________________
3Soj
वीर ज्ञानोदय ग्रन्थमाला
ಆಚಾರ್ಯರು ಹೇಳಿದರು - ಈಗ ಈ ಸಂಘದಲ್ಲಿರು, ನಿನ್ನ ಸ್ವಭಾವ, ಗುಣ ಇತ್ಯಾದಿಗಳನ್ನು ಎಲ್ಲಾ ತ್ಯಾಗಿಗಳು ಪರೀಕ್ಷಿಸಬೇಕು ಮತ್ತು ನೀನು ಅವರೆಲ್ಲರ ಸ್ವಭಾವ, ಗುಣ ಚರ್ಯೆಯನ್ನು ತಿಳಿಳಿದುಕೊ. ಈ ಎಲ್ಲಾ ಅನುಭವಗಳು ಆದಮೇಲೆ ದೀಕ್ಷೆಯು ಆಗುತ್ತದೆ.
"ದೀಕ್ಷೆಗಾಗಿ ಆತುರಪಡುತ್ತಿರುವ ಆತನಿಗೆ ಸ್ವಲ್ಪ ಶಾಂತಿ ಸಿಕ್ಕಿತು. ಕ್ಷು ವೀರಮತಿಗುವರು ಅಲ್ಲಿಯ ಆರ್ಜಿಕೆಯರೊಡನೆ ಹೊಂದಿಕೊಂಡು ಇರುತ್ತಿದ್ದರು.
ಆಚಾರ್ಯರ ಸಂಘದಲ್ಲಿರುವವಯೋವೃದ್ದ ಜ್ಞಾನವೃದ್ಧರಾದ ಹಾಗೂ ಗಣ್ಯರಾಗ ಆರ್ಜಿಕಾ ಮಾತಾಜೀಯವರು ಹೊಸದಾಗಿ ಆಗಂತುಕರಾದ ಕ್ಷು ವೀರಮತಿಯನ್ನು ವಿವಿಧ ರೀತಿಯಲ್ಲಿ ಪರೀಕ್ಷಿಸಿದರು. ಅದರಲ್ಲಿ ಇವರು ಪೂರ್ಣ ಸಫಲತೆಯನ್ನು ಪಡೆದರು.
ಈಗ ಕೈು ವೀರಮತಿಯವರು ಬಹಳ ಬೇಗನೆ ಆರ್ಜಿಕಾ ದೀಕ್ಷೆಯನ್ನು ಸ್ವೀಕರಿಸಲು ಆತುರ ಪಡುತ್ತಿದ್ದರು. ಆದರೆ ಆಚಾರ್ಯ ಶ್ರೀಯವರು ನಾಲ್ಕು ತಿಂಗಳ ನಂತರ ದೀಕ್ಷೆಯನ್ನು ಕೊಡಲು ನಿರ್ಧರಿಸಿದ್ದರು.
ಈ ಮಧ್ಯದಲ್ಲಿ ಆಚಾರ್ಯರು ಸ್ವತಃ ಈ ಸಾದ್ವಿಯ ಜ್ಞಾನ ಸಾಧನೆ ಹಾಗು ದೀಕ್ಷೆಯ ಲವಲವಿಕೆಯ ರುಚಿಯನ್ನು ಕಂಡು ಆಶ್ಚರ್ಯಪಟ್ಟರು. ಈ ಚಿಕ್ಕ ವಯಸ್ಸಿನಲ್ಲಿಯೆ ಇಂತಹ ಸಾದ್ವಿಮಣಿಯರು ತಮ್ಮ ಸಂಘದಲ್ಲಿರುವುದರಿಂದ ಸಂಘಕ್ಕೆನೆ ಗೌರವ ಎಂದು ತಿಳಿದುಕೊಂಡಿದ್ದರು.
ಚಾರಿತ್ರ ಚಕ್ರವರ್ತಿ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಪ್ರಥಮ ಪಟ್ಟಾಧೀಶ ಆಚಾರ್ಯ ಶ್ರೀ ವೀರಸಾಗರ ಮಹಾರಾಜರು ವಿಹಾರ ಮಾಡುತ್ತಾ ಮಾಡುತ್ತಾ ಮಧೆರಾ ಪುರಕ್ಕೆ ಬಂದಿಳಿದರು. ಕ್ಷು ವೀರಮತಿಯರು ಕೂಡ ಸಂಘದಲ್ಲಿ ಯೋಗ್ಯರೀತಿಯಲ್ಲಿ ಹೊಂದಿಕೊಂಡು ಆನಂದದಿಂದ ಸಮಯವನ್ನು ಕಳೆಯುತ್ತಿದ್ದರು.
ಎಷ್ಟೋ ದಿನಗಳು ಕಳೆದ ಮೇಲೆ ಪುನಃ ಕ್ಷು ವೀರಮತಿಜೀಯವರು ಮೊದಲಿನಂತೆ ಆಚಾರ್ಯ ಶ್ರೀಯವರಿಗೆ ವಂದಿಸಿ ವಿನಯದಿಂದ ಆರ್ಜಿಕಾ ದೀಕ್ಷೆಗಾಗಿ ಪ್ರಾರ್ಥಿಸಿದರು. “ಎಲೆ ಗುರುವರ್ಯರೇ! ಈಗ ನನಗೆ ಸಮಯ ಬಂದಿದೆ ಆರ್ಯಿಕಾ ದೀಕ್ಷೆಯನ್ನು ದಯಪಾಲಿಸಿ” ಎಂದರು.
