________________
ತೃತೀಯಾಶ್ವಾಸಂ | ೧೭೯ ಚಂ | ಬರಿಸಿ ಹಿಡಿಂಬೆಯಂ ಕರೆದು ಸಾರ ಘಟೋತ್ಕಚನಂ ಮನೋಮುದಂ
ಬೆರಸೊಸೆದಿರ್ದೆವಿನ್ನವರಮಿನ್ನಿರಲಾಗದು ಪೋಷವೆಂದೊಡಾ | ದರದೊಳೆ ಕೊಟ್ಟ ವಸ್ತುಗಳನೊಂದುಮನೊಲ್ಲದೆ ಕೂರ್ತು ಬುದ್ಧಿವೇ ಆರಿಸಿ ಸುಖಪ್ರಯಾಣದೊಳೆ ಪಾಂಡವರೆಲ್ಟಿದರೇಕಚಕ್ರಮಂ || ೨೧
ರಗಳೆ ಅಲ್ಲಿ ಸೊಗಯಿಸುವ ಕೃತಕಗಿರಿಗಳಿಂ
ಕಲ್ಪತರುಗಳನೆ ಪೋಲ್ವ ಮರಗಳಿಂ ನಂದನಂಗಳೊಳ್ ಸುಚಿವ ಬರಯಿಯಿಂ ಕಂಪು ಕಣಲೆಯ ಪೂತ ಸುರಯಿಯಿಂ ಸುತ್ತಲುಂ ಪರಿವ ಜರಿವೊನಲ್ಗಳಿಂ ದತ್ತಲುಂ ನಲಿವ ಪೊಸ ನವಿಲ್ಗಳಿಂ | ಬೆಳೆದು ಮಗಮಗಿಪ ಗಂಧಶಾಳಿಯಿಂ ದಲ್ಲಿ ಸಚಿವ ಗಿಳಿವಿಂಡಿನೋಳಿಯಿಂ | ಈಂಟುಜಳಧಿಯೆನಿಸಗ ನೀಳ್ಳಿನಿಂ
೨೧. ಹಿಡಿಂಬೆಯನ್ನು ಬರಮಾಡಿಕೊಂಡು ಘಟೋತ್ಕಚನನ್ನೂ ಹತ್ತಿರಕ್ಕೆ ಕರೆದು ಇಲ್ಲಿಯವರೆಗೆ ಸುಖವಾಗಿ ಸಂತೋಷವಾಗಿ ಇಲ್ಲಿ ಇದ್ದೆವು. ಇನ್ನು ಇರಬಾರದು ಹೋಗುತ್ತೇನೆ ಎಂದು ಹೇಳಿ ಅವರು ಆದರದಿಂದ ಕೊಟ್ಟ ಯಾವ ಪದಾರ್ಥವನ್ನೂ ಸ್ವೀಕರಿಸದೆ ಅಲ್ಲಿಯೇ ಬಿಟ್ಟು ಪ್ರೀತಿಯಿಂದ ಬುದ್ಧಿಹೇಳಿ ಸುಖಪ್ರಯಾಣದಿಂದ ಪಾಂಡವರು ಏಕಚಕ್ರಪುರವನ್ನು ಸೇರಿದರು. ೨೨. ಅಲ್ಲಿ ಸುಂದರವಾಗಿ ಕಾಣುವ ಕೃತಕಪರ್ವತಗಳಿಂದಲೂ ಕಲ್ಪವೃಕ್ಷವನ್ನೇ ಹೋಲುವ ಮರಗಳಿಂದಲೂ ನಂದನವನಗಳಲ್ಲಿ ಸುಳಿದಾಡುತ್ತಿರುವ ವಿರಹಿಗಳಿಂದಲೂ ಸುಗಂಧ ಬೀರುತ್ತಿರುವ ಹೂವುಗಳನ್ನು ಬಿಟ್ಟಿರುವ ಸುರಗಿಯ ಮರಗಳಿಂದಲೂ, ಸುತ್ತಲೂ ಹರಿಯುತ್ತಿರುವ ಸುಂದರವಾದ ಕೃತಕಪರ್ವತಗಳು, ಕಲ್ಪವೃಕ್ಷದಂತಿರುವ ಮರಗಳು, ನಂದನವನಗಳಲ್ಲಿ ವಿರಹಿಸುವ ವಿರಹಿಗಳು ಮನೋಹರವಾದ ವಾಸನೆಯಿಂದ ಕೂಡಿದ ಸುರಗಿಯ ಹೂವುಗಳು, ಅಲ್ಲಲ್ಲಿ ಹರಿಯುವ ನದಿಗಳು, ಎಲ್ಲೆಡೆಯಲ್ಲಿಯೂ ಕುಣಿಯುತ್ತಿರುವ ನವಿಲುಗಳು, ಕೊಬ್ಬಿ ಬೆಳೆದಿರುವ ಸುಗಂಧಯುಕ್ತವಾದ ಬತ್ತದ ಗದ್ದೆಗಳು, ಅದಕ್ಕೆ ಸುಳಿಯುತ್ತಿರುವ ಗಿಳಿಗಳ ಹಿಂಡು, ಸಮುದ್ರವನ್ನೂ ಹೀಯಾಳಿಸುವಷ್ಟು ಆಳವಾದ ಕಂದಕ, ಮೇಲೆದ್ದು ಸೊಗಸುವ ಕೋಟೆ, ವಿವಿಧರೀತಿಯ ದೇವಾಲಯಗಳು, ಬಹಳ ಆಸಕ್ತಿಯಿಂದ ನೋಡುತ್ತಿರುವ ದಾರಿಹೋಕರ ನೋಟಗಳು, ಪಂಚರತ್ನಗಳಿಂದ ತುಂಬಿದ ಅಂಗಡಿಗಳು ಕುಬೇರರನ್ನೂ ಮೀರಿಸುವ ವಣಿಕರು- ಇವುಗಳಿಂದ ಶೋಭಾಯಮಾನವಾದ ಏಕಚಕ್ರಪುರವನ್ನು ಅತ್ಯಂತ ಪರಾಕ್ರಮಿಯಾದ ಅರ್ಜುನನು