________________
೧೩೦) ಪಂಪಭಾರತಂ
ವll ತಾಪಸಾಶ್ರಮದಿಂ ಪೊಣಮಟ್ಟಂತೆ ಬನಮಂ ತೋಲ ಪಾಂಡುರಾಜಂ ಕಂಡು
ಚಂ 11 ಸೊಗಯಿಸ ತೊಟ್ಟ ಪೂರುಡುಗೆ ಮಲ್ಲರ್ದೆಯೊಳ್ ತಡಮಾಡ ಗಾಡಿ ದಿ
ಟ್ರಗಳೊಳನಂಗರಾಗರಸಮುಣುವಿನ ನಡ ನೋಡಿ ನೋಡಿ || ಟೈಗೆ ಕೊಳೆ ಮೇಲೆ ಪಾಯ್ಕವಳನಪ್ಪಿದನಾ ವಿಭು ತನ್ನ ಶಾಪಮಂ ಬಗೆಯದೆ ಮಲ್ತುದೇವತೆಯನಡ್ಕಅಳುರ್ಕಯಿನಪ್ಪುವಂತವೋಲ್ 11 ೧೮
ವ!| ಅಂತಪ್ಪುವುದುಂ ವಿಷಮ ವಿಷವಲ್ಲಿಯನಪ್ಪಿದಂತೆ ತನ್ನ ನಲ್ಗಳ ಮೃದು ಮೃಣಾಳ ಕೋಮಳ ಬಾಹುಪಾಶಂಗಳೆ ಯಮಪಾಶಂಗಳಾಗ
ಚಂ| ಬಿಗಿದಮರ್ದಿದ್ರ ತೋಳ ಸಡಿಲೆ ಜೋಲೆ ಮೊಗಂ ಮೊಗದಿಂದಮೊಯ್ಯಗೂ
ಯ್ಯಗೆ ನಗೆಗಣ್ಣಳಾಲಿ ಮಗುಪ್ತಂತಿರೆ ಮುಚ್ಚಿರೆ ಸುಯ್ಯಡಂಗೆ ಮ | ಲ್ಯಗೆ ಮಜಹೊಂದಿದಂದದೊಳೆ ಜೋಲ್ಲ ನಿಜೇಶನನಾ ಲತಾಂಗಿ ತೂ ಟಗೆ ಕೂಳೆ ನೋಡಿ ಕೆಡೆನಿನಿಯಂ ಮಲಹೋಂದಿದನೋ ಬಬಲನೋ || ೧೯
ವ|| ಎಂದು ಪಳಪಟ್ಟ ಸುಯುಮಂ ಕೋಡುವ ಮಯುಮಂ ಕಂಡು ಪರಲೋಕ ಪ್ರಾಪ್ತನಾದುದನಚಿತು
ಮುತ್ತಿಕೊಳ್ಳುತ್ತಿರುವ ದುಂಬಿಯನ್ನು ಕಯ್ಯಲ್ಲಿ ಹಿಡಿದಿದ್ದ ನೆಯ್ದಿಲಪುಷ್ಪದಿಂದ ಮೆಲ್ಲಗೆ ಓಡಿಸುತ್ತ ಬೆಡಂಗಿನಿಂದ ಕೂಡಿ ಸೊಕ್ಕಿದ ಮನ್ಮಥನ ಮದ್ದಾನೆಯಂತೆ ಬರುತ್ತಿದ್ದ 'ಮಾದ್ರಿಯನ್ನು ವ ತಾಪಸಾಶ್ರಮದಿಂದ ಹೊರಗೆಹೊರಟು ಹಾಗೆಯೇ ಕಾಡಿನಲ್ಲಿ ಅಡ್ಡಾಡುತ್ತಿದ್ದ ಪಾಂಡುರಾಜನು ನೋಡಿ ೧೮, ಅವಳು ಧರಿಸಿದ ಪುಷ್ಪಾಲಂಕಾರವು ತನ್ನ ಮೃದುವಾದ ಹೃದಯದಲ್ಲಿ ಸೊಗಯಿಸಲು ಅವಳ ಸೌಂದರ್ಯವು ಅವನ ದೃಷ್ಟಿಯಲ್ಲಿ ಕಾಮರಸವುಕ್ಕುವಷ್ಟು ನಿಧಾನವಾಗಿ ಆಡುತ್ತಿರಲು ಅವಳನ್ನು ತೃಪ್ತಿಯಾಗುವಷ್ಟು ನೋಡಿ ಥಟಕ್ಕನೆ ಹಿಡಿಯಲು ಮೇಲೆ ನುಗ್ಗಿ ಅವಳನ್ನು ರಾಜನಾದ ಪಾಂಡುವು ತನಗಿದ್ದ, ಶಾಪವನ್ನು ಯೋಚಿಸದೆ ಪ್ರೀತ್ಯಾತಿಶಯದಿಂದ ಮೃತ್ಯುದೇವತೆಯನ್ನಪ್ಪುವಂತೆ ಆಲಿಂಗನ ಮಾಡಿಕೊಂಡನು. ವ!! ಹಾಗೆ ವಿಷದ ಬಳ್ಳಿಯನ್ನು ಆಲಿಂಗನ ಮಾಡುವಂತೆ ಅವಳನ್ನು ಅಪ್ಪಿಕೊಳ್ಳಲು ಆ ಪ್ರಿಯಳು ಆಲಿಂಗಿಸಿದ ತಾವರೆಯದಂಟಿನಂತೆ ಮೃದುವೂ ಕೋಮಳವೂ ಆದ ಅವಳ ಬಾಹುಪಾಶವೇ ಯಮಪಾಶವಾಗಲು-೧೯. ಬಿಗಿಯಾಗಿ ಅಪ್ಪಿಕೊಂಡಿದ್ದ ತೋಳು ಸಡಿಲವಾಗಲು ಮುಖವು ಜೋತುಬೀಳಲು ಮುಖದಲ್ಲಿದ್ದ ನಗೆಗಳ ಪಾಪೆಗಳು ಕಾಂತಿಹೀನವಾಗಿ ಮುಚ್ಚಿರಲು ಉಸಿರಾಟವು ನಿಂತುಹೋಗಲು ನಿಧಾನವಾಗಿ ಪ್ರಜ್ಞೆತಪ್ಪಿದವನಂತೆ ಜೋತು ಬಿದ್ದ ತನ್ನ ಪತಿಯನ್ನು ಆ ಮಾದ್ರಿಯು ದಿಟ್ಟಿಸಿನೋಡಿ, ಕೆಟ್ಟೆನು; ಪತಿಯು ಮೂರ್ಛಹೋದನೋ ಇಲ್ಲವೇ ಬಳಲಿದ್ದಾನೋ ವll ಎಂದು (ಹರಿದುಹೋದ) ನಿಂತುಹೋದ ಉಸಿರನ್ನೂ ತಣ್ಣಗಾದ ಮೆಯ್ಯನ್ನೂ ನೋಡಿ ಪತಿ