________________
ದ್ವಿತೀಯಾಶ್ವಾಸಂ | ೧೨೯ ಉ II ಪೋಗದೆ ಪಾಡುತಿರ್ಪಳಿಯ ಬೃಂಹಿತಮಾಗಿರೆ ಚಂದ್ರಕಾಂತಿ ಕಾ
ಯಾಗಿರೆ ಬೀಸುವೊಂದಲಕ್ಕೆ ಬೀಸುವುದಾಗಿರೆ ಕಾಯ್ದಳಿಂದಮಿಂ | ಬಾಗಿರೆ ಸೋರ್ವ ಸೋನೆ ಮದಮಾಗಿರೆ ಮಾವಿನ ಬಂದ ಕೋಡೆ ಕೋ
ಡಾಗಿರೆ ಕೊಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ || ೧೫ - ವ|| ಅಂತು ಬಂದ ಬಸಂತದೊಳ್ ಮಾದ್ರಿ ತಾಂ ಗರ್ವವ್ಯಾಲೆಯುಂ ಕ್ರೀಡಾನುಶೀಲೆಯು ಮಪ್ಪುದಂ ವನಕ್ರೀಡಾನಿಮಿತ್ತದಿಂ ಪೋಗಿಚಂ | ವನಕುಸುಮಂಗಳಂ ಬಗೆಗೆವಂದುವನಟಿಯೊಳಾಯ್ತು ಕೊಯ್ದು ಮ
ಲನೆ ವಕುಳಾಳವಾಳ ತಳದೊಳ್ ಸುರಿದಂಬುಜಸೂತ್ರದಿಂದ ಮ | ತನಿತಳೊಳಂ ಮುಗುಳರಿಗೆ ತೋಳಳೆ ಕಂಕಣವಾರಮೆಂದು ಬೇ
ನಿತನೆ ಮಾಡಿ ತೊಟ್ಟು ಕರನೊಪ್ಪಿದಳಾಕೆ ಬಸಂತ ಕಾಂತೆವೋಲ್ || ೧೬ ವ|| ಅಂತು ತೊಟ್ಟ ಪೊದುಡುಗೆ ಮದನನ ತೊಟ್ಟ ಪೂಗಣೆಗೆಣೆಯಾಗಿರೆಚಂ | ಮಿಳಿರ್ವ ಕುರುಳಳೊಳ್ ತೊಡರ್ದು ದೇಸಿಯನಾವಗಮಿಾವ ಚೆನ್ನ ಪೂ
ಗಳನವನೊಯ್ಯನೋಸರಿಸುತುಂ ವದನಾಬ್ಬದ ಕಂಪನಾಳ್ಳುಣಲ್ | ಬಳಸುವ ತುಂಬಿಯಂ ಪಿಡಿದ ನೆಯ್ದಿಲೊಳೊಯ್ಯನೆ ಸೋವುತುಂ ಬೆಡಂ ಗೊಳಕೊಳೆ ಸೊರ್ಕಿದಂಗಜ ಮತಂಗಜದಂತಿರೆ ಬರ್ಪ ಮಾದ್ರಿಯಂ (೧೭
ಪ್ರಕಾಶಿಸಲು ಆ ತೋಟದ ಸಾಲುಗಳು ಕಣ್ಣಿಗೆ ಮನೋಹರವಾಗಿದ್ದುವು. ೧೫. ಆ ವನವನ್ನು ಬಿಟ್ಟು ಹೋಗದೆ ಅಲ್ಲಿಯೇ ಹಾರಾಡುತ್ತಿರುವ ದುಂಬಿಯೇ ಆನೆಯ ಫೀಂಕಾರವಾಗಿರಲು, ಬೆಳದಿಂಗಳೇ ಅದರ ಕೋಪವಾಗಿರಲು, ಬೀಸುವ ಗಾಳಿಯೇ ಬೀಸಣಿಗೆಯಾಗಿರಲು, ಕಾಯಿಗಳಿಂದ ಸೊಗಸಾಗಿ ಸೋರುತ್ತಿರುವ ಸೋನೆಯೇ ಮದೋದಕವಾಗಿರಲು ಮಾವಿನ ಮರದಲ್ಲಿ ಹುಟ್ಟಿಬಂದ ಕೊಂಬೆಗಳೇ ಅದರ ಕೊಂಬಾಗಿರಲು ವಸಂತಕಾಲವೆಂಬ ಆನೆಯು ವಿರಹಿಗಳನ್ನು ತನ್ನ ಕೋಡಿನಿಂದ ತಿವಿದು ಹರಿಯಿತು, ಓಡಿತು. ವರ ಹಾಗೆ ಬಂದ ವಸಂತಋತುವಿನಲ್ಲಿ ಮಾದ್ರಿಯು ತಾನು ಅಹಂಕಾರದಿಂದ ಕೆಟ್ಟವಳೂ ಆಟವಾಡುವುದರಲ್ಲಿ ಆಸಕ್ತಳಾದವಳೂ ಆಗಿದ್ದುದರಿಂದ ಕಾಡಿನಲ್ಲಿ ಆಟವಾಡುವುದಕ್ಕಾಗಿ ಹೋಗಿ ೧೬. ತನ್ನ ಮನಸ್ಸಿಗೆ ಒಪ್ಪುವಂತಹ ಕಾಡಿನ ಹೂವುಗಳನ್ನು ಪ್ರೀತಿಯಿಂದ ಆರಿಸಿ ಕೊಯ್ದು ಮೃದುವಾಗಿ ಬಕುಳವೃಕ್ಷದ ಪಾತಿಯಪ್ರದೇಶದಲ್ಲಿ ಸುರಿದು ತಾವರೆಯ ಸೂತ್ರದಿಂದಲೂ ಮತ್ತಿತರ ಹೂಗಳಿಂದಲೂ ರಚಿಸಿದ ಮೊಗ್ಗಿನ ಸರಿಗೆ, ತೋಳಬಳೆ, ಕೈಬಳೆ, ಹಾರ ಮೊದಲಾದವುಗಳನ್ನು ತೃಪ್ತಿಯಾಗುವಷ್ಟು ಧರಿಸಿ ಅಲಂಕಾರಮಾಡಿಕೊಂಡು ಮಾದ್ರಿಯು ವಸಂತಲಕ್ಷಿಯಂತೆ ವಿಶೇಷವಾಗಿ ಒಪ್ಪಿದಳು. ವ|| ಹಾಗೆ ಧರಿಸಿದ ಪುಷ್ಪಾಭರಣವೇ ಮನ್ಮಥನು ಪ್ರಯೋಗಿಸಿದ ಪುಷ್ಪಬಾಣಕ್ಕೆ ಸಮಾನವಾಗಿರಲು ೧೭. ಅಲುಗಾಡುತ್ತಿರುವ ಮುಂಗುರುಳುಗಳಲ್ಲಿ ಸಿಕ್ಕಿಕೊಂಡು ವಿಶೇಷ ಸೌಂದರ್ಯವನ್ನುಂಟುಮಾಡುತ್ತಿರುವ ಸೊಗಸಾದ ಹೂವುಗಳನ್ನು ನಿಧಾನವಾಗಿ ಒಂದು ಪಕ್ಕಕ್ಕೆ ಓಸರಿಸುತ್ತ ಮುಖಕಮಲದ ಸುಗಂಧವನ್ನು ಪಡೆದು ಆಸ್ವಾದಿಸುವುದಕ್ಕೋಸ್ಕರ