________________
366]
वीर ज्ञानोदय ग्रन्थमाला
ಒಂದು ದಿನ ಬೆಳಿಗ್ಗೆ ಮೈನಾ ಬಸ್ತಿಗೆ ಹೋಗಿ ದೇವರ ಎದುರಿಗೆ ತನ್ನ ದುಃಖವನ್ನು ತೋಡಿಕೊಂಡು ಕಷ್ಟಗಳ ಪರಿಹಾರಕ್ಕಾಗಿ ಹೀಗೆ ಪ್ರಾರ್ಥಿಸಿದಳು. ಎಲೈ ದೇವರೇ ಈಗ ನನ್ನ ಮತ್ತು ಧರ್ಮದ ಪ್ರತಿಮೆಯು ತಮ್ಮ ಕೈಯಲ್ಲಿದೆ. ಒಂದು ವೇಳೆ ಈ ಹುಡುಗರು ಸತ್ತು ಹೋದರೆ ಇಡೀ ಊರಿಗೆ ಊರೆ ಸಿಡುಬಿನಿಂದ ಕೂಡಿ ಮಿಥ್ಯಾತ್ವದಲ್ಲಿಯೇ ಮುಳುಗಿ ಹೋಗುತ್ತದೆ. ಆದರೆ ಸಮ್ಯಕ್ಷ ತಮ್ಮ ಭಕ್ತಿಯನ್ನು ಯಾರು ತಾನೇ ತಿಳಿಯಲು ಶಕ್ಯರು.?
ಸತ್ಯ ಹಾಗು ಧರ್ಮಾತನ ಕರೆಯು (ಕಂಗನ್ನು ದೇವರೂ ಸಹ ಅವಶ್ಯವಾಗಿ ಕೇಳುತ್ತಾರೆ. ಇದರಲ್ಲಿ ಸಂಶಯವಿಲ್ಲ, ಮೈನಳ ಭಾವನೆಯು ಶುದ್ಧವಾಗಿತ್ತು, ಕೆಲವು ದಿನಗಳ ಮೇಲೆ ಕ್ರಮವಾಗಿ ಈ ಬಾಲಕರಿಬ್ಬರು ಸುಧಾರಿಸಿಕೊಂಡರು. ಆ ಕಡೆ ಯಾವ ತಾಯಿಯು ಪುತ್ರನಿಗಾಗಿ ಮಿಥ್ಯಾತ್ವದ ಆರಾಧನೆ ಮಾಡುತ್ತಿದ್ದಳು, ಅವಳ ಮಗನು ಸ್ವರ್ಗಸ್ಥನಾದನು. ಈ ಘಟನೆಯಿಂದಾಗಿ ಆ ಊರಿನ ಜನರ ಮನಸ್ಸೆಲ್ಲಾ ಧರ್ಮದ ಕಡೆಗೆ ತಿರುಗಿತು. ಇಡೀ ಊರೇ ಧರ್ಮ ಹಾಗು ಮೈನಾಳ ಪ್ರಶಂಸೆಯನ್ನು ಮಾಡುತ್ತಿತ್ತು. ಈ ರೀತಿಯಲ್ಲಿ ಧರ್ಮದ ಪ್ರಭಾವನೆಯಿಂದಾಗಿ ಎಷ್ಟೋ ಜನರು ಮಿಥ್ಯಾತ್ಮವನ್ನು ತ್ಯಾಗಮಾಡಿ ಸಮ್ಯಕ್ಷವನ್ನು ಗ್ರಹಣ ಮಾಡಿದರು.
