SearchBrowseAboutContactDonate
Page Preview
Page 427
Loading...
Download File
Download File
Page Text
________________ गणिनी आर्यिकारत्न श्री ज्ञानमती अभिवन्दन ग्रन्थ ಬಾಲ್ಯ ಕಾಲದಲ್ಲಿ ಮಕ್ಕಳು ತಮ್ಮ ಸಮಯವನ್ನು ಆಟದಲ್ಲಿಯೇ ಕಳೆಯುವುದು ಮಕ್ಕಳ ಸ್ವಭಾವ. ಒಂದು ದಿನ ಮೈನಾದೇವಿಯು ತನ್ನ ಗೆಳತಿಯರೊಡನೆ ಆಟವಾಡಲು ಸಮಯ ದೊರೆಯದಿದ್ದಾಗ ನಿರಾಶಳಾಗಿ ಈ ರೀತಿ ಯೋಚಿಸಿದಳು, ಬಾಲಕಿಯರ ಜೀವನವು ಪರಾಧೀನವಾದುದು ಎಂದು, ಆದರೆ ತಾಯಿಯ ಪ್ರೀತಿಯಲ್ಲಿ ಅವಳು ಎಲ್ಲವನ್ನು ಮರೆತು ಹೋಗುತ್ತಿದ್ದಳು. ತಾಯಿ ಮೋಹಿನಿಯು ಪ್ರೀತಿಯ ಮಗಳನ್ನು ದೂರ ಕಳುಹಿಸಲು ಇಚ್ಛಿಸುತ್ತಿರಲಿಲ್ಲ, ಮತ್ತು ಹೀಗೆ ಹೇಳುತ್ತಿದ್ದಳು. ಮಗಳೇ ಬಾ ನನ್ನ ಜೊತೆ, ಬೇಗ-ಬೇಗ ಕೆಲಸಮಾಡಿ ಜಿನಮಂದಿರಕ್ಕೆ ಹೋಗಿ ಪೂಜೆ, ಆರತಿ ಮಾಡೋಣ, ಶಾಸ್ತ್ರವನ್ನು ಕೇಳೋಣ. [3€ ತಾಯಿಯ ಸಂಸ್ಕಾರಗಳೆಲ್ಲ ಒಂದೊಂದಾಗಿ ಮಗಳ ಮೇಲೆ ಪ್ರಭಾವ ಬೀರಲಾರಂಭಿಸಿದವು. ತಾಯಿಯೊಂದಿಗೆ ತಾಸ್ತ್ರ ಕೇಳಲು ಬಸ್ತಿಗೆ ಹೋದಾಗ ಇತರ ಮಕ್ಕಳಂತೆ ಆಟವಾಡವುದಾಗಲಿ ನಗೆ ಆಡುವುದಾಗಲಿ ಮಾಡುತ್ತಿರಲಿಲ್ಲ, ಬದಲು ಗಂಭೀರವಾಗಿ ಕುಳಿತು, ಶಾಸ್ತ್ರವನ್ನು ಕೇಳಿ ಮನದಟ್ಟು ಮಾಡಿಕೊಳ್ಳುತ್ತಿದ್ದಳು. ಪೂ. ಜ್ಞಾನಮತಿ ಮಾತಾಜಿಯವರು ಈಗಲು ಕೂಡ ತಮ್ಮ ಬಾಲ್ಯಾವಸ್ಥೆಯನ್ನು ನೆನೆಸುತ್ತಿರುತ್ತಾರೆ. ಓದು ಸಲ ಬಸ್ತಿಯಲ್ಲಿ ಶಾಸ್ತ್ರಿಜೀಯವರು ಶಾಸ್ತ್ರವನ್ನು ಓದಿ ಹೇಳುತ್ತಿರುವಾಗ ಒಂದು ಪ್ರಕರಣ ಬಂತು, ಪ್ರತಿಯೊಂದು ಪ್ರಾಣಿಯಲ್ಲೂ ಆನಂತ ಶಕ್ತಿ ಇದೆ'' ಎಂದು ಆಗ ಮೈನಾಳು ಸಹ ತನ್ನ ಆತ್ಮ ಶಕ್ತಿಯ ಕಡೆಗೆ ಗಮನ ಹರಿಸಿ ಹೀಗೆಯೇ ಯೋಚಿಸಿದಳು. “ಆತವು ಅನಂತ ಶಕ್ತಿವುಳ್ಳದ್ದಾಗಿರುವಾಗ ನಾನೇಕೆ ಅದರ ಉಪಯೋಗವನ್ನು ಪಡೆದುಕೊಳ್ಳಬಾರದು' ಎಂದು ತನ್ನಷ್ಟಕ್ಕೆ ತಾನೇ ಪ್ರಶ್ನೆ ಮಾಡಿಕೊಂಡಳು. ಯಾವ ರೀತಿಯಲ್ಲಿ ಹಾಲಿನಲ್ಲಿ ತುಪ್ಪವು ಅಡಗಿರುವಂತೆ ಈ ದೇಹದೊಳಗೆ ಆತ್ಮನು ಕರ್ಮದಿಂದ ಆವರಿಸಿಕೊಂಡು ಒದ್ದಾಡುತ್ತಿದ್ದಾನೆ. ಈ ಪ್ರಾರಂಭಿಕ ಸ್ವಾಧ್ಯಾಯವು ಮೈನಾದೇವಿಯನ್ನು ತನ್ನ ಸಂಬಂಧಿಗಳಿಂದ ಇಷ್ಟು ಬೇಗ ಬಿಡಿಸುತ್ತದೆ ಎಂದು ಯಾರು ತಿಳಿದಿದ್ದರು. ಆದರೆ ವಿಧಿಯ ನಿಯಮವನ್ನು ಯಾರು ತಾನೆ ತಡೆಯಲಿಕ್ಕೆ ಸಾಧ್ಯ. ಆತ್ಮ ಕಲ್ಯಾಣವನ್ನು ಬಯಸುವ ಮನುಷ್ಯನಿಗೆ ಯೋಗ್ಯ ನಿಮಿತ್ತ ಪ್ರಾಪ್ತವಾಗಿಯೇ ಆಗುತ್ತದೆ. ಶಾಸ್ತ್ರವನ್ನು ಓದಿ-ಓದಿ ಮೈನಾಳು ಎಷ್ಟು ಪ್ರತಿಭಾವಿತಳಾದಳೆಂದರೆ ದೇವರ ಎದುರೇ ಹೀಗೆ ಹೇಳಲು ಪ್ರಾರಂಭಿಸಿದಳು. “ಭಗವಾನ್! ಎಲೇ ದೇವರೇ ಮನೋರಮೆಗೆ ಯಾವ ರೀತಿ ನಿಂಥ ಮುನಿಗಳು ಸಿಕ್ಕಿದ್ದರೋ ಆ ರೀತಿ ಇವತ್ತು ದಿಗಂಬರ ಮುನಿಗಳು ಕಾಣುವುದಿಲ್ಲ. ಆದುದರಿಂದ ಈ ದಿನ ನಾನು ತಮ್ಮ ಸಾನ್ನಿಧ್ಯದಲ್ಲಿ ಬ್ರಹ್ಮಚರ್ಯಾ ವ್ರತವನ್ನು ಸ್ವೀಕರಿಸುವೆನು. ದೇವರೇ ಈ ಜನ್ಮದಲ್ಲಿ ನಾನು ಪೂರ್ಣ ರೂಪದಲ್ಲಿ ಪವಿತ್ರವಾದ ಶೀಲ, ವ್ರತವನ್ನುಪಾಲಿಸುವನು. ಇದೇ ರೀತಿ ದರ್ಶನ ಪಾಠವನ್ನು ಓದಿ ನಿತ್ಯ ದೇವರ ದರ್ಶನದ ನಿಯಮವನ್ನು ಮಾಡಿಕೊಂಡಳು. ಒಂದು ಸಲ ಧಾರ್ಮಿಕಶಾಲೆಯಲ್ಲಿ ಹುಡುಗರಿಂದ 'ಅಕಲಂಕ, ನಿಷ್ಕಲಂಕ” ನಾಟಕವನ್ನು ಆಡಿಸಿದರು. ಅದರಲ್ಲಿ ಅಕಲಂಕನು ತನ್ನ ತಂದೆಗೆ ಒಂದು ಮಾತನ್ನು ದೇಳುತ್ತಾನೆ. “ಪ್ರಕ್ಷಾಲನಾಥ್ ಪಂಕಸ್ಯ ದೂರದಸ್ಪರ್ಶನಂ ವರು'" “ಅಂದರೆ ಕೆಸರಿನಲ್ಲಿ ಕಾಲನ್ನು