________________
ತೃತೀಯಾಶ್ವಾಸಂ | ೨೦೫ ವ|| ಅಂತೋಪುವ ವಿವಾಹಮಂಗಳದೊಸಗೆಯೊಳ್ ಮಂಗಳ ಪಾಠಕರೆಟ್ಟು ನಿಂದಿರ್ದು
ಶಾ
ಇಂದ್ರಾನೋಕಹಮೊಪ್ಪುವಿಂದತುರಂಗಂ ಸಂದಿಂದ್ರಗಹಂ ಪೊದ ಇಂದ್ರಾನೇಕಪಮೊಪ್ಪುವಿಂದನಳೇಂದ್ರಶ್ಚರ್ಯಮೀಂದ್ರಾಣಿ ಸಂ 1 ದಿಂದ್ರಾನರ್ಘವಿಭೂಷಣಂಗಳರಿಭೂಪಾಳಾವಳೀದುಸ್ತಮ
ಶ್ಚಂದ್ರಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ || 26 ವ|| ಎಂದು ಮಂಗಳವೃತ್ತಂಗಳನೋದೆ ಕಿಡಿದುಂ ಬೇಗಮಿರ್ದದ ಬೋನದೊಳ್ ಕಲ್ಯಾಣಾಮೃತಾಹಾರಮನಾರೋಗಿಸಿ ಬಟ್ಟೆಯಂ ಯಕ್ಷಕರ್ದಮದ ಕೆಯ್ದಟ್ಟಿಯೊಳ್ ಕೆಯ್ಯಂ ತಿಮಿರ್ದು ತಂಬುಲಮಂ ಕೊಂಡು
ಕಂ!! ಕವಿ ಗಮಕಿ ವಾದಿ ವಾಗಿ
Coll
ಪ್ರವರರ ಪಂಡಿತರ ನೆಗಟ್ಟಿ ಮಾತದವರ ಸ | ಬವದವರೊಡನಂತೊಸೆದ ನವಾಸದೋಲಗದೊಳಿರ್ದನಾಗಳ್ ಹರಿಗಂ
ವ|| ಆ ಪ್ರಸ್ತಾವದೊಳ್
89
ಬೇಸ ಲೋಕಮಂ ತಗುಳು ಸುಟ್ಟಲಿಂದ ಖರಾಂಶು ನಾರಕಾ ವಾಸದೊಳಾಲ್ವವೋಲಪರವಾರ್ಧಿಯೊಳಾಯ್ದುದುಮಿತ್ತ ವಂದ ಸಂ | ಧ್ಯಾಸಮಯಾತ್ತರಕ್ತರುಚಿ ಪಿಂಗೆ ಬಟಿಕ್ಕುದಯಾದ್ರಿಯೊಳ್ ಪದಂ
ಗಾಸಿದ ಪೊನ್ನ ಪುಂಜಿಯವೊಲಿರ್ದುದು ಕಣ್ಣ ಹಿಮಾಂಶುಮಂಡಲಂ || ೮೧ ಕಾಂತಿಸಮೂಹವು ಹೊಳೆಯಿತು. ವ|| ಹಾಗೆ ಪ್ರಕಾಶಮಾನವಾಗಿದ್ದ ಮದುವೆಯ ಶುಭೋತ್ಸವದಲ್ಲಿ ಹೊಗಳುಭಟರು ಎದ್ದು ನಿಂತು-೭೯, ಇಂದ್ರನ ಮರವಾದ ಕಲ್ಪವೃಕ್ಷವೂ ಪ್ರಕಾಶಮಾನವಾದ ಇಂದ್ರನ ಕುದುರೆಯಾದ ಉಚೈಶ್ರವೂ ಸುಪ್ರಸಿದ್ಧವಾದ ಇಂದ್ರನ ಅರಮನೆಯಾದ ಸುಧರ್ಮವೆಂಬ ಸಭಾಮಂಟಪವೂ ಬಲಿಷ್ಠವಾದ ಇಂದ್ರನ ಆನೆಯಾದ ಐರಾವತವೂ ಇಂದ್ರನ ಸಕಲೈಶ್ವರ್ಯಗಳೂ ಇಂದ್ರನ ರಾಣಿಯಾದ ಶಚೀದೇವಿಯೂ ಇಂದ್ರನ ಬೆಲೆಯಿಲ್ಲದ ಆಭರಣಗಳೂ ಶತ್ರುರಾಜರೆಂಬ ಕೆಟ್ಟ ಕತ್ತಲೆಗೆ ಚಂದ್ರನಾಗಿರುವ ಅವನಿಗೆ ಹಿರಿದಾದ ಸುಖಸಂಪತ್ತನ್ನೂ ಅತುಲೈಶ್ವರ್ಯವನ್ನೂ ಕೊಡಲಿ ವ|| ಎಂದು ಮಂಗಳಗೀತೆಗಳನ್ನು ಓದಲು ಸ್ವಲ್ಪಕಾಲವಾದ ಮೇಲೆ ಬಡಿಸಿದ ಶುಭಕರವಾದ ಅಮೃತಕ್ಕೆ ಸಮಾನವಾದ ಆಹಾರವನ್ನು ಊಟಮಾಡಿ ಪಚ್ಚಕರ್ಪೂರ ಅಗರು ಕಸ್ತೂರಿ ಶ್ರೀಗಂಧ ಕೇಸರಿ ಮೊದಲಾದ ಸುಗಂಧದ್ರವ್ಯಗಳನ್ನು ಮಿಶ್ರ ಮಾಡಿದ ಲೇಪನದ ಕದಡಿನಿಂದ ಕಯ್ಯನ್ನು ಲೇಪಿಸಿಕೊಂಡು ತಾಂಬೂಲವನ್ನು ಸ್ವೀಕರಿಸಿ-೮೦. ಅರ್ಜುನನು ಕವಿಗಳು, ಗಮಕಿಗಳು, ವಾದಿಗಳು, ವಾಗ್ರಿಗಳು, ಶ್ರೇಷ್ಠರಾದ ಪಂಡಿತರು ಪ್ರಸಿದ್ಧರಾದ ಸಂಭಾಷಣಕಾರರು, ಹಾಸ್ಯಗಾರರು ಇವರೊಡನೆ ಸಂತೋಷದಿಂದ ಭೋಜನಶಾಲೆಯಲ್ಲಿದ್ದನು. ವ|| ಆ ಸಂದರ್ಭದಲ್ಲಿ೮೧. ಲೋಕವನ್ನು ಬೆನ್ನಟ್ಟಿ ಅದು ದುಃಖಪಡುವಂತೆ ಸುಟ್ಟ ದುಃಖದಿಂದ ಸೂರ್ಯನು ನರಕವಾಸದಲ್ಲಿ ಮುಳುಗುವ ಹಾಗೆ ಪಶ್ಚಿಮಸಮುದ್ರದಲ್ಲಿ ಮುಳುಗಿದನು.