________________
೧೯೮ / ಪಂಪಭಾರತಂ
ವ|| ಎಂದು ಬಾಯ್ಕೆ ವಂದುದನೆ ನುಡಿಯ ರಂಗಭೂಮಿಯ ನಡುವೆ ನಿಂದು ದಿವ್ಯಚಾಪಕ್ಕೆ ಪೊಡವಟ್ಟವಯವದಿನೆಡಗೆಳೆತ್ತಿಕೊಂಡು ತನ್ನ ಬಗೆದ ಕಜ್ಜಮಂ ಗೊಲೆಗೊಳಿಸುವಂತಾ ಬಿಲ್ಲ ಗೊಲೆಯನೇಹಿತಿ ನೂಂಕಿಮll ದೆಸೆ ಕಂಪಂಗೊಳೆ ಕೊಂಡು ದಿವ್ಯಶರಮಂ ಕರ್ಣಾದಿಗಳ್ ಕಂಡು
ಕೃಷಮಾಗಿರ್ಪಿನಮೊಂದೆ ಸೂತಿ ತೆಗೆದಾಕರ್ಣಾಂತಮಂ ತಾಗ ನಿ. ಟ್ರಸಲಾರ್ಗಾರ್ಗಿಸಲಕ್ಕುಮಂಬೆಸಕದಾ ಮಾನಂ ಸಮಂತು ಮ.
ಚಿಸಿದಂ ದೇವರುಮಂ ಧನುರ್ಧರರುಮಂ ವಿದ್ವಿಷವಿದ್ರಾವಣಂ || ೬೩
ವ|| ಆಗಳಾ ಪಿಡಿದ ಬಿಲ್ಲೆ ಕರ್ಬಿನ ಬಿಲ್ಲಾಗೆಯುಮಂಬುಗಳೆ ಪೂವಿನಂಬುಗಳಾಗೆಯು ಮಚ್ಚ ಮಾನೆ ಮಾನಕೇತನಮಾಗೆಯುಂ ಸಹಜಮನೋಜನಂ ಮನೋಜನೆಂದ ಬಗೆದುಚಂ|| ನಡ ಕಡೆಗಣ್ ಮನಂ ಬಯಸೆ ತಳಮರ್ದಪ್ಪಲೆ ತೋಳಳಾಸೆಯೊಳ್
ತೊಡರ್ದಿರೆ ಪೂಣ್ ಘರ್ಮಜಲಮು ಭಯಂ ಕಿಡೆ ನಾಣ್ ವಿಕಾರದೊಳ್ | ತೊಡರ್ದಿರೆ ಕೆಯ್ವುಮ್ಮಳಿಪ ಕನ್ನೆಗೆ ಸುಂದರಮಾಲೆ ಮಾಲೆಯಂ ತಡೆಯದೆ ನೀಡಿ ಮಾಣದೆ ಗುಣಾರ್ಣವನಂ ಸತಿ ಮಾಲೆ ಹೂಡಿದಳ್ || ೬೪
ಇದನ್ನು ಇವನು ಈ ಹಾರುವನು ಏರಿಸುತ್ತಾನಲ್ಲವೇ? ಈ ಬ್ರಾಹ್ಮಣನಿಗೆ, ಅಯ್ಯೋ, ಶರೀರದಲ್ಲಿ ಪಿಶಾಚಿ ಸೇರಿಕೊಂಡಿರಬೇಕು ವl ಎಂದು ಬಾಯಿಗೆ ಬಂದುದನ್ನು ಆಡಿದರು. ಅರ್ಜುನನು ರಂಗಸ್ಥಳದ ಮಧ್ಯಭಾಗದಲ್ಲಿ ನಿಂತುಕೊಂಡು ದಿವ್ಯಮನಸ್ಸಿಗೆ ನಮಸ್ಕಾರಮಾಡಿ ಶ್ರಮವಿಲ್ಲದೆ ಎಡಗೈಯಿಂದಲೇ ಎತ್ತಿಕೊಂಡು ತಾನು ಕೈಹಾಕಿದ ಕಾರ್ಯವನ್ನು ಸುಗಮವಾಗಿ ಮುಗಿಸುವಂತೆ ಆ ಬಿಲ್ಲಿನ ತುದಿಯನ್ನು ಎಳೆದು ಕಟ್ಟಿ೬೩. ದಿಕ್ಕುಗಳೆಲ್ಲ ನಡುಗುವ ಹಾಗೆ ದಿವ್ಯ ಬಾಣವನ್ನು ತೆಗೆದುಕೊಂಡು ಕರ್ಣನೇ ಮೊದಲಾದವರು ನೋಡಿ ಆಶ್ಚರ್ಯಪಡುತ್ತಿರಲು ಒಂದೇ ಸಲಕ್ಕೆ ಕಿವಿಮುಟ್ಟುವವರೆಗೆ ಸೆಳೆದು ಇದನ್ನು ಯಾರಿಗೆ ನೋಡುವುದಕ್ಕೂ ಹೊಡೆಯುವುದಕ್ಕೂ ಸಾಧ್ಯ ಎಂಬಂತಿದ್ದ ಮೀನನ್ನು ಛೇದಿಸಿ ದೇವತೆಗಳನ್ನೂ ಕುಶಲರಾದ ಬಿಲ್ಗಾರರನ್ನೂ ವಿದ್ವಿಷ್ಟವಿದ್ರಾವಣನಾದ ಅರ್ಜುನನು ಸಂತೋಷಪಡಿಸಿದನು. ವ|| ಆಗ ಅವನು ಹಿಡಿದ ಬಿಲ್ಲನ್ನೇ ಕಬ್ಬಿನ ಬಿಲ್ಲನ್ನಾಗಿಯೂ ಬಾಣಗಳನ್ನೇ ಪುಷ್ಪಬಾಣಗಳನ್ನಾಗಿಯೂ ಹೊಡೆದ ಮೀನನ್ನೇ ಮೀನಿನ ಬಾವುಟವನ್ನಾಗಿಯೂ ಸಹಜಮನೋಜನಾದ ಅರ್ಜುನನನ್ನೇ ಮನ್ಮಥನನ್ನಾಗಿಯೂ ಭಾವಿಸಿದಳು. ೬೪. ಅವಳ ಕಡೆಗಣ್ಣು ಅವನಲ್ಲಿ ನಾಟಿತು. ಮನಸ್ಸು ಅವನನ್ನು ಬಯಸಿತು, ತೋಳುಗಳು ಅವನ ಗಾಢಾಲಿಂಗನಕ್ಕೆ ಆಶಿಸಿತು. ಬೆವರು ಹೆಚ್ಚುತ್ತಿದ್ದಿತು ಭಯವು ಉಂಟಾಯಿತು ನಾಚಿಕೆ ಮಾಯವಾಯಿತು, ಅಂಗವಿಕಾರಗಳು ಶರೀರದಲ್ಲಿ ತಲೆದೋರಿದುವು. ಸುಂದರಮಾಲೆಯೆಂಬ ಚೇಟಿ ಸ್ವಯಂವರಮಾಲೆಯನ್ನು ಸಾವಕಾಶಮಾಡದೆ ಅವಳ ಕೈಲಿತ್ತಳು. ಸತಿಯಾದ