________________
೨೦೬ / ಪಂಪಭಾರತಂ
ವ|| ಆಗಳ್ ದ್ರುಪದಂ ನಿಜಾಂತಃಪುರಪರಿವಾರಂಬೆರಸುದಾರಮಹೇಶ್ವರನಲ್ಲಿಗೋಲಗಕ್ಕೆ ವಂದು ನೃತ್ಯ ವಾದ್ಯ ಗೀತಾತೋದ್ಯಂಗಳೊಳ್ ಕಿದುಂ ಬೇಗಮಿರ್ದೊಲಗಮುಮಂ ಪರೆಯಲ್ಲೇಟ್ಟು ಮತ್ತಿನ ನಾಲ್ವರ್ಗಂ ಕೊಂತಿಗಂ ಬೇವೇ ಮಾಡಂಗಳಂ ಬೀಡುವನ್ನು ಗುಣಾರ್ಣವನ ಹೆಜ್ಜೆಗೆ ಬಿಜಯಂಗೆಯ್ಯಮನ ಕಾಮಂ ಕಳನೇರುವಂತೆ ಸೆಜ್ಜೆಯನೇಟೆ ಸೆಡೆದಿರ್ದ ನಲ್ಲಳಂ ನೋಡಿ
ಉll
ನೋಟದೊಳಜಂಬಡೆದು ಮೆಲ್ಲುಡಿಯೊಳ್ ಬಗೆವೊಕ್ಕು ಜಾನೊಳ ಛಾಟಮನೆಲ್ಲಮಂ ಕಿಡಿಸಿ ಸೋಂಕಿನೊಳೊಯ್ಯನೆ ಮೆಯ್ಯೋಣರ್ಚಿ ಬಾ | ಯೂಟದೊಳಂ ಪಡೆದು ಕೂಟದೊಳುಣಿದ ಬೆಚ್ಚ ತಯೊಳ್ ಕೂಟ ಸುಖಂಗಳಂ ಪಡೆದನೇಂ ಚದುರಂ ಗಳ ಬದೈದಲ್ಲಂ ||
೮೨
ಬೇಡಿಸುವಪ್ಪುಗಳೊರೆವ ಲಲ್ಲೆಯ ಮೆಲ್ಲುಡಿಗಳ ಕೂಡ ನಾ ಗೂಡಿದ ಕೆಂದುಗಳೆ ಬಗೆಗೊಂಡಿನಿಸಂ ತಲೆದೂಗುವಂತೆವೋಲ್ | ನಾಡೆ ಪೊದಳು ನೀಳವರ ಸುಯ್ಸಳ ಗಾಳಿಯೊಳೊಯ್ಯನೊಯ್ಯನ ಳ್ಳಾಡುವುದಾಯ್ತು ತತ್ಸುರತಮಂದಿರದುಳದೀಪಿಕಾಂಕುರಂ || ೮೩
ಸಂಧ್ಯಾಕಾಲದಲ್ಲುಂಟಾದ ಕೆಂಪುಕಾಂತಿಯು ಹಿಂಜರಿಯಿತು. ಅನಂತರ ಚಂದ್ರಮಂಡಲವು ಹದವಾಗಿ ಕಾಸಿದ (ಶುಭ್ರಮಾಡಿದ) ಶುದ್ಧಚಿನ್ನದಿಂದ ಮಾಡಿದ ಗಂಟೆಯ ಹಾಗೆ ಕಣ್ಣಿಗೆ ಕಾಣಿಸಿತು. ವ|| ಆಗ ದ್ರುಪದನು ತನ್ನ ಅಂತಃಪುರದ ಪರಿವಾರದವರೊಡನೆ ಉದಾರಮಹೇಶ್ವರನಾದ ಅರ್ಜುನನ ಸಭಾಗೃಹಕ್ಕೆ ಬಂದು ನೃತ್ಯ, ವಾದ್ಯ, ಗೀತ, ಮಂಗಳವಾದ್ಯಗಳಲ್ಲಿ ಭಾಗಿಯಾಗಿ ಸಭೆಯನ್ನು ವಿಸರ್ಜಿಸುವಂತೆ ಹೇಳಿ ಧರ್ಮರಾಜನೇ ಮೊದಲಾದ ಉಳಿದ ನಾಲ್ಕು ಜನಗಳಿಗೂ ಕುಂತೀದೇವಿಗೂ ಬೇರೆಬೇರೆ ಮನೆಗಳನ್ನು ಬಿಡಾರವನ್ನಾಗಿ ಮಾಡಿಸಿ ಗುಣಾರ್ಣವನನ್ನು ಶಯ್ಯಾಸ್ಥಳಕ್ಕೆ ದಯಮಾಡಿಸಿ ಎಂದನು. ಅರ್ಜುನನು ಮನ್ಮಥನು ಯುದ್ಧರಂಗವನ್ನು ಪ್ರವೇಶಮಾಡುವ ಹಾಗೆ ಹಾಸಿಗೆಯ ಮೇಲೆ ಕುಳಿತು ಲಜ್ಜೆಯಿಂದ ಕೂಡಿದ್ದ ತನ್ನ ಪ್ರಿಯಳನ್ನು ನೋಡಿ ೮೨. ನೋಟದಿಂದ ಪ್ರೀತಿಯನ್ನುಂಟುಮಾಡಿ ಮೃದುವಾದ ಮಾತಿನಿಂದ ಅವಳ ಮನಸ್ಸನ್ನು ಗೆದ್ದು ಜಾಣೆಯಿಂದ ಅವಳ ನಡುಗುವಿಕೆ (ಕಂಪನ)ಯನ್ನು ಹೋಗ ಲಾಡಿಸಿ ಮೆಲ್ಲನೆ ಸೋಂಕುವುದರಿಂದ ಅವಳ ಮೈಯಲ್ಲಿ ತನ್ನ ಮೈಯ್ಯನ್ನು ಸೇರಿಸಿ ತುಟಿಗಳೆರಡನ್ನೂ ಸೇರಿಸಿ ಮುತ್ತಿಟ್ಟು ಬಿಗಿಯಾಗಿ ಆಲಿಂಗನಮಾಡಿಕೊಂಡು ರತಿಸುಖವನ್ನೂ ಪಡೆದನು. ಅರ್ಜುನನು ಏನು ಚದುರನೋ ? ೮೩. ಆಶೆಪಡುತ್ತಿರುವ ಆಲಿಂಗನಗಳಿಗೂ ಆಡುತ್ತಿರುವ ಪ್ರೀತಿಯ ಮೃದುನುಡಿಗೂ ವಿಶೇಷವಾಗಿ ಲಜ್ಜೆಯಿಂದ ಕೂಡಿದ ಸುರತ ಕ್ರೀಡೆಗೂ ಮೆಚ್ಚಿ ದೀಪಗಳು ಒಂದಿಷ್ಟು ತಲೆದೂಗುವ ಹಾಗೆ ವಿಶೇಷವಾಗಿ ವ್ಯಾಪಿಸಿ ನೀಳವಾಗಿ ಬೆಳೆದ ಆ ರತಿಕ್ರೀಡಾಮಂದಿರದ ಪ್ರಕಾಶಮಾನವಾದ ದೀಪದ ಕುಡಿಯು ಅವರ ಉಸಿರಿನ ಗಾಳಿಯಿಂದ ನಿಧಾನವಾಗಿ ಅಳ್ಳಾಡುತ್ತಿದ್ದವು. ವ|| ಆ ರಾತ್ರಿಯ ನಾಲ್ಕು ಜಾವಗಳೂ ಕಾಮನ ಜಾಗರಣೆಯಂತೆ