ಆಚಾರ್ಯರು ಶುಭ ಮುಹೂರ್ತವನ್ನು ನೋಡಿಸಿದರು. ವೀರಮತಿಗೆ ದೀಕ್ಷೆಯನ್ನು ಕೊಡಲು ಆಚಾರ್ಯರು ಮುಂದೆ ಬಂದರು. ಒಂದು ದಿನ ಶುಭ ಮುಹೂರ್ತದಲ್ಲಿ ಆಚಾರ್ಯ ಶ್ರೀಯವರು ವೀರಮತಿಯವರ ನೆತ್ತಿಯ ಮೇಲೆ ಮುನಿ ದೀಕ್ಷಾ ವಿಧಿಯ ಎಲ್ಲಾ ಸಂಸ್ಕಾರಗಳನ್ನೂ ಮತ್ತು ಹೊಸ ಪಂಚ ಕಮಂಡಲಗಳನ್ನು ಕೊಟ್ಟ ಆರ್ಯಿಕಾ ಜ್ಞಾನಮತಿ' ಎಂದು ನಾಮ ಘೋಷಣೆಯನ್ನು ಮಾಡಿದರು ಮತ್ತು ಕು. ಪ್ರಭಾವತಿಗೆ ಕ್ಷು ದೀಕ್ಷೆಯನ್ನು ಕೊಟ್ಟು * ಜಿನಮೆತಿ” ಎಂದು ಹೆಸರನ್ನು ಇಟ್ಟರು.
* ಈಗ ಆಕ್ಕತಿಕಾ ಜ್ಞಾನಮತಿಯವರು ಸಂತೋಷದಿಂದ ಅಧ್ಯಯನ, ಅಧ್ಯಾಪನದಲ್ಲಿಯೇ ಮಗ್ನರಾಗುತ್ತಿದ್ದುದನ್ನು ಕಂಡು ಆಚಾರ್ಯ ಶ್ರೀಯವರು : ಜ್ಞಾನದು' ಎಂದು ಹೆಸರನ್ನು ಇಟ್ಟರು ಮತ್ತು ಅವರು ತಮ್ಮ ಈ ಸಣ್ಣ ಶಿಷ್ಯಳನ್ನು ಹತ್ತಿರದಲ್ಲಿಯೆ ಇಟ್ಟುಕೊಂಡು ಶಿಕ್ಷಣವನ್ನು ಕೊಡುತ್ತಿದ್ದರು. ಯಾವಾಗಲೂ ಹಿತೈ ಕೆಳುತ್ತಿದ್ದರು - “ಜ್ಞಾನಮತಿ” ನೀನು ಯಾವಾಗಲೂ ನಿನ್ನ ಹೆಸರನ್ನು ಧ್ಯಾನದಲ್ಲಿಯೆ ಇಟ್ಟುಕೊಂಡಿರು. ನನಗೆ ನಿನ್ನ ಹತ್ತಿರ ಇಷ್ಟು ಹೇಳಿಬೇಕಿತ್ತು ಎಂದು ಹೇಳಿದರು. .. .. , 'ಫುತ್ರ ಚಕ್ರವರ್ತಿಗಳಾದ ಶಾಂತಸಾಗರ ಮುನಿ ಮಹಾರಾಜರ ಶಿಷ್ಯರಾದ ಆಚಾರ್ಯ ಶ್ರೀ ವೀರಸಾಗರ ಮಹಾರಾಜರು ಸಂಘಸಮೇತರಾಗಿ ವಿಹಾರ ಮಾಡುತ್ತೆ ಮಾಡುತ್ತಾ ಹಜಸ್ಥಾನಕ್ಕೆ ಬಂದರು. ಸಂಘವನ್ನು ಯೋಗ್ಯರೀತಿಯಲ್ಲಿ ರಕ್ಷಿಸುತ್ತಿದ್ದರು. ಶ್ರಾವಕರು ಕೂಡ ಯತಿಗಳನ್ನು ತಮ್ಮ ಬಂಧುಗಳಿರಿದೆ ಭಾವಿಸಿ ಸಾಧುಗಳನ್ನು ಕಾಣುತ್ತಿದ್ದರು...'
