________________
14
ತೃತೀಯಾಶ್ವಾಸಂ | ೨೦೩
ವ|| ಆಗಳ್ ದ್ರುಪದಂ ಪಚ್ಚೆಯ ನೆಲಗಟ್ಟಿನೊಳಂ ರಾಜಾವರ್ತದ ಕಂಬದೊಳಂ ಪವಳದ ಜಂತೆಯೊಳಂ ಪದ್ಮರಾಗದ ಬೋದಿಗೆಯೊಳಮಿಂದ್ರನೀಲದ ಭದ್ರದೊಳಂ ಕರ್ಕೆತನದ ಜಾಳರಿಗೆಯೊಳಂ ಪಳುಕಿನ ಚಿತ್ರಭಿತ್ತಿಯೊಳಂ ಚಂದ್ರಕಾಂತದ ಚಂದ್ರಶಾಲೆಯೊಳಮೊಪ್ಪುವ ವಿವಾಹಗೇಹಮಂ ಸಮೆಯಿಸಿಯದು ನಡುವಣಾದ್ರ್ರಮೃತ್ತಿಕಾವಿರಚಿತಮಪ್ಪ ಚತುರಾಂತರದೊಳ್ ಮುತ್ತಿನ ಚೌಕದ ನಡುವಣ ಚೆಂಬೊನ್ನ ಪಟ್ಟವಣೆಯ ಮೇಗಣ ದುಗುಲದ ಪೆಸೆಯೊಳ್ ಗುಣಾರ್ಣವನನಾ ದ್ರುಪದಜೆಯನೊಡನೆ ಕುಳ್ಳಿರಿಸಿ ಹಿತ ಪುರೋಹಿತ ಪ್ರಾಜ್ಯಾಜ್ಯಾಹುತಿ ಹುತ ಹುತವಹಸಮಕ್ಷದೊಳ್ ಕೆಝಾರೆಂದು ಪಾಣಿಗ್ರಹಂಗೆ
ಚoli ಇಡಿದಿರೆ ಮಂಜಿನೊಳ್ ತುಲುಗಿ ತೆಂಕಣಗಾಳಿಯೊಳಾದ ಸೋಂಕಿನೊಳ್ ನಡುಗುವಶೋಕವಲ್ಲರಿಯ ಪಲ್ಲವದೊಳ್ ನವಭೂತಪಲ್ಲವಂ | ತೊಡರ್ದವೊಲಾಗೆ ಘರ್ಮಜಲದಿಂ ನಡುವಾಕೆಯ ಪಾಣಿಪಲ್ಲವಂ ಬಿಡಿದು ಬೆಡಂಗನಾಳುದು ಗುಣಾರ್ಣವನೊಪ್ಪುವ ಪಾಣಿಪಲ್ಲವಂ || 2.9%
ವ|| ಅಂತೋರ್ವರೋರ್ವರ ಕಿರುಕುಣಿಕೆಗಳಂ ಪಿಡಿದು ರತಿಯುಂ ಕಾಮದೇವನುಂ ಬರ್ಪಂತೆ ಬೇಳೆಯ ಕೊಂಡದ ಮೊದಲೆ ವಂದು ಕನಕಗಿರಿಯ ಬಲಗೊಳ್ ಪತಂಗ ದಂಪತಿಯಂತಾ ದಂಪತಿಗಳ್ ಸಪ್ತಾರ್ಚಿಯಂ ಮೂಲ ಸೂಯ್ ಬಲವಂದು ನಿಂದಿಂ ಬಟೆಯನಾಕೆ ಪುರೋಹಿತನ ಪೇಜ್‌ಜೆಯೊಳ್ ಲಾಜೆಯನಗ್ನಿಕುಂಡದೊಳ್ ಸುರಿದು
