________________
೩೮
ಯಶೋಧರ ಚರಿತೆ
ಎಂದೊಡೆ ದೂದವಿಗಳಿಂ ತೆಂದಲ್ ಗರಗರಿಕೆ ಕೊರಲೋಳೀಕ್ಷಣದೋಳ್ ವಾ ರ್ಬಿಂದು ಮಿಡುಕೆರ್ದೆಯೊಳೊದವೆ ಪು ಇಂದನ ಕಣೆ ನಟ್ಟು ನಿಂದ ವನಹರಿಣಿಯವೊಲ್
ಕರಿದಾದೊಡೆ ಕತ್ತುರಿಯಂ ಮುರುಡಾದೊಡೆ ಮಲಯಜಂಗಳಂ ಕೊಂಕಿದೊಡೇಂ ಸರಚಾಪಮನಿಳಿಕಯ್ಯರೆ ಮರುಳೇ ಪೊಲ್ಲಮೆಯ ಲೇಸು ನಲ್ಲರ ಮೆಯೊಳ್
ಒಲವಾದೊಡೆ ರೂಪಿನ ಕೋ ಟಲೆಯವುದೋ ಕಾರ್ಯಮಾಗೆ ಕಾರಣದಿಂದಂ ಫಲಮೇನಿಂದೆನಗಾತನೆ ಕುಲದೈವಂ ಕಾಮದೇವನಿಂದ್ರಂ ಚಂದ್ರ
ಎಂದಾಕೆಗೆ ಲಂಚಮನಿ ತೆಂದುದನೆಂದೆರವಿಗೊಂಡು ಕಟಿಪುವುದುಮವಳ್ ಸಂದಿಸಿದೊಡಮ್ಮತಮತಿ ರಾ ತಿಂದಿವಮಾತನೊಳೆ ಸಲಿಸಿದ ತೆಂಪುಗಳು
ಒಂದು ಮರದ ಕೊರಡಿನಂತಿದೆ.” ೪೧. ದೂತಿ ಹೇಳಿದ ಇಷ್ಟು ವಿಸೃತವಾದ ವಿವರಣೆಯನ್ನು ಕೇಳುತ್ತಾ ಇದ್ದಂತೆ ಅಮೃತಮತಿಯ ಗಂಟಲು ಗರಗರ ಎಂದು ಸದ್ದುಮಾಡಿತು, ಕಣ್ಣಲ್ಲಿ ನೀರು ತುಂಬಿ ಕೊಂಡಿತು. ಎದೆ ನಡುಗಿತು. ಕಾಡಿನ ಜಿಂಕೆಗೆ ಬೇಡನ ಬಾಣ ನಾಟಿದಂತೆ ಅವಳೊಮ್ಮೆ ಸ್ತಂಭೀಭೂತಳಾದಳು. ಬಳಿಕ ಮೆಲ್ಲನೆ ಮಾತಿಗಾರಂಭಿಸಿದಳು. ೪೨, “ಕಸ್ತೂರಿಯ ಬಣ್ಣ ಕಪ್ಪು. ಅದನ್ನು ಆ ಬಣ್ಣದಿಂದಾಗಿ ಕಡೆಗಾಣಿಸುವವರಿದ್ದಾರೆಯೆ ? ಗಂಟುಗಂಟಾಗಿ ಇದೆಯೆಂದು ಗಂಧದ ಕೊರಡನ್ನು ತಿರಸ್ಕರಿಸುತ್ತಾರೆಯೆ ? ಕಾಮನ ಬಿಲ್ಲು ಕೊಂಕಾಗಿದ್ದರೂ ಅದನ್ನು ಯಾರೂ ಹೀನಯಿಸುವುದಿಲ್ಲವಲ್ಲ ! ಹುಚ್ಚ, ನಮ್ಮ ಮೆಚ್ಚಿನವರ ಮೆಯ್ಯಲ್ಲಿ ದೋಷವಿದ್ದರೆ ಅದೇ ಅವರ ಮೇಲೆಯೆನ್ನಿಸುತ್ತದೆ. ೪೩. ಅದೂ ಅಲ್ಲದೆ, ಮನಸ್ಸು ಮೆಚ್ಚಿದೆಯೆಂದಾದರೆ ಮತ್ತೆ ರೂಪದ ಪ್ರಶ್ನೆಯೇ ಏಳುವುದಿಲ್ಲ. ಕಾರ್ಯವಾದ ಮೇಲೆ ಕಾರಣದಿಂದೇನು ಪ್ರಯೋಜನ ? ಇಂದು ನನಗೆ ಅವನೇ ಕುಲದೈವ. ಅವನೇ ಕಾಮದೇವ, ಅವನೆ ಇಂದ್ರ, ಅವನೆ ಚಂದ್ರ !?” ೪೪. ಅಮೃತ ಮತಿ ಅವಳಿಗೆ ಲಂಚವನ್ನಿತ್ತಳು ; ತನ್ನ ವಶವರ್ತಿನಿಯಾಗುವಂತೆ ಮಾಡಿಕೊಂಡಳು. ಅವಳೊಡನೆ ಹೇಳಬೇಕಾದುದನೆಲ್ಲ ಹೇಳಿದಳು. ಅವಳಿಂದ ಸಮತಿಯ ಮಾತನ್ನೂ ಪಡೆದಳು. ಅವಳನ್ನು ತನ್ನಿನಿಯನಲ್ಲಿಗೆ ಕಳುಹಿಸಿಕೊಟ್ಟಳು. ದೂತಿಯು ಕಾರ್ಯವನ್ನು ಕೈಗೂಡಿಸಿದಳು; ಇಬ್ಬರನ್ನೂ ಒಂದುಗೂಡಿಸಿದಳು. ಅಂದಿನಿಂದ ಅಮೃತಮತಿ ಹಗಲೂ ಇರುಳೂ ಬಿಡುವಿದ್ದಾಗಲೆಲ್ಲ