________________
398]
वीर ज्ञानोदय ग्रन्थमाला
ಸಂಘದಲ್ಲಿ ಇರುವವರಿಗೆಲ್ಲ ಗಾಬರಿಯಾಯಿತು, ಮಾತಾಜಿಗೆ ಏನು ಆಗುತ್ತದೋ ಏನೋ ಅಂತ? ಆ ಊರು ಹಳ್ಳಿ ಆದಕಾರಣ ಯಾವ ಔಷಧೋಪಚಾರಗಳು ಸಿಗುತ್ತಿಲ್ಲ. ಸಂಘದ ಎಲ್ಲ ಬ್ರಹ್ಮಚಾರಿಣಿಯವರು ಶುದ್ಧ ಮನಸ್ಸಿನಿಂದ ಭಗವಂತನನ್ನು ನೆನೆಸುತ್ತಾ ಣಮೋಕಾರ ಮಂತ್ರವನ್ನು ಪಠಿಸ ತೊಡಗಿದರು. ಮಾತಾಜೀಯವರು ಸ್ವಲ್ಪ ವೇಳೆ ಧ್ಯಾನ ಮಾಡಿ ಮುಗಿಸಿದರು. ಬೆಳಿಗ್ಗೆ ಏಳುವಾಗ ಆರೋಗ್ಯದಿಂದ ಚೆನ್ನಾಗಿದ್ದರು. ಅವರಿಗೇನು ವಿಷವೇರಲಿಲ್ಲ ಮತ್ತು ಯಾವ ನೋವು ಕಾಣಿಸಲಿಲ್ಲ ನಿತ್ಯದ ಹಾಗೇನೆ ಆ ಊರಿನಿಂದ ಮುಂದೆ ವಿಹಾರ ಮಾಡಿದರು. ನಮಗೆ ಅನಿಸುತ್ತದೆ, ಇದು ಅವರ ತಪಸ್ಸು ಹಾಗೂ ತ್ಯಾಗದ ಪ್ರಭಾವ ಅಂತ.
1987 ರಲ್ಲಿ ಹಸ್ತಿನಾಪುರಕ್ಕೆ ಓರ್ವ ಮುನಿ ಭಕಳು, ವಯೋವೃದ್ದಳು ಆದ ಬ್ರಹ್ಮಚಾರಿಣಿಯು ಬಂದಳು. ಕೆಲವು ದಿನ ಅಲ್ಲಿಯೆ ಇದ್ದು ಸಾಧು ಸಂತರಿಗೆ ಆಹಾರ ದಾನಮಾಡಲು ಚೌಕ ಹಾಕಿದ್ದರು. ಅವರಿಗೆ ಒಂದು ದಿನ ತನ್ನಷ್ಟಕ್ಕೆನೇ ಕಾಯಿಲೆ ಕಾಣಿಸಿತು. ಅವರ ಕಾಲುಗಳು ಊದಿಕೊಂಡವು. ನಡೆಯಲಿಕ್ಕೆ ಅವರಿಗೆ ಆಗುತ್ತಿರಲಿಲ್ಲ. ಆಗ ಅವರು ಮಾದರಿ ಬ್ರಹಚಾರಿಣಿಯನ್ನು ಕರೆದು ಹೀಗೆ ಹೇಳಿದರು, “ನನಗೆ ಪೂ, ಜ್ಞಾನಮತಿ ಮಾತಾಜೀಯವರು ತೊಟ್ಟ ಸೀರೆಯನ್ನು ತಂದುಕೊಡಿರಿ” ಅಂತ. ಆಗ ಬ್ರಹಚಾರಿಣಿಯವರು ಕೂಡಲೇ ಶ್ರೀ ಮಾತಾಜೀಯವರ ಸೀರೆಯನ್ನು ತಂದುಕೊಟ್ಟರು.
ಮಾರನೆ ದಿನ ಆ ವೃದ್ಧ ಬ್ರಹಚಾರಿಣಿಯವರು ಸ್ವತಃ ಮಾತಾಜೀ ಇದ್ದಲ್ಲಿ ನಡೆದು ಬಂದು ಹೀಗೆ ಹೇಳಿದರು. ತಮ್ಮ ಆಶೀರ್ವಾದದಿಂದ ಈ ದಿನ ಆರೋಗ್ಯದಿಂದ ಇದ್ದೇನೆ. ಎಲ್ಲದಕ್ಕು ಗುರು ಆಶೀರ್ವಾದವೇ ಮುಖ್ಯವಾದುದು. ಆನಂತರ ಆ ವೃದ್ಧ ಬ್ರ.ಯವರು ಶ್ರೀ ಮಾತಾಜೀಯವರಿಗೆ ಹೊಸ ಪಿಂಚ್ಛೆ ಕೊಟ್ಟು ಹಳೆ ಪಿಂಚ್ಚೆ ತೆಗೆದುಕೊಂಡರು. ಮತ್ತು ತಮ್ಮ ಜೀವನವು ಸಾರ್ಥಕವಾಯಿತೆಂದುಕೊಂಡರು.
