________________
೨೪೮ / ಪಂಪಭಾರತಂ ಚಂi ಬಸನದೊಡಂಬಡಿಂಗಲಸಿ ಮಾಡೂಡಮಿಂತಿದನೀವೆನೆಂದನಂ.
ಪಸಿದೊಡಮಾಡದೋತಿ ಬಗೆದೂಅದೊಡಂ ನೆರದಿರ್ದೊಡು ಸಗಾ | ಟಿಸದೂಡಮಾಯಮುಂ ಚಲಮುಮುಳ್ಕೊಡೆ ಪೇಸದವಳೆ ಮತ್ತಮಾ ಟಿಸುವುದೆ ಮತ್ತಮಂಜುವುದೆ ಮತ್ತಮಬಲ್ಲುದೆ ಮತ್ತಮಾವುದೇ || ೯೨
ವರ ಎಂದು ನುಡಿದು ಬಿಸುಡಿಸಿದಂ ಮತ್ತೊರ್ವಂ ತನಗೆರಡನೆಯದೆಲ್ಲ ನಲ್ಗಳನೇತಜಿಕೊಳಪೊಡಮೇವಮಂ ಮಾಡದೆ ಬೇಟಮಂ ಸಲಿಸುವುದರ್ಕೆ ಸಂತಸಂಬಟ್ಟು ಮುಂತಕ್ಕೆ ಕಾಪವಿಟ್ಟಂತೆಂದಂ
ವll ಇನಿಯಂ ನೊಯ್ತುಮೊಡಂಬಡಂ ನುಡಿದೊಡೆಂದೆಂದಡಂ ನಿನ್ನೊಳೆ
ಇನಿತುಂ ದೋಷಮನುಂಟುಮಾಡದಿರೆಯುಂ ಕಣ್ಣಿಂತೆ ಸಂದಪುದೊಂ | ದನೆ ಕೇಳೋಪಲೆ ಕೂರ್ಮೆಗೆಟ್ಟೆನಗೆ ನೀನೇನಾನುಮೊಂದೇವಮಂ ಮನದೊಳ್ ಮಾಡಿದೊಡಂದೆ ದೀವಳಿಗೆಯಂ ಮಾನಾಮಿಯಂ ಮಾಡೆನೇ ||೯೩ .
.
ವll ಎಂದು ನುಡಿದಂ ಮತವೊಂದಡೆಯೊಳೊರ್ವನೋರ್ವಳ ನಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳಗೆ ನಕ್ಕು ತನ್ನ ಕೆಳೆಯಂಗೆ ತೋಟಿ
ಅವನಿಗೆ ಬುದ್ದಿ ಹೇಳಿದನು. ೯೨. ರತಿಕ್ರೀಡೆಗೆ ಒಪ್ಪದೆ ಜುಗುಪ್ಪೆಯಿಂದ ನಿನ್ನನ್ನು ಅವಳು ತ್ಯಜಿಸಿದರೂ (ನಿನಗೆ ಬೇಕಾದ) ಇಂತಿಂಥಾದ್ದನ್ನೆಲ್ಲ ಕೊಡುವೆನೆಂದ ನಿನಗೆ ಸುಳ್ಳು ಹೇಳಿದರೂ ನೀನು ಆಸೆ ತೋರಿಸಿ ನಿನ್ನ ಮನಸ್ಸನ್ನು ಪ್ರಕಟಿಸಿದರೂ ಅವಳು ತನ್ನ ಮನಸ್ಸನ್ನು (ಪ್ರೇಮವನ್ನೂ ಪ್ರಕಟಿಸದಿದ್ದರೂ ನೀನು ಅವಳನ್ನು ಕೂಡಿ ಕೊಂಡಿದ್ದರೂ ಅವಳು ತನ್ನ ಪ್ರತಿಪ್ರೇಮವನ್ನು ಪ್ರಕಟಿಸದಿದ್ದರೂ ನಿನಗೆ ಬಲವೂ ಛಲವೂ ಇದ್ದ ಪಕ್ಷದಲ್ಲಿ ಅವಳಿಗೆ ಅಸಹ್ಯಪಡದೆ ಪುನಃ ಅವಳಿಗಾಗಿ ಆಸೆ ಪಡುವುದೇ, “ಅಂಜುವುದೇ, ಪುನಃ ವ್ಯಸನ ಪಡುವುದೇ, ಪುನಃ ಅವಳಿಗೆ (ಧನಕನಕಾದಿಗಳನ್ನು ಕೊಡುವುದೇ? ವll ಎಂಬುದಾಗಿ ಹೇಳಿ (ಅವಳನ್ನು) ಬಿಸಾಡಿದನು. ಮತ್ತೊಬ್ಬನು ತನಗೆ ಕಪಟವಿಲ್ಲದೆ ಪ್ರೀತಿಸುತ್ತಿದ್ದ ಪ್ರಿಯಳನ್ನು ಯಾವುದರಲ್ಲಿಯೂ ಅಸಮಾಧಾನ ವನ್ನುಂಟುಮಾಡದೆ ಪ್ರೀತಿಯನ್ನು ನಿಲ್ಲಿಸಿದುದಕ್ಕೆ ಸಂತೋಷಪಟ್ಟು ಮುಂದಕ್ಕೆ ಕಾವಲಿಟ್ಟು ಹೀಗೆ ಹೇಳಿದನು. ೯೩.: ಅಡ್ಡಮಾತನ್ನಾಡಿದರೆ ಪ್ರಿಯನು ನೊಂದುಕೊಳ್ಳುತ್ತಾನೆ ಎಂದು ನನ್ನಲ್ಲಿ ನಾನು ಎಳ್ಳಷ್ಟು ದೋಷವನ್ನುಂಟುಮಾಡಿ ಕೊಳ್ಳದಿದ್ದರೂ ನೀನು ನನ್ನನ್ನು ಸರಿಯಾಗಿ ನೋಡುತ್ತಿಲ್ಲ ಎಂಬ ಭಾವನೆಯೇ ಇದೆ. ಎಲೈ ಪ್ರಿಯಳೇ ಕೇಳು. ಹೀಗೆ ನಿನ್ನ ಪ್ರೀತಿಯನ್ನು ಕಳೆದುಕೊಂಡಿರುವ ನನಗೆ ನೀನೇನಾದರೂ ಬಂದು ಆತನನ್ನು ಮನಸ್ಸಿನಲ್ಲಿ ಮಾಡಿದರೂ ಅಂದೇ ನಾನು ದೀವಳಿಗೆಯನ್ನೂ ಮಹಾನವಮಿಯನ್ನೂ ಮಾಡದಿರುತ್ತೇನೆಯೇ? ವ|| ಎಂಬುದಾಗಿ ನುಡಿದನು. ಬೇರೊಂದೆಡೆಯಲ್ಲಿ ಒಬ್ಬನು ಒಬ್ಬಳ ನಡತೆಯ ಮಾತಿನ ತುರುಬಿನ ದಡ್ಡತನಕ್ಕೆ ಮುಗುಳಗೆ ನಕ್ಕು ತನ್ನ ಸ್ನೇಹಿತನಿಗೆ ತೋರಿಸಿ ಹೇಳಿದನು.