________________
೧೭೮ / ಪಂಪಭಾರತಂ
ಧವಳಿತೋತ್ತುಂಗ ರಮ್ಯ ಹರ್ಮ್ಯಂಗಳಂ ಕಾಣ್ಣಿರನ್ನೊಡದು ಹಿಡಿಂಬಪುರಮೆಂಬುದಮ್ಮ ಪುರಮಲ್ಲಿಗೆ ಪೋಪಂ ಬನ್ನಿಮೆಂದು ಮುಂದಿನ್ನೊಡಗೊಂಡು ಪೋಗಿ ಮಹಾವಿಭೂತಿಯಿಂ ಪೊಲಂ ಪುಗಿಸಿ ತನ್ನಸಂಪತ್ತುಮಂ ಶ್ರೀಯುಮಂ ಮದು ಮಜ್ಜನ ಭೋಜನ ತಾಂಬೂಲ ಲೇಪನಂಗಳಿಂ ಪಥಪರಿಶ್ರಮಮಲ್ಲಮಂ ಕಳೆದು ಭೀಮಸೇನನುಂ ತಾನುಂ
ಕಂ ಎಲ್ಲಿ ಕೊಳನಲ್ಲಿ ತಣ್ಣು!
ಲೆಲ್ಲಿ ಲತಾಭವನಮಲ್ಲಿ ಧಾರಾಗೃಹಮಂ | ತಲ್ಲಿಯೆ ತೊಡರ್ದಲ್ಲಿಯೆ ನಿಂ
ದಲ್ಲಿಯೆ ರಮಿಯಿಸಿದಳಾಕೆ ಮರುದಾತ್ಮಜನೊಳ್ ||
ವ|| ಅಂತು ರಮಿಯಿಸಿ ಪೊಲ್ಲೆ ಮಗುಟ್ಟು ಬಂದೊಡಾಕೆಗಂ ಭೀಮಂಗಂ
ಕಂ।।
ಕಾರಿರುಳ ತಿರುಳ ಬಣ್ಣ
ಕೂರಿದುವನೆ ತೂಳಪ ದಾಡೆ ಮಿಳಿರ್ವುರಿಗೇಸಂ |
೧೯
ಪೇರೊಡಲೆಸೆದಿರೆ ಪುಟ್ಟದ
ನಾರುಮಗುರ್ವಿಸೆ ಮಗಂ ಘಟೋತ್ಕಚನೆಂಬಂ ||
೨೦
ವ|| ಅಂತು ಪುಟ್ಟುವುದುಮಿಶ್ವರಕಲ್ಪಿತದಿಂ ರಾಕ್ಷಸರ್ಗ ಸದ್ಯೋಗರ್ಭಾಮುಂ ಸದ್ಯಃ ಪ್ರಸೂತಿಯುಂ ಸದ್ಯೋಯೌವನಮುಮುಳ್ಳ ಕಾರಣದಿಂದಾಗಳೆ ಷೋಡಶವರ್ಷದ ಕುಮಾರನಾಗಿರ ಪಾಂಡವರುಮಲ್ಲಿ ಮೂರು ವರುಷವಿರ್ದು ಕೃಷ್ಣಪಾಯನೋಪದೇಶದಿಂದೇಕಚಕ್ರಕ್ಕೆ ವೋಪ ಕಜ್ಜಮನಾಳೋಚಿಸಿ
ಆ ಉಪ್ಪರಿಗೆ ಮನೆಗಳು ನಮ್ಮ ಪಟ್ಟಣ (ರಾಜಧಾನಿ), ಅಲ್ಲಿಗೆ ಹೋಗೋಣ ಬನ್ನಿ ಎಂದು ಅವರನ್ನು ಮುಂದುಮಾಡಿಕೊಂಡು ಹೋಗಿ ಮಹಾವೈಭವದಿಂದ ಪುರಪ್ರವೇಶಮಾಡಿದಳು. ತನ್ನ ಐಶ್ವರ್ಯವನ್ನೂ ವೈಭವವನ್ನೂ ಅವರಿಗೆ ಪ್ರಕಾಶಪಡಿಸಿ ಸ್ನಾನ, ಭೋಜನ, ತಾಂಬೂಲ ಗಂಧಾದಿಗಳಿಂದ ದಾರಿನಡೆದ ಬಳಲಿಕೆಗಳನ್ನೆಲ್ಲ ಕಳೆದು ಸತ್ಕರಿಸಿದಳು. ಭೀಮಸೇನನೂ ತಾನು ೧೯. ಎಲ್ಲಿ ಸರೋವರಗಳುಂಟೋ ಎಲ್ಲಿ ತಂಪಾದ ತೋಪುಗಳುಂಟೋ ಎಲ್ಲಿ ಬಳ್ಳಿವಾಡಗಳುಂಟೋ ಎಲ್ಲಿ ಏಕಪ್ರಕಾರವಾಗಿ ನೀರು ಹರಿಯುವ ಮನೆಗಳುಂಟೋ ಅಲ್ಲಲ್ಲಿಯೇ ಸೇರಿಕೊಂಡು ಅಲ್ಲಲ್ಲಿಯೇ ನಿಂತು ಹಿಡಿಂಬೆಯು ವಾಯುಪುತ್ರನಲ್ಲಿರಮಿಸಿದಳು. ೨೦.ಕಗ್ಗತ್ತಲೆಯಿಂದ ಕೂಡಿದ ರಾತ್ರಿಯ ಬಣ್ಣವು ಇಲ್ಲಿ ಮೊನಚಾಯಿತು (ಬಟ್ಟಿಯಿಳಿಸಿದೆ) ಎನ್ನುವ ಹಾಗೆ ತೊಳಗುತ್ತಿರುವ ಕೋರೆಹಲ್ಲೂ ಅಲುಗಾಡುತ್ತಿರುವ ಕೆಂಗೂದಲೂ ದೊಡ್ಡ ದೇಹವೂ ಪ್ರಕಾಶಮಾನವಾಗಿರಲು ಯಾರಿಗಾದರೂ ಭಯವನ್ನುಂಟುಮಾಡು ವಂತಿರುವ ಘಟೋತ್ಕಚನೆಂಬ ಮಗನು ಹುಟ್ಟಿದನು. ವ|| ದೈವಸಂಕಲ್ಪದಿಂದ ರಾಕ್ಷಸರಿಗೆ ಕೂಡಲೇ ಗರ್ಭವನ್ನು ಧರಿಸುವುದೂ ಕೂಡಲೇ ಹತ್ತು ಕೂಡಲೇ ಯೌವನಪ್ರಾಪ್ತಿಯೂ ಉಂಟಾಗುವುದರಿಂದ ಆಗಲೇ ಹದಿನಾರುವರ್ಷದ ಬಾಲಕನಾಗಿರಲು ಪಾಂಡವರು ಅಲ್ಲಿ ಮೂರುವರ್ಷಕಾಲವಿದ್ದು ವೇದವ್ಯಾಸರ ಉಪದೇಶಪ್ರಕಾರ ಏಕಚಕ್ರಪುರಕ್ಕೆ ಹೋಗುವ ಕಾರ್ಯವನ್ನು ಆಲೋಚಿಸಿದರು.