________________
೧೬ | ಪಂಪಭಾರತಂ
ಅದವಿರೆ ತತ್ವಶಸ್ತಿಗಳೊಳಂತವನೊಯ್ಯನೆ ನೋಡಿನೋಡಿ ಸೋ |
ರ್ದುದು ಕೊಳೆಗೊಂಡ ಗರ್ವರಸಮಾ ಭರತೇಶ್ವರಚಕ್ರವರ್ತಿಯಾ ||
ಅವನ ಗರ್ವಮೇರುವು ಚೂರ್ಣಿಕೃತವಾಯಿತು. ಆದರೂ ಸಾಂಪ್ರದಾಯಕವಾಗಿ ಹಿಂದಿನ ದೊರೆಗಳಲ್ಲೊಬ್ಬನ ಪ್ರಶಸ್ತಿಯನ್ನು ತನ್ನ ದಂಡದಿಂದ ಸೀಂಟಿ ಕಳೆದು ಅಲ್ಲಿ ತನ್ನದನ್ನು ಬರೆಸಿ ಮುಂದೆ ಅಯೋಧ್ಯಾಭಿಮುಖವಾಗಿ ನಡೆದನು.
ಅಯೋಧ್ಯೆಯ ಬಾಗಿಲಲ್ಲಿ ಆತನ ಚಕ್ರರತ್ನ ನಿಂತು ಬಿಟ್ಟಿತು. ಭರತನಿಗೆ ಆಶ್ಚರ್ಯವಾಯಿತು. ಪುರೋಹಿತರನ್ನು ಕರೆದು ಕಾರಣವನ್ನು ಕೇಳಲು ಹೊರಗಿನ ಸಮಸ್ತರನ್ನು ಗೆದ್ದರೂ ಒಳಗಿರುವ ಆತನ ತಮ್ಮಂದಿರು ಅಧೀನವಾಗದಿದ್ದುದರಿಂದ ಜೈತ್ರಯಾತ್ರೆ ಪೂರ್ಣವಾಗಲಿಲ್ಲವೆಂದು ತಿಳಿಸಿದರು. ವಿಜಯೋನ್ಮತ್ತನಾದ ಚಕ್ರವರ್ತಿಗೆ ಅವರನ್ನು ಗೆಲ್ಲಬೇಕೆಂಬ ತವಕ. ತನಗೆರಗಬೇಕೆಂದು ಅವರಿಗೆ ಹೇಳಿಕಳುಹಿಸಿದ. ದೂತನ ನುಡಿಯನ್ನು ಕೇಳಿದ ಅವರು
ಪಿರಿಯಣ್ಣಂ, ಗುರು, ತಂದೆಯೆಂದೆಂಗುವಂ ಮುನ್ನೆಲ್ಲಂ, ಇಂತೀಗಳಾ, ಳರಸೆಂಬೊಂದು ವಿಭೇದಮಾದೊಡಜಕಂ ಚಃ ಕಷ್ಟಮಲ್ಲೇ ವಸುಂ ಧರೆಗಯ್ಯಂ ದಯೆಗೆಯ್ಯ ಮುಂ ಪಡೆದುದರ್ಕಿಂತೀತನೊಳ್ ತೊಟ್ಟ ಕಿಂ ಕರಭಾವಂ ನಮಗಕ್ಕಿಗೊಟ್ಟು ಮಡಗೂಲಂದಮಂ ಪೋಲದೇ ||
ಎಂದು ಜುಗುಪ್ಪೆಗೊಂಡು ರಾಜ್ಯತ್ಯಾಗಮಾಡಿ ತಂದೆಯಲ್ಲಿಗೆ ಹೋಗಿ ದೀಕ್ಷೆಯನ್ನು ಪಡೆದರು. ಇದನ್ನು ಕೇಳಿಯೂ ಭರತನಿಗೆ ವಿವೇಕವುಂಟಾಗಲಿಲ್ಲ. 'ಎನ್ನ ತೇಜಸ್ಸುರಿತಕ್ಕೆ ಸೆಣಸಿನೊ ಮಾಲರಿಗುಂ ಸೈರಿಸದು ತೇಜಮಾ ಭುಜಬಲಿಯಾ' 'ಸಾಮದಿಂದಳವಡಿಸಿ ನೋಡುವೆ, ಸಾಮದೊಳಂ ಪದವಡದೊಡೆ ಬಡೆಕಿರ್ದಪುದಿ ಪದವಡಿಸಲೆನ್ನ ಬಯಕೆಯ ದಂಡಂ' ಎಂದು ನಿಶ್ಚಯಿಸಿ ಬುದ್ದಿವೃದ್ಧನೂ ವಯೋವೃದ್ಧನೂ ಆದ ಮಹತ್ತರನ ಕೈಯಲ್ಲಿ ಲೇಖವನ್ನು ಅಟ್ಟಿದನು. ಲೇಖವನ್ನು ನೋಡಿದ ಬಾಹುಬಲಿಯು ಕೋಪಗರ್ಭಸ್ಮಿತನಾಗಿ
* ಪಿರಿಯಣ್ಣಂಗೆಆಗುವುದೇಂ
ಪರಿಭವವೇ ಕೀತಿ ನೆತ್ತಿಯೋಳ್ ಬಾಳಂ ನಿ ರ್ನೆರಮೂತಿ ಚಲದಿನೆ೦ಗಿಸ 'ಅರೆ ಭರತಂಗೆಂಗುವೆಕಮಂಜಮೆಯಲ್ಲೇ | - ಭರತಂ ಷಡ್ಯಂಡಭೂವಲ್ಲಭನೆನೆ ಸಿರಿಯಂ ಗಂಟಲೊಳ್ ಕೇಳು ರಾಗಂ ಬೆರಸಿರ್ಪಿ ನನ್ನ ಸಾಲ್ಕುರಿ, ಕರೆದೊಡೆ ಬೆಸನೇನೆಂಬ ಜೀಯೆಂಬ ದೇವಂ ಬರಸೆಂಬಾಳೆಂಬ ದೈನ್ಯಕೆಲವೂ ತನುವನಾನೊಡ್ಡುವಂತಾದಿದೇವಂ " ಪುರುದೇವಂ ದೇವದೇವಂ ಕುಡೆ ಪಡೆದ ನೆಲಕ್ಕಾರೊಳಂ ಪಂಥಮುಂಟೇ ||
'ತಾಂ ಚಕ್ರೇಶನಾದೊಡಂ ತನ್ನಾಕ್ರಮಣಮನನ್ನೊಳೇಕೆ ಕೆಮ್ಮನೆ ತೋರ್ಪಂ , ಆಜಿಗೆ ಬಂದೊಡ್ಡಲೆ ಪೇಳ್, ಸಂಗರನಿಕಷದೊಳೆಮ್ಮಂದಮಂ ನೀನೆ ಕಾಣೋ' ಎಂದು ಹೇಳಿ ಕಳುಹಿಸಿ ಬಿಟ್ಟನು. ಭರತನ ಸಭಾಸದರು 'ಷಡ್ಕಂಡಭೂಮಂಡಲಮೆರಗಿದುದೇ ಸಾಲುಂ, ನಿನ್ನ ತಮ್ಮ ನಿನಗೆಆಗಂ, ಈ ಆಕ್ಷೇಪಮಂ ಮಾಣ,' ಎಂದು ಎಷ್ಟು ಹೇಳಿದರೂ