________________
೨೪೬ / ಪಂಪಭಾರತಂ
ಮ||
ಮಧು ಸೀತುಂ ಕಟು ಸೀದು ಪೋ ಪುಳಿತ ಕಳ್ಳುಂ ಕರಂ ಕಯ್ತು ಬ ರ್ಪುದು ಮಾರೀಚಿ ತೊಡರ್ಪುಳಿಂದ ಸರದಿಂ ಕಂಪಿಲ್ಲ ಸೊರ್ಕಿಪ್ಪಾ | ಅದು ಚಿಂತಾಮಣಿಗೇವುದಕ್ಕೆ ದಳವಿಲ್ಲಿ ಕಕ್ಕರಕ್ಕಿಂತುಟ
ಪುದು ಕಳ್ಳವುದು ತಪ್ಪದೆಂದು ಕುಡಿದರ್ ಕಾಮಾಂಗಮಂ ಕಾಂತೆಯರ್ || ೮೮
ವ|| ಅಂತು ಕುಡಿಯ ಕಕ್ಕರಗೆಯದಿಂ ತುದಿನಾಲಗೆಯೊಳ್ ತೊದರಸು ನುಡಿವ ನುಡಿಗಳುಂ ಪೊಡವ ನಿಡಿಯ ಪುರ್ವುಗಳುಂ ನಿಡಿಯಲರ್ಗಣ್ಣಳೊಳ್ ವಿಕಾರಂ ಬೆರಸು ನೆಗಭಿನಯಂಗಳುಂ ಮಳಮಳಿಪ ರೂಪು ಕಣ್ಣಳೊಳ್ ಬೆಳ್ಳನಟೆಯ ಸೋಂಕುವ ಕೆಂಪುಗಳುಂ ತಮ್ಮ ಕೆಂಪಂ ಕಣ್ಣ ಕೊಟ್ಟು ಕಣ್ಣಳ ಬೆಳ್ಳಂ ತಮಗೆ ಮಾಲುಗೊಂಡಂತೆ ತನಿಗೆತ್ತುವೆರಸು ಬತ್ತಿ ಸೊಗಯಿಸುವ ಬೆಳರ್ವಾಲ್ಗಳೊಳಿಂಪಂ ತಾಳಿ ಪೊಜಮಡುವ ತಣ್ಣಂಪುಗಳುಮಮೃತಬಿಂದು ಗಳಂತೆ ನೆಗಟ್ಟ ಬೆಮರ ಬಿಂದುಗಳುಮಳವಲ್ಲದೊಪ್ಪೆ ಪಲರುಮೊಳ್ಕೊಂಡಿರೊಂದೆಡೆಯೊಳಿರ್ದಲ್ಲಿ ಯೋರ್ವಳ್
ಪೃಥ್ವಿ || ಬೆಳರ್ತ ಬೆಳರ್ವಾಯ್ ಕರಂ ಪೊಳೆವ ಹಾಂಗೆ ಕಣ್ಣಿಂದಳು
ರ್ತುಳುಂಕೆ ನಿಡುವುರ್ವುಗಳ ಪೊಡರೆ ಬಾಯ ಕಂಪಿಂಗ ಸಾ | ರ್ವಳಿಪ್ರಕರಮಂದು ಸೀಗುಡಿವೊಲಾಗೆ ನಾನ್ಗಟ್ಟು ಮೊ
ಕಳಂ ಜತಿಗೆ ಮೆಟ್ಟುವಳ್ ಪಿಡಿದು ಮೆಟ್ಟುವಳ್ ನೋಬ್ಬರಂ || ೮೯
೮೮. ಮಧುವೆಂಬ ಮದ್ಯವು ಸಿಹಿಯಾಗಿದ್ದರೂ ಕಟುವಾದುದು; ಸೀದುವೆಂಬುದು ಹುಳಿಯ ಹೆಂಡವಲ್ಲ; ವಿಶೇಷವಾಗಿ ಸಿಹಿಯಾಗಿರುತ್ತದೆ. ಮಾರೀಚಿ ತೊಡರ್ಪುಳ್ ಎಂಬ ಮದ್ಯಗಳಿಗಿಂತ ಶರದೆಯೆಂಬುದು