________________
ಪ್ರಥಮಾಶ್ವಾಸಂ / ೧೧೫ ವ|| ಅಂತು ಸರ್ವ ಲಕ್ಷಣ ಸಂಪೂರ್ಣನಪ್ಪ ಮಗನನಮೋಘ ಪಡವನೆಂಬುದ್ಯೋಗಮ ನೆತ್ತಿಕೊಂಡು ಪಾಂಡುರಾಜನುಂ ತಾನುಂ
ಚoll ಎಜಗಿಯುತೂರ್ಮ ದಿವ್ಯ ಮುನಿಗಾರ್ತುಪವಾಸಮನಿರ್ದುಮರ್ಮ ಕೂ
ಝಳಕೆಯ ಪೂಗಳಿಂ ಶಿವನನರ್ಚಿಸಿಯುಂ ಬಿಡದೂರ್ಮ ನೋಂತು || ದಳವರ ಪೇಟ್ಟಿ ನೋಂಪಿಗಳನೂರ್ಮ ಪಲರ್ಮಯುಮಿಂತು ತಮ್ಮ ಮ “ವಿನಮಿರ್ವರುಂ ನಮದರೇನವರ್ಗಾದುದೊ ಪುತ್ರದೋಹಳಂ || ೧೩೫
ಅಲಸದೆ ಮಾಡಿ ಬೇಸಜದ ಸಾಲುಮಿದೆನ್ನದೆ ಮಯೋಗಕ್ಕೆ ಪಂ | ಬಲಿಸದೆ ನಿದ್ದೆಗೆಟ್ಟು ನಿಡು ಜಾಗರದೊಳ್ ತೊಡರ್ದಕ ಪಾದದೂಳ್ | ಬಲಿದುಪವಾಸದೊಳ್ ನಮದು ನೋಂಪಿಗಳೂ ನಿಯಮ ಕ್ರಮಂಗಳಂ ಸರಿಸಿದರಂತು ನೋನದ ಗುಣಾರ್ಣವನಂ ಪಡೆಯಲೆ ತೀರ್ಗುಮ್ II೧೩೬
ವ! ಅಂತೂಂದು ವರ್ಷಂಬರಂ ಭರಂಗೆಯು ನೋಂತು ಪೂರ್ವಕ್ರಮದೊಳೊಂದು ದಿವಸಮುಪವಾಸಮನಿರ್ದಗಣ್ಯ ಪುಣ್ಯತೀರ್ಥಜಲಂಗಳಂ ಮಿಂದು ದಳಿಂಬಮನುಟ್ಟು ದರ್ಭಶಯನದೊಳಿರ್ದು
ಬಾಣಗಳನ್ನುಳ್ಳವನೂ ದೇವತೆಗಳಿಂದ ಕೊಡಲ್ಪಟ್ಟ ದಿವ್ಯಾಸ್ತಪ್ರಯೋಗದಲ್ಲಿ ಸಂಪೂರ್ಣ ನಿಪುಣ ನಾಗಿರುವವನೂ ರಾಜ್ಯಭಾರಮಾಡುವ ಶಕ್ತಿಯಲ್ಲಿ ಸ್ವಲ್ಪವೂ ಊನವಿಲ್ಲದವನೂ ವ|| ಹಾಗೆಯೇ ಸರ್ವಲಕ್ಷಣ ಸಂಪೂರ್ಣನೂ ಆದ ಮಗನನ್ನು ಬೆಲೆಯಿಲ್ಲದ ರೀತಿಯಲ್ಲಿ ಪಡೆಯಬೇಕೆಂಬ ಕಾರ್ಯದಲ್ಲಿ ತೊಡಗಿ ಪಾಂಡುರಾಜನೂ ತಾನೂ ೧೩೫: ಒಂದು ಸಲ ದಿವ್ಯಮುನಿಗಳಿಗೆ ನಮಸ್ಕಾರಮಾಡಿಯೂ ಮತ್ತೊಂದು ಸಲ ಉಪವಾಸವಿದ್ದೂ ಬೇರೊಂದು ಸಲ ಪ್ರಸಿದ್ಧವಾದ ಹೂವುಗಳನ್ನು ಕೊಯ್ದು ಶಿವನನ್ನು ಆರಾಧಿಸಿಯೂ ಇನ್ನೊಂದು ಸಲ ಶಾಸ್ತ್ರಜ್ಞರು ಹೇಳಿದ ವ್ರತಗಳನ್ನು ನಿರಂತರ ನಡೆಯಿಸಿಯೂ ಒಂದುಸಲವೂ ಅನೇಕಸಲವೂ ತಮ್ಮಶರೀರವು ಕೃಶವಾಗುವ ಹಾಗೆ: , ಇಬ್ಬರೂ ನಮೆದರು. ಅವರಿಗೆ ಮಕ್ಕಳನ್ನು ಪಡೆಯಬೇಕೆಂಬ ಆಶೆ ಅತ್ಯಧಿಕವಾಯಿತು. ೧೩೬, ಆಲಸ್ಯವಿಲ್ಲದೆ ವ್ರತ ಮಾಡಿ, ಬೇಸರಿಕೆಯಿಂದ ಇದು ಸಾಕು ಎನ್ನದೆ, ಶರೀರಸುಖಕ್ಕೆ ಹಂಬಲಿಸದೆ, ನಿದ್ದೆಗೆಟ್ಟು, ದೀರ್ಘವಾದ ಜಾಗರಣೆಗಳಲ್ಲಿ ಸೇರಿಕೊಂಡು, ಒಂದು ಕಾಲಿನಲ್ಲಿ ನಿಂತುಕೊಂಡು, ಉಪವಾಸದಿಂದ ಕೃಶರಾಗಿ ವ್ರತಗಳಲ್ಲಿ ನಿಯಮವನ್ನು ತಪ್ಪದೆ ಪಾಲಿಸಿದರು. ಹಾಗೆ ವ್ರತಮಾಡದೆ ಗುಣಸಮುದ್ರನಾದ ಅರ್ಜುನನನ್ನು (ಆ ಬಿರುದಿನಿಂದ ಕೂಡಿದ ಅರಿಕೇಸರಿಯನ್ನು) ಪಡೆಯಲು ಸಾಧ್ಯವೇ? ವ!! ಹಾಗೆ ಒಂದು ವರ್ಷದವರೆಗೆ ಶ್ರದ್ದೆಯಿಂದ ವ್ರತಮಾಡಿ ಹಿಂದಿನ ರೀತಿಯಲ್ಲಿಯೇ ಒಂದು ದಿವಸ ಉಪವಾಸವಿದ್ದು ಲೆಕ್ಕವಿಲ್ಲದಷ್ಟು ಪುಣ್ಯತೀರ್ಥಗಳಲ್ಲಿ ಸ್ನಾನಮಾಡಿ ಭೌತವಸ್ತವನ್ನುಟ್ಟು ದರ್ಭದ ಹಾಸಿಗೆಯ ಮೇಲಿದ್ದು