________________
ಚತುರ್ಥಾಶ್ವಾಸಂ | ೨೨೯
ವ|| ಅಂತು ಕಮಳವನಂಗಳಾದಿತ್ಯಂಗೆ ಕೆಯ್ಯಂ ಮುಗಿವಂತೆ ಮುಗಿಯೆ ಜಕ್ಕವಕ್ಕಿಗಳ ಸುರತಮಕರಧ್ವಜನ ಸುಭದ್ರೆಯ ವಿರಹಪರಿತಾಪಮಂ ಪಚ್ಚುಕೊಂಡಸುಂಗೊಂಡಗಳ ಸಂಧ್ಯಾ ರಾಗಮವರ ಮನದನುರಾಗಮನನುಕರಿಸುವಂತುಟಾಗೆ ಬಟ್ಟೆಯಂ ಕ್ರಮಕ್ರಮದೊಳ್
ಮ|| ಮಸಿಯಿಂದಂ ಜಗಮೆಲ್ಲಮಂ ದಿತಿಸುತಂ ಮುಂ ಪೂನೋ ಕಾಲಮೇ
ಘಸಮೂಹಂ ದೆಸೆಯೆಲ್ಲಮಂ ಕವಿದುದೋ ಗಂಧೇಭ ಚರ್ಮಂಗಳಂ | ಪಸರಂಗೆಯ್ದನೊ ಶಂಭುವೆಂಬ ಬಗೆಯಿಂ ತಯ್ದು ಕತಿ ಸೂ ಚಿಸಲಾರ್ಗ೦ ವಶವಾಗದಂತು ಕವಿದತ್ತುದ್ದಾಮ ಭೀಮಂ ತಮಂ || ೪೯
ವ|| ಆಗಳಾ ತಾರಾಗಣಂಗಳ ದಿಶಾವನಿತೆಯರ ಮಕುಟಮಾಣಿಕಂಗಳಂತೆನಿತು ಬೆಳಗಿಯುಂ ಕಲೆಯನಲೆಯಲಾಯವಾದುವು ಕನಕ ಪ್ರಾಸಾದ ಪಂಜೆ ಗಳ್ ಪಟಪಟನೆ ಬೆಳಗುವ ಸೊಡರ್ಗಳನಾದಿತ್ಯನ ನಂಟರೆಂದು ತಮೋರಾಜಕಂ ಮುಳಿದು ಸೆಗೆಯ್ದ ಬೆಳಗಿನ ಸಯ ಮನೆಗಳನ್ನವಾದುವು ಮದಗಜ ಗಂಡಸ್ಥಳಂಗಳೊಳಾಗಿ ಮೊರೆವ ತುಂಬಿಯ ಬಂಬಲ್ಗಳೆ ವಿಮುಖೀಭೂತಂಗಳಾದುವು ತಂಡತಂಡದೋಲಗಕ್ಕೆ ಪುಗುವ ಪೊಮಡುವ ವಾರವಿಳಾಸಿನಿಯರ ನೂಪುರಂಗಳ ರವಂಗಳೊಳ್ ನೃಪಭವನೋಪವನ ದೀರ್ಘಕಾಹಂಸಕುಳಂಗಳ ತಳವೆಳಗಾದುವು
ಕಂಡಿದ್ದರೆ ಹೇಳಿ; ನಾವು ಸಾವಕಾಶಮಾಡದೆ ಅಲ್ಲಿಗೆ ಹೊರಟುಹೋಗುತ್ತೇವೆ ಎಂದು ಹುಚ್ಚರಂತೆ ಎಲ್ಲ ಪಕ್ಷಿಗಳಿಗೂ ಕೂಗಿ ಹೇಳಿ ತನ್ನಲ್ಲಿ ವ್ಯಾಪ್ತವಾಗಿದ್ದ ಪ್ರೀತಿಯಿಂದ ತಾವು ಬೆರೆಯಲಾರದೆ ಚಕ್ರವಾಕಪಕ್ಷಿಗಳು ವಿಶೇಷವಾಗಿ ಬಳಲಿದುವು. ವ|| ಹಾಗೆ ತಾವರೆಯ ತೋಟಗಳು