________________
ಚತುರ್ಥಾಶ್ವಾಸಂ | ೨೩೫ ವll ಎಂದು ತನ್ನ ಮನಮನದು ಮುಟ್ಟಿ ನುಡಿದ ಕೆಳದಿಯ ನುಡಿಗೆ ಪೆಜತೇನುಮನನಲಯದ ನಾಣ್ಯ ತಲೆಯ ಬಾಗಿ ನೆಲನಂ ಬರೆಯುತ್ತುಂ ನೀರೊಲ್ ಮುಲುಗಿದರಂತುಮ್ಮನೆ ಬೆಮರುತ್ತುಮ್ಮಳಿಕೆ ಎಂದು ಬೆಚ್ಚನೆ ಸುಯೊಡೆ
ಕoll ಉಸಿರದಿರೆ ಮನದೊಳೆರ್ದಯಂ
ಪಸರಿಸುಗುಂ ಮಜುಕಮದನನಗಿಂತುಟಿ ಎಂ | ದುಸಿರುಸಿರ್ದೊಡೆ ಬಗೆ ಹೀರ್ಗುಂ ಬಿಸಿದುಂ ಬೆಟ್ಟತ್ತುಮುಸಿರದೇ ತೀರ್ದಪುದೇ ||
೬೫
ಪೇಂಬುದುಮಾಂ ನಿನಗೆಡೆ ವೇದದ ಪೇಜಾರ್ಗ ಪೇಟಿನಿಂದಿನ ಬಂದಾ | ಕಾಬಾದ ವಾಟ್ಗೋಂಡೂಡ ಪಾಬಾದುದು ಮನಮುಮರ್ದಯುಮೇನಂ ಪೇಯಂ ||
ಭೋಂಕನೆ ಮನಮಂ ಕದಡಿ ಕ ಲಂಕಿದಪುದು ಬಿಡದೆ ಮನಮನೊನಲಿಸಿದಪುದಾ || ದಂ ಕೆಳದಿ ಪಾಣರಂಕುಸ ನಂಕುಸದಾ ಪೊಳಪುಮವನ ಕಣ್ಣಳ ಬೆಳ್ಳುಂ ||
ಮುಖಕ್ಕೆ ವಿಶೇಷವಾದ ಬಾಡುವಿಕೆಯನ್ನೂ ನೀಳವಾದ ಮಾವಿನ ಹೋಳಿನಂತಿರುವ ಕಣ್ಣಿಗೆ ಕಣ್ಣೀರನ್ನೂ ಮನಸ್ಸಿಗೆ ದುಃಖವನ್ನೂ ಯಾವನು ನಿನಗುಂಟುಮಾಡಿದನೋ ಅವನೇ ನಿಜವಾಗಿಯೂ ಗಂಭವಿದ್ಯಾಧರನಾದ ಅರ್ಜುನನಲ್ಲವೇ? ವರ ಎಂದು ತನ್ನ ಮನಸ್ಸನ್ನು ತಿಳಿದು ಹೃದಯಸ್ಪರ್ಶಿಯಾಗಿ ಮಾತನಾಡಿದ ಸಖಿಯ ಮಾತಿಗೆ ಬೇರೆಯೇನನ್ನೂ ಹೇಳಲಾರದೆ ನಾಚಿಕೆಗೊಂಡು ತಲೆಯನ್ನು ಬಗ್ಗಿಸಿ ನೆಲವನ್ನು ಕಾಲಿನಿಂದ ಬರೆಯುತ್ತ ನೀರಿನಲ್ಲಿ ಮುಳುಗಿದವರ ಹಾಗೆ ಸುಮ್ಮನೆ ಬೆವರುತ್ತ ದುಃಖದಿಂದ ನಿಟ್ಟುಸಿರನ್ನು ಬಿಟ್ಟಳು. ೬೫. ಆಗ ಚೂತಲತಿಕೆಯು ಸುಭದ್ರೆಯನ್ನು ಕುರಿತು, ಅಮ್ಮಾಸುಭದ್ರೆ ಮನಸ್ಸಿನಲ್ಲಿರುವುದನ್ನು ಬಾಯಿಬಿಟ್ಟು ಹೇಳದಿದ್ದರೆ ದುಃಖವು ಹೃದಯವನ್ನು ಆವರಿಸುತ್ತದೆ. ಆದುದರಿಂದ ನನಗೆ ಹೀಗೆ ಎಂದು ಹೇಳು; ಹೇಳಿದರೆ ಇಷ್ಟಾರ್ಥವು ಕೈಗೂಡುತ್ತದೆ. ಬಿಸಿಯಾಗಿಯೂ ಬಿರುಸಾಗಿಯೂ ಉಸಿರಾಡುವುದರಿಂದ ತೀರುತ್ತದೆಯೇ? (ನಿಟ್ಟುಸಿರಿನಿಂದ ಇಷ್ಟಾರ್ಥವಾಗುತ್ತದೆಯೇ ?) ೬೬. ಹೇಳು ಎನಲು ನಾನು ನಿನಗೆ ವಿಷಯವನ್ನು ತಿಳಿಸದೆ ಬೇರೆ ಯಾರಿಗೆ ಹೇಳಲಿ, ಈ ದಿನ ಆ ಕೆಟ್ಟ ಸುದ್ದಿಯನ್ನು ಕೇಳಿದೊಡನೆಯೇ ಮನಸ್ಪೂ ಎದೆಯೂ ಹಾಳಾಯಿತು, ಏನು ಹೇಳಲಿ ೬೭. ಎಲೆ ಸಖಿಯೇ ಪಾಣ್ಮರಂಕುಶನೆಂಬ ಬಿರುದುಳ್ಳ ಅರ್ಜುನನ (ಅರಿಕೇಸರಿಯ) ಅಂಕುಶವೆಂಬ ಹೊಳಪೂ ಅವನ ಕಣ್ಣುಗಳ ಬಿಳುಪೂ ಇದ್ದಕ್ಕಿದ್ದ ಹಾಗೆ ಮನಸ್ಸನ್ನು ಕದಡಿ ಕಲಕಿಸುತ್ತವೆ. ಅಷ್ಟಕ್ಕೆ ಬಿಡದೆ ಮನಸ್ಸನ್ನು ವಿಶೇಷವಾಗಿ ಕೆರಳಿಸುತ್ತವೆ.