________________
೨೦೨/ ಪಂಪಭಾರತಂ ಕoll ಕರಮೊಸೆದಾ ದ್ರುಪದಜೆಯೊಳ್
ನೆರೆದೊಸಗೆಗೆ ತಮ್ಮ ಬೀರಮಂ ಬಿಂಕಮುಮಂ | ತೆವುಂ ತೆಲ್ಲಂಟಿಯುಮೆಂ
ದರಿಕೇಸರಿಗಾಗಳೀವವೋಲ್ ಬೆನ್ನಿತ್ತರ್ || ವ|| ಆಗಳ್ ವಿಕ್ರಾಂತತುಂಗಂ ಬಿಲ್ಲ ಕೊಪ್ಪಿನ ಮೇಲೆ ಕೆಯ್ಯನೂಟಿ ಮುಗುಳ್ಳಗೆ ನಗುತ್ತುಂ ಪಾಂಚಾಳರಾಜತನೂಜೆಗಿಂತೆಂದಂಕಂಗೆ ನಿನ್ನನುಟುಗಿಸಲುಮಾಜಿಯೊ
ಆನಂ ಚೆಂಕೊಂಡು ಕಾದಲುಂ ಬಂದೀಗಲ್ | ಬಿನ್ನನೆ ಮೊಗದಿಂ ಬೀರರ್
ಚೆನ್ನಿತ್ತುದನಿನಿಸು ನೋಡ ಸರಸಿರುಹಮುಖಿ || ವ|| ಎಂಬನ್ನೆಗಂ ದ್ರುಪದಂ ಬಂದವರ್ ಪಾಂಡವರಪುದುಮಂ ತನ್ನಳಿಯಂ : ವಿಕ್ರಮಾರ್ಜುನನಪುದುಮಂ ತಪ್ಪಿಲ್ಲದಣಿದು ಮಹಾವಿಭೂತಿಯಿಂ ಪೋಲಲಂ ಪುಗಿಸಿಚಂII ಪೊಲೊಳಗೊಪ್ಪೆ ಕನ್ನಡಿಯ ಕಂಚಿನ ತೋರಣದೋಳಿಗಳ ತಳ
ತಳಿಗೆ ವಿಚಿತ್ರಕೇತುತತಿಗಳ ಮಿಳಿರ್ದಾಡ ಪುರಾಂಗನಾಜನಂ | ಗಳ ಜಯ ಜೀಯಮಾನ ರವಮಿಕ್ಕುವ ಸೇಸೆ ಮನೋನುರಾಗಮಂ
ಬಳೆಯಿಸೆ ಪೊಕ್ಕನಾ ದ್ರುಪದಮಂದಿರಮಂ ಪರಸೈನ್ಯಭೈರವಂ || ೭೪ ಎಂದು ಬೆರಳಿನಿಂದ ಸುಟ್ಟಿ ತೋರಿಸಿ ಇವರು ಅತಿಸಾಹಸಿಗಳಾಗುತ್ತಾರೆ ಎಂದು ಅವರ ಪರಾಕ್ರಮಕ್ಕೆ ಸಂತೋಷಪಟ್ಟನು. ಉಳಿದ ರಾಜಕುಮಾರರೆಲ್ಲ ಕರ್ಣಶಲ್ಯರು ಮುಖತಿರುಗಿಸಿ ಹಿಮ್ಮೆಟ್ಟಿದುದನ್ನು ನೋಡಿ ಉತ್ಸಾಹಶೂನ್ಯರಾಗಿ ೭೨. ಬ್ರೌಪದಿಯನ್ನು ಪಡೆಯಲು ಬಂದು ಸೇರಿದ ಸಂತೋಷಕ್ಕಾಗಿ ತಮ್ಮ ಪರಾಕ್ರಮವನ್ನೂ ಅಹಂಕಾರವನ್ನೂ ತಪ್ಪುಕಾಣಿಕೆಯನ್ನಾಗಿಯೂ ಬಳುವಳಿಯನ್ನಾಗಿಯೂ ಅರಿಕೇಸರಿಗೆ ಕೊಡುವ ಹಾಗೆ ಬೆನ್ನು ತಿರುಗಿಸಿ ಪಲಾಯನಮಾಡಿದರು. ವ|| ಆಗ ವಿಕ್ರಾಂತತುಂಗನಾದ ಅರ್ಜುನನು ಬಿಲ್ಲಿನ ತುದಿಯ ಮೇಲೆ ಕಯ್ಯನ್ನೂರಿಕೊಂಡು ಹುಸಿನಗೆ ನಗುತ್ತ ದೌಪದಿಗೆ ಹೀಗೆ ಹೇಳಿದನು -೭೩. ಎಲ್ ಕಮಲಮುಖಿಯಾದ ಬ್ರೌಪದಿಯೇ ಈ ವೀರರು ನಿನ್ನನ್ನು ಒಲಿಸುವುದಕ್ಕೂ ನನ್ನೊಡನೆ ಜಗಳವಾಡುವುದಕ್ಕೂ ಬಂದು ಈಗ ಪೆಚ್ಚುಮುಖದಿಂದ ಬೆನ್ನು ತಿರುಗಿಸಿ ಹೋಗುತ್ತಿರುವುದನ್ನು ಸ್ವಲ್ಪನೋಡು ಎಂದು ತೋರಿಸಿದನು. ವl ಅಷ್ಟರಲ್ಲಿ ದ್ರುಪದನು ಅಲ್ಲಿಗೆ ಬಂದಿರುವವರು ಪಾಂಡವರಾಗಿರುವುದನ್ನೂ ತನ್ನ ಅಳಿಯನು ವಿಕ್ರಮಾರ್ಜುನನಾಗಿರುವುದನ್ನೂ ನಿಶ್ಚಯವಾಗಿ ತಿಳಿದು ಮಹಾವೈಭವದಿಂದ ಪುರಪ್ರವೇಶಮಾಡಿಸಿದನು. ೭೪. ಪಟ್ಟಣದಲ್ಲಿ ಕನ್ನಡಿ ಮತ್ತು ಕಂಚಿನ ತೋರಣದ ಸಮೂಹಗಳು ಥಳಿಥಳಿಸಿ ಒಪ್ಪಿದವು. ವಿಧವಿಧವಾದ ಬಾವುಟಗಳ ಸಮೂಹಗಳು ಅಲುಗಾಡಿದುವು. ಪುರದ ಸೀಜನರು ಜಯಜಯವೆಂದು ಘೋಷಿಸುವ ಶಬ್ದವೂ ಚೆಲ್ಲುವ ಮಂತ್ರಾಕ್ಷತೆಯೂ ಮನಸ್ಸಿಗೆ ಸಂತೋಷವನ್ನು ಹೆಚ್ಚಿಸಿದುವು. ಪರಸೈನ್ಯಭೈರವನಾದ ಅರ್ಜುನನು ದ್ರುಪದನ ಅರಮನೆಯನ್ನು ಪ್ರವೇಶಿಸಿದನು.