SearchBrowseAboutContactDonate
Page Preview
Page 433
Loading...
Download File
Download File
Page Text
________________ गणिनी आर्यिकारत्न श्री ज्ञानमती अभिवन्दन ग्रन्थ [३७१ ಆಚಾರ್ಯ ಶ್ರೀ ಮಾಹಾವೀರಕೀರ್ತಿ ಮಾಹಾರಾಜರು ಸಂಸ್ಕೃತ ವ್ಯಾಕರಣ ನ್ಯಾಯಸಿದ್ದಾಂತ ಮೊದಲಾದವುಗಳನ್ನು ಚೆನ್ನಾಗಿ ತಿಳಿದ ಪ್ರಕಾಂಡ ವಿದ್ವಾಂಸರಾಗಿದ್ದರು. ಆದ್ದರಿಂದ ಆಚಾರ್ಯ ಶ್ರೀ ವೀರಸಾಗರ ಮಹಾರಾಜರು ಅವರಿಗೆ ಹೀಗೆ ಹೇಳಿದರು. “ತಾವು ನಮ್ಮ ಸಂಘದ ಮುನಿ ಆರ್ಜಿಕಾ ಇವರಿಗೆ ಅಧ್ಯಾಯನ ಮಾಡಿಸಿರಿ'' ಎಂದರು. ಗುರು ಆಜ್ಞೆಯನ್ನು ಶಿರಸಾವಹಿಸಿ ಅವರು ಸಾಧುಗಳಿಗೆ ಓದಿಸಲಿಕ್ಕೆ ಶುರು ಮಾಡಿದರು. ಆರ್ಯಿಕಾ ಜ್ಞಾನಮತಿ ಮಾತಾಜೀಯವರು ಕೂಡ ಗುರು ಮುಖದಿಂದ “ರಾಜವಾರ್ತಿಕ ಅಪ್ಪ ಸಹಸ್ರ” ಇತ್ಯಾದಿ ಗ್ರಂಥಗಳನ್ನು ಅಧ್ಯಯನ ಮಾಡಿದರು. ಈ ಕಡ ಆಚಾರ್ಯ ಶ್ರೀ ವೀರಸಾಗರ ಮಹಾರಾಜರ ಆರೋಗ್ಯವು ದಿನೇ-ದಿನೇ ಕುಂಠಿತವಾಗ ತೊಡಗಿತು. ಶರೀರವು ಜರ್ಜರಿತವಾಯಿತು. ಆಶೀಜ ಕೃಷ್ಣ ಅಮವಾಸ್ಯೆಯ ದಿನ ಆಚಾರ್ಯ ಶ್ರೀ ವೀರಸಾಗರ ಮಹಾರಾಜರು ಪದ್ಮಾಸನದಲ್ಲಿಯೇ ಸಮಾಧಿಸ್ಥರಾದರು. ಈ ಸಮಯದಲ್ಲಿ ಎಲ್ಲಾ ತ್ಯಾಗಿ ವೃಂದದವರು ಮಹಾಮಂತ್ರದ ಪಠನೆ ಮಾಡುತ್ತಿದ್ದರು. ಆಗಲೇ ಆಚಾರ್ಯರ ಆತ್ಮವು ಪ್ರಯಾಣ ಮಾಡಿತು. ಆಗ ಸಂಘದ ಎಲ್ಲಾ ತ್ಯಾಗಿಗಳೂ ಕೂಡ ಅನಾಥರಾ ಧರು. ಆಗ ಆಚಾರ್ಯ ಮಹಾವೀರಕೀರ್ತಿ ಮಹಾರಾಜರಿಂದ ಅನಾಥರಾದ ತ್ಯಾಗಿಗಳಿಗೆ ಸ್ವಲ್ಪ ಸಮಾಧಾನವು ಸಿಕ್ಕಿತು. ಇವರು ತ್ಯಾಗಿಗಳ ವಾತ್ಸಲ್ಯ ಮೂರ್ತಿಗಳಾಗಿದ್ದರು. ಎರಡನೆಯ ಪಟ್ಟಾಧೀಶ್ವರ ಚತುಃ ಸಂಘದ ಸಮ್ಮುಖದಲ್ಲಿಯೆ ಮುನಿ ಶ್ರೀ ಶಿವಸಾಗರ ಮಹಾರಾಜರಿಗೆ ಆಚಾರ್ಯರ ಪದವು ಕೊಡಲ್ಪಟ್ಟಿತು. ಆರ್ಯಿಕಾ ಜ್ಞಾನಮತಿ ಮಾತಾಜೀಯವರು ಆಚಾರ್ಯರ ಸಂಘದಲ್ಲಿಯೆ ಇದ್ದು 'ಗಿರಿನಾರ್' ಮೊದಲಾದ ತೀರ್ಥಕ್ಷೇತ್ರಗಳ ದರ್ಶನ ಮಾಡುತ್ತಾ 3 ವರ್ಷ ಕಾಲ ಕಳೆದರು. ಆಮೇಲೆ ಸನ್ 