________________
ದ್ವಿತೀಯಾಶ್ವಾಸಂ | ೧೩೭ ಶಂತನುಗೆ ತೋಚಿದೊಡಾತನುಮಾ ಶಿಶುದ್ವಯಮಂ ನಿಜ ಗಜಪುರಕ್ಕುಯು ಕೃಪೆಯಿಂ ನಡಪಿದನಪ್ಪುದಂ ಕೃಪನುಂ ಕೃಪಯುಮೆಂದು ಹೆಸರನಿಟ್ಟು ನಡಪುತ್ತಿರ್ಪನ್ನೆಗಮವರಯ್ಯಂ ಶರದ್ವತನಲ್ಲಿಗೆ ಬಂದು ಕಿಳಿಯಾತಂಗೆ ಚೌಲೋಪನಯನಾದಿ ಕ್ರಿಯೆಗಳಂ ಮಾಡಿ ಧನುರ್ವಿದ್ಯೋಪದೇಶಂಗೆಯ್ಯ ಸರ್ವವಿದ್ಯಾವಿಶಾರದನಾದನಾ ಕೃಪಾಚಾರ್ಯರ ಪಕ್ಕದೊಳ್ ಕೂಸುಗಳಂ ವಿದ್ಯಾಭ್ಯಾಸಂಗಯ್ಯಚಂ || ಬರೆಯದೆ ಬಂದ ಸುದ್ದಗೆಯ ಸೂತ್ರಮನೊಂದೆ ಮುಹೂರ್ತಮಾತ್ರದಿಂ
ಬರಿಸಿದುದುಂತು ಸೂತ್ರಿಸಿದ ಸೂತ್ರದ ವೃತ್ತಿ ನಿಜಾತವೃತ್ತಿವೋಲ್ | ಪರಿಣಮಿಸಿತ್ತು ಮತ್ತುಟಿದ ವಿದ್ಯೆಗಳೊಜರೆ ಚಟ್ಟರೆಂಬಿನಂ
ನೆರೆದುವು ತನ್ನೊಳಾರ್ ಗಳ ಗುಣಾರ್ಣವನಂತು ಕುಶಾಗ್ರಬುದ್ಧಿಗಳ್ || ೩೪
ವ|| ಅಂತು ಪಂಚಾಂಗ ವ್ಯಾಕರಣದ ವೃತ್ತಿಭೇದಮಪ್ಪ ಛಂದೋವೃತ್ತಿಯೊಳಂ ಶಬ್ದಾಲಂಕಾರ ನಿಷ್ಕ್ರಿತಮಪ್ಪಲಂಕಾರದೊಳಂ ವ್ಯಾಸ ವಾಲ್ಮೀಕಿ ಕಶ್ಯಪಪ್ರಕೃತಿ ವಿರಚಿತಂಗಳಪ್ಪ ಮಹಾಕಾವಂಗಳೊಳಂ ನಾಂದೀಪರೋಚನಾಪ್ರಸ್ತಾವನೇತಿವೃತ್ತ ಸಂಧಿ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಷ್ಟ ನಾಟಕಂಗಳೊಳಂ ಪದಿನೆಂಟು ಧರ್ಮಶಾಸ್ತ್ರಂಗಳೊಳಂ ನಾಲ್ಕು ವೇದದೂಳಮಾಳಿಂಗದೊಳಮಯ್ಯು ತಂದ ಮಂತ್ರಂಗಳೊಳಮಾಜುಲ ದರ್ಶನದೂಳಂ ಪ್ರತ್ಯಕ್ಷಾನುಮಾನ ಪ್ರಮಾಣಂಗಳೊಳಂ ಭರತಪ್ರಣೀತ ನೃತ್ಯಶಾಸ್ತದೊಳಂ ನಾರದಾದಿ ಪ್ರಣೀತ
