________________
೨೦ | ಪಂಪಭಾರತಂ ಕಥೆಯನ್ನು ಅವನ ಸುತ್ತಲೂ ನೆಯ್ದಿದ್ದಾನೆ. ಆದುದರಿಂದಲೇ ಗ್ರಂಥಕ್ಕೆ “ವಿಕ್ರಮಾರ್ಜುನವಿಜಯ'ವೆಂದು ಹೆಸರಿಟ್ಟು ತನ್ನ ಆಶ್ರಯದಾತನಾದ ಇಮ್ಮಡಿ ಅರಿಕೇಸರಿಯನ್ನು ಅರ್ಜುನನೊಂದಿಗೆ ಅಭೇದವಾಗಿ ಸಂಯೋಜಿಸಿ ವರ್ಣಿಸಿದ್ದಾನೆ. ಹೀಗೆ ಮಾಡುವುದರಲ್ಲಿ ಪಂಪನಿಗೆ ಕಾರಣವಿಲ್ಲದೆ ಇಲ್ಲ. ಅರಿಕೇಸರಿಯು ವೀರಾಗ್ರೇಸರ, ಈತನ ವೃತ್ತಾಂತ ಅವನ ವೇಮಲವಾಡದ ಶಿಲಾಶಾಸನದಿಂದಲೂ (ಕ್ರಿ.ಶ. ಸು ೯೨೭) ಅವನ ಮೊಮ್ಮಗನಾದ ಮೂರನೆಯ ಅರಿಕೇಸರಿಯ ಪರಭಣಿ ಶಾಸನದಿಂದಲೂ (ಕ್ರಿ. ಶ. ೯೬೬) ಪಂಪನ ತಮ್ಮನಾದ ಜಿನವಲ್ಲಭನ ಗಂಗಾಧರಂ ಶಾಸನದಿಂದಲೂ ಯಥೋಚಿತವಾಗಿ ವಿಶದವಾಗುತ್ತದೆ. ಪಂಪನ ಮಾತುಗಳು ಈ ವಿಷಯವನ್ನು ದೃಢೀಕರಿಸುತ್ತವೆ. ಅರಿಕೇಸರಿಯು ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದ. ಬಾಲ್ಯದಿಂದಲೂ 'ಪರಬಲದ ನೆತ್ತರ ಕಡಲೊಳಗಣ ಜಿಗುಳೆ ಬಳೆದ ತೇಜದೊಳೆ ಬಳೆದ. ಮುಂದೆ ತನ್ನ ಅಧಿರಾಜನಾದ ಗೋವಿಂದರಾಜನಿಗೆ ವಿರೋಧವಾಗಿ ನಿಂತು ಅವನ ಸಾಮಂತನಾದ ವಿನಯಾದಿತ್ಯನಿಗೆ ಆಶ್ರಯವನ್ನಿತ್ತಿದ್ದ ದುರ್ಮಾರ್ಗಿಯಾದ ಗೋವಿಂದರಾಜನನ್ನು ರಾಜ್ಯಭ್ರಷ್ಟನನ್ನಾಗಿ ಮಾಡುವುದಕ್ಕೆ ಇತರ ಸಾಮಂತರೊಡನೆ ತಾನೂ ಸೇರಿ ಆ ಕಾರ್ಯವನ್ನು ಸಾಧಿಸಿ ಆ ಸ್ಥಾನದಲ್ಲಿ ರಾಷ್ಟ್ರಕೂಟರಲ್ಲಿ ಪ್ರಸಿದ್ಧನಾದ ಮೂರನೆಯ ಕೃಷ್ಣನನ್ನು ಸ್ಥಾಪಿಸಲು ಸಹಾಯಮಾಡಿದ್ದ. ಇಂತಹವನ ವಿಷಯದಲ್ಲಿ ಪಂಪನಿಗೆ ಗೌರವವು