________________
೨೩೦ | ಪಂಪಭಾರತಂ ರಾಜಹಂಸಪಾರಾವತಮಿಥುನಂಗಳುತ್ತುಂಗಪ್ರಾಸಾದಶಿಖರ ಮಣಿಗವಾಕ್ಕಾಂತರಾಳ, ವಿವಿಧ ಗ್ರಹಾಂತರಗತಂಗಳಾದುವು ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜ ಹರಿಣ ರುಧಿರ ನಿಚಯ ನಿಚಿತವಾದಂತ ಲೋಹಿತಾಂಗನಾಗಮll ನೆರೆ ಸಂಜೆಯೊಳೆಂದು ಕಾಯೊಡೆದೊಡೇನಾತ್ಕಾಂಗದ ರೋಹಿಣಿ
ಚರಣಾಲಕ್ತಕ ರಾಗಮಚ್ಚಳಿದುದೋ ಮೇಣ್ ಕಾಮಿಗಳೀವ ರಾ | ಗರಸಂ ಪೋಣಿದುದೂ ತಮೋಗಜದ ಕೊಡೇಕಿಂದಮಂ ನೋಂದುದೂ
ಹರಿಣಂ ತಾನೆನಿಸಿತ್ತು ರಕ್ತರುಚಿಯಿಂ ಬಿಂಬಂ ಸುಧಾಸೂತಿಯಾ || ೫೦ ವ|| ಆಗಳ್ ತನ್ನ ರಾಗಮಂ ರಾಗಿಗಳೆಲ್ಲಂ ಪಚ್ಚುಕೊಟ್ಟಂತೆ ಕೆಂಪು ಪತ್ತುವಿಟ್ಟಾಗಳ
ಮುನಿದೀಶಂ ತವ ಸುಟ್ಟು ಮುಂ ಕರುಣದಿಂದಿತ್ತಂ ಪುನರ್ಜನ್ಯಮಂ ನಿನಗೆಂದಾ ರತಿ ಪಾಪಮುಂ ಪಡಣಮುಂ ಪೋಪಂತ ಕಾಮಂಗೆ ಮಂ | ಜನಕೆಂದದ ಚಂದ್ರಕಾಂತ ಘಟದೂಳ್ ತಂದುಯಿಂ ಪುಷ್ಟ ವಾ ಸನೆಗೆಂದಿಕ್ಕಿದ ನೀಳ ನೀರರುಕಮಂ ಪೋಲ್ಕತ್ತು ಕಟ್ಟಿಂದುವಾ || ೫೧ ,
ಮt
ಹಂಸಸಮೂಹಗಳು ಅಸ್ತವ್ಯಸ್ತವಾದುವು. ರಾಜಹಂಸ ಮತ್ತು ಪಾರಿವಾಳದ ಜೋಡಿಗಳು ಉಪ್ಪರಿಗೆಯ ತುದಿಯಲ್ಲಿರುವ ರತ್ನಖಚಿತವಾದ ಕಿಟಕಿಗಳ ಮಧ್ಯಭಾಗದ ಮನೆಗಳನ್ನು (ಗೂಡುಗಳನ್ನು) ಹೋಗಿ ಸೇರಿದುವು. ಉದಯ ಪರ್ವತದ ತಪ್ಪಲಿನ ಗುಹೆಗಳ ಸಹಾಯವನ್ನುಳ್ಳ (ಅಂದರೆ ಮೂಡದಿಕ್ಕಿನಲ್ಲಿ ಉದಯಿಸುತ್ತಿದ್ದ ಚಂದ್ರನು ಸಿಂಹದಿಂದ ಸೀಳಲ್ಪಟ್ಟ ತನ್ನ ಜಿಂಕೆಯ ರಕ್ತರಾಶಿಯಿಂದ ತುಂಬಿದವನಂತೆ ಕೆಂಪು ವರ್ಣದವನಾದನು. ೫೦. ಸಂಜೆಯೆಂಬ (ಅನ್ಯ) ಸ್ತ್ರೀಯಲ್ಲಿ ಕೂಡಿದೆಯಾ ಎಂದು (ಹೆಂಡತಿಯಾದ ರೋಹಿಣಿ ದೇವಿಯು) ಕೋಪದಿಂದ ಒದೆಯಲು ಅವಳ ಕಾಲಿನ ಅರಗಿನ ಬಣ್ಣವು ಚಂದ್ರನ ಶರೀರದಲ್ಲಿ ಎರಕ ಹೊಯ್ದಿದೆಯೋ ಅಥವಾ ಕಾಮಿಗಳಿಗೆ (ಸಹಜವಾಗಿಯೇ) ಕೊಡುವ (ಹೆಚ್ಚುವ) ಕಾಮರಸವು ಅಭಿವೃದ್ದಿಯಾಯಿತೋ ಅಥವಾ (ಚಂದ್ರನ) ಜಿಂಕೆಯು ಕತ್ತಲೆಯಂಬ ಆನೆಯ ಕೊಂಬಿನ ಗಾಯದಿಂದ ಗಾಯಗೊಂಡಿದೆಯೋ ಎನ್ನುವ ಹಾಗೆ ಚಂದ್ರಬಿಂಬದ ಕೆಂಪು ಕಾಂತಿಯು ಎನ್ನಿಸಿತು. ವ| ಸ್ವಲ್ಪಕಾಲದ ಮೇಲೆ ತನ್ನ ರಾಗ (ಕೆಂಪುಬಣ್ಣವನ್ನು ರಾಗಿಗಳಿಗೆಲ್ಲ (ಪ್ರೀತಿಪಾತ್ರರಾದವರು -ಪ್ರಿಯ ಪ್ರೇಯಸಿಯರು - ವಿರಹಿಗಳು) ಭಾಗಮಾಡಿಕೊಟ್ಟ ಹಾಗೆ ಕೆಂಪುಬಣ್ಣವು ಕಳೆದುಹೋಗಲಾಗಿ ಚಂದ್ರಬಿಂಬವು ಬೆಳ್ಳಗಾಯಿತು. ೫೧. ಈಶ್ವರನೂ ಮನ್ಮಥನ ಮೇಲೆ ಮೊದಲು ಕೋಪಿಸಿಕೊಂಡು (ನೇತ್ರಾಗ್ನಿಯಿಂದ) ಸುಟ್ಟು ಭಸ್ಮಮಾಡಿ ಪುನಃ ಕರುಣೆಯಿಂದ ನಿನಗೆ ಜನ್ಮವಿತ್ತಿದ್ದಾನೆ ಎಂದು ರತಿದೇವಿಯು ಅವನ ಪಾಪವನ್ನು ಪತನವನ್ನು ಹೋಗಲಾಡಿಸುವುದಕ್ಕಾಗಿ ಕಾಮನ ಮಜ್ಜನಕ್ಕೆ ಎತ್ತಿದ ಚಂದ್ರಕಾಂತ ಶಿಲೆಯ ಕಲಶದಲ್ಲಿ ಅದನ್ನು ವಾಸನಾಯುಕ್ತವನ್ನಾಗಿ ಮಾಡುವುದಕ್ಕಾಗಿ ಪ್ರೀತಿಯಿಂದ ತಂದಿಟ್ಟ ಕನ್ನೈದಿಲೆಯ ಪುಷ್ಪವನ್ನು ಚಂದ್ರನ ಕಪ್ಪು (ಕಲೆ-ಕರೆ)