________________
ತನು ರೂಪ ವಿಭವ ಯವ್ವನ
ಧನ ಸೌಭಾಗ್ಯಾಯುರಾದಿಗಳೆಣ್ಣೆ ಕುಡುಮಿಂ ಚಿನ ಪೊಳಪು ಮುಗಿಲ ನೆಲಿಂ
ದನ ಬಿಲ್ ಬೊಬ್ಬುಳಿಕೆಯುವು ಪರ್ವಿದ ಭೋಗಂ ||
ಕಷ್ಟಂ ದುಃಖಾನಿಲಪರಿ
ಪುಷ್ಪಂ ಚಿಃ ಗತಿಚತುಷ್ಟಯಂ ಪ್ರಾಣಿಗೆ ಸಂ ತುಷ್ಟತೆಯನೆಯೆ ಪಡೆದುದ
ಉಪೋದ್ಘಾತ | ೧೫
ಭೀಷ್ಟಸುಖಪ್ರದಮದೊಂದೆ ಮುಕ್ತಿಸ್ಥಾನಂ ||
ಎಂದು ಸಂಸಾರ ಶರೀರ ಭೋಗ ವಿರಕ್ತಾಂತರಂಗವಾಗಿ ವಸುಂಧರಾ ರಾಜ್ಯವಿಮೋಹವೆಂಬ ನಿಗಳವನ್ನು ಪರಿದು ಅಯೋಧ್ಯಾ ಪೌದನಪುರಗಳಲ್ಲಿ ಭರತಬಾಹುಬಲಿಗಳನ್ನಿರಿಸಿ ವೃಷಭನಾಥನು ತಾನು ತಪೋರಾಜ್ಯದಲ್ಲಿ ನಿಂತನು. ಇತ್ತ ಭರತನು ಜಗತೀರಾಜ್ಯದಲ್ಲಿ ನಿಂತನು. ಪುರುದೇವನಿಗೆ ಕೇವಲ ಜ್ಞಾನೋತ್ಪತ್ತಿಯಾಯಿತು. ಭರತನಿಗೆ ಆಯುಧಶಾಲೆಯಲ್ಲಿ ಚಕ್ರರತ್ನದ ಉತ್ಪತ್ತಿಯೂ ಭರತನ ಪತ್ನಿಯಾದ ಮಹಾದೇವಿಗೆ ಪುತ್ರರತ್ನದ ಉತ್ಪತ್ತಿಯೂ ಏಕಕಾಲದಲ್ಲುಂಟಾದುವು. ಭರತ ಬಾಹುಬಲಿಗಳು ಪುರುಪರಮೇಶ್ವರನಲ್ಲಿಗೆ ಬಂದು ತಮ್ಮೋಪದೇಶವನ್ನು ಪಡೆದರು. ಬ್ರಹ್ಮಯೂ ಸೌಂದರಿಯೂ ದೀಕ್ಷೆಗೊಂಡರು. ಆದಿದೇವನ ಸಮವಸರಣ, ತದಂಗವಾದ ಭಗವದ್ವಿಹಾರ, ಜಗತ್ತಿಗೆ ಧರ್ಮವರ್ಷ-ಒಂದಾದಮೇಲೊಂದು ಸಾಂಗವಾಗಿ ನಡೆದುವು.
ಇನ್ನು ಭರತ ಚಕ್ರವರ್ತಿಯು ಚಕ್ರಪೂಜೆಮಾಡಿ ಷಟ್ಕಂಡಮಂಡಳವನ್ನು ಜಯಿಸಲು ದಿಗ್ವಿಜಯಕ್ಕೆ ಹೊರಡುವನು. ಇಲ್ಲಿ ಪಂಪನು ಕಾವ್ಯಧರ್ಮದ ಮರ್ಮವನ್ನು ಪ್ರಕಾಶಿಸಲು ತನ್ನ ಸರ್ವಸ್ವವನ್ನೂ ವ್ಯಯಮಾಡಿದ್ದಾನೆ. ಶರತ್ಕಾಲ, ಪ್ರಸ್ಥಾನಭೇರಿ, ಅಂತಃಪುರವಿಭ್ರಮ, ವಾರನಾರೀವಿಳಾಸ, ಆರೋಗಣೆಯ ವೈಭವ, ತಾಂಬೂಲ ಚರ್ವಣದ ಬೆಡಗು, ಚತುರಂಗಸೈನ್ಯದ ವಿಸ್ತಾರ, ಮಂದಾನಿಳದ ಮಾಧುರ್ಯ, ಗಂಗಾ ನದಿಯ ಸೌಂದರ್ಯ, ತತ್ತೀರಪ್ರದೇಶದ ವನವಿಹಾರ, ಪುಷ್ಪಾಪಚಯ, ಗಾನಲಹರಿ, ಲತಾನರ್ತನ, ಜಲಕ್ರೀಡೆ, ಸೂರ್ಯಾಸ್ತ, ಸಂಧ್ಯಾರಾಗ, ಚಂದ್ರೋದಯ, ಕೌಮುದಿ ಮಹೋತ್ಸವ, ಚಂದ್ರಿಕಾವಿಹಾರ, ಸುಖಶಯನ, ಪ್ರಭಾತ ಕೃತ್ಯ, ಮೊದಲಾದವುಗಳ ವರ್ಣನೆಗಳು ಒಂದಾದ ಮೇಲೊಂದು ಕಣ್ಣೆದುರಿಗೆ ನುಸುಳಿ ಹೃದಯವನ್ನು ಸೂರೆಗೊಂಡು ವಾಚಕರನ್ನು ಬೇರೊಂದು ಪ್ರಪಂಚಕ್ಕೆ ಸೆಳೆಯುತ್ತವೆ.
.
ಭರತ ಚಕ್ರವರ್ತಿಯು ಮುಂದೆ ನಡೆದು ಷಟ್ಕಂಡಮಂಡಳವನ್ನು ಚಕ್ರದ ಸಹಾಯದಿಂದ ಅನಾಯಾಸವಾಗಿ ಗೆದ್ದು ಗರ್ವೊದ್ದೀಪಿತನಾಗಿ ವೃಷಭಾದ್ರಿಗೆ ನಡೆದು ಅದರ ನೆತ್ತಿಯಲ್ಲಿ ತನ್ನ 'ವಿಶ್ವವಿಶ್ವಂಭರಾವಿಜಯ' ಪ್ರಶಸ್ತಿಯನ್ನು ಕೆತ್ತಿಸಲು ಆಸೆಯಿಂದ
ನೋಡಲಾಗಿ
ಅದಳನೇಕ ಕಲ್ಪ ಶತಕೋಟಿಗಳೊಳ್ ಸಲೆಸಂದ ಚಂ ದದ ಚಲದಾಯದಾಯತಿಯ ಬೀರದ ಚಾಗದ ಮಾತುಗಳ ಪೊದ