1962 ರಲ್ಲಿ ಆಚಾರ್ಯರ ಆಜ್ಞೆಯನ್ನು ಪಡೆದು ಜ್ಞಾನಮತಿ ಮಾತಾಜೀಯವರು ತಮ್ಮ ಶಿಷ್ಯರುಗಳಾದ ಜಿನಮತಿ, ಆದಿಮತಿ ಮೊದಲಾದವರನ್ನು ಕರೆದುಕೊಂಡು ಶಿಖರ್ಜಿಯ ಯಾತ್ರೆಗೆ ಹೊರಟರು. ಅಂದಿನಿಂದ ಇಂದಿನವರಿಗೂ ಶ್ರೀ ಮಾತಾಜೀಯವರು ಒಂದು ಸ್ತ್ರೀ ಪರ್ಯಾಯದಲ್ಲಿ ಜನ್ಮತಾಳಿ ಎಷ್ಟೊಂದು ಧರ್ಮ ಪ್ರಭಾವನೆಯನ್ನು ಮಾಡುತ್ತಿದ್ದಾರೆಂದರೆ ವರ್ಣನೆ ಮಾಡಲಿಕ್ಕೆನೆ ನಾಲಿಗೆ ಬರುತ್ತಿಲ್ಲ - ಪೂ. ಮಾತಾಜೀಯವರು ಜಿನ ಧರ್ಮದ ಪ್ರಚಾರವನ್ನು ದೊಡ್ಡ ದೊಡ್ಡ ಕಾರ್ಯ ಕಲಾಪಗಳ ಮೂಲಕ ಮಾಡುತ್ತಿದ್ದಾರೆ. ಇವರು ಮಹಾ ತಪಸ್ವಿಗಳು, ಯಂತ್ರ-ಮಂತ್ರ ಸಿದ್ಧಿ ಪ್ರಧಾನರು ಹೌದು. ಇವರ ತಪಸ್ಸಿನ ಶಕ್ತಿಯಿಂದ ಎಷ್ಟೋ ಜನರಿಗೆ ಲಾಭವಾಗಿದೆ. ಕೆಲವು ಉದಾಹರಣೆ ಕೊಡಬಹುದು ಆಶಿರ್ವಾದದಿಂದ. - ಆಶಿರ್ವಾದದಿಂದ ಕಳೆದ ಬಾಲಕನ ಪತ್ತೆ! 1983 ರಲ್ಲಿ ಒಂದು ದಿನ ವೀರಕುಮಾರ ಎಬ ಶ್ರಾವಕನು ಹಸ್ತಿನಾಪುರಕ್ಕೆ ಬಂದನು. ಮಾತಾಜೀಯವರಿಗೆ ವಂದನೆ ತನ್ನ 18 ವರ್ಷದ ಮಗ ದಿಲೀಪ ಕುಮಾರನು ಮಾಯವಾಗಿದ್ದಾನೆ. ಅವನ ತಲೆಯು ಸ್ವಲ್ಪ ಸರಿ ಇರಲಿಲ್ಲ ಅದಕ್ಕಾಗಿ ಅವನ ಬಗ್ಗೆ ಚಿಂತಿಸುತ್ತಿದ್ದನು. ಮಕ್ಕಳ ಹಿತಚಿಂತಕರು ಚಿಂತಿಸುವುದು ಸರ್ವೆ ಸಮಾನ್ಯ. ಅವನು ಮಾತಾಜೀಯಲ್ಲಿ ವಿನಮ್ರದಿಂದ ಕೇಳುತ್ತಾನೆ, ನನ್ನ ಮಗ ಎಲ್ಲಿದ್ದಾನೆ? ಯಾವಾಗ ಬರುವನು ಎಂದು ಕೇಳಿದನು. ಪೂ. ಮಾತಾಜೀಯವರು ಅವನಿಗೆ ಸಮಾಧಾನದ ಮಾತನ್ನು ಹೇಳಿ ಇಂತೆಂದರು. “ಹೆದರ ಬೇಡ! ಒಂದು ಮಂತ್ರವನ್ನು ಕೊಡುವೆನು. ಅದನ್ನು ಒಂದು ಕಾಲು ಲಕ್ಷ ಜಪಮಾಡು, ಮಗನು ತಾನೇ ಬರುತ್ತಾನೆ. ಎಂದು ಆಶೀರ್ವಾದಿಸಿದರು. “ಪುತ್ರ ವಿಯೋಗದವರಿಗೆ ಶಾಂತಿ ಎಲ್ಲಿ ಸಿಗುತ್ತದೆ'', ಅವರು ಒಂದೆರಡು ಮಾಲೆ ಜಪಮಾಡಿದರೂ ಕೂಡ ನನ್ನ ಮಾಗೆ ಎಲ್ಲಿಗೆ ಹೋದ, ಅವನು ಜೀವದಲ್ಲಿದ್ದಾನೋ, ಜೀವಕ್ಕೇನಾದರು ತೊಂದರೆ ಆಗಿದೆಯೋ ಇದೇ ರೀತಿ ಯೋಚಿಸುತ್ತಿದ್ದರು. ಮಗನ ಶೋಧನೆಗಾಗಿ ಎಲ್ಲಾ ಪ್ರಚಾರ ಮಾಡಿದರು. ಗಲ್ಲಿ ಗಲ್ಲಿ ಊರು-ಊರುಗಳಿಗೆ ಜನ ಹೋಗಿದ್ದರು, ಎಷ್ಟು ಹುಡುಕಿದರೂ ಮಗ ಸಿಗಲಿಲ್ಲ ಒಂದು ತಿಂಗಳು ಪೂರೆ ಆಯಿತು. ವೀರ ಕುಮಾರನು ಅಳುತ್ತ ಪುನಃ ಮಾತಾಜೀಯದ್ದಲ್ಲಿಗೆ ಹೋದ ಮತ್ತು ಹೇಳಿದ “ತಾವು ಏನು ಬೇಕಾದರೂ ಮಾಡಿ ಅಂತೂ ನನ್ನ ಮಗ ಸಿಗುವಂತೆ ಮಾಡಿರಿ'' ಎಂದನು. ಮಾತಾಜೀಯವರು ಕೂಡ ಪುನಃ ಹೇಳಿದರು. “ಎಲೇ ಭವ್ಯನೇ ನೀನು ಅಳುವುದು, ದುಃಖಪಡುವುದನ್ನು ಬಿಟ್ಟು ಒಂದು ಕಾಲು ಲಕ್ಷ ಜಪ ಮಾಡು, ಜಪ ಮುಗಿಯುವುದರೊಳಗಾಗಿ ಮಗ ಬರುತ್ತಾನೆ. ಅವನ ಜೀವಕ್ಕೆ ಏನು ಹಾನಿಯಾಗಿಲ್ಲ, ವೀರಕುಮಾರನು ಆದಷ್ಟು ಪ್ರಯತ್ನ ಮಾಡಿ ಸೋತುಹೋಗಿದ್ದ ಆದರೂ, ಗುರುವಚನದ ಮೇಲೆ ಶ್ರದ್ದೆಯಿಟ್ಟು ತನ್ನ ಮನಸ್ಸಿಗೆ ಶಾಂತಿ ತಂದುಕೊಂಡು ಜಪಮಾಡಲು ಪ್ರಾರಂಭಿಸಿದನು. ಇದು ಆಶ್ಚರ್ಯವೆಂದೆ ತಿಳಿಯಬೇಕು. ಒಂದು ದಿನ ವೀರಕುಮಾರನು ಜಪವನ್ನು ಮುಗಿಸಿ ಬಸ್ತಿಯಿಂದ ಮನೆಯ ಕಡೆಗೆ ಬರುತ್ತಿದ್ದನು. ದಾರಿಯಲ್ಲಿ ಯಾರೋ ಅವನ ಮಗನ ವಿಷಯದಲ್ಲಿ ವಿಚಾರಿಸಿದರು. ಆಗ ವೀರಕುಮಾರನ ಬಾಯಿಯಲ್ಲಿ ಹೀಗೆ ಬಂತು- 'ಇವತ್ತು ನನ್ನ ಒಂದು ಕಾಲು ಲಕ್ಷ ಜಪ ಮುಗಿಯಿತು. ನನ್ನ ಮಗ ಅವಶ್ಯವಾಗಿ ಬರುತ್ತಾನೆ" ಎಂದನು. ಏಕೆಂದರೆ ಜ್ಞಾನಮತಿ ಮಾತಾಜೀಯವರು ಹೀಗೆ ಹೇಳಿದ್ದರು. 1-1/4 ಲಕ್ಷ ಜಪವನ್ನು ಪೂರ ಆದ ಮೇಲೆ ನಿನ್ನ ಮಗ ಬರುತ್ತಾನೆಂದು. Jain Educationa international For Personal and Private Use Only www.jainelibrary.org
SR No.012075
Book TitleAryikaratna Gyanmati Abhivandan Granth
Original Sutra AuthorN/A
AuthorRavindra Jain
PublisherDigambar Jain Trilok Shodh Sansthan
Publication Year1992
Total Pages822
LanguageHindi
ClassificationSmruti_Granth
File Size26 MB
Copyright © Jain Education International. All rights reserved. | Privacy Policy