________________
೧೩೬ | ಪಂಪಭಾರತಂ
ವ|| ಅಂತುವುದುಂ ಗಂಗಾದೇವಿಯ ವರಪ್ರಸಾದದೂಳ್ ವಿಷಮ ವಿಷಧರಂಗಳ್ ಪರಿಯ ಕೊರಳೊಳ್ ತೊಡರ್ದ ಶಿಲೆಯಂ ಪಟಿದೀಡಾಡಿ ಗಂಗೆಯ ನೀರಂ ತೋಳೊಳ್ ತುಳುಂಕಿ ಮಗುಟ್ಟು ಬಂದಂಗೆ ವಿಷದ ಲಡ್ಡುಗೆಯನಿಕ್ಕಿಯುಮನಿತಾನುಮುಪದ್ರವಂಗಳೊಳ ತೊಡರಿಕ್ಕಿಯುಂ ಗೆಲಲಾಟದ ಮನಮಿಕ್ಕಿಯುಮೆರ್ದೆಯಿಕ್ಕಿಯುಮಿರ್ದರಂತಯ್ಯರ್ ಕೂಸುಗಳಂ ಗಾಂಗೇಯಂ ಚಲೋಪನಯನಾದಿ ಕ್ರಿಯೆಗಳು ಮಾಡಿ ಸುಖಮಿರ್ಷನ್ನೆಗಮಿತ್ತ ಗ ಮಾಯಾಪುರವೆಂಬ ಋಷ್ಯಾಶ್ರಮದೊಳ್ ಗೌತಮನೆಂಬಂ ಬ್ರಹ್ಮಋಷಿ ತಪಂ ಗೆಯ್ಯುತಿರ್ಪಿನಮಾ ಋಷಿಗೆ ಬಿಲ್ಲುಮಂಬುಂವೆರಸೊರ್ವ ಮಗಂ ಪುಟ್ಟಿದನಾತಂಗೆ ಶರದ್ವತನೆಂದು ಹೆಸರನಿಟ್ಟು ನಡಪ ಬಳೆದು ತಪಂಗೆಯ್ದಾತನಲ್ಲಿಗೆ ಜಲಕ್ರೀಡಾ ನಿಮಿತ್ತದಿಂದಿಂದ್ರನಚರಸೆ ಜಲಚರೆಯೆಂಬವಳ ಬಂದೂಡಾಕೆಯಂ ಕಂಡು ಕಾಮಾಸಕ್ತಚಿತ್ತನಾಗಿ ಕೂಡಿಕಂ | ಒಗೆದ ಶರಸ್ತಂಬದೊಳಿ
ರ್ಬಗಿಯಾಗಿ ಮನೋಜ ರಾಗರಸಮುರುತರೆ ತೋ | . ಟೈಗೆ ಬಿಸುಟು ಬಿಲ್ಲನಂಬುವ ನಗಲ್ಯನಾಶ್ರಮದಿನುದಿತ ಲಜ್ಞಾವಶದಿಂ 11
ವಅನ್ನೆಗಮಾ ತಪೋವನಕ್ಕೆ ಬೇಂಟೆಯಾಡಲ್ಕಂದ ಶಂತನುವಿನೊಡನೆಯವರಾ ಶರಸ್ತಂಬದೂ ಪರಿಕಲಿಸಿರ್ದ ಮುನೀಂದ್ರನಿಂದ್ರಿಯದೂಳೊಗದ ಪಣಸುಮಂ ಗಂಡುಗೂಸುಮನವಜ ಕೆಲದೊಳಿರ್ದ ದಿವ್ಯ ಶರಾಸನ ಶರಂಗಳುಮಂ ಕಂಡು ಕೊಂಡುವೋಗಿ