1982 ರಲ್ಲಿ ಡಿಲ್ಲಿಯಿಂದ ಪೂ, ಜ್ಞಾನಮತಿ ಮಾತಾಜೀಯವರು ಜಂಬೂದ್ವೀಪದ ಜ್ಞಾನಜ್ಯೋತಿ'ಯನ್ನು ಅಹಿಂಸಾ ಪ್ರಚಾರದ ದೃಷ್ಟಿಯಿಂದ ಹೊರಡಿಸಿದರು. ಇದನ್ನು ಆಗಿನ ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರಿಂದ ಬಿಡುಗಡೆ ಮಾಡಿಸಿದರು. ಅಲ್ಲಿ ಕೆಲವು ಜೋತಿಷಿಗಳು ಹೇಳಿದ್ದರು, ಇಂದಿರಾ ಗಾಂಧಿಯರು ಈ ಕಾರ್ಯಕ್ರಮಕ್ಕೆ ಬರುವ ಯೋಗ ಇಲ್ಲ ಅಂತ, ಆಗ ಎಲ್ಲಾ ಕಾರ್ಯಕರ್ತರು ನಿರಾಶರಾದರು. ಆದರೆ ಪೂ. ಮಾತಾಜೀಯವರು ಹೇಳಿದರು, “ನೀವು ನಿಮ್ಮ ಪುರುಷಾರ್ಥವನ್ನು ಮಾಡಿರಿ. ನನ್ನ ಆಶೀರ್ವಾದದಿಂದ ಬಂದೇ ಬರುತ್ತಾರೆ.'' ಅಗ್ಗೆ ಹುಣ್ಣಿಗೆ ಕನ್ನಡಿ ಏಕೆ? ಎಂಬಂತೆ ಸಮಯ ಬಂತು. ಜೂನ್ 4, 1982 ರಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿಜೀಯವರು ಈ ಕಾರ್ಯಕ್ರಮಕ್ಕೆ ಬರಲು ಒಪ್ಪಿ ಬಂದು 'ಲಾಲ್‌ಕಿಲೆಯ' ಮೈದಾನದಲ್ಲಿ ಜ್ಞಾನಜ್ಯೋತಿ'ಯನ್ನು ಉದ್ಘಾಟಿಸಿ, ವಿಶಾಲ ಜಿನ ಸಮೂಹವನ್ನು ಕುರಿತು ಈ ಜ್ಞಾನಜ್ಯೋತಿಯ ಉದ್ದೇಶ - ದೇಶದಲ್ಲಿ ಶಾಂತಿ ಕಾಪಾಡಲು ಹಾಗೂ ಧರ್ಮ ಜಾಗೃತಿಯನ್ನುಂಟುಮಾಡುವುದೇ ಇದರ ಉದ್ದೇಶ ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಇದೇ ರೀತಿಯಲ್ಲಿ ಮಾತಾಜೀಯವರ ಜೀವನದಲ್ಲಿ ಅನೇಕ ರೀತಿಯ ಘಟನೆಗಳು ನಡೆದಿವೆ.
ಯಾವ ರೀತಿಯಲ್ಲಿ ದೀಪವು ಸ್ವತಃ ಸುಟ್ಟುಕೊಂಡು ಬೇರೆಯವರಿಗೆ ಪ್ರಕಾಶವನ್ನು ಕೊಡುವಂತೆ, ಗಂಧದ ಮರವು ವಿವಧರ - ಸರ್ಪನಿಂದ ಅನೇಕ ರೀತಿಯ ಕಚ್ಚುವುದು, ಮೈಯನ್ನು ಉಜ್ಜುವುದರಿಂದ ತನಗೆ ಪ್ರಕೃತಿದತ್ತವಾದ ಸುಗಂಧವನ್ನು ಹರಡುತ್ತದೆಯೋ ಅದೇ ರೀತಿಯಲ್ಲಿ ಪೂ. ಮಾತಾಜೀಯವರು ತಮ್ಮ ಜೀವನವನ್ನೆ ಸದಾಕಾಲವು ಪರೋಪಕಾರಕ್ಕಾಗಿ ಮುಡುಪಾಗಿಟ್ಟು ತಮ್ಮ ಜೀವನವನ್ನೆ ಸಾರ್ಥಕವನ್ನಾಗಿ ತಿಳಿದುಕೊಂಡಿದ್ದಾರೆ.
