________________
ಉಪೋದ್ಘಾತ | ೭ ಒಂದು ಧಾರ್ಮಿಕ ಗ್ರಂಥ. ಪ್ರಥಮತೀರ್ಥಂಕರನಾದ ಪುರುದೇವನ ಕಥೆ. ಇದರಲ್ಲಿ ಧರ್ಮದ ಜೊತೆಗೆ ಕಾವ್ಯಧರ್ಮವನ್ನೂ ನಿರೂಪಿಸುತ್ತೇನೆಂದು ಪಂಪನೇ ಹೇಳುತ್ತಾನೆ. ಧರ್ಮಗ್ರಂಥವಾದ ಇದರಲ್ಲಿ ಪುರಾಣದ ಅಷ್ಟಾಂಗಗಳಾದ ಲೋಕಾಕಾರಕಥನ, ನಗರ ಸಂಪತ್ಪರಿವರ್ಣನ, ಚತುರ್ಗತಿಸ್ವರೂಪ, ತಪೋಧ್ಯಾನವ್ಯಾವರ್ಣನ ಮೊದಲಾದುವುಗಳನ್ನು ಒಂದೂ ಬಿಡದೆ ಶಾಸ್ತ್ರೀಯವಾದ ರೀತಿಯಲ್ಲಿ ವರ್ಣಿಸಬೇಕು. ಅಲ್ಲದೆ ಪಂಪನ ಆದಿಪುರಾಣಕ್ಕೆ ಮೂಲ, ಜಿನಸೇನಾಚಾರ್ಯರ ಸಂಸ್ಕೃತ ಪೂರ್ವಪುರಾಣ. ಆ ವಿಸ್ತಾರವಾದ ಪುರಾಣವನ್ನು ಅದರ ಮೂಲರೇಖೆ, ಉದ್ದೇಶ, ಸ್ವರೂಪ-ಯಾವುದೂ ಕೆಡದಂತೆ ಸಂಗ್ರಹಿಸುವುದು ಮಾತ್ರ ಅವನ ಕಾರ್ಯ. ಆದುದರಿಂದ ಈ ಗ್ರಂಥದಲ್ಲಿ ಅವನಿಗೆ ತನ್ನ ಪ್ರತಿಭಾಕೌಶಲವನ್ನು ಪ್ರಕಾಶಿಸಲು ವಿಶೇಷ ಅವಕಾಶವಿಲ್ಲ. ಆದರೂ ಪಂಪನು ತನ್ನ ಕಾರ್ಯವನ್ನು ಬಹುಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಆತನು ಪೂರ್ವಪುರಾಣಕ್ಕೆ ಬಹುಮಟ್ಟಿಗೆ ಋಣಿ. ಜಿನಸೇನಾಚಾರ್ಯರ ಕಥಾಸರಣಿಯನ್ನೇ ಅಲ್ಲದೆ ಭಾವಗಳನ್ನೂ ವಚನಗಳನ್ನೂ ವಚನಖಂಡಗಳನ್ನೂ ಪದ್ಯಭಾಗಗಳನ್ನೂ ವಿಶೇಷವಾಗಿ ಉಪಯೋಗಿಸಿ ಕೊಂಡಿದ್ದಾನೆ. ಆತನ ಗ್ರಂಥದ ಬಹುಭಾಗ ಪೂರ್ವಪುರಾಣದ ಅನುವಾದವಿದ್ದಂತೆಯೇ ಇದೆ. ಅಷ್ಟಾದರೂ ಅಲ್ಲಿ ಪಂಪನ ಕೈವಾಡ ಪ್ರಕಾಶವಾಗದೇ ಇಲ್ಲ. ಧರ್ಮಾಂಗಗಳನ್ನು ಬಿಟ್ಟು ಕಾವ್ಯಾಂಗಗಳನ್ನು ವರ್ಣಿಸುವ ಸಂದರ್ಭದಲ್ಲಿ ಪಂಪನ ಪ್ರತಿಭಾಪಕ್ಷಿ ಗರಿಗೆದರಿ. ಗಗನವಿಹಾರಿಯಾಗುತ್ತದೆ. ತನ್ನ ಸ್ವತಂತ್ರವಿಲಾಸದಿಂದ ವಾಚಕರ ಮೇಲೆ ಪ್ರತ್ಯೇಕವಾದ ಸಮ್ಮೋಹನಾಸ್ತವನ್ನು ಬೀರಿ ಮಂತ್ರಮುಗ್ಧರನ್ನಾಗಿಸುತ್ತದೆ. ಸಂಗ್ರಹ ಮತ್ತು ಅನುವಾದ ಕಾರ್ಯದಲ್ಲಂತೂ ಆತನು ಅತಿನಿಪುಣ, ಆದಿತೀರ್ಥಂಕರನ ಭವಾವಳಿಗಳನ್ನೂ ಪಂಚಕಲ್ಯಾಣಗಳನ್ನೂ ಕವಿಯು ಬಹು ಎಚ್ಚರಿಕೆಯಿಂದ ಸಂಗ್ರಹಿಸಿ ಸುಂದರವಾಗಿ ವರ್ಣಿಸಿದ್ದಾನೆ. ಜಿನಸೇನನ ಮಹಾಸಾಗರದಿಂದ ಆಣಿಮುತ್ತುಗಳನ್ನು ಆಯುವುದರಲ್ಲಿ ತನ್ನ ಕೌಶಲವನ್ನು ಪ್ರದರ್ಶಿಸಿದ್ದಾನೆ. ಕಥೆಗೆ ನೇರ ಸಂಬಂಧ ಪಡೆದ ಭಾಗಗಳನ್ನಜ್ಜ ತನ್ನ ವಿವೇಕಯುತವಾದ ಕತ್ತರಿಪ್ರಯೋಗದಿಂದ ತೆಗೆದುಹಾಕಿ ಗ್ರಂಥದ ಪೂರ್ವಾರ್ಧದಲ್ಲಿ ವಿಸ್ತ್ರತವಾಗಿರುವ ಭವಾವಳಿಗಳಲ್ಲಿ ಏಕಪ್ರಕಾರವಾಗಿ ಹರಿದು ಬರುವ ಸೂತ್ರಧಾರೆಯನ್ನು ಸ್ಪಷ್ಟಿಕರಿಸಿದ್ದಾನೆ. ಮೊದಲನೆಯ ಐದು ಜನ್ಮಗಳಲ್ಲಿ ಜೀವದ ಒಲವು ಐಹಿಕ ಭೋಗ ಸಾಮ್ರಾಜ್ಯದ ಕಡೆ ಅಭಿವೃದ್ಧಿಯಾಗುತ್ತ ಬಂದು ವ್ರತದಿಂದ ತಪಸ್ಸಿನಿಂದ ಕಡೆಯ ಐದು ಭವಗಳಲ್ಲಿ ಕ್ರಮಕ್ರಮವಾಗಿ ಆ ಭೋಗಾಭಿಲಾಷೆಯು ಮಾಯವಾಗಿ ತ್ಯಾಗದಲ್ಲಿ ಲೀನವಾಗಿ ಅನಂತವಾದ ಮೋಕ್ಷ ಸಿದ್ದಿಯಾಗುವುದನ್ನು ಕವಿಯು ಬಹುರಮಣೀಯವಾಗಿ ವರ್ಣಿಸಿದ್ದಾನೆ. ಗ್ರಂಥದ ಉತ್ತರಾರ್ಧದಲ್ಲಿ ತೀರ್ಥಂಕರನ ಅನೇಕ ಪುತ್ರರಲ್ಲಿ ಪ್ರಸಿದ್ದರಾದ ಭರತ ಬಾಹುಬಲಿಗಳ ಕಥೆ ಉಕ್ತವಾಗಿದೆ. ಇದರಲ್ಲಿ ಅಧಿಕಾರಲಾಲಸೆಯ, ಕೀರ್ತಿಕಾಮನೆಯ, ವೈಭವಮೋಹದ ಪರಮಾವಧಿಯನ್ನೂ ಅದರಿಂದ ವೈರಾಗ್ಯ ಹುಟ್ಟಬಹುದಾದ ರೀತಿಯನ್ನೂ ಬಹು ಕಲಾಮಯವಾಗಿ ಚಿತ್ರಿಸಿದ್ದಾನೆ. 'ಭೋಗಂ ರಾಗಮನಾಗಿಸಿದೊಡಂ ಹೃದ್ರೋಗಮನುಂಟುಮಾಡುಗುಂ' 'ಅಮರೇಂದ್ರೋನ್ನತಿ,