ಆರ್ಯಿಕಾ ಜ್ಞಾನಮತ್ತಿ ಮಾತಾಜಿಯವರು ಗುರು ಆಜ್ಞೆಯಂತೆ ಯಾವಾಗಲೂ ತನ್ನ (ಜ್ಞಾನಮತಿ) ಹೆಸರನ್ನೆ ನೆನಸಿ ಜ್ಞಾನಗಂಗೆಯಲ್ಲಿಯೆ ತಲ್ಲೀನರಾಗುತ್ತಿದ್ದರು. ಧರ್ಮ ಗ್ರಂಥಗಳನ್ನು ಓದಿ ಅದರಲ್ಲಿರುವ ಕಠಿನವಾದ ಶಬ್ದಗಳನ್ನು ಸಹ ತಿಳಿದುಕೊಳ್ಳುವುದರಲ್ಲಿ ಅವರಿಗೆ ಕಷ್ಟವೆನಿಸುತ್ತಿರಲಿಲ್ಲ ಮಾತಾಜಿಯವರು ಪ್ರಾರಂಭದಲ್ಲಿಯ 'ಕಾ ತಂತ್ರ ರೂಪ-ಮಾಲಾ' ಹೆಸರಿನ ವ್ಯಾಕರಣವನ್ನು ತನ್ನ ಕಂಠದಲ್ಲಿಯೆ ಆಳವಾಗಿ ಇಳಿಸಿಕೊಂಡಿದ್ದರು. * ಅವರು ತಮ್ಮ ಶಿಷ್ಯರುಗಳಿಗೆ ಓದಿ,ಓದಿಸಿ ತಮ್ಮಜ್ಞಾನವನ್ನು ಪರಿಪಕ್ವ ಮಾಡಿಕೊಂಡಿದ್ದರು. ಅವರು ಒಂದು ಸೂಕ್ತಿಯ ಮಾತನ್ನು ಹೇಳುತ್ತಿದ್ದರು: .:: “ಯಾವ ಕ್ತಿಯಲ್ಲಿ ಕಲ್ಲಿನ ಚಾಕುವನು ತಿಕ್ಕಿ ತಿಕಿ, ಚೂಪು ಮಾಡುವಂತೆ ಬೇರೆಯವರಿಗೆ ಪದೇ-ಪದೇ ಓದಿಸುವುದರಿಂದ ತನ್ನ ಜಾನವ ಆಭಿವೃದ್ಧಿಯಾಗುತ್ತದೆ.” ಎಂಬುದನ್ನು ಮಾತಾಜೀಯವರು ಚೆನ್ನಾಗಿ ತಿಳಿದುಕೊಂಡು ತಮ್ಮ ಜೀವನದಲ್ಲಿ ಈ ನೀತಿಯನ್ನು ಅಳವಡಿಸಿಕೊಂಡಿದ್ದರು. ' ಇವರ ಜ್ಞಾನಗಂಗೆಯನ್ನು ತಿಳಿದ ಸುಘದ ಅನೇಕ ಜನ ತ್ಯಾಗಿಗಳು ಕೂಡ ಇವರಲ್ಲಿ ಕಲಿಯಲು ಇಚ್ಛೆಪಡುತ್ತಿದ್ದರು. ಈ ತ್ಯಾಗಿಗಳ ಜಿಜ್ಞಾಸಾವನ್ನು ಅರಿತ ಶ್ರೀ ಮಾತಾಜೀಯವರು ಆಚಾರ್ಯ ಶ್ರೀಯವರ ಅನುಮತಿ ಪಡೆದು ಸಂಘದ ಅನೇಕ ತ್ಯಾಗಿಗಳಿಗೆ ಜ್ಞಾನದ ಪಂಚಾಮೃತವನ್ನು ಕುಡಿಸುತ್ತಿದ್ದರು. ದಿನನಿತ್ಯದ ಕ್ರಿಯಾಖಾಂಡವನ್ನು ಎಲ್ಲಾ ತ್ಯಾಗಿಗಳಿಗೂ ಅರ್ಥವಾಗುವಂತೆ ಪಾಠಮಾಡಿ ಅದರ ಅರ್ಥವನ್ನು ವಿವರಿಸುತ್ತಿದ್ದರು. ಇದರಿಂದ ಎಲ್ಲಾ ತ್ಯಾಗಿಗಳಿಗೂ ಒಳ್ಳೆಯ ಪ್ರಭಾವವಾಗಿತ್ತು;
* ಈ Qತಿಯಲ್ಲಿ ಆಚಾರ್ಯ ಶ್ರೀಗಳ ಸಂಘವು ಸದಾ ಕಾಲವು ಜ್ಞಾನೋಪಯೋಗದಲ್ಲಿಯೇ ತಲ್ಲೀನವಾಗುತ್ತಿತ್ತು. ಇದೇ ಸಮಯದಲ್ಲಿ ಶ್ರೀ ಸಮೆದೆ. ಶಿಖರ್ಜಿಯ ದರ್ಶನ ಮುಗಿಸಿ ವಿಹಾರ ಮಾಡುತ್ತ ಆಚಾರ್ಯ ಶ್ರೀ ಮಹಾವೀರಕೀರ್ತಿ ಮುಸಿಮಹಾರಾಜರ ಸಂಘವು ಆಚಾರ್ಯರ ದರ್ಶನಕ್ಕೆ ಬಂತು. ಅವರೆಲ್ಲರೂ ಗುರುಗಳ ದರ್ಶನ ಪಡೆದು ತಮ್ಮನ್ನೆ ಧನ್ಯರೆದು ತಿಳಿದುಕೊಂಡರು.
Jain Educationa international
For Personal and Private Use Only
www.jainelibrary.org