________________
೬ | ಪಂಪಭಾರತಂ ಗ್ರಂಥಗಳ ಪರಿಚಯ ಈತನಿಗೆ ವಿಶೇಷವಾಗಿತ್ತು. ಪ್ರಾಕೃತ ಸಂಸ್ಕೃತ ಭಾಷೆಗಳಲ್ಲಿಯೂ ಪೂರ್ಣಪಾಂಡಿತ್ಯವಿತ್ತು. ಸಂಗೀತ, ನೃತ್ಯ, ಶಿಲ್ಪ, ವೈದ್ಯ, ಅರ್ಥಶಾಸ್ತ್ರ, ಕಾಮಶಾಸ್ತ್ರ, ನೀತಿಶಾಸ್ತ್ರ ಮೊದಲಾದುವುಗಳನ್ನು ಇವನು ಅಭ್ಯಾಸ ಮಾಡಿದ್ದಿರಬೇಕು. ಈತನ ಗುರು ಕೊಂಡಕುಂದಾನ್ವಯಕ್ಕೆ ಸೇರಿದ ದೇವೇಂದ್ರಮುನಿ. ಈತನಲ್ಲಿ ಪಂಪನಿಗೆ ಬಹಳಭಕ್ತಿ, ಆದುದರಿಂದಲೇ ಅವನು ತನ್ನನ್ನು ಆದಿಪುರಾಣದಲ್ಲಿ 'ದೇವೇಂದ್ರಮುನೀಂದ್ರವಂದ್ಯ ಪರಮಜಿನೇಂದ್ರಮುಖವಾಕ್ಚಂದ್ರಿಕಾಪ್ರಸರಪ್ರಸಾದೋದೀರ್ಣಸೂಕ್ತಿಕಲ್ಲೋಲ ಮಾಲಾಕೀರ್ಣಕವಿತಾಗುಣಾರ್ಣವಂ' ಎಂದು ಕರೆದುಕೊಂಡಿದ್ದಾನೆ. ಈ ದೇವೇಂದ್ರಮುನಿಯು ಶ್ರವಣಬೆಳಗೊಳದಲ್ಲಿದ್ದನೆಂಬುದು ಶಾಸನಗಳಿಂದ ತಿಳಿದು ಬರುತ್ತದೆ. ಪಂಪನು ವೆಂಗಿಪಟುವಿನಿಂದ ಇಲ್ಲಿಗೆ ಬಂದು ನೆಲಸಿ ಈ ಗುರುವಿನ ಪಾದದಡಿಯಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಈ ಕಾಲದಲ್ಲಿಯೇ ಅವನಿಗೆ “ಆರಂಕುಸಮಿಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ' 'ಕೋಗಿಲೆಯಾಗಿ ಮೇಣ್ ಮಣಿದುಂಬಿಯಾಗಿ ಪುಟ್ಟುವುದು ನಂದನದೊಳ್ ಬನವಾಸಿದೇಶದೊಳ್' ಎಂಬುದಾಗಿ ಅವನು ನಾನಾ ರೀತಿ ಹಾತೊರೆಯುವ ಬನವಾಸಿದೇಶದ ಸಂಬಂಧ ವುಂಟಾಗಿರಬೇಕು.
