________________
ತೃತೀಯಾಶ್ವಾಸಂ | ೧೯೯ ವು ಆಗ ದ್ರುಪದಂ ಬದ್ದವಣದ ಪಳೆಗಳಂ ಬಾಜಿಸಲ್ಬಟ್ಟು ಸುರತ ಮಕರ ಧ್ವಜನಂ ಬ್ರೌಪದಿಯೊಡನೆ ಸಿವಿಗೆಯನೇಟಿಸಿ ಧೃಷ್ಟದ್ಯುಮ್ಮ ಯುಧಾಮನ್ನೂತ್ತಮೌಜಖಂಡಿ ಚೇಕಿತಾನರೆಂಬ ತನ್ನ ಮಗಂದಿರುಂ ತಮ್ಮಂದಿರುಂಬೆರಸು ನಲಂ ಮೂರಿವಿಟ್ಟಂತೆ ಬರೆ ಮುಂದಿಟ್ಟು ಪೊಳಲೊಡಗೊಂಡುವರ್ಫುದುಮಿ ದುರ್ಯೋಧನಂ ಕರ್ಣ ಶಲ್ಯ ಶಕುನಿ ದುಶ್ಯಾಸನಾದಿಗಳೊಳಾಲೋಚಿಸಿ ಪೇಟೆಮೇಗಯ್ಯಮೆನೆ ಕರ್ಣನಿಂತೆಂದಂ
ಮಗ ಜನಮೆಲ್ಲಂ ನೆರೆದಕ್ಕಟಣ್ಣರಿವರಿಂದೇವಂದರೇಮೋದರೆಂ
ಬಿನಮೇಂ ಪೋಪಮೆ ನಾಡ ಕೂಟಕುಳಿಗಳೇದೋಸಮೇಂ ಬನ್ನಮೊಂ | ದನೆ ಕೇಳಾಂತರನಿಕ್ಕಿ ಮಿಕ್ಕ ವಿಜಯಶ್ರೀಕಾಂತೆಗಂ ಕಾಂತೆಗಂ” ನಿನಗಂ ದೋರ್ವಲದಿಂದಮೊಂದ ಪಸೆಯೊಳ್ ಪಾಣಿಗ್ರಹಂಗಯ್ಯನೇ ||೬೫
ವ|| ಎನೆ ಶಲ್ಯನಿಂತೆಂದಂ
ಚಂ|| ಕುಡುವೊಡೆ ನಿಸ್ತಪಂ ಕುಡುವುದೇಚಿಸಿದಂ ಬೆಸೆಕೋಲನೆಂದು ಪೇಯ್
ಕುಡುವುದೆ ಕನ್ನೆಯಂ ದ್ವಿಜಕುಲಂಗಿದು ವಿಶ್ವನರೇಂದ್ರ ವೃಂದದೊಳ್ | ತೊಡರ್ದ ಪರಾಭವಂ ದ್ರುಪದನಂ ತಳೆದೊಟ್ಟದೆ ಕೆಮ್ಮಗಾನಿದಂ | ಕಡೆಗಣಿಸಿರ್ದೊಡೆನ್ನ ಕಡುಗೊರ್ವಿದ ತೋಳಳ ಕೊರ್ವದೇವುದೋ || ೬೬
ಬ್ರೌಪದಿಯು ಗುಣಾರ್ಣವನಿಗೆ ಮಾಲೆಯನ್ನು ಹಾಕಿದಳು. ವ|| ಆಗ ದ್ರುಪದನು ಮಂಗಳವಾದ್ಯಗಳನ್ನು ವಾದನಮಾಡಿಸಿ ಸುರತಮಕರಧ್ವಜನಾದ ಅರ್ಜುನನನ್ನು ಬ್ರೌಪದಿಯೊಡನೆ ಪಲ್ಲಕ್ಕಿಯನ್ನೇರಿಸಿ ಧೃಷ್ಟದ್ಯುಮ್ಮ, ಯುಧಾಮನ್ಯು, ಉತ್ತಮೌಜ, ಶಿಖಂಡಿ ಮತ್ತು ಚೇಕಿತಾನರೆಂಬ ತನ್ನ ಮಕ್ಕಳೂ ಮತ್ತು ತಮ್ಮಂದಿರೊಡಗೂಡಿ ನೆಲವು ಬಾಯಿಬಿಟ್ಟ ಹಾಗೆ ಅರ್ಜುನನನ್ನು ಮುಂದಿಟ್ಟುಕೊಂಡು ಪಟ್ಟಣಕ್ಕೆ ಬಂದನು. ದುರ್ಯೊಧನನು ಕರ್ಣ,ಶಲ್ಯ, ಶಕುನಿ ದುಶ್ಯಾಸನನೇ ಮೊದಲಾದವರಲ್ಲಿ ಆಲೋಚಿಸಿ ಈಗ ಏನು ಮಾಡೋಣ ಹೇಳಿ ಎನ್ನಲು ಕರ್ಣನು ಹೀಗೆ ಹೇಳಿದನು. ೬೫. ಜನವೆಲ್ಲ ಒಟ್ಟುಗೂಡಿ ಅಯ್ಯೋ ಅಣ್ಣಂದಿರು ಈ ದಿನ ಏಕೆ ಬಂದರು ಏಕೆ ಹೋಗುತ್ತಾರೆ ಎನ್ನುವ ಹಾಗೆ ನಾವು ಹೋಗುವುದೇ? ಪರಾಕ್ರಮಿಗಳಾದ ನಮಗೆ ಈ ತೆರನಾದ ಸೋಲು ಅವಮಾನಕರ, ನನ್ನ ಅಭಿಪ್ರಾಯವಿದು : ಎದುರಿಸಿದವರನ್ನು ಸೋಲಿಸಿ ಈಗ ಕೈಮೀರಿರುವ ವಿಜಯಲಕ್ಷಿಗೂ ಈ ದೌಪದಿಗೂ ನಿನಗೂ ನನ್ನ ಬಾಹುಬಲದಿಂದ ಒಂದೇ ಹಸೆಮಣೆಯಲ್ಲಿ ಪಾಣಿಗ್ರಹಣ (ವಿವಾಹ)ವನ್ನು ಮಾಡಲಾರೆನೇ ? ಎಂದನು. ೬೬. ಕನ್ಯಾದಾನಮಾಡಬೇಕಾದರೆ ಲಜ್ಜೆಯಾಗದ ರೀತಿಯಲ್ಲಿ ದಾನಮಾಡಬೇಕು. ಹತ್ತಿಯನ್ನು ಎಕ್ಕುವ ಬಿಲ್ಲಿನಂತಿರುವ ಈ ಬಿಲ್ಲನ್ನು ಏರಿಸಿದನೆಂಬ ಕಾರಣದಿಂದ ಬ್ರಾಹ್ಮಣವಂಶದವನಿಗೆ ಕನೈಯನ್ನು ಕೊಡುವುದೇ? ಈ ಪರಾಭವವು ಸಮಸ್ತರಾಜವೃಂದಕ್ಕೂ ಸಂಬಂಧಪಟ್ಟುದು, ಆದುದರಿಂದ ಈಗ ನಾನು ಈ ದ್ರುಪದನನ್ನು ತರಿದು ಹಾಕದೆ ಸುಮ್ಮನಿದ್ದರೆ ಕೊಬ್ಬಿ ಬೆಳೆದಿರುವ ನನ್ನ ತೋಳುಗಳಿಗೆ