ಹೆಚ್ಚು ವಾಸನೆಯಿಲ್ಲ; ಅಷ್ಟು ಸೊಕ್ಕಿಸಲಾರದು; ಚಿಂತಾಮಣಿಯೆಂಬ ಮದ್ಯದ ಸೇವನೆಗೆ ಅಡಿಕೆಯೇಕಕ್ಕ, ಕಕ್ಕರವೆಂಬ ಮದ್ಯಕ್ಕೂ ಹಾಗೆಯೇ (ಬೇಕಿಲ್ಲ) ಇಂತಹವೇ ಸರಿಯಾದ ಹೆಂಡವೆಂಬುದು ಎಂದು ಆ ಸ್ತ್ರೀಯರು ಕಾಮೋದ್ರೇಕವಾದ ಮದ್ಯವನ್ನು ಪಾನಮಾಡಿದರು. ವ|| ಹಾಗೆ ಕುಡಿಯಲು ಕಕ್ಕರವೆಂಬ ಮದ್ಯಪಾನದ ಸೊಕ್ಕಿನಿಂದ ತುದಿನಾಲಗೆಯಲ್ಲಿ ತೊದಳುಗಳಿಂದ ಕೂಡಿದ ಮಾತುಗಳುಂಟಾದುವು. ದೀರ್ಘವಾದ ಹುಬ್ಬುಗಳು ಅಲುಗಾಡುತ್ತಿದ್ದವು. ಉದ್ದವಾದ ಹೂವಿನಂತಿರುವ ಕಣ್ಣುಗಳಲ್ಲಿ ವಿಕಾರದಿಂದ ಕೂಡಿದ ಚೇಷ್ಟೆಗಳು ಮೂಡಿದವು. ಕೆರಳಿ ಕೆಂಪಾದ ರೂಪವು ಕಣ್ಣುಗಳ ಬಿಳುಪನ್ನು ಸಂಪೂರ್ಣವಾಗಿ ಹೋಗಲಾಡಿಸಿತು. ಆವರಿಸುತ್ತಿರುವ ಕೆಂಪುಬಣ್ಣದ ತುಟಿಗಳು ತಮ್ಮಕೆಂಪನ್ನು ಕಣ್ಣುಗಳಿಗೆ ಕೊಟ್ಟು ಅದರ ಬಿಳುಪನ್ನು ತಾವು ಪ್ರತಿಯಾಗಿ ಕೊಂಡಂತೆ ತೋರಿದವು. ವಿಶೇಷವಾಗಿ ಅಲುಗಾಡುತ್ತ ಬತ್ತಿದ ಬಿಳುಪಾದ ಬಾಯಿಗಳಲ್ಲಿ ಇಂಪಿನಿಂದ ತಂಪಾದ ವಾಸನೆಗಳು ಸೂಸಿದವು. ಅಮೃತಬಿಂದುಗಳಂತೆ ಬೆವರ ಹನಿಗಳು ಪ್ರಕಾಶಿಸಿದುವು. ಅಳತೆಯಿಲ್ಲದ ಸೌಂದರ್ಯದಿಂದ ಕೂಡಿದ ಅನೇಕ ಉತ್ತಮ ಸ್ತ್ರೀಯರು ಒಂದೆಡೆ ಸೇರಿದರು. ಆ ಸ್ಥಳದಲ್ಲಿ ಒಬ್ಬಳು ೮೯, ಬಿಳಿಚಿಕೊಂಡ ತುಟಿಯನ್ನೂ ವಿಶೇಷವಾಗಿ ಹೊಳೆವ ಕಡೆಗಣ್ಣಿನ ನೋಟವನ್ನೂ ಉಳ್ಳ ಒಬ್ಬಳು ತನ್ನ ಕಣ್ಣಿನ ದೃಷ್ಟಿಯು ಎಲ್ಲ ಕಡೆಗೂ ವ್ಯಾಪಿಸುತ್ತಿರಲು ನೀಳವಾದ ಹುಬ್ಬುಗಳು ಕುಣಿಯುತ್ತಿರಲು ಬಾಯ ವಾಸನೆಗೆ ಮುತ್ತುತ್ತಿರುವ ದುಂಬಿಯ ಸಮೂಹವು