ಪಂಪನ ವಿದ್ಯಾವೈದುಷ್ಯದಿಂದ ಆಕರ್ಷಿತನಾದ, ಆಗ ವೆಂಗಿಮಂಡಲದ ಪಶ್ಚಿಮದ ಕಡೆ ಕನ್ನಡಸೀಮೆಗೆ ಸಮೀಪವಾದ ಲೆಂಬುಳಪಾಟಕವೆಂಬ ಪಟ್ಟಣದಲ್ಲಿ ರಾಜ್ಯವಾಳುತ್ತಿದ್ದ ರಾಷ್ಟ್ರಕೂಟರ ಮೂರನೆಯ ಕೃಷ್ಣನ ಸಾಮಂತರಾಜನಾದ ಅರಿಕೇಸರಿಯು ಪಂಪನನ್ನು ತನ್ನ ಆಸ್ಥಾನಕ್ಕೆ ಪ್ರೀತಿಯಿಂದ ಬರಮಾಡಿಕೊಂಡು ವಿಶೇಷವಾಗಿ ಮನ್ನಿಸಿ ಅವನಿಂದ ಗ್ರಂಥಗಳನ್ನು ಬರೆಯಿಸಿ ಪಂಚರತ್ನಗಳನ್ನೂ ಉಡುಗೊರೆಗಳನ್ನೂ ಧರ್ಮಪುರವೆಂಬ ಶಾಸನಾಗ್ರಹಾರವನ್ನೂ ದಯಪಾಲಿಸಿದನು. ಅಲ್ಲದೆ ತನ್ನ ಗುಣಾರ್ಣವನೆಂಬ ಬಿರುದಿಗೆ ಒಪ್ಪುವಂತೆ ಅವನಿಗೆ 'ಕವಿತಾಗುಣಾರ್ಣವ' ನೆಂಬ ಬಿರುದನ್ನು ಕೊಟ್ಟನು. ಅವನ ಆಶ್ರಯದಲ್ಲಿ ಪಂಪನು ಆತ್ಮತೃಪ್ತಿಗಾಗಿಯೂ ತನ್ನ ಧರ್ಮಋಣದ ಪರಿಹಾರಕ್ಕಾಗಿಯೂ ಶಕವರ್ಷ ೮೬೩ಕ್ಕೆ ಸರಿಯಾದ ಪ್ಲವಸಂವತ್ಸರದಲ್ಲಿ ತನ್ನ ೩೯ನೆಯ ವಯಸ್ಸಿನಲ್ಲಿ ಅಂದರೆ ಕ್ರಿ. ಶ. ೯೪೧ರಲ್ಲಿ ಪ್ರಶಸ್ತವಾದ ತಿಥಿವಾರನಕ್ಷತ್ರಗಳಿಂದ ಕೂಡಿದ ಶುಭಮುಹೂರ್ತದಲ್ಲಿ ಆದಿತೀರ್ಥಂಕರನ ಚರಿತ್ರೆಯಾದ 'ಆದಿಪುರಾಣ'ವನ್ನು ಬರೆದು ಮುಗಿಸಿದನು. ಇದಾದ ಕೆಲವು ದಿನಗಳಾದ ಮೇಲೆ ತನ್ನ ಆಶ್ರಯದಾತನ ಕೀರ್ತಿಸ್ಥಾಪನೆಗಾಗಿ 'ವಿಕ್ರಮಾರ್ಜುನ ವಿಜಯ' ಅಥವಾ 'ಪಂಪಭಾರತ'ವೆಂಬ ಮತ್ತೊಂದು ಗ್ರಂಥವನ್ನೂ ರಚಿಸಿದನು. ಒಂದನ್ನು ಮೂರುತಿಂಗಳುಗಳಲ್ಲಿಯೂ ಮತ್ತೊಂದನ್ನು ಆರು ತಿಂಗಳುಗಳಲ್ಲಿಯೂ ರಚಿಸಿದನೆಂದೂ ಒಂದರಲ್ಲಿ ಜಿನಾಗಮವನ್ನೂ ಇನ್ನೊಂದರಲ್ಲಿ ಲೌಕಿಕವನ್ನೂ ಬೆಳಗಿರುವೆನೆಂದೂ ಕವಿಯೇ ಹೇಳಿಕೊಂಡಿದ್ದಾನೆ.
- ಆದಿಪುರಾಣ-ನಮಗೆ ದೊರೆತಿರುವ ಪಂಪನ ಕೃತಿಗಳಲ್ಲಿ ಇದು ಮೊದಲನೆಯ ಕೃತಿ. (ಇದಕ್ಕೆ ಹಿಂದೆ ಪಂಪನು ಇನ್ನೂ ಕೆಲವು ಕೃತಿಗಳನ್ನು ರಚಿಸಿರಬಹುದು). ಇದು