ತಾವು ಸಂಸಾರ ಸಮುದ್ರದಲ್ಲಿ ಬೀಳುವ ಎಷ್ಟೋ ಜನ ಕುಮಾರಿಯರನ್ನೂ ಸೌಭಾಗ್ಯವತಿಯರನ್ನು ಮತ್ತು ವಿಧವೆಯರನ್ನು ಎತ್ತಿ ಮೋಕ್ಷ ಮಾರ್ಗವನ್ನು ತೋರಿಸಿದ್ದಾರೆ. ಹಾಗೇನೇ ಎಷ್ಟೋ ಜನ ಯುವಕ, ಪುರುಷರಿಗೆ ಜ್ಞಾನಾರ್ಜನೆ ಮಾಡಿಸಿ ತ್ಯಾಗಿಯರನ್ನಾಗಿ ಮಾಡಿಸಿದ್ದಾರೆ. ಚಾರಿತ್ರ ಚಕ್ರವರ್ತಿ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ನಾಲ್ಕನೆ ಪಟ್ಟಾಧೀಶರಾಗಿದ್ದ ಆಚಾರ್ಯ ಶ್ರೀ ಅಜಿತಸಾಗರ ಮಹಾರಾಜರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಬಾ. ಬ್ರ. ಶ್ರೀ ರಾಜಮತಿಜೀಯವರನ್ನು ಸನ್ 1958-59 ರಲ್ಲಿ 'ರಾಜವಾರ್ತಿಕ ಗೊಮ್ಮಟಸಾರ ಕರ್ಮಕಾಂಡ' ಮೊದಲಾದ ಗ್ರಂಥಗಳನ್ನು ಅಧ್ಯಯನ ಮಾಡಿಸಿ ದೀಕ್ಷೆಗಾಗಿ ಪ್ರೇರಣೆ ಮಾಡುತ್ತಿದ್ದರು. ಇದರಿಂದಾಗಿ ಒಂದು ದಿನ ದೀಕ್ಷೆಗಾಗಿ ಜ್ಞಾನಮತಿ ಮಾತಾಜೀಯವರು ಅವರನ್ನು ತಯಾರು ಮಾಡಿಯೇಬಿಟ್ಟರು. 1961 ರಲ್ಲಿ ರಾಜಸ್ಥಾನದ ಸೀಕರ್ ಎಂಬ ಊರಲ್ಲಿ ಆಚಾರ್ಯ ಶ್ರೀ ಶಿವಸಾಗರ ಮಹಾರಾಜರು ಇವರಿಗೆ ಮುನಿ ದೀಕ್ಷೆ ಕೊಟ್ಟು 'ಅಜಿತ ಸಾಗರರನ್ನಾಗಿ' ನಾಮಕರಣ ಮಾಡಿದರು,
ನೋಡಿರಿ! ತ್ಯಾಗದ ವಿಶೇಷತೆ ಎಷ್ಟರವರೆಗೆ ಇದೆ. 105 ಆರ್ಯಿಕಾ ಜ್ಞಾನಮತಿ ಮಾತಾಜೀಯವರು ತತ್‌ಕ್ಷಣವೇ ನಮೋಸ್ತು ಮಾಡಿದರು. ಏಕೆಂದರೆ ಜೈನ ಧರ್ಮದಲ್ಲಿ ಜಿನ ಲಿಂಗ ಮುನಿ ವೇಶಕ್ಕೆ ಸರ್ವಾಧಿಕ ಮಹತ್ವ ಕೊಟ್ಟು, ಪೂಜ್ಯತೆಯ ಭಾವನೆಯನ್ನು ತೋರಿಸುವುದೇ 'ಭಕ್ತಿ” ಎಂದಿದ್ದಾರೆ.
ಪ. ಪೂ. ಆಚಾರ್ಯ ಕಲ್ಪ ಶ್ರೀ ಶೃತಸಾಗರ ಮಹಾರಾಜರು ಯಾವಾಗಲೂ ಹೀಗೆ ಹೇಳುತ್ತಿದ್ದರು:
“ಪಾರುಶ ಮಣಿಯು ಕಬ್ಬಿಣವನ್ನು ಬಂಗಾರವನ್ನಾಗಿ ಮಾಡುತ್ತದೆ, ಪರುಶವನ್ನಾಗಿ ಮಾಡುವುದಿಲ್ಲ. ಆದರೆ, ಪೂ. ಮಾತಾಜೀಯವರು ಪರುಶಮಣಿ ಹಾಗೆ ಕಬ್ಬಿಣವನ್ನು ಬಂಗಾರ ಮಾಡದೆ ಪರುಶ ಮಣಿಯಾಗಿಯೇ ತಯಾರು ಮಾಡಿದರು. ಮಾತಾಜೀಯವರು ತಮಗಿಂತ ಬೇರೆಯವರನ್ನು ಹೆಚ್ಚೆಂದು ತಿಳಿಯುತ್ತಿದ್ದರು. ನಿಜವಾಗಿ ಹೇಳುವುದಾದರೆ, ಪೂ. ಮಾತಾಜೀಯವರು ತಮ್ಮ ಶಿಷ್ಯರುಗಳ ಹಾಗೂ ಇತರ ಜನಗಳ ಏಳಿಗೆಯನ್ನು ನೋಡಿ ಸಂತೋಷ ಪಡುತ್ತಿದ್ದರು.
1987 ರಲ್ಲಿ ಮುನಿ ಶ್ರೀ ಅಜಿತಸಾಗರ ಮಹಾರಾಜರಿಗೆ ಆಚಾರ್ಯಪಟ್ಟವು ಪ್ರಾಪ್ತವಾದುದನ್ನು ಕೇಳಿ ಶ್ರೀ ಮಾತಾಜೀಯವರು
Jain Educationa international
For Personal and Private Use Only
www.jainelibrary.org