ಸೂರ್ಯನಿಗೆ ಕೈಮುಗಿಯುವಂತೆ ಮೊಗ್ಗಾಗಲು (ಮುಚ್ಚಿಕೊಳ್ಳಲು), ಚಕ್ರವಾಕಪಕ್ಷಿಗಳು ಅರ್ಜುನ ಸುಭದ್ರೆಯರ ವಿರಹತಾಪದಲ್ಲಿ ತಾವೂ ಭಾಗಿಗಳಾಗಿ (ದುಃಖಪಟ್ಟು?) ತಕ್ಷಣ ಅಗಲಲು ಸಾಯಂಕಾಲದ ಕೆಂಪುಬಣ್ಣವು ಅವರ ಮನಸ್ಸಿನ ಅನುರಾಗವನ್ನು ಅನುಕರಿಸುವಂತೆ ಸಂಧ್ಯಾರಾಗವು ಕಾಣಿಸಿತು. ೪೯. ಸ್ವಲ್ಪಕಾಲದಲ್ಲಿಯೇ ರಾಕ್ಷಸನು ಸಮಸ್ತ ಜಗತ್ತನ್ನು ಕಾಡಿಗೆಯಿಂದ ಹೂಳಿಬಿಟ್ಟಿದ್ದಾನೆಯೋ ಪ್ರಳಯಕಾಲದ ಮೋಡದ ಸಮೂಹಗಳು ದಿಕ್ಕುಗಳನ್ನೆಲ್ಲ ಕವಿದುಕೊಂಡಿದೆಯೋ ಈಶ್ವರನು ಮದ್ದಾನೆಯ ಚರ್ಮವನ್ನು ಹರಡಿದ್ದಾನೆಯೋ ಎಂಬ ಚಿಂತೆಯನ್ನುಂಟುಮಾಡಿ ಕಪ್ಪುಬಣ್ಣವು ವೃದ್ಧಿಯಾಗಿ (ಇದು ಹೀಗೆ ಎಂದು ಸೂಚಿಸುವುದಕ್ಕೆ) ಯಾರಿಗೂ ಶಕ್ಯವಿಲ್ಲದ ರೀತಿಯಲ್ಲಿ ಬಹಳ ಭಯಂಕರವಾದ ಕತ್ತಲೆಯು ಕವಿದುಕೊಂಡಿತು. ವ|| ಆಗ ನಕ್ಷತ್ರಮಂಡಲವು ದಿಗ್ವಿನಿತೆಯರ ಕಿರೀಟಮಾಣಿಕ್ಯದಷ್ಟು ಪ್ರಕಾಶಮಾನವಾಗಿದ್ದರೂ ಕತ್ತೆಲೆಯನ್ನು ಹೋಗಲಾಡಿಸಲು ಶಕ್ತವಾಗಲಿಲ್ಲ. ಸುವರ್ಣ ನಿರ್ಮಿತವಾದ ಉಪ್ಪರಿಗೆಯ ಸಾಲುಗಳು ಪಳಪಳನೆ ಬೆಳಗುತ್ತಿದ್ದ ದೀಪಗಳು ಸೂರ್ಯನ ನಂಟರೆಂದು ಕತ್ತಲೆಯೆಂಬ ರಾಜನು ಕೋಪಗೊಂಡು (ಆ ದೀಪಗಳನ್ನು) ಬಂಧಿಸಿದ ಪ್ರಾತಃಕಾಲದ ಸೆರೆಮನೆಗಳಂತೆ ಆದವು. ಮದ್ದಾನೆಗಳ ಕಪೋಲ ಪ್ರದೇಶಗಳಲ್ಲಿ ಎರಗಿ ಝೇಂಕರಿಸುವ ದುಂಬಿಯ ಸಮೂಹಗಳು ಮುಖತಿರುಗಿಸಿದವು. ಗುಂಪುಗುಂಪಾಗಿ ಅರಮನೆಗೆ ಬಂದು ಹೋಗುವ ವೇಶೈಯರ ಕಾಲಂದಿಗೆಯ ಶಬ್ದವನ್ನು ಕೇಳಿ ಅರಮನೆಯ ಕೈದೋಟಸರೋವರದಲ್ಲಿದ್ದ