________________
೧೧೬ / ಪಂಪಭಾರತಂ
ಮ||
ಸುಲಿಪಲ್ ಮಿಂಚಿನ ಗೊಂಚಲುಟ್ಟ ದುಗುಲಂ ಗಂಗಾನದೀ ಫೇನಮು ಜ್ವಲ ಮುಕ್ತಾಭರಣಂ ತರತ್ತರಳ ತಾರೋದಾರ ಭಾ ಭಾರಮಂ | ಗಲತಾ ಲಾಲಿತ ಸಾಂದ್ರ ಚಂದನರಸಂ ಬೆಲ್ಲಿಂಗಳೆಂಬೊಂದು ಪಂ ಬಲ ಬಂಬಲೆಡೆಯಾಗಿ ಬೆಳಸದನಂ ಕಪ್ಪಿತಾ ಕಾಂತೆಯಾ || 022
ವ| ಅಂತು ತನ್ನ ಕೈಕೊಂಡ ಬೆಳಸದನದೊಳ್ ಕೀರ್ತಿಯಂ ವಾಯುಮನನು ಕರಿಸಿ ಮಂತ್ರಾಕ್ಷರ ನಿಯಮದೊಳಿಂದ್ರನಂ ಬರಿಸಿ
ಕಂ | ನೆನದ ಮನಂ ಪಳಗುತಿದ
ತನೆ ಬೆಳಗುವ ರತ್ನದೀಪ್ತಿ ಸುರಧನು ನೆಗೆದ | ತನ ನೆಯ್ದಿಲೊಳನಲರ್ದ
ತೆನೆ ಕಣ್ಣಳ ಬಳಗಮಾಗಳಿಂದಂ ಬಂದಂ ||
ಬೆಸನೇನೇಗೆಯ್ದುದೊ ನಿನ
ಗೊಸದೇನಂ ಕುಡುವುದೆಂದೊಡೆಂದಳ್ ಮಕ್ಕಳ್ || ಒಸಗೆಯನನಗೀವುದು ನಿ
ನೆಸಕದ ಮಸಕಮನ ಪೋಲ್ಟ ಮಗನಂ ಮಘವಾ ||
020
OLE
ವ|| ಎಂಬುದುಮಾಕೆಯ ಬಗೆದ ಬಗೆಯೊಳೊಡಂಬಡುವಂತೆ ಕುಲಗಿರಿಗಳ ಬಿಣ್ಣುಮಂ ಧರಾತಳದ ತಿಣ್ಣುಮನಾದಿತ್ಯನ ತೇಜದಗುಂತಿಯುಮಂ ಚಂದ್ರನ ಕಾಂತಿಯುಮಂ ಮದನನ
ವ್ರತವನ್ನು ಪಾಲಿಸಿದಳು. ೧೩೭. ಅವಳ ಶುಭ್ರವಾದ ಹಲ್ಲೇ ಮಿಂಚಿನ ಗೊಂಚಲು, ಧರಿಸಿರುವ ರೇಷ್ಮೆಯ ವಸ್ತ್ರವೇ ಗಂಗಾನದಿಯ ಬಿಳಿಯ ನೊರೆ, ಚಂಚಲವಾಗಿ ಅಲುಗಾಡುತ್ತಿರುವ ಮುತ್ತಿನ ಹಾರದ ಕಾಂತಿಪ್ರಸರವೂ ಅಂಗಕ್ಕೆ ಲೇಪಿಸಿಕೊಂಡಿರುವ ಗಟ್ಟಿಯಾದ ಶ್ರೀಗಂಧದ ರಸವೂ ಬೆಳುದಿಂಗಳೆಂಬ ಸಂದೇಹಕ್ಕೆ ಅವಕಾಶವಾಗಿರಲು ಆ ಕುಂತೀದೇವಿಯ ಬಿಳಿಯ ಬಣ್ಣದ ಅಲಂಕಾರವು ಕಣ್ಣಿಗೆ ಮನೋಹರವಾಗಿದ್ದಿತು. ವ|| ಹಾಗೆ ತಾನು ಅಂಗೀಕರಿಸಿದ ಬಿಳಿಯ ಬಣ್ಣದ ಅಲಂಕಾರದಲ್ಲಿ ಯಶೋಲಕ್ಷ್ಮಿಯನ್ನೂ ವಾಕ್‌ಲಕ್ಷ್ಮಿಯಾದ ಸರಸ್ವತಿಯನ್ನೂ ಅನುಕರಿಸಿ ಮಂತ್ರಾಕ್ಷರಗಳನ್ನು ಸಕ್ರಮವಾಗಿ ಪಠಿಸಿ ಇಂದ್ರನನ್ನು ಬರಮಾಡಿದಳು. ೧೩೮. ಧ್ಯಾನಮಾಡಿದ ಮನಸ್ಸು ಹಿಂದೆ ಉಳಿಯಿತು ಎನ್ನುವ ಹಾಗೆಯೂ ಪ್ರಕಾಶಮಾನವಾದ ರತ್ನಕಾಂತಿಯು ಕಾಮನ ಬಿಲ್ಲಾಗಿ ನೆಗೆದು ತೋರಿತು ಎನ್ನುವ ಹಾಗೆಯೂ ಅವನ ಸಾವಿರ ಕಣ್ಣುಗಳ ಸಮೂಹವು ನೆಯ್ದಿಲೆಯ ಕೊಳವು ಅರಳಿತು ಎನ್ನುವ ಹಾಗೆಯೂ ಇರಲು ಆಗ ಇಂದ್ರನು ಬಂದನು. (ಅಂದರೆ ಇಂದ್ರನು ಕುಂತಿಯ ಮನೋವೇಗವನ್ನೂ ಮೀರಿ ರತ್ನಕಿರೀಟಗಳ ಕಾಂತಿಯಿಂದಲೂ ಅರಳಿಸಿಕೊಂಡಿರುವ ಸಾವಿರ ಕಣ್ಣುಗಳಿಂದಲೂ ಬಂದನೆಂಬುದು ಭಾವ), ೧೩೯. ಅಪ್ಪಣೆಯೇನು? ಏನು ಮಾಡಬೇಕು? ನಿನಗೆ ಪ್ರೀತಿಯಿಂದ ಏನನ್ನು ಕೊಡಲಿ? ಎಂದು ಇಂದ್ರನು ಕೇಳಲು ಕುಂತಿಯು ಹೇಳಿದಳು. ಇಂದ್ರದೇವಾ ಮಕ್ಕಳ ನಲಿವನ್ನೂ ನಿನ್ನ ಪರಾಕ್ರಮಕ್ಕೆ ತಕ್ಕ ಶೌರ್ಯವುಳ್ಳ ಮಗನನ್ನು ಕೊಡಬೇಕು ಎಂದಳು. ವ|| ಅವಳು ಆಶೆಪಟ್ಟಂತೆಯೇ ಒಪ್ಪಿಕೊಂಡು 'ಕುಲಪರ್ವತಗಳ ಭಾರವನ್ನೂ ಭೂಮಿಯ ತೂಕವನ್ನೂ ಸೂರ್ಯನ ತೇಜಸ್ಸಿನ