SearchBrowseAboutContactDonate
Page Preview
Page 434
Loading...
Download File
Download File
Page Text
________________ 393] वीर ज्ञानोदय ग्रन्थमाला ಪ್ರತಿದಿನದಂತೆ ವೀರಕುಮಾರನು ಊಟ ಮುಗಿಸಿ ಅಂಗಡಿಗೆ ಹೋದನು. ಅವರು ಅಂಗಡಿಯಲ್ಲಿ ಇದ್ದುಕೊಂಡು, ಮಗ ಬರುವ ದಾರಿಯನ್ನೆ ನೋಡುತ್ತಿದ್ದರು. ಮಧ್ಯಾಹ್ನ 2 ಗಂಟೆ ಹೊತ್ತಿಗೆ ಯಾರೋ ಬೇರೆಯವರ ಜೊತೆಯಲ್ಲಿ ದಿಲೀಪಕುಮಾರನು ಅಂಗಡಿಯ ಕಡೆಗೆ ಬರುತ್ತಿರುವುದನ್ನು ಕಂಡು, ತಂದೆ ವೀರಕುಮಾರರಿಗೆ ಎಲ್ಲಿಲ್ಲದ ಆಶ್ಚರ್ಯ ಮತ್ತು ಯೋಚಿಸುತಿದ್ದ ಇದು ಸುಳೋ, ಸತ್ಯವೋ ಇದು, ಅವನ ಆತ್ಮಕ್ಕೆ ಅವನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದ ಮಗ ಅಂಗಡಿಗೆ ಬಂದೆ ಬಂದ. ಅವನ ಮುಖವು ಒಣಗಿಹೋಗಿತ್ತು. ಎಷ್ಟೋ ದಿನಗಳಿಂದ ಆಹಾರ ಇಲ್ಲದ ಕಾರಣ ಅವನ ಶರೀರವು ದುರ್ಬಲವಾಗಿತ್ತು. ದಿಲೀಪಕುಮಾರನನ್ನು ನೋಡಲು ಅನೇಕ ಜನರು ಅಂಗಡಿಗೆ ಬಂದರು. ಮಗ ಸಿಕ್ಕಿದ ಮೇಲೆ ವೀರಕುಮಾರನು ಮೊದಲು ಹಸ್ತಿನಾಪುರಕ್ಕೆ ಮಗನ ಜೊತೆಗೆ ಹೋಗಿ ಪೂ. ಜ್ಞಾನಮತಿ ಮಾತಾಜೀಯವರ ದರ್ಶನ ಮಾಡಿ ಮಗನಿಗೆ ಆಶೀರ್ವಾದ ಕೊಡಿಸಿ ತಾನು ಆಶೀರ್ವಾದ ಪಡೆದನು, ಧರ್ಮ ಬಂಧುಗಳೇ! ಇದು ಗುರುಭಕ್ತಿ ಮತ್ತು ಅವರು ಕೊಟ್ಟ ಮಂತ್ರದ ಫಲವೇ ಸರಿ. ಈಗಲೂ ಸಹ ಆ ದಿಲೀಪನು ತನ್ನ ತಂದೆಯ ಜೊತೆಯಲ್ಲಿ ಸಂತೋಷದಿಂದ ಬಟ್ಟೆ ವ್ಯಾಪಾರ ಮಾಡುತ್ತಿದ್ದಾನೆ. ಯಂತ್ರ, ಮಂತ್ರಗಳ ಸಾಧನೆಯನ್ನು ಆಚಾರ್ಯರು ಶಾಸ್ತ್ರಗಳಲ್ಲಿ ಬರೆದಿಟ್ಟಿದ್ದಾರೆ. ಆದರೆ ಅವುಗಳ ವಿಧಿ-ವಿಧಾನಗಳ ಕ್ರಮವನ್ನು ಗುರುಗಳಿಂದ ತಿಳಿದರೆ ಮಾತ್ರ ಅದರ ಫಲ ಸಿಗುತ್ತದೆ. ಇಲ್ಲವಾದರೆ ಅನರ್ಥವು ಆಗುವುದುಂಟು. ಏಕೆಂದರೆ ಯಾವ ಪ್ರಕಾರ ಡಾಕ್ಟರು ರೋಗಿಗೆ ಅನುಕೂಲವಾದ ಔಷಧಿಯನ್ನು ಕೊಡುವುದರಿಂದ ರೋಗಿಯು ರೋಗ ಮುಕ್ತನಾಗುತ್ತಾನೆ, ಯಂತ್ರ-ಮಂತ್ರದ ಜೊತೆಗೆ ಗುರುಗಳ ತಪಸ್ಸಿನ ಪ್ರಭಾವ ಹಾಗು ಆಶೀರ್ವಾದ ಇದ್ದರೇನೇ ಅದು ಫಲ ಕೊಡುತ್ತದೆ. ನಾನು ಪೂ. ಮಾತಾಜೀಯವರ ವಿಷಯವನ್ನು ಎಷ್ಟೋ ಜನರ ಮುಖದಿಂದ ಕೇಳಿದ್ದೇನೆ. ಅವರು ಯಾರಾದರು ರೋಗಿಗಳಿಗೆ ಅವರ ಪಂಚೆಯನ್ನು ತಲೆಯ ಮೇಲೆ ಇಟ್ಟರೆ ಆಗ ಆ ವ್ಯಕ್ತಿಗೆ ರೋಗವೇ ಮಾಯವಾಗುತ್ತದೆ. ಇದೇ ರೀತಿ ಎಷ್ಟೋ ಜನಗಳಿಗೆ ಭೂತ-ಪಿಶಾಚಿ ಇತ್ಯಾದಿಗಳ ಪೀಡೆಯನ್ನು ಸಹ ದೂರ ಮಾಡಿರುತ್ತಾರೆ. ಇಷ್ಟೇ ಅಲ್ಲ ಕಣ್ಣಿಲ್ಲದವರಿಗೆ ಕಣ್ಣು ಬರುವಂತೆ ಮಾಡಿದ್ದಾರೆ. ಹಾಗಾದರೆ ಅವರ ತಪಸ್ಸಿನ ಶಕ್ತಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ನೀವೇ ಯೋಚಿಸುವಿರಿ. ಇದಕ್ಕೆಲ್ಲಾ ಅವರು ಇಟ್ಟ ಗುರುಭಕ್ತಿಯೇ ಕಾರಣ ಬೇರೊಂದಲ್ಲ “ಗುರುಭಕ್ತಿ ಸತೀ ಮುಕ್ತತೀ, ಕ್ಷುದ್ರಂತೆ ಕಿಂ ವಾನ ಸಾದಯೇತ್?” ಅರ್ಥ-ಗುರುಭಕ್ತಿ ಗುರುಜನರ ವಚನಗಳಲ್ಲಿ ದೃಢವಾದ ಶ್ರದ್ದೆಯನ್ನು ಇಟ್ಟರೆ ಅದು ಮೋಕ್ಷದವರೆಗೆ ದಾರಿ ತೋರಿಸುತ್ತದೆ. ಹೀಗಿರುವಾಗ ಈ ಕ್ಷುದ್ರ ಕೆಲಸ ಕಾರ್ಯಗಳು ಏಕೆ ಆಗುವುದಿಲ್ಲ? ಈ ಬಾಲಬ್ರಹಚಾರಿಣಿ ಸತಿ ಈಗ ಜನಗಳಿಗೆಲ್ಲ ತಮ್ಮ ತಪಸ್ಸಿನ ಫಲವನ್ನು ತೋರಿಸಿ ಕೊಟ್ಟಿದ್ದಾರೆ. ಸನ್ 1964 ರಲ್ಲಿ ಪೂ, ಜ್ಞಾನಮತಿ ಮಾತಾಜೀಯವರು ಕಲ್ಕತ್ತದಿಂದ ವಿಹಾರ ಮಾಡುತ್ತಾ ತಮ್ಮ ಆರ್ಯಿಕಾ ಸಂಘವನ್ನು ಆಂಧ್ರಪ್ರದೇಶದ ಹೈದರಾಬಾದಿನಲ್ಲಿ ಚಾತುರ್ಮಾಸಕ್ಕೆ ನೆಲೆ ನಿಂತರು. ಈ ಚಾತುರ್ಮಾಸದಲ್ಲಿ ಸಂಗ್ರಹಣೆ ಕಾಯಿಲೆ ಪ್ರಾರಂಭವಾಯಿತು. ಆದ್ದರಿಂದ ಅವರು ಬಹಳ ನಿಃಶಕ್ತಿಯುಳ್ಳವರಾದರು. ಆಗ ಇವರು ಜೀವನ ಮತ್ತು ಮರಣದಲ್ಲಿ ಸೆಣೆದಾಡುತಿದ್ದರು. ಭಕ್ತರು ಇವರ ಸೇವೆಯನ್ನು ಅಹೋರಾತ್ರಿಯೆನ್ನದೆ ಮಾಡುತಿದ್ದರು. ಮಾತಾಜೀಯವರು ತಮ್ಮ ಆತ್ಮ ಸಾಧನೆಯಲ್ಲಿಯೇ ಇದ್ದರು. ಸಂಘದಲ್ಲಿ ಓರ್ವ ಬ್ರಹಚಾರಿಣಿ ಇದ್ದಳು. ಅವಳ ಹೆಸರು ಮನೋಮತಿ (ಜ್ಞಾನಮತಿ ಮಾತಾಜೀಯವರ ಪೂರ್ವಾಶ್ರಮದ ಕಿರಿಯ ಸೋದರಿ). ಇವರು ಬಹಳ ಶ್ರಮದಿಂದ ಆರ್ಯಿಕಾ ಸಂಘಕ್ಕೆ ಶಿಖರಜಿಯ ದರ್ಶನವನ್ನು ಮಾಡಿಸಿದರು. ಇವರು ದೀಕ್ಷೆಯನ್ನು ತೆಗೆದುಕೊಳ್ಳಬೇಕು ಅಂತ ಬಹಳ ಇಚ್ಚಿಸುತ್ತಿದ್ದರು. ಪೂ. ಮಾತಾಜೀಯವರ ಆರೋಗ್ಯ ಅವಸ್ಥೆ ಬಹಳ ಗಂಭೀರವಾಗಿತ್ತು. ಆದರೂ ಅವರು ದೀಕ್ಷಾ ಮುಹೂರ್ತವನ್ನು ತೆಗೆದುಕೊಟ್ಟರು. ಶ್ರಾವಣ ಶು. ಸಪ್ತಮಿ (ಮೋಕ್ಷ ಸಪ್ತಮಿ)ಯ ಶುಭ ಮುಹೂರ್ತದಲ್ಲಿ ಪೂ. ಮಾತಾಜೀಯವರು ಬಹಳ ಉಲ್ಲಾಸದಿಂದ ಸಾವಿರಾರು ಜನಗಳ ಸಮೂಹದಲ್ಲಿ ಬ್ರ, ಮನೋಮತಿಯವರಿಗೆ “ಕುಲ್ಲಿಕಾ” ದೀಕ್ಷೆಯನ್ನು ಕೊಟ್ಟರು ಮತ್ತು ಮನೋಮತಿಯವರಿಗೆ ಕ್ಷು ಶ್ರೀ “ಅಭಯಮತಿ' ಮಾತಾಜೀಯೆಂದು ನಾಮಾಂಕಿಂತವಾಯಿತು. ಆಗ ಹೈದಾರಾಬಾದಿನಲ್ಲಿ ಜನಗಳೆಲ್ಲರೂ ಹೀಗೆ ಹೇಳುತ್ತಿದ್ದರು: “ಮಾತಾಜೀಯವರಿಗೆ ಕಾಯಿಲೆ ಬಂದಾಗ ಯಾರಿಗಾದರೂ ದೀಕ್ಷೆ ಕೊಟ್ಟರೆ ಮಾತಾಜೀಯವರ ಕಾಯಿಲೆ ಗುಣ (ದೂರ) ವಾಗುತ್ತದೆ.” ದಕ್ಷಿಣದ ಜಂಬೂದೀಪ ಉತ್ತರ ಕಡೆ ಹೈದರಾಬಾದಿನಿಂದ ಆರ್ಯಿಕಾ ಸಂಘವು ಕರ್ನಾಟಕಕ್ಕೆ ವಿಹಾರ ಮಾಡಿತು. 1965 ರಲ್ಲಿ ಶ್ರವಣಬೆಳಗೊಳದಲ್ಲಿ ಚಾತುರ್ಮಾಸವು ನೆರವೇರಿತು. “ಸಾಧನೆ, ಸಿದ್ದಿ ಪ್ರಾಪ್ತಿಗಾಗಿ ಏಕಾಂತ ಸ್ಥಳ ಹಾಗು ಒಂದು ಲಕ್ಷ ಇರುತ್ತದೆ. ಯಾವ ವ್ಯಕ್ತಿಯೇ ಆಗಲಿ ಅವನಿಗೆ ತನ್ನ ಭವಿಷ್ಮ ಜೀವನದ ಕಡೆಗೆ ರೂಪರೇಖೆಯನ್ನು ನಿರ್ಮಿಸಿಕೊಂಡು ಅದರಂತೆ ನಡೆಯುತ್ತಾನೆ. ಹೇಗೆ ಡಾಕ್ಟರ್, ಇಂಜಿನಿಯರ್, ಅಧ್ಯಾಪಕರು ಮೊದಲಾದವರು ಅವರ ವಿದ್ಯಾಭ್ಯಾಸದಿಂದಲೇ ಸಾಧನೆಯನ್ನು ಸಾಧಿಸುತ್ತಾರೆ. ಆಗ ಅವರು ತಾವು ಹಾಕಿಕೊಂಡ ಗುರಿಯನ್ನು ಸುಲಭವಾಗಿ ಮುಟ್ಟುತ್ತಾರೆ. ಮೋಕ್ಷವನ್ನು ಪಡೆಯಲು ಇಚ್ಚಿಸುವ ಸಾಧಕನು ಸದಾ ತನ್ನ ಧೇಯೋದ್ದೇಶಗಳನ್ನು ಲಕ್ಷ್ಯದಲ್ಲಿ ಇಟ್ಟುಕೊಂಡೇ ಸಾಧನೆಯನ್ನು ಸಾಧಿಸುತ್ತಾನೆ. ಹೇಗೆ ಅರ್ಜುನ, ಏಕಲವ್ಯ ಮೊದಲಾದವರು. Jain Educationa international For Personal and Private Use Only www.ainelibrary.org
SR No.012075
Book TitleAryikaratna Gyanmati Abhivandan Granth
Original Sutra AuthorN/A
AuthorRavindra Jain
PublisherDigambar Jain Trilok Shodh Sansthan
Publication Year1992
Total Pages822
LanguageHindi
ClassificationSmruti_Granth
File Size26 MB
Copyright © Jain Education International. All rights reserved. | Privacy Policy