ವ|| ಆಗ ದ್ರುಪದನು ಪಚ್ಚೆಯೆಂಬ ರತ್ನದಿಂದ ಮಾಡಿದ ನೆಲಗಟ್ಟಿನಿಂದಲೂ ಎಳೆಯ ಇಂದ್ರನೀಲಮಣಿಯಿಂದ ಮಾಡಿದ ಕಂಭಗಳಿಂದಲೂ ಹವಳದ ಜಂತಿಗಳಿಂದಲೂ - ಪದ್ಮರಾಗದ ಬೋದಿಗೆಗಳಿಂದಲೂ ಇಂದ್ರನೀಲದ ಉಪ್ಪರಿಗೆಗಳಿಂದಲೂ ಚಿನ್ನದ ಜಾಲರಿಗಳಿಂದಲೂ ಸ್ಪಟಿಕದ ಚಿತ್ರಿತವಾದ ಗೋಡೆಗಳಿಂದಲೂ ಚಂದ್ರಕಾಂತ ಶಿಲೆಯಿಂದ ನಿರ್ಮಿಸಿದ ಮೇಲ್ಮಹಡಿಯಿಂದಲೂ ವಿವಾಹಗೃಹವನ್ನು ಸಿದ್ಧಗೊಳಿಸಿದನು. ಅದರ ಮಧ್ಯೆ ಹಸಿಯ ಮಣ್ಣಿನಿಂದ ಮಾಡಿದ ಚಚೌಕದ ಹಸೆಯಜಗಲಿಯಲ್ಲಿ ಚಚೌಕವಾದ ಮುತ್ತಿನ ಹೊಂಬಣ್ಣದ ಹಸೆಯ ಮಣೆಯ ಮೇಲೆ ರೇಷ್ಮೆಯ ಹಸೆಯಲ್ಲಿ ಗುಣಾರ್ಣವನನ್ನೂ ದೌಪದಿಯನ್ನೂ ಕುಳ್ಳಿರಿಸಿದನು. ಬಂಧುಗಳು, ಪುರೋಹಿತರು, ಶುದ್ಧವಾದ ತುಪ್ಪದ ಹವಿಸ್ಸನ್ನು ಹೋಮಮಾಡಿಸಿದರು. ದ್ರುಪದನು ಅಗ್ನಿಸಮ ಕ್ಷಮದಲ್ಲಿ ಧಾರೆಯೆರೆದು ಪಾಣಿಗ್ರಹಣವನ್ನು ಮಾಡಿಸಿದನು. ೭೫, ಒತ್ತಾಗಿ ಕೂಡಿಕೊಂಡಿರುವ ಮಂಜಿನಿಂದ ವ್ಯಾಪ್ತವಾದ ದಕ್ಷಿಣಮಾರುತಸ್ಪರ್ಶದಿಂದ ಅಲುಗಾಡುತ್ತಿರುವ ಅಶೋಕಲತೆಯ ಚಿಗುರಿನಲ್ಲಿ ಹೊಸದಾದ ಮಾವಿನ ಚಿಗುರು ಸೇರಿಕೊಂಡ ಹಾಗೆ ಬೆವರಿನಿಂದ ನಡುಗುತ್ತಿರುವ ಆಕೆಯ ಚಿಗುರಿನಂತಿರುವ ಕಯ್ಯನ್ನು ಹಿಡಿದು ಗುಣಾರ್ಣವನ ಸುಂದರವಾದ ಪಾಣಿಪಲ್ಲವವು ಸೌಂದರ್ಯವನ್ನು ಹೊಂದಿತು. ವ|| ಹಾಗೆ ಒಬ್ಬರು ಇನ್ನೊಬ್ಬರ ಕಿರುಬೆರಳನ್ನು ಹಿಡಿದು ರತಿಯೂ ಕಾಮದೇವನೂ ಬರುವ ಹಾಗೆ ಹೋಮಕುಂಡದ ಅಗ್ರಭಾಗಕ್ಕೆ ಬಂದು ಮೇರುಪರ್ವತವನ್ನು ಪ್ರದಕ್ಷಿಣೆ ಮಾಡುವ ಸೂರ್ಯದಂಪತಿಗಳ ಹಾಗೆ ಅಗ್ನಿಯನ್ನು ಮೂರು ಸಲ ಪ್ರದಕ್ಷಿಣೆಮಾಡಿ ನಿಂತ ಬಳಿಕ ದೌಪದಿಯು ಆ ಪುರೋಹಿತನು ಹೇಳಿದ ಕ್ರಮದಲ್ಲಿ ಲಾಜಹೋಮವನ್ನು ಮಾಡಿದಳು.