ಶಂತನುವಿಗೆ ತೋರಿಸಿದರು. ಅವನು ಆ ಎರಡು ಮಕ್ಕಳನ್ನೂ ತನ್ನ ಹಸ್ತಿನಾಪುರಕ್ಕೆ (ಕರೆದು ಕೊಂಡುಹೋಗಿ ಕೃಪೆಯಿಂದ ಕೃಪೆ ಮತ್ತು ಕೃಪ ಎಂದು ಹೆಸರಿಟ್ಟು ಸಾಕಿದನು. ಅವರ ತಂದೆಯಾದ ಶರದ್ವತನು ಅಲ್ಲಿಗೆ ಬಂದು ಚಿಕ್ಕವನಿಗೆ ಚೌಳೋಪನಯನವೇ ಮೊದಲಾದ ಕರ್ಮಗಳನ್ನೂ ಮಾಡಿ ಬಿಲ್ಲಿನ ವಿದ್ಯೆಯನ್ನೂ ಹೇಳಿಕೊಡಲು ಅವನು ಸರ್ವವಿದ್ಯಾವಿಶಾರದನಾದನು. ಭೀಷ್ಮನು ಆ ಕೃಪಾಚಾರ್ಯರ ಬಳಿ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಿದನು. ೩೪. ಗುಣಾರ್ಣವನ ಹಾಗೆ (ಅರ್ಜುನ-ಅರಿಕೇಸರಿ) ಕುಶಾಗ್ರಬುದ್ದಿಗಳಾಗಿರುವವರು ಯಾರಿದ್ದಾರೆ? ಏಕೆಂದರೆ 'ಶುದ್ದವರ್ಣಮಾಲೆಯ ಸೂತ್ರವನ್ನೂ ಅಭ್ಯಾಸಮಾಡದೆಯೇ ಕ್ಷಣಮಾತ್ರದಲ್ಲಿ ಅಕ್ಷರಗಳನ್ನೂ ಕಲಿತನು. ಹಾಗೆಯೇ ಸೂತ್ರರೂಪದಲ್ಲಿ ಹೇಳಿದವುಗಳು ಅರ್ಥವಿವರಣೆಯಿಲ್ಲದೆಯೇ ತನ್ನ ಸಹಜ ಸ್ವಭಾವದಿಂದಲೇ ಅವನಿಗೆ ಅಧೀನವಾದುವು. ಉಳಿದ ಅನೇಕ ವಿದ್ಯೆಗಳು ಉಪಾಧ್ಯಾಯರ ಶಿಷ್ಯರಾದಂತೆ ಅವನಲ್ಲಿ ಸೇರಿಕೊಂಡವು. ವll ಹಾಗೆ ಅಯ್ತು ಅಂಗಗಳಿಂದ ಕೂಡಿದ ವ್ಯಾಕರಣಶಾಸ್ತ್ರ ಮತ್ತು ವೃತ್ತಿಭೇದದಿಂದ ಕೂಡಿದ ಛಂದಶ್ಯಾಸ್ತ್ರಗಳಲ್ಲಿಯೂ ಶಬ್ದಾಲಂಕಾರದಿಂದ ಕೂಡಿದ ಅಲಂಕಾರಶಾಸ್ತ್ರದಲ್ಲಿಯೂ ವ್ಯಾಸ ವಾಲ್ಮೀಕಿ ಕಶ್ಯಪ ಮೊದಲಾದವರಿಂದ ರಚಿತವಾದ ಮಹಾಕಾವ್ಯಗಳಲ್ಲಿಯೂ ನಾಂದಿ, ಪ್ರರೋಚನ, ಪ್ರಸ್ಥಾವನ, ಇತಿವೃತ್ತ, ಸಂಧಿಪ್ರವೇಶ, ನಿಷ್ಕಂಭ, ಕಪೋತಿಕಾ, ವ್ಯಾಳಿಕಾ ಮೊದಲಾದ ಲಕ್ಷಣಗಳಿಂದ ಕೂಡಿದ ನಾಟಕಶಾಸ್ತ್ರದಲ್ಲಿಯೂ ಹದಿನೆಂಟು ಧರ್ಮಶಾಸ್ತ್ರಗಳಲ್ಲಿಯೂ ನಾಲ್ಕು ವೇದಗಳಲ್ಲಿಯೂ ಆರು ಅಂಗಗಳಲ್ಲಿಯೂ ಅಯ್ತು ರೀತಿಯ ಮಂತ್ರಗಳಲ್ಲಿಯೂ ಆರು ದರ್ಶನಗಳಲ್ಲಿಯೂ ಭರತಪ್ರಣೀತವಾದ ನಾಟ್ಯ