ರೀತಿಯುಂಟಾಗುವಂತೆ ಮಾಡಿ ಪ್ರೀತಿಯಿಂದಲೇ ಆಲಂಗಿಸಿ, ಆಲಿಂಗನದಿಂದಲೇ ಕೂಡಿಕೊಂಡು ಕೂಡುವುದರಿಂದಲೇ ವಶಪಡಿಸಿಕೊಂಡು ತಮ್ಮ ಮನಸ್ಸನ್ನು ಬೆಸೆಯುವ ಸೂಳೆಯರ ರೀತಿಯನ್ನು ಚೆನ್ನಾಗಿ ಹೋಲುವ ಸೂಳೆಯರ ತುರುಬು, ಸೂಳೆಯರ ಮೃದುವಾದ ಮಾತು, ಸೂಳೆಯರು ಇರುವ ಸ್ಥಿತಿ, ಸೂಳೆಯರ ನಡವಳಿಕೆ ಇವು ನನಗೆ ವಿಶೇಷವಾಗಿ ಪ್ರೀತಿಕರ ವಾದುವಲ್ಲವೇ ? ಈ ಅಕ್ಕನ ಆಟ, ನೋಟ, ತುರುಬು, ರೀತಿ, ಚೇಷ್ಟೆಗಳನ್ನು ನೋಡಿದರೆ ಇವಳೂ ಸೂಳೆಯಾಗಿಯೇ ಇರಬೇಕಲ್ಲವೆ? ವ|| ಎಂಬುದನ್ನು ಕೇಳಿ ಮುಗುಳ್ಳಗೆ ನಗುತ್ತ ಬರುತ್ತಿದ್ದವನು ಒಂದು ಕಡೆಯಲ್ಲಿ ಒಂದು ಕಂದಪದ್ಯದ ಆದಿಯನ್ನೂ ಮತ್ತೊಂದು ವೃತ್ತದ ಅಂತ್ಯವನ್ನೂ ಒಂದುಗೂಡಿಸಿ ಓದಿ ತನ್ನ ಪಾಂಡಿತ್ಯಕ್ಕೆ ಮೆಚ್ಚಿಕೊಳ್ಳುತ್ತಲೂ ಯಾವ ಕಾಳಗದಲ್ಲಿಯೂ ತಾನು ನಿಲ್ಲದೆ ಓಡಿಹೋಗಿ ಹೋರಾಡಿದನು ಎಂಬಂತೆ ತನ್ನ ಪರಾಕ್ರಮವನ್ನು ಹೊಗಳಿಕೊಳ್ಳುತ್ತಲೂ ಒಂದು ವೀಸವನ್ನಾದರೂ ಯಾರಿಗೂ ದಾನಮಾಡದೆ ತಾನು ತ್ಯಾಗಿಯೆಂದು ಜಂಭ ಕೊಚ್ಚಿಕೊಳ್ಳುತ್ತಲೂ ತಮ್ಮನ್ನು ನೋಡಿ ನಗುವವರನ್ನು ತಿಳಿಯದೆ ಎಂಟುಜನ ಹತ್ತಿಕೊಂಡಿರುವ ಕತ್ತೆಯಂತೆ ದಿಕ್ಕುದಿಕ್ಕಿನಲ್ಲಿಯೂ ಗರ್ವವನ್ನು ಪ್ರದರ್ಶಿಸುತ್ತಲೂ ಇರುವ ಶುದ್ದ ಹಸಿಯ ದಡ್ಡರನ್ನು ನೋಡಿ ೯೫. ಕಾದದ ಶೌರ್ಯ, ಇಲ್ಲದ ಕುಲ, ತಮ್ಮಲ್ಲಿಲ್ಲದ ತ್ಯಾಗ, ತಾವು ಓದದ ಓದು, ತಿಳಿಯದ ವಿದ್ಯೆ, ಸಲ್ಲದ ಜಾಣೆ ವಿಶೇಷವಾಗಿ ಕಲಿಯದ ಕಲಿಕೆ, ಆಡಲು ತಿಳಿಯದ ಮಾತು, ಇವು ತಮ್ಮ ವ್ಯರ್ಥಾಲಾಪಗಳಲ್ಲಿ ಸೇರಿರುವ ದಡ್ಡರು ಹೆಚ್ಚುತ್ತಿರಲು - ಗುಂಪಾಗಿರಲು- ಯಾರು ತಾನೆ ಅವರನ್ನು ಹಳಿಯುವುದಿಲ್ಲ? ಅವರು ಲೋಕವನ್ನು ಕೆಡಿಸಲು ಬಲ್ಲರೇನು?