ಹಾಕಿ ತೊಳೆಯುವುದಕ್ಕಿಂತ ಕೆಸರಲ್ಲಿ ಕಾಲು ಹಾಕದೇ ಇರುವುದೇ ಒಳ್ಳೆಯದು.” ಹಾಗೆಯೇ ಮದುವೆಯಾಗಿ ಹೆಂಡತಿ ಬಿಟ್ಟು ದೀಕ್ಷೆ ತೆಗೆದು ಕೊಳ್ಳುವುದಕ್ಕಿಂತ ಮದುವೆಯಾಗದಿರುವುದೇ ಒಳ್ಳೆಯದು. ಈ ಮಾತೇ ಮೈನಾ ದೇವಿಯ ಮಸ್ತಿಷ್ಕಕ್ಕೆ ನುಗ್ಗಿ ಅವರ ಜೀವನವನ್ನು ಸುವರ್ಣಮಯ ಮಾಡಿತು. ದೇವರಲ್ಲಿ ಹೀಗೆ ಕೇಳಿಕೊಳ್ಳುತ್ತಿದ್ದಳು-ಎಲೇ ದೇವರೇ ನನ್ನನ್ನು ಈ ಸಂಸಾರದ ಬಂಧನಕ್ಕೆ ನಿಕ್ಕಿಸದೆ ಮನೆಯೆಂಬ ಪಂಜರದಿಂದ ಹಾರಿಹೋಗುವಂತೆ ಮಾಡು ದೇವ. ಈ ರೀತಿಯಲ್ಲಿ ದೇವರ ಮುಂದೆ ಪ್ರಾರ್ಥಿಸುತ್ತಿದ್ದಳು. ಈ ರೀತಿ ಮನೆಯಲ್ಲಿ ಶಾಸ್ತ್ರ ಗ್ರಂಥಗಳ ವಾಚನ ಮಾಡುತ್ತಾ ಮೈನಾ 14 ವರ್ಷ ವಯಸ್ಸಿಗೇರಿದಳು. ಪೂರ್ವ ಜನ್ಮದ ಸಂಸ್ಕಾರದ ಬಲದಿಂದ ಸಮ್ಯಕ್ಷ ಮತ್ತು ಮಿಥ್ಯಾತ್ವದ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದಳು. ಒಂದು ಸಲ ಟೀಕೃತ ನಗರದಲ್ಲಿ ಭೋಟೆಲಾಲರ ಪಕ್ಕದ ಮನೆಯಲ್ಲಿ ಒಬ್ಬ 16 ವರ್ಷ ಯುವಕನಿಗೆ ಸಿಡುಬು ಎದ್ದಿತ್ತು. ಆ ಯುವಕನ ತಾಯಿಗೇ ಯಾರೋ ಹೇಳಿದ್ರು ಅಂತ ನಿಂಬೆಯ ಮರವನ್ನು ಪೂಜಿಸುವುದು ಮಿಥ್ಯಾ ದೇವತೆಯ ಪೂಜಿಸುವುದು ಇತ್ಯಾದಿ ಮೂಢ ನಂಬಿಕೆಯಿಂದ ಇಂತಹ ಕ್ರಿಯೆಗಳನ್ನು ಮಾಡುತ್ತಿದ್ದಳು. ಅದೇ ಸಮಯದಲ್ಲಿ ಮೈನಾಳ ತಮ್ಮಂದಿರಾದ ಪ್ರಕಾಶ್ ಮತ್ತು ಶುಭಾವನಿಗೂ ಸಿಡುಬು ಎದ್ದವು. ಅಲ್ಲಿಯ ಜನರು ಎಲ್ಲರೂ ಸೇರಿ ಮೋಹಿನಿಗೆ ಇಂತೆಂದರು. ಶೀತಲ ದೇವಿ (ಮಿಥ್ಯಾದೇವತೆ)ಗೆ ಪೂಜೆ ಮಾಡಿಸಿ ಎಂದರು, ಆದರೆ ಮೋಹಿನಿಗೆ ಮಿಥ್ಯಾತ್ವದ ತ್ಯಾಗ ಇತ್ತು. ಅವರು ಮೈನಾ ಹೇಳಿದಂತೆ ಜಿನೇಂದ್ರ ಭಗವಂತರ ಭಕ್ತಿ, ಪೂಜೆಯೇ ಇವರ ದಿವ್ಯಪಧಿ ಎನಿಸಿತ್ತು. ಮನೆಯಲ್ಲಿ ಎಲ್ಲರೂ ಹೆದರಿದ್ದರು. ಈ ಮಕ್ಕಳ ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ಎಲ್ಲಾ ಭಾರವನ್ನು ದೇವರ ಮೇಲೆ ಹಾಕಿಬಿಟ್ಟಿದ್ದರು. Jain Educationa International ಈ ಕಥೆ ಮೈನಾ ದೇವಿಯು ಸಹೋದರರ ಪರಿಸ್ಥಿತಿಯನ್ನು ನೋಡಿ ತಾಯಿಗೆ ಸಮಾಧಾನ ಹೇಳುತ್ತಿದ್ದಳು. ಮತ್ತು ತಾನೇ ಸ್ವತಃ ಬಸ್ತಿಗೆ ಹೋಗಿ ಶೀತಲನಾಥರಿಗೆ ಅಭಿಷೇಕ ಪೂಜೆಯನ್ನು ಮಾಡಿ ಜಿನ ಗಂಧೋದಕವನ್ನು ತಂದು ಪ್ರತಿದಿನ ತಮ್ಮಂದಿರುಗಳ ಮೈಮೇಲೆ ಚಿಮುಕಿಸುತ್ತಿದ್ದಳು. ಆದರೆ ಅಸಾತ ವೇದನಿಯ ಕರ್ಮದ ತೀವ್ರತೆಯಿಂದಾಗಿ ಅವರು ದಿನೇ-ದಿನೇ ಆರೋಗ್ಯದಿಂದ ಇಳಿಮುಖವಾಗಿ ಹೋದರು. ಆ ಸಮಯದಲ್ಲಿ ಓರ್ವ ಮಹಿಳೆ ಹೀಗೆ ಹೇಳುತ್ತಾಳೆ. ಈ ಮೈನಾ ದೇವಿಯು ಸಹೋದರರನ್ನು ಮುಗಿಸಿಬಿಡುತ್ತಾಳೆ, ಇದು ಎಂತಹ ಧರ್ಮ, ಮನೆಯಲ್ಲಿ ಮಕ್ಕಳು ಸಾಯುತ್ತಿದ್ದಾರೆ. ಇವಳು ಧರ್ಮ-ಧರ್ಮ ಎಂದು ಬೊಬ್ಬೆ ಹಾಕುತ್ತಿದ್ದಾಳೆ. ಈ ರೀತಿಯ ಕಠೋರವಾದ ಮಾತನ್ನು ಮೈನಾ ಸಹನೆ ಮಾಡಿಕೊಂಡು ದೃಢಮನಸ್ಸಿನಿಂದ ಇರುತ್ತಿದ್ದಳು. For Personal and Private Use Only www.jainelibrary.org
SR No.012075
Book TitleAryikaratna Gyanmati Abhivandan Granth
Original Sutra AuthorN/A
AuthorRavindra Jain
PublisherDigambar Jain Trilok Shodh Sansthan
Publication Year1992
Total Pages822
LanguageHindi
ClassificationSmruti_Granth
File Size26 MB
Copyright © Jain Education International. All rights reserved. | Privacy Policy