ಮೈನಾಳ ಈ ರೀತಿಯ ದೃಢತೆಯ ಕೀರ್ತಿಯು ನಾಲ್ಕು ದಿಕ್ಕಿನಲ್ಲೂ ಹರಡಿತು. ಒಂದು ಸಲ ಬುಂದೇಲ ಖಂಡದವರಾದ ಒಬ್ಬ ಪಂಡಿತ, ಮನೋಹರಲಾಲ್ ಶಾಸ್ತ್ರೀಜೀಯವರು ಟೀಕೃತ ನಗರಕ್ಕೆ ಬಂದರು. ಅವರು ಮೈನಾದೇವಿಯ ಪ್ರವಚನವನ್ನು ಕೇಳಿ ಬೆರಗಾದರು. ಅಷ್ಟೆಯಲ್ಲ ಅಷ್ಟು ದೊಡ್ಡ ಪಂಡಿತರು, ಅವರ ಸಮ್ಯಕ್ಷ-ಮಿಥ್ಯಾತ್ಮದ ವಿವರವಾದ ಉಪದೇಶವನ್ನು ಕೇಳಿ ಮೂಕರಾದರು, ಪಂಡಿತರು ಮೈನಾಳ ಪರಿವಾರದವರನ್ನು ಸಂಬೋಧಿಸಿ ಇಂತೆಂದರು- ತಮ್ಮ ಮನೆಯಲ್ಲಿ ಜನ್ಮತಾಳಿದ ಕನೈಯು ಯಾವುದೋ ಒಂದು ದೇವತೆಯೇ ಎಂದು. ಮೈನಾಳ ತಾಯಿ ಹೇಳುತ್ತಿದ್ದರು. ಏನೆಂದರೆ ಮೈನಾಳನ್ನು ಪಡೆದು ನಾನಷ್ಟೆಯಲ್ಲ ಇಡೀ ಪರಿವಾರವೇ ಗೌರವವನ್ನು ಪಡೆಯಿತು.
ಮೈನಾಳು ದೇವರಲ್ಲಿ ಹೀಗೆ “ಎಲೇ ದೇವರೆ! ನಾನು ಈ ಊರಿನಲ್ಲಿ ಅಪ್ಪೆಯಲ್ಲ, ಇಡೀ ದೇಶದಲ್ಲಿಯೇ ಜೈನಧರ್ಮವನ್ನು ವಿಶ್ವಧರ್ಮದ ರೂಪದಲ್ಲಿ ಹರಡು (ಪ್ರಚಾರ)ವ ಶಕ್ತಿಯನ್ನು ಯಾವಾಗ ಪ್ರಾಪ್ತಿಮಾಡಿಕೊಳ್ಳುವೆನು?” ಸಂಸಾರದಲ್ಲಿ ಧರ್ಮವಂತೂ ಕಲ್ಲುಸಕ್ಕರೆಯ ಹಾಗೆ, ಎಲ್ಲಾ ಪ್ರಾಣಿಗಳು ಅದರ ಫಲವನ್ನು ಅನುಭವಿಸಲು ಇಚ್ಚಿಸುತ್ತವೆ.
ಮೈನಾದೇವಿಯ ಮನಸ್ಸಿನಲ್ಲಿ ಜೈನ ಧರ್ಮವನ್ನು ವಿಶ್ವಧರ್ಮದ ರೂಪದಲ್ಲಿ ಪ್ರಸಾರ ಮಾಡಬೇಕು ಎನ್ನುವ ಭಾವನೆಯು ತುಂಬಿ ತುಳುಕುತ್ತಿತ್ತು. ಇದನ್ನು ಕಾರ್ಯರೂಪದಲ್ಲಿ ತೋರಿಸಿಕೊಟ್ಟ ಕೀರ್ತಿಯು ರಾಹ್ಮಸಂತ ಆಚಾರ್ಯರತ್ನ ಶ್ರೀ ದೇಶಭೂಷಣ ಮಹಾರಾಜರಿಗೆ ಸಲ್ಲುತ್ತದೆ.