ಹುಟ್ಟುವುದು ಸಹಜವೇ. ಸಾಲದುದಕ್ಕೆ ಅರಿಕೇಸರಿಯೂ ಪಂಪನೂ ಸ್ನೇಹಿತರು, ಸಮಾನವಾದ ಗುಣಶೀಲಗಳನ್ನುಳ್ಳವರು. ತನ್ನ ಸ್ವಾಮಿಯಂತೆಯೇ ಪಂಪನೂ, ಧಾವಳಯನಿಳಿ೦ಪನೂ ಚತುರಂಗಬಲಭಯಂಕರನೂ' ಆಗಿ 'ನಿಜಾಧಿನಾಥನಾಹವದೊಳರಾತಿನಾಯಕರ ಪಟ್ಟನೆ ಪಾಕಿಸ್ಸಂದ' ಪೆಂಪುಳ್ಳವನು, ಸಾಲದುದಕ್ಕೆ ಅರಿಕೇಸರಿಯೂ ಪಂಪನ ಸ್ನೇಹಿತರಂತಿದ್ದವರು. ಅವರಿಬ್ಬರಲ್ಲಿ ಎಂದೂ ಸ್ವಾಮಿ ನೃತ್ಯಭಾವ ತೋರಿಲ್ಲ. ಅದನ್ನು ಪಂಪನು ಪ್ರಕಾರಾಂತರದಿಂದ ದುರ್ಯೋಧನನು ಕರ್ಣನಿಗೆ ಹೇಳುವ ಮಾತಿನಲ್ಲಿ ಸ್ಪಷ್ಟಮಾಡಿದ್ದಾನೆ. ಇಂತಹ ಪ್ರೀತಿಪಾತ್ರನಾದ ಆಶ್ರಯದಾತನನ್ನು ಭಾರತಶ್ರೇಷ್ಠನಾದ ಅರ್ಜುನನಿಗೆ ಹೋಲಿಸಿ ಅವರ ಪರಸ್ಪರ ಗುಣಗಳನ್ನು ಇಬ್ಬರಲ್ಲಿಯೂ ಆರೋಪಿಸಿ ತನ್ನ ಉಪ್ಪಿನ ಋಣವನ್ನು ತೀರಿಸುವುದಕ್ಕಾಗಿ ಅದ್ಭುತವಾದ ಕಾಣಿಕೆಯನ್ನು ಅರ್ಪಿಸಿದ್ದಾನೆ. ಅಂದಮಾತ್ರಕ್ಕೆ ಪಂಪನು ಅರಿಕೇಸರಿಯ ಸಂಬಳದ ವಂದಿಯಲ್ಲ ಅಭಿಮಾನಮೂರ್ತಿ. 'ಪೆರೀವುದೇಂ, ಪೆಡಿ ಮಾಡುವುದೇಂ, ಪೆಲಿಜೆಂದಮಪ್ಪುದೇಂ' ಎಂದು 'ಆದಿಪುರಾಣ'ದಲ್ಲಿ ಘಂಟಾಘೋಷವಾಗಿ ಸಾರಿದ್ದಾನೆ.
ಪಂಪನು ಅರ್ಜುನ ಅರಿಕೇಸರಿಗಳನ್ನು ಅಭೇದದಿಂದ ವರ್ಣಿಸಿದ್ದಾನೆ. ಅರ್ಜುನನ ಅಪರಾವತಾರವೇ ಅರಿಕೇಸರಿಯೆಂಬುದು ಪಂಪನ ಕಲ್ಪನೆ. ಭಾರತಯುದ್ದದಲ್ಲಿ ಯಮನಂದನನು ಕರ್ಣನಿಂದ ತಾಡಿತನಾಗಿ ಸೋತು ತನ್ನ ಪಾಳೆಯಕ್ಕೆ ಹಿಂದಿರುಗಿ ಬಂದು ತನಗಾದ ಪರಾಭವಕ್ಕವಯಿಸಿ ಅರ್ಜುನನ ಮೇಲೆ ಕೋಪಿಸಿಕೊಳ್ಳುವನು. ಆಗ ಅರ್ಜುನನು