________________
eroll
ಚತುರ್ಥಾಶ್ವಾಸಂ | ೨೨೭ ಸೋಲದೊಳೆಯೇ ಪೀರ್ದ ತಟದಿಂದಮಯಿಕ್ಕದೆ ನೋಲ್ಪ ಕಣ್ಣೆ ಕಣ್ ಪೀಲಿವೊಲಾಗೆ ಬಂದು ಪೆತೊಂದು ಮನಂಬುಗೆ ಪತ್ನಿ ಚಿತ್ತದೊಳ್ | ಕೀಲಿಸೆ ಕಾವನಂಬವು ಬಿಣ್ಣಿನೊಳೊಯ್ಯನೆ ಜೋಲ್ಲವೋಲೆ ತಾಂ ಬೂಲಕರಂಕವಾಹಿನಿಯ ಮೇಲೆ ನೆಲ್ಲಿಗೆ ಬಾಲೆ ಲೀಲೆಯಿಂ || ೪೩
ವ|| ಆಗಳಾ ನಾರಾಯಣನುಮುದಾತ್ತನಾರಾಯಣನುಮಾನೆಯಿಂದಮಿದು ನವ ಕಿಸಲಯ ವಂದನಮಾಳಾಳಂಕೃತಮಪ್ಪ ಸಪ್ತ ತಾಳೋತ್ತುಂಗ ರಮ್ಮ ಹರ್ಮದೆರಡನೆಯ ಮೊಗಸಾಲೆಯೊಳಿಟ್ಟ ಪೊನ್ನ ಪಡಿಗಂಗಳೊಳಮಿಕ್ಕಿದ ಪಡೆಯ ಸುಖಾಸನಂಗಳೊಳಂ ಕಟ್ಟಿದ ಚಿನ್ನದ ಬೊಂದರಿಗೆಯೊಳಮಸೆದಿರ್ದ ಮಣಿಮಯಪೀಠದೊಳೊಡನೇಟೆ ಕಿಳದು ಪೊಲ ಕುಳ್ಳಿರ್ದ ಮಜ್ಜನ ಭೋಜನ ತಾಂಬೂಲಾನುಲೇಪನ ವಿಭೂಷಣ ಸುರಭಿ ಕುಸುಮ ದಾಮಾದಿಗಳಿಂ ಸಂತಸಂಬಡಿಸಿ ದಾಮೋದರನುದರದೊಳಿಟ್ಟುಕೊಳ್ಳ ತಳಪಗತ ಪಥ ಪರಿಶಮನಂ ಮಾಡಿ
ಕಂ
ಈತನ ಬರ್ದಿನನೀತಂ
ಭೂತಳಪತಿಯೆನಿಸಿದರಿಗಳೊಡೆಯಂ ಹರಿ ತಾ |
ನೀತನ ಬರ್ದಿನನನ ವಿ
ಖ್ಯಾತಂಗೆ ನರಂಗೆ ಸೆಂಪುಗೆಯ್ದನನಂತಂ ||
೪೪
ವ|| ಅಂತನಿತಾನುಮಂದದೊಳ್ ಸೆಂಪುಗೆಯು ವಿವಿಧ ವಿನೋದಂಗಳು ತೋಟ ಮುನ್ನ ಬದರಿಕಾಶ್ರಮದೊಳ್ನಡುಕವನ್ನುಂಟುಮಾಡಲು ೪೩. ಪ್ರೇಮದಿಂದ ಚೆನ್ನಾಗಿ ಹೀರುವ ರೀತಿಯಲ್ಲಿ ರೆಪ್ಪೆ ಹೊಡೆಯದೇ ನೋಡುವ ಕಣ್ಣಿಗೆ ಬೇರೊಂದು ಕಣ್ಣು (ಅಂದರೆ ಅರ್ಜುನನ ಕಣ್ಣು ನವಿಲುಗರಿಯ ಕಣ್ಣಿನ ಹಾಗಾಗಿ ಮನಸ್ಸನ್ನು ಪ್ರವೇಶಿಸಲು ಕಾಮಬಾಣವು ಮನಸ್ಸಿನಲ್ಲಿ ನಾಟಿರಲು ಆ ಬಾಣಗಳ ಭಾರದಿಂದ ಮೆಲ್ಲಗೆ ಜೋತುಬಿದ್ದ ಹಾಗೆ ಸುಭದ್ರೆಯು ವಿಲಾಸದಿಂದ ತನ್ನ ತಾಂಬೂಲಕರಂಕವಾಹಿನಿಯು ಮೇಲೆ ಒರಗಿಕೊಂಡು ನಿಂತಳು. ವ! ಆಗ ಕೃಷ್ಣನೂ ಅರ್ಜುನನೂ ಆನೆಯಿಂದ ಇಳಿದು ಹೊಸದಾದ ಚಿಗುರುಗಳ ತೋರಣಮಾಲೆಯಿಂದ ಅಲಂಕೃತವಾದ ಎತ್ತರವಾದ ಏಳುತಾಳೆಯ ಮರಗಳಷ್ಟು ಎತ್ತರವೂ ರಮಣೀಯವೂ ಆದ ಉಪ್ಪರಿಗೆಯ ಮುಖಮಂಟಪವನ್ನೇರಿ ಅಲ್ಲಿ ಇಟ್ಟಿದ್ದ ಚಿನ್ನದ ಪೀಕದಾನಿಗಳಲ್ಲಿಯೂ ಬಟ್ಟೆಗಳಿಂದ ಮುಚ್ಚಿದ್ದ ಸುಖಾಸನಗಳಲ್ಲಿಯೂ ಸಿದ್ಧಪಡಿಸಿದ್ದ ಚಿನ್ನದ ದಿಂಬುಗಳಲ್ಲಿಯೂ ಚೆಲುವಾಗಿದ್ದ ರತ್ನಮಯಪೀಠಗಳಲ್ಲಿಯೂ ವಿಶ್ರಮಿಸಿ ಕೆಲವುಕಾಲ ಕುಳಿತಿದ್ದು ಸ್ನಾನ, ಭೋಜನ-ತಾಂಬೂಲ, ಗಂಧಾನುಲೇಪನ, ಆಭರಣ, ಸುಗಂಧಪುಷ್ಪಮಾಲೆಯೇ ಮೊದಲಾದವುಗಳಿಂದ ಸಂತೋಷಪಟ್ಟು ಕೃಷ್ಣನು ತನ್ನ ಹೊಟ್ಟೆಯಲ್ಲಿಯೇ ಅರ್ಜುನನನ್ನು ಮಡಗಿಕೊಳ್ಳುವಷ್ಟು ಪ್ರೀತಿಯಿಂದ ಆಯಾಸಪರಿಹಾರವನ್ನು ಮಾಡಿದನು. ೪೪. ಇವನು ಅತಿಥಿ; ಇವನೇ ಭೂಪತಿಯಾದ ಅರಿಕೇಸರಿ; ಒಡೆಯನಾದ ಕೃಷ್ಣಪರಮಾತ್ಮನೂ (ತಾನೂ) ಈತನೇ. ಇವನೇ ವಾಸ್ತವನಾದ ನೆಂಟ, ಎನ್ನುವ ಹಾಗೆ ಸುಪ್ರಸಿದ್ದನಾದ ಅರ್ಜುನನಿಗೆ ಕೃಷ್ಣನು ಆತಿಥ್ಯವನ್ನು ಮಾಡಿದನು. ವ|| ಹಾಗೆ ಅನೇಕರೀತಿಯಲ್ಲಿ ಸತ್ಕಾರಮಾಡಿ ನಾನಾರೀತಿಯ