ಒಂದು ದಿನ ಮೈನಾಳು ರಾತ್ರಿ ಬೆಳಗಿನ ಜಾವದಲ್ಲಿ ಒಂದು ಸ್ವಪ್ನವನ್ನು ಕಾಣುತ್ತಾಳೆ. ಅದು ಈ ರೀತಿ ಇದೆ. “ನಾನು ಬಿಳಿ ವಸ್ತ್ರವನ್ನು ಉಟ್ಟು ಕೈಯಲ್ಲಿ ಪೂಜಾ ಸಾಮಗ್ರಿ ಹಿಡಿದುಕೊಂಡು ಬಸ್ತಿಗೆ ಹೋಗುತ್ತಿದ್ದೇನೆ. ಆಗ ಆಕಾಶದಲ್ಲಿ ಹುಣ್ಣಿಮೆಯ ಚಂದ್ರನು ತನ್ನ ಜೊತೆ-ಜೊತೆಗೆ ಬರುತ್ತಾನೆ. ಮತ್ತೆಲ್ಲೂ ಆಕಡೆ-ಈ ಕಡೆಗೆ ಹೋಗುತ್ತಿರಲಿಲ್ಲ. ಈ ದೃಶ್ಯವನ್ನು ನೋಡಿ ನೆರೆಯ ಜನರು ಆಶ್ಚರ್ಯದಿಂದ ನನ್ನನ್ನೇ ನೋಡುತ್ತಿದ್ದರು? - ಸುಖದಿಂದ ಸ್ವಲ್ಪವನ್ನು ಕಂಡು ಎಚ್ಚೆತ್ತಳು. ಭಗವಾನರ ಹೆಸರನ್ನು ಹೇಳುತ್ತ ಆನಂದದಲ್ಲಿಯೆ ಮುಳುಗಿದ್ದಳು. ಅವಳು ಮನಸ್ಸಿನಲ್ಲಿ ಯೋಚಿಸಿದ್ದಳು, ಏನೆಂದರೆ ನಾನು ಕಂಡ ಸ್ವಪ್ನವು ನನ್ನ ಭವಿಷ್ಯದ ಏಳಿಗೆಗೆ ಶುಭ ಚಿಹ್ನೆಯಾಗಿದೆ.
ಮೈನಾಳು ತನ್ನ ದಿನನಿತ್ಯದ ಕ್ರಿಯೆ, ದೇವಪೂಜಾದಿ ಮುಗಿಸಿ ತನ್ನ ತಮ್ಮ ಕೈಲಾಸಚಂದರಿಗೆ ತಾನು ಕಂಡ ಸ್ವಪ್ನವನ್ನು ವಿವರಿಸಿದಳು. ಅವರು ಅಕ್ಕನ ಮನೋಭಾವವನ್ನು ತಿಳಿದು ಕೂಡಲೇ ಹೀಗೆ ಹೇಳಿದರು. “ದೊಡ್ಡ ಅಕ್ಕ! ನೀವು ಕಂಡ ಸ್ವಪ್ನದಿಂದ ನಿಮ್ಮ ಭಾವನೆಯಂತೆ ಸಫಲರಾಗುವಿರಿ.”
ಮೈನಾಳ ಈ ರೀತಿ ಸಂಸಾರದ ಉದಾಸೀನವನ್ನು ಕಂಡು ಮನೆಯವರಿಗೆಲ್ಲರಿಗೂ ಭಯವನ್ನುಂಟುಮಾಡಿತ್ತು. ತಂದೆ ಛೋಟೆಲಾಲರು ಮಗಳು ಮೈನಾಳನ್ನು ಬಿಟ್ಟು ಒಂದು ಕ್ಷಣವೂ ಸಹ ಇರುತ್ತಿರಲಿಲ್ಲ,
ಮೈನಾಳು ತನ್ನ ಊಟ ಮುಗಿದ ಮೇಲೆ ತಂದೆಯವರಲ್ಲಿಯೂ ತಾನು ಕಂಡ ಸ್ವಪ್ಪವನ್ನು ಹೇಳಿದಳು, ಛೋಟೆಲಾಲರು ಮಗಳ ಸ್ವಪ್ನವನ್ನು ಕೇಳಿ ಎಲ್ಲಾವನ್ನು ಅರಿತಿದ್ದರೂ ಕೂಡ ಮಗಳ ಎದುರಿಗೆ ಆನಂದದಿಂದ ನಗೆಯಾಡಿದರು. ಮತ್ತು ಹೀಗೆ ಅಂದರು, “ಮಗೂ ಮೈನಾ! ನೀನು ಮನೆಯಿಂದ ಹಾರಿಹೋಗಲಿಕ್ಕಾಗಿ ನನಗೆ ತಮಾಷೆ ಮಾಡುತ್ತೀಯೆ. ಯೋಚನೆ ಮಾಡಿದರೆ ನೀನು ಇಲ್ಲದೆ ಹೋದರೆ ಈ ಮನೆಯು ಒಳ್ಳೆಯದಾಗಿ ಕಾಣಿಸುವುದಿಲ್ಲ?
