________________
೨೨೬ | ಪಂಪಭಾರತಂ - ಚಂ! ಒದವಿದ ತನ್ನ ಜವ್ವನದ ರೂಪಿನ ಮಯ್ಯೋಳ, ತಪ್ಪುದನ್ನು ನೋ
ಟದೊಳೆ ಪೊಡರ್ಪು ತಪ್ಪು ಬಗೆ ತಪ್ಪು ಮನೋಜನ ಪೂವಿನಂಬು ತೀ | ವಿದ ದೂರ ತೀವಿ ತನ್ನನಿಗೆ ಜಾಣನೆ ತಪದ ತಪುದಪ್ಪ ನೋ ಡಿದುದದಳೆಂ ಗುಣಾರ್ಣವನನಾ ಸತಿ ತಪ್ಪದೆ ತಪ್ಪು ನೋಟದೊಳ್ || ೪೧
ವll ಅಂತು ತಳತಳ ತೊಳಗುವ ದುಕೂಲದ ಸಕಳವಟ್ಟೆಯೊಳ್ ನಿಮಿರ್ಚಿದಂತಾನು ಮರಲ್ಲ ತಾವರೆಯಸುಳೊಳ್ ಪುದಿದು ಪುಡುಂಗೊಳಿಸಿದಂತಾನುಮನಂಗಾಮೃತವರ್ಷಮದ ವಿಸಿದಂತಾನುಮರ್ದಯೊಳೆಡೆವಳೆಯದ ಪೊಳಪಿನೊಳ್ ತಳ್ಕೊಯ್ದು ಕಡೆಗಣ್ಣ ಬೆಳ್ಳುಗಳ ಸೊಗಯಿಸುವ ಕುವಳಯದಳನಮನೆಯ ನೋಟಂ ತನ್ನ ಮನದೊಳಳ್ಳಾಟಮಂ ಪಡೆಯ
- ಮll ನನೆಯಂಬಂಬನೆ ಕರ್ಚಿ ಪಾದಪುದೋ ಶೃಂಗಾರ ವಾರಾಶಿ ಭೋಂ
ಕನೆ ಬೆಳ್ತಂಗಡದತ್ತೂ ಕಾಮಂ ನೆಳ ಮೆಯ್ಕೆರ್ಚಿತ್ತೊ ಪೇಟೀಕೆಗೆಂ | ಬಿನೆಗಂ ಸೋಲಮನುಂಟುಮಾಡ ಹರಿಗಂ ಕರ್ಣಾಂತ ವಿಶ್ರಾಂತ ಲೋ ಚನನಾಲೋಚನಗೋಚರಂಬರಗಿಲ್ಲಾ ಕನ್ನೆಯಂ ನೋಡಿದಂ || ೪೨
ವ|| ಅಂತು ಸುರತಮಕರಧ್ವಜನ ಕಡೆಗಣ್ಣ ನೋಟಂ ಕಾಮನ ಕಿಸುಗಿದ ನೋಟದಂತೂ ರ್ಮೊದಲೆ ತನ್ನ ಮನದೊಳಳ್ಳಾಟಮಂ ಪಡೆಯ
ಹೊಗಳಿದರು. ೪೧, ಆಗ ಅವಳಿಗೆ ಯವ್ವನಪ್ರಾಪ್ತವಾದ ಶರೀರದ ಸೌಂದರ್ಯವು ಅಸ್ತವ್ಯಸ್ತವಾಯಿತು. ನೋಟದಲ್ಲಿನ ಉತ್ಸಾಹವೂ ಅಸ್ತವ್ಯಸ್ತವಾಯಿತು. ಮನಕ್ಕೂ ಅಸ್ತವ್ಯಸ್ತವಾಯಿತು. ಮನ್ಮಥನು ಪುಷ್ಪಬಾಣದಿಂದ ತುಂಬಿದ ಬತ್ತಳಿಕೆಯಿಂದ ತನ್ನನ್ನು ಹೊಡೆಯುತ್ತಿರಲು ತನ್ನ ಜಾಣ್ಮಯೇ ವ್ಯತ್ಯಸ್ತವಾಗಿ ಆ ಸತಿಯು ಗುಣಾರ್ಣವನನ್ನು ತಪ್ಪು ನೋಟಗಳಿಂದ ನೋಡಿದಳು (?) ವl ಹಾಗೆ ತಳತಳನೆ ಪ್ರಕಾಶಿಸುವ ರೇಷ್ಮೆಯ ವಿವಿಧ ಬಣ್ಣಗಳ ಬಟ್ಟೆಯನ್ನು ಹರಡಿದಂತೆಯೂ ಅರಳಿದ ತಾವರೆಯ ದಳದಲ್ಲಿ ಸೇರಿಕೊಂಡು ಹದಗೊಳಿಸಿದಂತೆಯೂ ಕಾಣುವ ಮಳೆಯನ್ನು ಉಂಟುಮಾಡಿ ದಂತೆಯೂ ಹೃದಯದ ಅವಿಚ್ಛಿನ್ನವಾದ ಕಾಂತಿಯಲ್ಲಿ ಪ್ರತಿಭಟಿಸಿ ಕಡೆಗಣ್ಣಿನ ಬಿಳಿಯ ಬಣ್ಣಗಳು ಸೊಗಯಿಸುತ್ತಿರುವ ಕನ್ನೈದಿಲೆಯ ಎಸಳಿನಂತೆ ಕಣ್ಣುಳ್ಳ ಆ ಸುಭದ್ರೆಯ ನೋಟವು ಅರ್ಜುನನ ಮನಸ್ಸಿನಲ್ಲಿ ತಳಮಳವನ್ನುಂಟುಮಾಡಿತು. ೪೨. ಈ ಸುಭದ್ರೆ ಗಾಗಿ ಪುಷ್ಪಬಾಣವೇ ಪುಷ್ಪಬಾಣ ಕಚ್ಚಿಕೊಂಡು ಹಾರಿಬರುತ್ತಿದೆಯೋ ಶೃಂಗಾರ ಸಮುದ್ರವು ಇದ್ದಕ್ಕಿದ್ದ ಹಾಗೆ ತಟ್ಟನೆ ಅಧಿಕ ಪ್ರವಾಹದಿಂದ ಹರಿದಿದೆಯೋ ಕಾಮನ ರಸಪ್ರವಾಹವು ಅಧಿಕವಾಯಿತೊ ಹೇಳು ಎನ್ನುವ ಹಾಗೆ ತನಗೆ ಸೋಲನ್ನುಂಟು ಮಾಡಲು ಕರ್ಣಾಂತವಿಶ್ರಾಂತನಾದ ಅರ್ಜುನನು ಕಣ್ಣಿಗೆ ನಿಲುಕಿಸುವವರೆಗೂ ಆ ಕನೈಯನ್ನು ಪ್ರೀತಿಯಿಂದ ನೋಡಿದನು. ವ| ಸುರತಮಕರಧ್ವಜನಾದ ಅರ್ಜುನನ ಕಡೆಗಣ್ಣಿನ ನೋಟವು ಕಾಮನ ಕೆಂಪೇರಿದ ನೋಟದಂತೆ ತಕ್ಷಣವೇ ತನ್ನ ಮನಸ್ಸಿನಲ್ಲಿ