________________
೨೩೪ / ಪಂಪಭಾರತಂ
ವ|| ಅದಟಿಕೆಯ ಬಗೆಯನಯಲ್ವೇ ಮೆಂದು ಮೆಲ್ಲಮೆಲ್ಲನೆ ಕೆಲಕ್ಕೆಂದು ಕುಂಚದಡಪದ ಡವಕೆಯ ಪರಿಚಾರಿಕೆಯರೆಲ್ಲರುಮಂ ಕಣ್ಣೆತ್ತಿ ಕಳೆದೇಕಾಂತದೊಳ್ ಕನ್ನೆಯನಿಂತೆಂದಳ್
ಚoll ಮೃಗಮದ ಪತ್ರರೇಖೆಗಳನೇಕೆಗೆ ತಾಳಿರದಾದುವೀ ಕದಂ ಪುಗಳುರಮೇಕೆ ಹಾರ ಮಣಿಮಂಜರಿಯಿಲ್ಲದೆ ಬಿನ್ನಗಿರ್ದುದೀ | ಜಗನಮಿದೇಕೆ ಹೇಮರಶನಾಧ್ವನಿಯಿಲ್ಲದೆ ಮೂಗುವಟ್ಟುದೀ ಬಗೆಯೊಳಲಕಕ ದ್ರವದೊಳೊಂದದೆ ನಿಂದುವು ಪಾದಪಂಕಜಂ|| ನಗೆಗಣ್ ಸೋರ್ವ ಕದುಷ್ಠ ವಾರಿಚಯದಿಂ ಬಿಂಬಾಧರಂ ಸುಯ್ಯ ಬೆಂ ಕೆಗಳಿಂ ನಾಡೆ ಬೆಡಂಗುಗೆಟ್ಟರವಿದಿಂತಕಾರಣಂ ಮಜ್ಜನಂ | ಬುಗದಾರೋಗಿಸಲೊಲ್ಲದಿರ್ಪಿರವಿದೇಂ ನಾಣಳಿದೇಂ ಕಾಮನಂ ಬುಗಳತ್ತಿತ್ತೆಡೆಯಾಡಿ ಸೋಂಕವೆ ವಲಂ ನಿನ್ನಂ ಸರೋಜಾನನೇ || ೬೩ ವ|| ಎಂದು ಮುನ್ನಮೆ ಮುಟ್ಟಿ ನುಡಿಯದ ಪೋಪೋಗನೆ ಬಳಸಿ ಕನ್ನೆಯ ಶಂಕೆಯಂ ಕಿಡಿಸಿ ಮತ್ತಮಿಂತೆಂದಳ್
ಮ||
ಮ||
ವನಮೃತ್ಯುಂತಳೆಯಾ ಶಿರೀಷ ಕುಸುಮಾಭಾಂಗಕ್ಕೆ ಕಂದಂ ಕನ ತನಕಾಂಭೋಜನಿಭಾನನಕ್ಕೆ ಪಿರಿದುಂ ದೀನತ್ವಮಂ ನೀಳ ಮಾ | ವಿನ ಪೋಂದದ ಕಣ್ಣೆ ಬಾಷ್ಪಜಲಮಂ ಚಿತ್ತಕ್ಕೆ ಸಂತಾಪಮಂ ನಿನಗಂ ಮಾಡಿದನಾವನಾತನೆ ವಲಂ ಗಂಧೇಭ ವಿದ್ಯಾಧರಂ ||
وع
೬೪
ಪ್ರಕಟಪಡಿಸುತ್ತದೆ. ವ|| ಆದುದರಿಂದ ಈಕೆಯ ಮನಸ್ಸನ್ನು ತಿಳಿಯಬೇಕು ಎಂದು ನಿಧಾನವಾಗಿ ಪಕ್ಕಕ್ಕೆ ಬಂದು ಕುಂಚದ ಅಡಪದ ಡವಕೆಯ ಸೇವಕಿಯರನ್ನೆಲ್ಲ ಕಣ್ಣನ್ನೆಯಿಂದಲೇ ಕಳುಹಿಸಿ ರಹಸ್ಯವಾಗಿ ಕನೈಯನ್ನು ಕುರಿತು ಕೇಳಿದಳು-೬೨. ಈ ನಿನ್ನ ಕೆನ್ನೆಗಳು ಕಸ್ತೂರಿಯಿಂದ ಬರೆದ ಪತ್ರರೇಖೆಗಳನ್ನು ಏಕಮ್ಮಧರಿಸಿಲ್ಲವಾಗಿವೆ. ನಿನ್ನ ಎದೆಯೇಕೆ ರತ್ನಹಾರದ ಗೊಂಚಲುಗಳಿಲ್ಲದೆ ಶೂನ್ಯವಾಗಿದೆ? ಈ ನಿನ್ನ ' ಸೊಂಟವೇಕೆ ಚಿನ್ನದ ಡಾಬಿನ ಗೆಜ್ಜೆಗಳ ಶಬ್ದವಿಲ್ಲದೆ ಮೂಕವಾಗಿದೆ. ನಿನ್ನ ಪಾದಕಮಲಗಳೇಕೆ ಈ ರೀತಿಯಲ್ಲಿ ಅರಗಿನ ರಸದ ಲೇಪನವಾಗದೆ ನಿಂತಿವೆ? ೬೩. ನಿನ್ನ ಕಣ್ಣು ನಸುಬಿಸಿಯಾದ ಕಣ್ಣೀರಿನ ಪ್ರವಾಹವನ್ನು ಸುರಿಸುತ್ತಿರುವುದೂ ತೊಂಡೆಹಣ್ಣಿನಂತಿರುವ ತುಟಿಯು ನಿಟ್ಟುಸಿರಿನ ಬೆಂಕಿಯಿಂದ ತನ್ನ ಬೆಡಗನ್ನು ಹೋಗಲಾಡಿಸಿಕೊಂಡಿರುವ ಈ ಸ್ಥಿತಿಯೂ ಇದೇಕೆ? ಸ್ನಾನ ಮಾಡದೆ ಊಟಮಾಡದೆ ಇರುವುದಕ್ಕೆ ಕಾರಣವೇನು ? ಲಜ್ಜೆಯೂ ಭಯವೂ ಇದೇಕೆ ? ಕಾಮಬಾಣಗಳು ನಿನ್ನನ್ನು ವ್ಯಾಪಿಸಿ ನಿಜವಾಗಿಯೂ ಮುಟ್ಟುತ್ತಿಲ್ಲವೇ ? ವ|| ಎಂದು ಮೊದಲೇ ಒಳಹೊಕ್ಕು (ಅವಳ ಇಂಗಿತವನ್ನೂ ತಿಳಿದು) ಮಾತನಾಡದೆ ಮೇಲೆ ಮೇಲೆ ಬಳಸುಮಾತುಗಳನ್ನಾಡಿ ಅವಳ ಸಂದೇಹವನ್ನು ಹೋಗಲಾಡಿಸಿ ಪುನಃ ಹೀಗೆಂದಳು-೬೪. ಮೋಡದಂತೆ ಕಪ್ಪಾದ ಮುಂಗುರುಳುಳ್ಳ ಬಾಗೆಹೂವಿನ ಬಣ್ಣವುಳ್ಳ ನಿನ್ನ ಶರೀರಕ್ಕೆ ಮಾಸುವಿಕೆಯನ್ನೂ ಕಾಂತಿಯುಕ್ತವಾದ ಹೊಂದಾವರೆಗೆ ಸಮಾನವಾದ