ಸಂಯೋಗದಿಂದ 1952 ರಲ್ಲಿ ಆಚಾರ್ಯರತ್ನ ದೇಶಭೂಷಣ ಮಹಾರಾಜರು ತಮ್ಮ ಸಂಘ ಸಮೇತವಾಗಿ ಉತ್ತರ ಪ್ರದೇಶದ ಕಡೆಗೆ ವಿಹಾರ ಮಾಡುತ್ತಾ ಟಿಕೃತ ನಗರಕ್ಕೆ ಬಂದರು, ಆವಾಗಲೇ ಮೈನಾ ದೇವಿಯು ಮೊದಲಬಾರಿಗೆ ದಿಗಂಬರ ಮುನಿಗಳನ್ನು (ನೋಡಿದ್ದು ದರ್ಶನ ಮಾಡಿದ್ದು,
ಮೈನಾದೇವಿಯು ತಾಯಿಯ ಹತ್ತಿರ ಎಷ್ಟೋ ಸಲ ಹೇಳಿದ್ದಳು. ನಾನು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸುವೆನು.” ಆದರೆ ತಾಯಿ, ಮೋಹಿನಿಯು ದಿನವನ್ನು ಮುಂದೂಡುತ್ತಲೇ ಇದ್ದಳು.
ಒಂದು ದಿನ ಮನೆಯ ಕೆಲಸವನ್ನು ಮುಗಿಸಿ ಶ್ರೀ ಮುನಿ ಮಹಾರಾಜರ ದರ್ಶನಕ್ಕಾಗಿ ತಾಯಿಯೊಡನೆ ಬಸ್ತಿಗೆ ಹೋದಳು, ಮತ್ತು ಸಂದರ್ಭೋಚಿತವಾಗಿ ಆಚಾರ್ಯ ಶ್ರೀಯವರಲ್ಲಿ ಹೀಗೆ ಕೆಳಿದಳು, “ಮಹಾರಾಜರೆಃ ನನಗೆ ಆತ್ಯಕಲ್ಯಾಣ ಮಾಡಿಕೊಳ್ಳುವ ಯೋಗ್ಯತೆ ಇದೆಯೋ ಅಥವಾ ಇಲ್ಲವೋ ದಯವಿಟ್ಟು ಹೇಳಿರಿ”
ಮಹಾರಾಜರು “ಜೈನ ಧರ್ಮವು ಪಶು-ಪಕ್ಷಿಗಳಿಗೂ ಸೀಕಾರ ಮಾಡುವದಕ್ಕು ಇದೆ”, ನೀನಂತೂ ಮನುಷ್ಯಳಿದ್ದೀಯೆ. ಮೈನಾಳಿಗಂತು ಎಲ್ಲಿಲ್ಲದ ಆನಂದವೇ ಆನಂದ. ತನ್ನ ಕಾರ್ಯದಲ್ಲಿ ಪ್ರಥಮ ಹೆಜ್ಜೆಯನ್ನು ಇಟ್ಟಳು, ತಾಯಿ ಮೋಹಿನಿಯು ಮುನಿಗಳಲ್ಲಿ ಹೀಗೆ ಕೇಳುತ್ತಾಳೆ. “ಮಹಾರಾಜರೆ! ಇವಳ ಕೈ ನೋಡಿ ಹೇಳಿರಿ, ಮದುವೆಯ ಯೋಗವಿದೆಯೋ ಇಲ್ಲವೋ?''
Jain Educationa international
For Personal and Private Use Only
www.jainelibrary.org