SearchBrowseAboutContactDonate
Page Preview
Page 437
Loading...
Download File
Download File
Page Text
________________ गणिनी आर्यिकारत्न श्री ज्ञानमती अभिवन्दन ग्रन्थ [39% ಹಸ್ತಿನಾಪುರದಿಂದಲೇ ಅವರಿಗೆ ದೀರ್ಘ ಆಯು, ಕೀರ್ತಿ ಹಾಗೂ ಸಂಘವನ್ನು ಯೋಗ್ಯ ರೀತಿಯಲ್ಲಿ ನಡೆಸುವಂತಹ ಶಕ್ತಿ ಧೈರ್ಯಾದಿಗಳು, ಭಗವಂತರಿಂದ ಪ್ರಾಪ್ತವಾಗಲೆಂದು ಶುಭ ಹಾರೈಸಿದರು. ಇದೇ ರೀತಿಯಲ್ಲಿ ಅವರ ಶಿಷ್ಯ ಆರ್ಜಿಕೆಯವರಾದ ಶ್ರೀ ಜಿನಮತಿ ಮಾತಾಜಿ, ಆದಿಮತಿ ಮಾತಾಕೀ ಮೊದಲಾದವರು, ಇವರಿಂದಲೇ ವಿದ್ಯಾಭ್ಯಾಸ ಮಾಡಿ ಇವರಿಂದಲೇ ದೀಕ್ಷಿತರಾಗಿ ಧರ್ಮ ಪ್ರಚಾರವನ್ನು ಮಾಡುತ್ತಿದ್ದಾರೆ. ಇವೆಲ್ಲಾ ಮಾತಾಜೀಯವರ 'ವರ'ಪ್ರಸಾದವೇ ಸರಿ.. “ಜೈನಸಾಹಿತ್ಯದಕರ' ಆರ್ಯಿಕಾ ಶ್ರೀ ಜ್ಞಾನಮತಿ ಮಾತಾಜೀಯವರು ಶಿಷ್ಯರನ್ನು ತಯಾರು ಮಾಡುವಲ್ಲಿ ಎಷ್ಟು ಸಫಲತೆಯನ್ನು ಹೊಂದಿದ್ದರೆ ಸಾಹಿತ್ಯ ಕ್ಷೇತ್ರದಲ್ಲೂ ಅಷ್ಟೇ ಕೀರ್ತಿಯನ್ನುಹೊಂದಿದ್ದಾರೆ. ವರ್ತಮಾನ ಕಾಲದಲ್ಲಿ ಜೈನ ಮಹಿಳೆಯರಲ್ಲಿ ಸಾಹಿತ್ಯದ ರಚನೆ ಮಾಡಿದವರಲ್ಲಿ ಶ್ರೀ ಜ್ಞಾನಮತಿ ಮಾತಾಜೀಯವರೇ ಮೊದಲಿನವರು. ಇವರು ಹೆಚ್ಚು ಕಡಿಮೆ 150 ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಸಂಸ್ಕೃತದಲ್ಲಿ ಇರುವ ಎಷ್ಟೋಗ್ರಂಥಗಳನ್ನು ಹಿಂದೀ-ಗೆ ಅನುವಾದಮಾಡಿ ಜನಗಳಿಗೆ ತಿಳಿಯುವಂತೆ ಮಾಡಿದ್ದಾರೆ. ಈಗ ಹಿಂದುಸ್ತಾನದಲ್ಲಿ (ಭಾರತ) ಎಲ್ಲಾ ಕಡೆಯಲ್ಲೂ ಪೂಜೆಗೆ ಯೋಗ್ಯವಾದ ಇಂದ್ರಧ್ವಜ, ಕಲ್ಪದ್ರುಮ ವಿಧಾನ, ಸರ್ವತೋಭದ್ರ ಮಹಾವಿಧಾನ, ತ್ರಿಲೋಕವಿಧಾನಹಾಗೂಪಂಚಮೇರುವಿಧಾನವನ್ನುಪೂ.ಮಾತಾಜೀಯವರೇ ಬರೆದಿರುತ್ತಾರೆ. - ಈ ವಿಧಾನಗಳನ್ನು ಹೇಳಿ-ಕೇಳಿ ಭಕ್ತಜನರು ಭಕ್ತಿಯಲ್ಲಿಯೇ ಮುಳುಗಿರುತ್ತಾರೆ, ಮತ್ತು ಪ್ರತಿಯೊಂದು ಪ್ರಾಣಿಯು ಒಂದು ಕ್ಷಣವಾದರೂ ತನ್ನಆತನಲ್ಲಿ ತಲ್ಲೀನತೆಯನ್ನು ಹೊಂದುವುದರಲ್ಲಿ ಸಂದೇಹವಿಲ್ಲ ಆತ್ಮಾನುಭವವನ್ನು ಅನುಭವಿಸುವ ಅಪೇಕ್ಷೆಯುಳ್ಳಮೋಕ್ಷಾರ್ಥಿಗಳು ಯಾವುದೋ ಒಂದು ವಿಧಾನದ ಪುಸ್ತಕವನ್ನುಓದಿದರೂಕೂಡನಾಲ್ಕುಅನುಯೋಗಗಳಜ್ಞಾನವನ್ನುಪ್ರಾಪ್ತಿಮಾಡಿಕೊಳ್ಳಬಹುದು, ಜಂಬೂದ್ವೀಪದ ನಿರ್ಮಾಣ ಹಾಗು ಜ್ಞಾನಜ್ಯೋತಿಯ ವಿಹಾರ' ಸನ್ 1982 ಜೂನ್ 4 ರಂದು ಪ. ಪೂ. ಆರ್ಯಿಕಾ ಮಾತಾಜೀಯವರ ಪ್ರೇರಣೆಯಂತೆ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಕೆಂಪು ಕೋಟೆಯ ಮೈದಾನದಲ್ಲಿ ಜಂಬೂದ್ವೀಪದ ಜ್ಞಾನಜ್ಯೋತಿಯನ್ನು ಉದ್ಘಾಟಿಸಿದರು. ಈ ಜ್ಞಾನಜ್ಯೋತಿಯು ಭಾರತಾದ್ಯಂತ 1045 ದಿನಗಳವರೆಗೆ ಸಂಚರಿಸಿ, ಭಗವಾನ್ ಮಹಾವೀರರ ಸಿದ್ಧಾಂತಗಳನ್ನು ಪ್ರಚಾರ-ಪ್ರಸಾರ ಮಾಡಿ ಅಂತ್ಯದಲ್ಲಿ 1985 ಏಪ್ರಿಲ್ 28 ರಂದು ಹಸ್ತಿನಾಪುರವನ್ನು ತಲುಪಿತು. ಆಗ ರಕ್ಷಣಾ ಮಂತ್ರಿಯಾಗಿದ್ದ ಶ್ರೀ ಪಿ.ವಿ. ನರಸಿಂಹರಾವ್ ಹಾಗೂ ಸಂಸದ್ ಸದಸ್ಯ ಶ್ರೀ ಜೆ.ಕೆ. ಜೈನ್ ಇವರು ಇಲ್ಲಿಯೆ ಜ್ಞಾನಜೋತಿ''ಯ ಸ್ಥಾಪನೆಯನ್ನು ಮಾಡಿದರು. ಈ ಜ್ಞಾನಜ್ಯೋತಿಯು ಪ್ರತಿಯೊಂದು ಪ್ರಾಣಿಗೂ ಹಗಲು-ರಾತ್ರಿ ಎನ್ನದೆ ಜ್ಞಾನ ಸಂದೇಶವನ್ನು ಕೊಡುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಜಂಬೂದ್ವೀಪದಲ್ಲಿ ವಿರಾಜಮಾನವಾದ ಎಲ್ಲಾ ಜಿನ ಬಿಂಬಗಳ ಪಂಚ ಕಲ್ಯಾಣ ಪ್ರಾಣ ಪ್ರತಿಷ್ಠೆಯು 28 ಏಪ್ರಿಲ್‌ರಿಂದ 2 ಮೇ 1985 ರ ವರೆಗೆ ನಡೆಯಿತು. ಈ ಭೂಮಿಯಲ್ಲಿಯೆ ರಾಜ ಶ್ರೇಯಾಂಶನು ಭಗವಾನ್ ಆದಿನಾಥರಿಗೆ ಮೊಟ್ಟ ಮೊದಲು ಇಷ್ಟು ರಸದ ಆಹಾರದಾನವನ್ನು ಮಾಡಿದನು. ಇಲ್ಲಿಯ ದೃಶ್ಯವನ್ನೆ ಮಾತಾಜೀಯವರು ಸುಮೇರು ಪರ್ವತದ ರೂಪದಲ್ಲಿ ಸ್ವಲ್ಪವನ್ನು ಶ್ರವಣಬೆಳಗೊಳದಲ್ಲಿ ಕಂಡರು. , ಪೂ. ಮಾತಾಜೀಯವರ ದಿನಚರ್ಯೆ ಕರ್ಮಭೂಮಿಯಲ್ಲಿ ಹಗಲು ಮತ್ತು ರಾತ್ರಿಗಳ ವಿಭಜನೆಯು ಸೂರ್ಯ ಚಂದ್ರರ ಸಂಕೇತದಲ್ಲಿ ಆಗುತ್ತದೆ. ಏಕೆಂದರೆ ಪ್ರಕೃತಿಯ ನಿಯಮವೇ ಹೀಗಿದೆ. ಮನುಷ್ಯನು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಶ್ರಮಪಟ್ಟು ದುಡಿದು ಸುಸ್ತಾಗಿಹೋಗುತ್ತಾನೆ. ರಾತ್ರಿ ಆದ ಕೂಡಲೆ ತಿಂದು ಉಂಡು, ಮಲಗಿ ನಿದ್ರಿಸುತ್ತಾನೆ. ಮಾರನೆ ದಿನವೂ ಇದೇ ರೀತಿ, ಆಯುಷ್ಯ ಪೂರ್ಣವಾದ ಮೇಲೆ ಆತ್ಮವು ಈ ಶರೀರವನ್ನು ತ್ಯಜಿಸಿ, ಕರ್ಮಕ್ಕೆ ಅನುಸಾರ ಬೇರೊಂದು ಶರೀರದೊಳಗೆ ಸೇರುತ್ತದೆ. ಪ್ರತಿಯೊಂದು ಆತ್ಯವು ತನ್ನ ಪುರುಷಾರ್ಥದಿಂದ ತನ್ನ ಜೀವನವನ್ನು ಮಹತ್ವಪೂರ್ಣವಾಗಿ ಮಾಡಲು ಸಾಧ್ಯವಾಗುತ್ತದೆ. ಪ್ರತಿ ಕ್ಷಣದಲ್ಲಿ ಪೂ. ಮಾತಾಜೀಯವರು ಶುಭ ಚಿಂತನೆಯಲ್ಲೇ ಕಾಲ ಕಳೆಯುತ್ತಾರೆ. ಇವರು 8-9 ನೇ ವರ್ಷ ವಯಸ್ಸಿನಲ್ಲೇ ಮನೆಯನ್ನು ತ್ಯಾಗ ಮಾಡಲು ಇಚ್ಛೆಪಟ್ಟಿದ್ದರು. - ಆರ್ಯಿಕಾ ಜ್ಞಾನಮತಿ ಮಾತಾಜೀಯವರು 1952 ರಂದು ಗೃಹತ್ಯಾಗ ಮಾಡಿ ಇಂದಿಗೆ 40 ವರ್ಷಗಳು ಸಂದವು. ಮಾತಾಜೀಯವರು ಪ್ರತಿ ದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಸಾಮಾಯಿಕ, ಸ್ವಾಧ್ಯಾಯ ಮತ್ತು ಪ್ರತಿಕ್ರಮಣವನ್ನು ಮಾಡುತ್ತಾರೆ. ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಪೂ. ಮಾತಾಜೀಯವರು ಎಲ್ಲಾ ಶಿಷ್ಯರುಗಳಿಗೆ ಸಮಯಸಾರವನ್ನು ಸ್ವಾಧ್ಯಾಯ ಮಾಡಿಸುತ್ತಾರೆ. ಪರಸ್ಥಳದಿಂದ ಬಂದಿರುವ ಯಾತ್ರಿಕರಿಗೆ ಧರ್ಮೋಪದೇಶವನ್ನು ಮಾಡುತ್ತಾರೆ. 9-15 ರಿಂದ 5 ಗಂಟೆಯವರೆಗೆ ಪ್ರತಿಕ್ರಮಣ ಮಾಡುತ್ತಾರೆ. ಪುನಃ 5 ರಿಂದ ಶಿಷ್ಯರೊಂದಿಗೆ ದೇವದರ್ಶನ ಹಾಗೂ ಜಂಬದೀಪದ ಪ್ರದಕ್ಷಿಣೆ ಹಾಕುತ್ತಾರೆ. ಒಂದೊಂದು ಸಲ ಸುಮೇರು ಪರ್ವತದ ಮೇಲೆ ಹೋಗಿ ದರ್ಶನ ಮಾಡುತ್ತಾರೆ. 3-45 ರಿಂದ 6-45 Jain Educationa international For Personal and Private Use Only www.jainelibrary.org
SR No.012075
Book TitleAryikaratna Gyanmati Abhivandan Granth
Original Sutra AuthorN/A
AuthorRavindra Jain
PublisherDigambar Jain Trilok Shodh Sansthan
Publication Year1992
Total Pages822
LanguageHindi
ClassificationSmruti_Granth
File Size26 MB
Copyright © Jain Education International. All rights reserved. | Privacy Policy