ಮುಳುಗಿಸಿದರು. ವ|| ಹಾಗೆ ಮುಳುಗಿಸಿದರೂ ಗಂಗಾದೇವಿಯ ವರಪ್ರಸಾದದಿಂದ ವಿಷಯುಕ್ತವಾದ ಹಾವುಗಳು ಹರಿದುಹೋದವು. ಕೊರಳಿನಲ್ಲಿ ಕಟ್ಟಿದ್ದ ಕಲ್ಲನ್ನು ಕಿತ್ತು ಬಿಸಾಡಿ ಗಂಗೆಯ ನೀರನ್ನು ತೋಳಿನಿಂದ ಕಲಕಿ ತಳ್ಳಿ ಪುನಃ ಹಿಂತಿರುಗಿದವನಿಗೆ ವಿಷದ ಲಾಡುಗಳನ್ನು ತಿನ್ನಿಸಿಯೂ ಇನ್ನೂ ಅನೇಕ ವಿಧವಾದ ಕಷ್ಟಗಳಲ್ಲಿ ಸಿಕ್ಕಿಸಿಯೂ ಗೆಲ್ಲಲಾರದೆ ಉತ್ಸಾಹಶೂನ್ಯರಾಗಿಯೂ ಧೈರ್ಯಕುಗ್ಗಿದವರಾಗಿಯೂ ಇದ್ದರು. (ಈ ಕಡೆ) ಭೀಷ್ಮನು ಅಯ್ದು ಜನ ಮಕ್ಕಳಿಗೂ ಲೋಪನಯನಾದಿ ಕರ್ಮಗಳನ್ನು ಮಾಡಿ ಸುಖವಾಗಿದ್ದನು. (ಈ ಕಡೆ) ಗಂಗಾದ್ವಾರದಲ್ಲಿ ಮಾಯಾಪುರವೆಂಬ ಋಷ್ಯಾಶ್ರಮದಲ್ಲಿ ಗೌತಮನೆಂಬ ಬ್ರಹ್ಮಋಷಿಯು ತಪಸ್ಸು ಮಾಡುತ್ತಿರಲು ಆ ಋಷಿಗೆ ಬಿಲ್ಲುಬಾಣಗಳಿಂದ ಕೂಡಿದ ಒಬ್ಬ ಮಗನು ಹುಟ್ಟಿದನು. ಅವನಿಗೆ ಶರದ್ವತನೆಂದು ಹೆಸರನ್ನಿಟ್ಟು ಸಲಹಿದನು. ಅಭಿವೃದ್ದಿಯಾದ (ಬೆಳೆದ) ಆ ಋಷಿಯ ಬಳಿಗೆ ಜಲಕ್ರೀಡೆಯ ನೆಪದಿಂದ ಇಂದ್ರನ ಅಪ್ಪರಸ್ತೀಯಾದ ಜಲಚರೆಯೆಂಬುವಳು ಬರಲು (ಆ ಋಷಿಯು) ಆಕೆಯನ್ನು ನೋಡಿ ಕಾಮಾಸಕ್ತನಾಗಿ ಅವಳೊಡನೆ ಕೂಡಿ -೩೩. ಆ ಜೊಂಡುಹುಲ್ಲಿನಲ್ಲಿ ಚೆಲ್ಲಿದ ರೇತಸ್ಸು ಎರಡು ಭಾಗವಾಗಿ ಸುರಿಯಲು ಆ ಶರದ್ವತನು ತನಗೊದಗಿದ ನಾಚಿಕೆಯಿಂದ ಬಿಲ್ಲುಬಾಣಗಳನ್ನು ಕೂಡಲೆ ಬಿಸಾಡಿ ಋಷ್ಯಾಶ್ರಮವನ್ನು ಬಿಟ್ಟು ಹೋದನು. ವ|| ಅಷ್ಟರಲ್ಲಿ ಆ ತಪೋವನಕ್ಕೆ ಬೇಟೆಯಾಡುವುದಕ್ಕಾಗಿ ಬಂದಿದ್ದ. ಶಂತನುವಿನೊಡನಿದ್ದವರು ಆ ಜೊಂಡುಹುಲ್ಲಿನಲ್ಲಿ ಚೆಲ್ಲಿದ್ದ ಋಷಿಶ್ರೇಷ್ಠನ ವೀರ್ಯದಿಂದ (ರೇತಸ್ಸಿನಿಂದ) ಹುಟ್ಟಿದ ಹೆಣ್ಣು ಕೂಸನ್ನೂ ಗಂಡುಕೂಸನ್ನೂ ಅವುಗಳ ಪಕ್ಕದಲ್ಲಿ ಬಿಲ್ಲುಬಾಣಗಳನ್ನೂ ನೋಡಿ ಅವುಗಳನ್ನು ತೆಗೆದುಕೊಂಡು ಹೋಗಿ